ಕರ್ನಾಟಕ ಹಣಕಾಸು ಇಲಾಖೆಯಲ್ಲಿ ಭರ್ಜರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ…!
ಕರುನಾಡ ಜನತೆಗೆ ನಮಸ್ಕಾರಗಳು…!
ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ ಈಗಾಗಲೇ ನಿಮಗೆ ತಿಳಿದಿರುವಂತೆ ಉದ್ಯೋಗಗಳ ಮಾಹಿತಿಯನ್ನು ದಿನೇ ದಿನೇ ನೋಡುತ್ತಿದ್ದು ಇದೀಗ ಹಣಕಾಸು ಇಲಾಖೆಯಲ್ಲಿ ಅತಿಹೆಚ್ಚಿನ ಉದ್ಯೋಗಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವಾಗ ಅರ್ಜಿ ಸಲ್ಲಿಸಲು ಯಾರು ಅರ್ಹತೆಯನ್ನು ಪಡೆದಿರುತ್ತಾರೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಕರ್ನಾಟಕ ಸರ್ಕಾರಿ ಹುದ್ದೆಗಾಗಿ ಕಾಯುತ್ತಿರುವವರಿಗೆ ಹಣಕಾಸು ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಉತ್ತಮ ಅವಕಾಶವನ್ನು ಕಲ್ಪಿಸಲಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ ತಿಂಗಳಲ್ಲಿ 16ನೇ ತಾರೀಕು ಕೊನೆಯ ದಿನಾಂಕವಾಗಿದ್ದು ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ….!
ಕರ್ನಾಟಕ ಹಣಕಾಸು ಇಲಾಖೆಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ & ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ- FPI Karnataka Jobs 2024
ಕರ್ನಾಟಕ ಹಣಕಾಸು ಇಲಾಖೆಯ ವಿತ್ತಿಯ ಕಾರ್ಯನೀತಿ ಸಂಸ್ಥೆ (ವಿಕಾಸಂ) ನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ ಖಾಲಿ ಇರುವ ಸಂಶೋಧನಾ ಫೆಲೋ & ಸಂಶೋಧನಾ ಅಸಿಸ್ಟೆಂಟ್ ಹುದ್ದೆಗಳ ತಾತ್ಕಾಲಿಕ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಫ್ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಆಸಕ್ತರು 12-02-2024 ರ ಒಳಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಬಹುದು. ಇದರ ಅಧಿಸೂಚನೆ & ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ವೇತನ/ Salary Scale:
ಮಾಸಿಕ ರೂ 60000/- ಕ್ರೂಢೀಕೃತ ವೇತನ ನೀಡಲಾಗುತ್ತದೆ.
ಶೈಕ್ಷಣಿಕ ಅರ್ಹತೆಗಳು/ Educational Qualification:
ಅರ್ಥಶಾಸ್ತ್ರ ಅಥವಾ ತತ್ಸಮಾನ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿರಬೇಕು & ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ ಇರಬೇಕು.
ವಯೋಮಿತಿ/ Age limit:
ಗರಿಷ್ಟ 40 ವರ್ಷದವರೆಗೂ ಅರ್ಜಿ ಸಲ್ಲಿಸಬಹುದು
ಅರ್ಜಿ ಶುಲ್ಕ/ Application Fees:
ಅರ್ಜಿ ಶುಲ್ಕ ಇರುವುದಿಲ್ಲ
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಂದರ್ಶನ ನಡೆಸಲಾಗುತ್ತದೆ
ಅರ್ಜಿ ಹಾಕುವ ವಿಧಾನ/ Application Submission Method:
ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಇತ್ತೀಚಿನ ಫೋಟೊ, ಅಗತ್ಯ ವಿದ್ಯಾರ್ಹತೆ, ಅನುಭವ & ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ: 12.02.2024 ರ ಒಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ Director, Fiscal Policy Institute, Kengeri Post, Bengaluru- Mysore Road, Kengeri, Near Panchamukhi Ganapati Temple, Bengaluru- 560060 ಇವರ ವಿಳಾಸಕ್ಕೆ ಸಲ್ಲಿಸುವುದು. ಈ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಮಾಡಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ.