ಕರುನಾಡ ಜನತೆಗೆ ನಮಸ್ಕಾರಗಳು
ರೈತರ ಖಾತೆಗೆ ಬೆಳೆ ವಿಮೆ ಜಮಾ ಯಾವಾಗ ಸರ್ಕಾರದಿಂದ ಮಹತ್ವದ ಮಾಹಿತಿ ಇಲ್ಲಿದೆ ನೋಡಿ..
ಈಗಾಗಲೇ ನಿಮಗೆ ತಿಳಿದಿರುವಂತೆ 2023 ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು ಅದರಂತೆ ರಾಜ್ಯ ಸರ್ಕಾರವು ಕೂಡ 210 ಕ್ಕೂ ಹೆಚ್ಚಿನ ತಾಲೂಕುಗಳನ್ನು ಬರಪೀಡಿ ತಾಲೂಕುಗಳೆಂದು ಘೋಷಣೆ ಮಾಡಿದ್ದರು ಕೂಡ ಇಲ್ಲಿಯವರೆಗೂ ರೈತರ ಖಾತಗೆ ಯಾವುದೇ ಕಾರಣವಾದಂತಹ ಬೆಳೆ ವಿಮೆ ಜಮಾ ಆಗಿಲ್ಲ..!
ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗುವುದು ಯಾವಾಗ ಹಾಗೆ ಎಷ್ಟು ಮೊತ್ತದ ಹಣ ರೈತರ ಖಾತೆಗೆ ಜಮಾ ಆಗಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!
ರಾಜ್ಯದ ರೈತರ ಖಾತೆಗೆ ಮುಂದಿನ ಒಂದು ವಾರದ ಒಳಗೆ ಬರಪರಿಹಾರದ ಮೊದಲ ಕಂತಿನ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
12 ಲಕ್ಷ ಜನರಿಗೆ ಹಣ ಪಾವತಿಸಲು ರಿಸರ್ವ್ ಬ್ಯಾಂಕ್‌ಗೆ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ ಎಂದ ಸಚಿವರು, ಒಟ್ಟು 25-30 ಲಕ್ಷ ಜನರಿಗೆ ಬರ ಪರಿಹಾರದ ಹಣ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಒಂದು ವಾರದಲ್ಲಿ ರಾಜ್ಯದ ರೈತರ ಖಾತೆಗೆ ಬರಪರಿಹಾರದ ಮೊದಲ ಕಂತಿನ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರುರಾಯಚೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಹಿಂದೆ ಬರಪರಿಹಾರ, ಅತಿವೃಷ್ಟಿ ಪರಿಹಾರ ನೀಡುವಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದವು.
ಎಷ್ಟೋ ಜನ ಬೆಳೆಯನ್ನೇ ಬೆಳೆಯದಿದ್ದರೂ ಅವರಿಗೆ ಪರಿಹಾರದ ಹಣ ಸಿಗುತ್ತಿತ್ತು. ನಿಜವಾಗಿ ಬೆಳೆ ಹಾನಿಯಾದವರಿಗೆ ಪರಿಹಾರ ಸಿಗುತ್ತಿರಲಿಲ್ಲ. ಹಿಂದಿನ ಸರಕಾರ ಇದ್ದಾಗ, ನಾನು ಕೃಷಿ ಸಚಿವನಿದ್ದಾಗಲೂ ಇದನ್ನು ನೋಡಿದ್ದೇನೆ. ಯಾರದೋ ಜಮೀನು, ಇನ್ಯಾರಿಗೋ ಹಣ ಪಾವತಿಯಾಗಿದೆ.
ರೈತರ ಬೆಳೆಯೇ ಬೇರೆ, ಪರಿಹಾರ ಬರೋದೆ ಬೇರೆ. ಅಧಿಕಾರಿಗಳು ಬೆಳೆ ಮಾಹಿತಿ ಸೇರಿಸುವಾಗ ತಪ್ಪುಗಳಾಗುತ್ತಿದ್ದವು. ಇದೆಲ್ಲವನ್ನೂ ಸರಿಮಾಡಿ ಬೆಳೆ ಸಮೀಕ್ಷೆ ಆಧಾರದಲ್ಲಿ ಹಣ ಪಾವತಿಯಾಗಲಿದೆ ಎಂದು ಸಚಿವರು ವಿವರ ನೀಡಿದರು.
ಈ ವ್ಯವಸ್ಥೆ ಸರಿಪಡಿಸಲು ಎರಡು ತಿಂಗಳು ತಡವಾಗಿದೆ. ಮುಂದಿನ ಒಂದು ವಾರದಲ್ಲಿ ಮೊದಲ ಕಂತಿನ ಹಣ ಬರಲಿದೆ. 12 ಲಕ್ಷ ಜನರಿಗೆ ಹಣ ಪಾವತಿಸಲು ಆರ್‌ಬಿಐಗೆ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ.
ಇನ್ನೂ 20 ಲಕ್ಷ ಜನರ ಪೇಮೆಂಟ್ ಆರ್ಡರ್ ಒಂದು ವಾರದಲ್ಲಿ ಕಳುಹಿಸಲಿದ್ದೇವೆ. ಒಟ್ಟು 25-30 ಲಕ್ಷ ಜನರಿಗೆ ಬರ ಪರಿಹಾರದ ಹಣ ಸಿಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕೇಂದ್ರ ಸರಕಾರಕ್ಕೆ ಬರ ಪರಿಹಾರ ಕೋರಿ ಮನವಿ ಸಲ್ಲಿಸಲಾಗಿದ್ದು, ಇನ್ನೂ ಹಣ ಬಂದಿಲ್ಲ. ಹೀಗಾಗಿ ನಾವೇ ರೈತರಿಗೆ 2,000 ರೂ.ವರೆಗೆ ಪರಿಹಾರ ನೀಡಲು ನಿರ್ಧರಿಸಿದ್ದೇವೆ. ನಾವು ಕಳುಹಿಸಿರುವ ಮನವಿ ಪ್ರಕಾರ ಮೊದಲ ಕಂತಿನ ಹಣ 800-900 ಕೋಟಿ ರೂ.
ಬರಬೇಕು. 4,663 ಕೋಟಿ ರೂ. ಪರಿಹಾರದ ಹಣವನ್ನು ಕೇಂದ್ರ ಸರಕಾರದಿಂದ ಕೇಳಿದ್ದೇವೆ. ಎಲ್ಲಾ ಸೇರಿ 18,172 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರವನ್ನು ಆಗ್ರಹಿಸಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ರಾಜ್ಯದ ರೈತರ ಖಾತೆಗೆ ಮುಂದಿನ ಒಂದು ವಾರದ ಒಳಗೆ ಬರಪರಿಹಾರದ ಮೊದಲ ಕಂತಿನ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. 12 ಲಕ್ಷ ಜನರಿಗೆ ಹಣ ಪಾವತಿಸಲು ರಿಸರ್ವ್ ಬ್ಯಾಂಕ್‌ಗೆ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ ಎಂದ ಸಚಿವರು, ಒಟ್ಟು 25-30 ಲಕ್ಷ ಜನರಿಗೆ ಬರ ಪರಿಹಾರದ ಹಣ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಯಚೂರು: ಒಂದು ವಾರದಲ್ಲಿ ರಾಜ್ಯದ ರೈತರ ಖಾತೆಗೆ ಬರಪರಿಹಾರದ ಮೊದಲ ಕಂತಿನ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರುರಾಯಚೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಹಿಂದೆ ಬರಪರಿಹಾರ, ಅತಿವೃಷ್ಟಿ ಪರಿಹಾರ ನೀಡುವಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದವು. ಎಷ್ಟೋ ಜನ ಬೆಳೆಯನ್ನೇ ಬೆಳೆಯದಿದ್ದರೂ ಅವರಿಗೆ ಪರಿಹಾರದ ಹಣ ಸಿಗುತ್ತಿತ್ತು. ನಿಜವಾಗಿ ಬೆಳೆ ಹಾನಿಯಾದವರಿಗೆ ಪರಿಹಾರ ಸಿಗುತ್ತಿರಲಿಲ್ಲ. ಹಿಂದಿನ ಸರಕಾರ ಇದ್ದಾಗ, ನಾನು ಕೃಷಿ ಸಚಿವನಿದ್ದಾಗಲೂ ಇದನ್ನು ನೋಡಿದ್ದೇನೆ. ಯಾರದೋ ಜಮೀನು, ಇನ್ಯಾರಿಗೋ ಹಣ ಪಾವತಿಯಾಗಿದೆ. ರೈತರ ಬೆಳೆಯೇ ಬೇರೆ, ಪರಿಹಾರ ಬರೋದೆ ಬೇರೆ. ಅಧಿಕಾರಿಗಳು ಬೆಳೆ ಮಾಹಿತಿ ಸೇರಿಸುವಾಗ ತಪ್ಪುಗಳಾಗುತ್ತಿದ್ದವು. ಇದೆಲ್ಲವನ್ನೂ ಸರಿಮಾಡಿ ಬೆಳೆ ಸಮೀಕ್ಷೆ ಆಧಾರದಲ್ಲಿ ಹಣ ಪಾವತಿಯಾಗಲಿದೆ ಎಂದು ಸಚಿವರು ವಿವರ ನೀಡಿದರು.
ಈ ವ್ಯವಸ್ಥೆ ಸರಿಪಡಿಸಲು ಎರಡು ತಿಂಗಳು ತಡವಾಗಿದೆ. ಮುಂದಿನ ಒಂದು ವಾರದಲ್ಲಿ ಮೊದಲ ಕಂತಿನ ಹಣ ಬರಲಿದೆ. 12 ಲಕ್ಷ ಜನರಿಗೆ ಹಣ ಪಾವತಿಸಲು ಆರ್‌ಬಿಐಗೆ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ. ಇನ್ನೂ 20 ಲಕ್ಷ ಜನರ ಪೇಮೆಂಟ್ ಆರ್ಡರ್ ಒಂದು ವಾರದಲ್ಲಿ ಕಳುಹಿಸಲಿದ್ದೇವೆ. ಒಟ್ಟು 25-30 ಲಕ್ಷ ಜನರಿಗೆ ಬರ ಪರಿಹಾರದ ಹಣ ಸಿಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕೇಂದ್ರ ಸರಕಾರಕ್ಕೆ ಬರ ಪರಿಹಾರ ಕೋರಿ ಮನವಿ ಸಲ್ಲಿಸಲಾಗಿದ್ದು, ಇನ್ನೂ ಹಣ ಬಂದಿಲ್ಲ. ಹೀಗಾಗಿ ನಾವೇ ರೈತರಿಗೆ 2,000 ರೂ.ವರೆಗೆ ಪರಿಹಾರ ನೀಡಲು ನಿರ್ಧರಿಸಿದ್ದೇವೆ. ನಾವು ಕಳುಹಿಸಿರುವ ಮನವಿ ಪ್ರಕಾರ ಮೊದಲ ಕಂತಿನ ಹಣ 800-900 ಕೋಟಿ ರೂ. ಬರಬೇಕು. 4,663 ಕೋಟಿ ರೂ. ಪರಿಹಾರದ ಹಣವನ್ನು ಕೇಂದ್ರ ಸರಕಾರದಿಂದ ಕೇಳಿದ್ದೇವೆ. ಎಲ್ಲಾ ಸೇರಿ 18,172 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರವನ್ನು ಆಗ್ರಹಿಸಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.