ಕರುನಾಡ ಜನತೆಗೆ ನಮಸ್ಕಾರಗಳು
ಈಗಾಗಲೇ ನಿಮಗೆ ತಿಳಿದಿರುವಂತೆ ಇದೇ ತಿಂಗಳು ಜನವರಿ 22ನೇ ತಾರೀಕಿನಂದು ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ, ಮೂರ್ತಿಯ ಪ್ರತಿಷ್ಠಾಪನೆ ಆಗುತ್ತಿದ್ದು ಹಾಗೆಯೇ ಕರ್ನಾಟಕದಿಂದ ಭಕ್ತರು ಕೂಡ ಶ್ರೀ ರಾಮನ ಸನ್ನಿಧಿಗೆ ಹೋಗಲು ವಿಶೇಷ ರೈಲುಗಳು ಸೌಲಭ್ಯವಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…
ಕರ್ನಾಟಕದಿಂದ ಅಯೋಧ್ಯೆಗೆ ಹೋಗಲು ವಿಶೇಷ ರೈಲುಗಳು ನಿಗದಿಯಾಗಿದ್ದು ಇವುಗಳ ಸಮಯ ಹಾಗೂ ಯಾವ ರೈಲು ಯಾವ ಸ್ಥಳದಿಂದ ಆಯೋಧ್ಯೆಗೆ ಹೋಗಲಿದೆ ಸಂಪೂರ್ಣ ಮಾಹಿತಿ ಈಗಲೇ ತಿಳಿದುಕೊಳ್ಳಿ.
ಇಡೀ ಭಾರತದಾದ್ಯಂತ ಹಿಂದುಗಳು ರಾಮನ ಭಕ್ತರಾಗಿದ್ದು ಇದೀಗ ರಾಮಮಂದಿರದ ಉದ್ಘಾಟನೆ ಜನವರಿ 22ನೇ ತಾರೀಕಿನಂದು ಇರಲಿದ್ದು ಹೀಗಾಗಿ ಇದೊಂದು ಹಿಂದುಗಳಿಗೆ ಸಡಗರದ ದಿನವಾಗಿದೆ..
ಹಲವಾರು ಹಿಂದೂಗಳು ಕಂಡಂತಹ ಕನಸು ಈಗ ನನಸಾಗಲಿದ್ದು ಹಾಗೆ ಯಾರು ರಾಮನ ಸನ್ನಿಧಿಗೆ ಹೋಗಲು ಇಚ್ಚಿಸುತ್ತೀರೋ, ಕರ್ನಾಟಕದಿಂದ ಅವರಿಗಾಗಿ ಲಭ್ಯವಿರುವ ರೈಲುಗಳ ಮಾಹಿತಿ ಈಗಲೇ ತಿಳಿದುಕೊಳ್ಳಿ
ಸದ್ಯ ರಾಜ್ಯದಿಂದ ಅಯೋಧ್ಯೆಗೆ ಹೋಗಲು ಬೆಂಗಳೂರಿನಿಂದ ಮಾತ್ರ ರೈಲು ಸೇವೆಗಳು ಲಭ್ಯ ಇವೆ. ಆನ್ಲೈನ್ ಟಿಕೆಟ್ ಬುಕ್ಕಿಂಗ್ ಪ್ಲಾಟ್ಫಾರ್ಮ್ ಗೊಯಿಬಿಬೋ ಮಾಹಿತಿ ಪ್ರಕಾರ, ಒಟ್ಟು 9 ರೈಲುಗಳು ಬೆಂಗಳೂರಿನಿಂದ ಅಯೋಧ್ಯೆಗೆ ಸಂಚಾರ ಮಾಡುತ್ತಿದ್ದು, ಇದರಲ್ಲಿ 8 ರೈಲು ಸೇವೆಗಳು ಇವೆ.
ವಿಶೇಷ ರೈಲುಗಳ ಸಮಯ ಹಾಗೂ ಯಾವ ಸ್ಥಳದಿಂದ ರೈಲು ಚಲಿಸಲಿವೆ ಇಲ್ಲಿದೆ ನೋಡಿ ಮಾಹಿತಿ..!
* ರೈಲು ಸಂಖ್ಯೆ 15024-ವೈಪಿಆರ್ ಜಿಕೆಪಿ ಎಕ್ಸ್ಪ್ರೆಸ್ – ಈ ರೈಲು ಪ್ರತಿ ಗುರುವಾರ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11:40ಕ್ಕೆ ನಿರ್ಗಮಿಸಿ ಮರು ದಿನ ಸಂಜೆ 4:25ಕ್ಕೆ ಅಯೋಧ್ಯೆಗೆ ತಲುಪುತ್ತದೆ. 1 ದಿನ 16 ಗಂಟೆ, 45 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. 820 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭವಾಗುತ್ತದೆ. ದೂರ 1,608 ಕಿಲೋ ಮೀಟರ್ ಆಗುತ್ತದೆ.
ರೈಲು ಸಂಖ್ಯೆ 01667 – ಯಶ್ವಂತಪುರ ಎರ್ನಾಕುಲಂ ಸ್ಪೆಷಲ್ ಎಕ್ಸ್ಪ್ರೆಸ್ ರೈಲು ಯಶವಂತಪುರದಿಂದ ರಾತ್ರಿ 11:30ಕ್ಕೆ ಹೊರಟು ಮರುದಿನ ಸುಲ್ತಾನ್ಪುರಕ್ಕೆ ಬೆಳಗ್ಗೆ 5:30ಕ್ಕೆ ತಲುಪಲಿದೆ. (ಇಲ್ಲಿಂದ ಅಯೋಧ್ಯೆಗೆ 60 ಕಿಲೋ ಮೀಟರ್).
ರೈಲು ಸಂಚಾರ ಮಾರ್ಗದ ದೂರ 1,549 ಕಿಲೋ ಮೀಟರ್ ಆಗಲಿದೆ. ಗಮನಿಸಿ ಈ ರೈಲು ಪ್ರಸ್ತುತ ಚಾಲನೆಯಲ್ಲಿ ಇಲ್ಲ.
ರೈಲು ಸಂಖ್ಯೆ 05016 – ಯಶ್ವಂತಪುರ ಗೋರಖ್ಪುರ ಎಕ್ಸ್ಪ್ರೆಸ್ ರೈಲು ಪ್ರತಿ ಬುಧವಾರ ಯಶವಂತಪುರ ರೈಲ್ವೆ ನಿಲ್ದಾಣದಿಂದ ರಾತ್ರಿ 11:40ಕ್ಕೆ ನಿರ್ಗಮಿಸಲಿದ್ದು, ಮರುದಿನ ಮಧ್ಯಾಹ್ನ 3:50ಕ್ಕೆ ಗೋಂಡಾ ರೈಲು ನಿಲ್ದಾಣ (ಇಲ್ಲಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ತಲುಪಲಿದೆ. ರೈಲು ಸಂಚಾರ ಮಾರ್ಗದ ಅಂತರ 1,641 ಕಿಲೋ ಮೀಟರ್ ಆಗಲಿದೆ.ರೈಲು ಸಂಖ್ಯೆ 06593 – ವೈಪಿಆರ್ ಎನ್ಝೆಡ್ಎಂ ಎಕ್ಸ್ಪ್ರೆಸ್ ರೈಲು ಪ್ರತಿ ಭಾನುವಾರ ಬೆಂಗಳೂರಿನ ಯಶವಂತಪುರದಿಂದ ಸಂಜೆ 5:20ಕ್ಕೆ ಹೊರಟು ಮರು ದಿನ ಸಂಜೆ 5:13ಕ್ಕೆ ಮಂಕಾಪುರ (ಇಲ್ಲಿಂದ ಅಯೋಧ್ಯೆಗೆ 28 ಕಿಲೋ ಮೀಟರ್) ತಲುಪಲಿದೆ. 1 ದಿನ 23 ಗಂಟೆ, 53 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ರೈಲು ಸಂಚಾರ ಮಾರ್ಗದ ಅಂತರ 1,636 ಕಿಲೋ ಮೀಟರ್ ಆಗಲಿದೆ.
* ರೈಲು ಸಂಖ್ಯೆ 15016 ವೈಎಲ್ಕೆ (ಯಲಹಂಕ) ಗೋರಖ್ಪುರ್ ಎಕ್ಸ್ಪ್ರೆಸ್ ಪ್ರತಿ ಗುರುವಾರ ಬೆಳಗ್ಗೆ 7:45ಕ್ಕೆ ಯಲಹಂಕ ರೈಲು ನಿಲ್ದಾಣದಿಂದ ಹೊರಟು ಎರಡನೇ ದಿನದ ಬೆಳಗ್ಗೆ 10:35ಕ್ಕೆ ಗೋಂಡ ರೈಲು ನಿಲ್ದಾಣ ತಲುಪುತ್ತದೆ. (ಈ ನಿಲ್ದಾಣದಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ಈ ರೈಲು 2 ದಿನ 2 ಗಂಟೆ 50 ನಿಮಿಷ ಸಮಯವನ್ನು ತೆಗೆದುಕೊಳ್ಳುತ್ತದೆ. 1,629 ಅಂತರ ಇರಲಿದೆ.