ಡಿಸಿಸಿ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ…!
ಕರುನಾಡ ಜನತೆಗೆ ನಮಸ್ಕಾರಗಳು…!
ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಡಿಸಿಸಿ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ತಿಳಿಯೋಣ ಬನ್ನಿ…!
ಕೆಸಿಸಿ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಸುವುದು ಹೇಗೆ ಹಾಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳೇನು ಹಾಗೆ ಅರ್ಧಿ ಸಲ್ಲಿಸಲು ಇರುವ ಡೈರೆಕ್ಟ್ ಲಿಂಕ್ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…
ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು…?
ಡಿಸಿಸಿ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಬೇಕೆಂದರೆ ಕನಿಷ್ಠ ಪಕ್ಷ ಪಿಯುಸಿ ಪಾಸ್ ಆಗಿರಬೇಕಾಗುತ್ತದೆ.
ಪಿಯುಸಿ ಪಾಸ್ ಆಗಿದ್ದವರು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ…

ಹಾಗಾದರೆ ಬನ್ನಿ ಮಂಡ್ಯ ಜಿಲ್ಲೆಯ ಡಿಸಿಸಿ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿರುತ್ತೇನೆ ಮತ್ತು ಅರ್ಜಿ ಸಲ್ಲಿಸಲು ನೇರವಾದ ಲಿಂಕನ್ನು ಕೊಟ್ಟಿರುತ್ತೇನೆ. ಕೊನೆಯವರೆಗೂ ಎಚ್ಚರದಿಂದ ಲೇಖನವನ್ನು ಓದಿಕೊಳ್ಳಿ.
ಮಂಡ್ಯ ಜಿಲ್ಲೆಯ ಡಿಸಿಸಿ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ವಿವರ:
1) ಕಿರಿಯ ಸಹಾಯಕ – 70 ಹುದ್ದೆಗಳು
ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ವೇತನ – 30,350 – 58,250
2) ವಾಹನ ಚಾಲಕ – 02 ಹುದ್ದೆಗಳು
ವಿದ್ಯಾರ್ಹತೆ: 10ನೇ ತರಗತಿ ಪಾಸ್ ಆಗಿರಬೇಕು. ಮತ್ತು ವಾಹನ ಚಾಲನೆ ಮಾಡಲು ಪರವಾನಗಿ ಹೊಂದಿರಬೇಕು.
ವೇತನ : 27,650 – 52,650
3) ಅಟೆಂಡರ್ – 21 ಹುದ್ದೆಗಳು
ವಿದ್ಯಾರ್ಹತೆ: 10ನೇ ತರಗತಿ ಪಾಸ್ ಆಗಿರಬೇಕು.
ವೇತನ : 23,500 – 47,650
4) ವ್ಯವಸ್ಥಾಪಕರು – 01 ಹುದ್ದೆ
ವಿದ್ಯಾರ್ಹತೆ: ಕಂಪ್ಯೂಟರ್ ಸೈನ್ಸ್ ಎಂ. ಟೆಕ್ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
ವೇತನ : 43,100 – 83,900
ಒಟ್ಟು ಹುದ್ದೆಗಳು – 94
ವಯೋಮಿತಿ:
ಮಂಡ್ಯ ಜಿಲ್ಲೆಯ ಡಿಸಿಸಿ ಬ್ಯಾಂಕ್ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಈ ಕೆಳಗಿನ ವಯೋಮಿತಿಯನ್ನು ಅನುಸರಿಸಬೇಕಾಗಿದೆ.
• ಕನಿಷ್ಠ ವಯೋಮಿತಿ – 18 ವರ್ಷಗಳು
• ಗರಿಷ್ಠ ವಯೋಮಿತಿ – 35 ವರ್ಷಗಳು
ಅರ್ಜಿ ಶುಲ್ಕ :
• ಸಾಮಾನ್ಯ ವರ್ಗ 2a/ 2b/ 3a/ 3b – ₹1,500/-
• SC,ST,C1, ಮಾಜಿ ಸೈನಿಕ – ₹750/-
ಅರ್ಜಿ ಸಲ್ಲಿಸುವ ವಿಧಾನ:
ಮಂಡ್ಯ ಜಿಲ್ಲೆಯ ಡಿಸಿಸಿ ಬ್ಯಾಂಕ್ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಆಸಕ್ತಿ ಹೊಳ್ಳ ಅಭ್ಯರ್ಥಿಯು ಅಧಿಕೃತ ಜಾಲತಾಣಕ್ಕೆ ಹೋಗಿ ಅಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅದರ ನೇರವಾದ ಲಿಂಕ್ ಅನ್ನು ಈ ಕೆಳಗೆ ಕೊಟ್ಟಿರುತ್ತೇನೆ ನೋಡಿಕೊಳ್ಳಿ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್
www.mandyadccbank.com
ಅಧಿಸೂಚನೆ :
CLICK HERE
ನೇಮಕಾತಿ ವಿಧಾನ :
ಮಂಡ್ಯ ಜಿಲ್ಲೆಯ ಡಿಸಿಸಿ ಬ್ಯಾಂಕ್ ಹೊರಡಿಸಿರುವ ನೇಮಕಾತಿಯ ಅಧಿಸೂಚನೆಯ ಪ್ರಕಾರ ಆಯ್ಕೆಯ ವಿಧಾನವು ಅಂದರೆ ನೇಮಕಾತಿಯ ವಿಧಾನವೂ ಈ ರೀತಿದ್ದಾಗಿರುತ್ತದೆ,
ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನದ ಮೂಲಕ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕಗಳು:
• ಅರ್ಜಿ ಸಲ್ಲಿಕೆಯ ಪ್ರಾರಂಭಿಕ ದಿನಾಂಕ – 18/01/2024
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 16/02/2024
ಈ ಮೇಲ್ಕಂಡ ಎಲ್ಲಾ ರೀತಿಯ ಅರ್ಹತೆಗಳು ಮಾಹಿತಿಗಳು ಮತ್ತು ಇತರೆ ವಿಷಯಗಳನ್ನು ಸಂಪೂರ್ಣವಾಗಿ ಓದಿಕೊಂಡು ನಂತರ ನೀವು ಅಧಿಕೃತ ಜಾಲತಾಣಕ್ಕೆ ತೆರಳಿ ಅಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.