ಮನೆ ಇಲ್ಲದವರಿಗೆ ಸರ್ಕಾರದಿಂದ ಉಚಿತ ಸೈಟ್ ವಿತರಣೆ…! ಈ ಯೋಜನೆಯ ಲಾಭ ಪಡೆದುಕೊಳ್ಳಲು ಈಗಲೇ ಅರ್ಜಿ ಸಲ್ಲಿಸಿ….!

ಮನೆ ಇಲ್ಲದವರಿಗೆ ಸರ್ಕಾರದಿಂದ ಉಚಿತ ಸೈಟ್ ವಿತರಣೆ…!

WhatsApp Group Join Now
Telegram Group Join Now

ಕರುನಾಡ ಜನತೆಗೆ ನಮಸ್ಕಾರಗಳು…!

ಮನೆ ಇಲ್ಲದವರಿಗೆ ರಾಜೀವ್ ಗಾಂಧಿ ವಸತಿ ನಿಲಯ ಹೊಸ ಯೋಜನೆ ಅಡಿಯಲ್ಲಿ ಉಚಿತ ಸೈಟ್ ವಿತರಿಸುತ್ತಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…

ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಹೊಸ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ರಾಜೀವ್ ಗಾಂಧಿ ವಸತಿ ನಿಲಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಮನೆ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ರಾಜೀವ್ ಗಾಂಧಿ ನಿವೇಶನ ಅಡಿಯಲ್ಲಿ ಸೈಟ್ ವಿತರಣೆ ಮಾಡುತ್ತಿರುವುದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ….

ಯಾರಿಗೆ ಸೈಟ್ ಹಂಚಿಕೆಯಾಗಲಿವೆ ಈಗಲೇ ತಿಳಿಯಿರಿ…?

ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಸೈಟ್ (Site in Bengaluru rural area)

ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಸಾಕಷ್ಟು ನಿರಾಶ್ರಿತರು, ತಮ್ಮ ಹೆಸರಿನಲ್ಲಿ ಸೈಟ್ ಪಡೆದುಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಡುತ್ತಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ 527 ಎಕರೆ ಪ್ರದೇಶದಲ್ಲಿ ಆಶ್ರಯ ಯೋಜನೆಯಡಿಯಲ್ಲಿ ನಿರಾಶ್ರಿತರಿಗೆ ಸೈಟ್ ಕೊಡಲು ಸರ್ಕಾರ ತೀರ್ಮಾನಿಸಿದೆ.

ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi housing scheme) ಯ ಅಡಿಯಲ್ಲಿ ಅರ್ಜಿ ಸಲ್ಲಿಸಿರುವವರು ರಾಜ್ಯ ಸರ್ಕಾರ ತಮಗೆ ಯಾವಾಗ ಮನೆ ವಿತರಣೆ ಮಾಡುತ್ತದೆಯೋ ಎಂದು ಕಾದು ಕುಳಿತಿದ್ದಾರೆ.

ಆಶ್ರಯ ಯೋಜನೆ ಅಡಿಯಲ್ಲಿ ಸೈಟ್ ವಿತರಣೆ!

ಸ್ವಲ್ಪ ಜಮೀನು ಹೊಂದಿರುವ ರೈತರು (farmers ) ತಮ್ಮ ಜಮೀನಿನಲ್ಲಿ ಸ್ವಂತ ಮನೆ (own house) ನಿರ್ಮಾಣ ಮಾಡಿಕೊಳ್ಳಬಹುದು. ಆದರೆ ತುಂಬಾ ಜಾಗವನ್ನು ಹೊಂದಿಲ್ಲದೆ ಇರುವ ನಿರಾಶ್ರಿತರು ದೊಡ್ಡ ಕುಟುಂಬದಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವ ಪರಿಸ್ಥಿತಿ ಇದೆ.

ಇಂಥವರಿಗೂ ಕೂಡ ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವ ಕನಸು ಇದ್ದರು ಅದನ್ನು ಜೀವನ ಪರ್ಯಂತ ಸಾಕಾರಗೊಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಇದನ್ನು ಮನಗಂಡಿರುವ ಸರ್ಕಾರ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಸದ್ಯ ನಿವೇಶನ ವಿತರಣೆ ಮಾಡಲು ನಿರ್ಧರಿಸಿದೆ.

ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ತಿಳಿಸಿರುವಂತೆ, ಆಶ್ರಯ ನಿವೇಶನ (ashraya scheme) ಗಳಿಗೆ ಈಗಾಗಲೇ ಹಲವು ಕಡೆ ಜಮೀನು ಗುರುತಿಸಿ ಮಂಜೂರಾತಿ ಮಾಡಲಾಗಿದೆ ಕ್ಷೇತ್ರದಲ್ಲಿಯೇ ಈ ಸೈಟ್ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಹೊಸಪೇಟೆ ಜಿಲ್ಲೆ (Hospet district) ಯ ನಾಲ್ಕು ತಾಲೂಕುಗಳಲ್ಲಿ 327 ಎಕರೆ ಜಾಗವನ್ನು ಗುರುತಿಸಲಾಗಿದೆ. 46.67 ಎಕರೆ ಜಾಗ ನೆಲಮಂಗಲ ಭಾಗದಲ್ಲಿ ಗುರುತಿಸಲಾಗಿದೆ.

ಸೈಟ್ ವಿತರಣೆಗೆ ಮೀಸಲಾಗಿರುವ ಜಾಗದ ವಿವರ

ದೇವನಹಳ್ಳಿ ತಾಲೂಕು 62.14 ಎಕರೆ ಗುರುತಿಸಲಾಗಿದೆ.
ದೊಡ್ಡಬಳ್ಳಾಪುರ ತಾಲೂಕು 93.39 ಎಕರೆ ಗುರುತಿಸಲಾಗಿದೆ
ಹೊಸಕೋಟೆ ತಾಲೂಕು 324.20 ಎಕರೆ ಜಾಗ ಗುರುತಿಸಲಾಗಿದೆ.
ನೆಲಮಂಗಲ ತಾಲೂಕು 46.37 ಎಕರೆ ಜಾಗ ಗುರುತಿಸಲಾಗಿದೆ.

ನಿವೇಶನ ಹಂಚಿಕೆ ವಿಚಾರದಲ್ಲಿ ಜಾಗೃತಿ ಮಾಡುತ್ತಿರುವ ಸರಕಾರ!

ನಿವೇಶನ ಹಂಚಿಕೆ ಮಾಡುವ ಭರವಸೆಯನ್ನು ನೀಡಿದಷ್ಟು ಸುಲಭವಾಗಿ ಅದನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಮುಂಬರುವ ಚುನಾವಣೆ (election) ಯ ಒಳಗೆ ಸೈಟ್ ವಿತರಣೆ ಮಾಡುವುದಾಗಿ ಘೋಷಿಸಿ ಅದನ್ನು ಜನರಿಗೆ ವಿತರಣೆ ಮಾಡದೇ ಇದ್ದಲ್ಲಿ ರಾಜಕೀಯ ಪಕ್ಷದ ಮೇಲೆ ಬಹಳ ಗಂಭೀರವಾದ ಪರಿಣಾಮ ಬೀರಲಿದೆ.

ಇನ್ನು ಸೈಟ್ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ರಾಜಕೀಯ ಪಕ್ಷಗಳ ಭರವಸೆಯ ಆಧಾರದ ಮೇಲೆ ಮತ ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಜನರ ವಿಶ್ವಾಸ ಗಳಿಸಿಕೊಳ್ಳುವುದಕ್ಕಾಗಿ ನಿವೇಶನದ ಬಗ್ಗೆ ಕೇವಲ ಮಾಹಿತಿ ನೀಡಿದರೆ ನಂತರ ಅದನ್ನು ಈಡೇರಿಸದೆ ಇದ್ದರೆ, ಸಾರ್ವಜನಿಕರು ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿ ಇರುವ ಕಾಂಗ್ರೆಸ್ ಸರ್ಕಾರ ಬಹಳ ಮುತುವರ್ಜಿಯಿಂದ ಹೆಜ್ಜೆ ಇಡುತ್ತಿದೆ ಎನ್ನಬಹುದು.

ಗ್ರಾಮ ಪಂಚಾಯತ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣೆಗೂ ಮೊದಲು ನಿವೇಶನ ಹಂಚಿಕೆ ಮಾಡಿದರೆ ನಿವೇಶನದಿಂದ ವಂಚಿತರಾಗಿರುವವರ ಮತ ಅಂತಹ ರಾಜಕೀಯ ಪಕ್ಷಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದರಿಂದಾಗಿ ನಿವೇಶನ ಹಂಚಿಕೆಯ ಬಗ್ಗೆ ಸರ್ಕಾರ ಮಹತ್ವದ ನಿರ್ಣಯ ಕೈಗೊಳ್ಳಲಿದೆ.

Leave a Reply

Your email address will not be published. Required fields are marked *