ಅಯೋಧ್ಯೆಯ ರಾಮಮಂದಿರದಲ್ಲಿ 87 ಸೆಕೆಂಡ್ ಗಳ ಮಹಾಪೂಜೆ….! ಪ್ರಧಾನಿ ಅವರಿಂದ ನೆರವೇರಲಿದೆ ಈ ಮಹಾಪೂಜೆ..! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ಕರುನಾಡ ಜನತೆಗೆ ನಮಸ್ಕಾರಗಳು..!

WhatsApp Group Join Now
Telegram Group Join Now

ಅಯೋಧ್ಯ ರಾಮಮಂದಿರದ ಉದ್ಘಾಟನೆ ಇವತ್ತು ಆಗಲಿದ್ದು ಹತ್ತು ಹಲವಾರು ರೀತಿಯಲ್ಲಿ ಪೂಜೆಯ ವಿಧಿ ವಿಧಾನಗಳಿದ್ದು ಅದರಲ್ಲಿ ರಾಮನ ವಿಶೇಷ ಪೂಜೆ ಪ್ರಧಾನಿ ಅವರಿಂದ ನೆರವೇರಲಿದ್ದು ಈ ಪೂಜೆಯ ಬಗ್ಗೆ ಈಗಲೇ ತಿಳಿಯೋಣ ಬನ್ನಿ…

ಈಗಾಗಲೇ ನಿಮಗೆ ತಿಳಿದಿರುವಂತೆ ಮೂರ್ತಿ ಪ್ರತಿಷ್ಠಾಪನೆಯ ಹಂತಗಳು 10 ಹಲವಾರು ಇದ್ದು ಅದರಲ್ಲಿ ಕೊನೆಯ ಪೂಜೆಗಳೆರಡು ಪ್ರಧಾನಿಯವರಿಂದ ನೆರವೇರಲಿದ್ದು ಅದರಲ್ಲಿ ರಾಮನ ಕಣ್ಣಿಗೆ ಕಾಡಿಗೆ ಹಚ್ಚುವುದು ಹಾಗೆ ನೈವೇದ್ಯ ಪೂಜೆಗಳು ಕೊನೆಯದಾಗಿ ನಡೆಯಲಿದ್ದು ಈ ಎರಡು ಪೂಜೆಗಳು ನರೇಂದ್ರ ಮೋದಿ ಅವರಿಂದ ನಡೆಯಲಿದೆ..!

87 ಸೆಕೆಂಡುಗಳಲ್ಲಿ ಮಂತ್ರ ಪಟನೆಯ ಮೂಲಕ ರಾಮನ ಕಣ್ಣಿಗೆ ಕಾಡಿಗೆ ಹಚ್ಚುವುದು ಮಹಾಪೂಜೆಯಾಗಿದ್ದು ಇದರಲ್ಲಿ ಹತ್ತು ಹಲವಾರು ಗಣ್ಯರು ಭಾಗಿಯಾಗಲಿದ್ದಾರೆ.

ಸದ್ಯ ರಾಜ್ಯದಿಂದ ಅಯೋಧ್ಯೆಗೆ ಹೋಗಲು ಬೆಂಗಳೂರಿನಿಂದ ಮಾತ್ರ ರೈಲು ಸೇವೆಗಳು ಲಭ್ಯ ಇವೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್ ಗೊಯಿಬಿಬೋ ಮಾಹಿತಿ ಪ್ರಕಾರ, ಒಟ್ಟು 9 ರೈಲುಗಳು ಬೆಂಗಳೂರಿನಿಂದ ಅಯೋಧ್ಯೆಗೆ ಸಂಚಾರ ಮಾಡುತ್ತಿದ್ದು, ಇದರಲ್ಲಿ 8 ರೈಲು ಸೇವೆಗಳು ಇವೆ.

ಯಾವ್ಯಾವ ಭಾಗಗಳಿಂದ ವಿಶೇಷ ರೈಲು

* ರೈಲು ಸಂಖ್ಯೆ 15024-ವೈಪಿಆರ್ ಜಿಕೆಪಿ ಎಕ್ಸ್‌ಪ್ರೆಸ್ – ಈ ರೈಲು ಪ್ರತಿ ಗುರುವಾರ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11:40ಕ್ಕೆ ನಿರ್ಗಮಿಸಿ ಮರು ದಿನ ಸಂಜೆ 4:25ಕ್ಕೆ ಅಯೋಧ್ಯೆಗೆ ತಲುಪುತ್ತದೆ. 1 ದಿನ 16 ಗಂಟೆ, 45 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. 820 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭವಾಗುತ್ತದೆ. ದೂರ 1,608 ಕಿಲೋ ಮೀಟರ್ ಆಗುತ್ತದೆ.

ರೈಲು ಸಂಖ್ಯೆ 01667 – ಯಶ್ವಂತಪುರ ಎರ್ನಾಕುಲಂ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಯಶವಂತಪುರದಿಂದ ರಾತ್ರಿ 11:30ಕ್ಕೆ ಹೊರಟು ಮರುದಿನ ಸುಲ್ತಾನ್‌ಪುರಕ್ಕೆ ಬೆಳಗ್ಗೆ 5:30ಕ್ಕೆ ತಲುಪಲಿದೆ. (ಇಲ್ಲಿಂದ ಅಯೋಧ್ಯೆಗೆ 60 ಕಿಲೋ ಮೀಟರ್).

ರೈಲು ಸಂಚಾರ ಮಾರ್ಗದ ದೂರ 1,549 ಕಿಲೋ ಮೀಟರ್ ಆಗಲಿದೆ. ಗಮನಿಸಿ ಈ ರೈಲು ಪ್ರಸ್ತುತ ಚಾಲನೆಯಲ್ಲಿ ಇಲ್ಲ.

ರೈಲು ಸಂಖ್ಯೆ 05016 – ಯಶ್ವಂತಪುರ ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲು ಪ್ರತಿ ಬುಧವಾರ ಯಶವಂತಪುರ ರೈಲ್ವೆ ನಿಲ್ದಾಣದಿಂದ ರಾತ್ರಿ 11:40ಕ್ಕೆ ನಿರ್ಗಮಿಸಲಿದ್ದು, ಮರುದಿನ ಮಧ್ಯಾಹ್ನ 3:50ಕ್ಕೆ ಗೋಂಡಾ ರೈಲು ನಿಲ್ದಾಣ (ಇಲ್ಲಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ತಲುಪಲಿದೆ. ರೈಲು ಸಂಚಾರ ಮಾರ್ಗದ ಅಂತರ 1,641 ಕಿಲೋ ಮೀಟರ್ ಆಗಲಿದೆ.ರೈಲು ಸಂಖ್ಯೆ 06593 – ವೈಪಿಆರ್ ಎನ್‌ಝೆಡ್‌ಎಂ ಎಕ್ಸ್‌ಪ್ರೆಸ್ ರೈಲು ಪ್ರತಿ ಭಾನುವಾರ ಬೆಂಗಳೂರಿನ ಯಶವಂತಪುರದಿಂದ ಸಂಜೆ 5:20ಕ್ಕೆ ಹೊರಟು ಮರು ದಿನ ಸಂಜೆ 5:13ಕ್ಕೆ ಮಂಕಾಪುರ (ಇಲ್ಲಿಂದ ಅಯೋಧ್ಯೆಗೆ 28 ಕಿಲೋ ಮೀಟರ್) ತಲುಪಲಿದೆ. 1 ದಿನ 23 ಗಂಟೆ, 53 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ರೈಲು ಸಂಚಾರ ಮಾರ್ಗದ ಅಂತರ 1,636 ಕಿಲೋ ಮೀಟರ್ ಆಗಲಿದೆ.

* ರೈಲು ಸಂಖ್ಯೆ 15016 ವೈಎಲ್‌ಕೆ (ಯಲಹಂಕ) ಗೋರಖ್‌ಪುರ್ ಎಕ್ಸ್‌ಪ್ರೆಸ್ ಪ್ರತಿ ಗುರುವಾರ ಬೆಳಗ್ಗೆ 7:45ಕ್ಕೆ ಯಲಹಂಕ ರೈಲು ನಿಲ್ದಾಣದಿಂದ ಹೊರಟು ಎರಡನೇ ದಿನದ ಬೆಳಗ್ಗೆ 10:35ಕ್ಕೆ ಗೋಂಡ ರೈಲು ನಿಲ್ದಾಣ ತಲುಪುತ್ತದೆ. (ಈ ನಿಲ್ದಾಣದಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ಈ ರೈಲು 2 ದಿನ 2 ಗಂಟೆ 50 ನಿಮಿಷ ಸಮಯವನ್ನು ತೆಗೆದುಕೊಳ್ಳುತ್ತದೆ. 1,629 ಅಂತರ ಇರಲಿದೆ.

Leave a Reply

Your email address will not be published. Required fields are marked *