ಏರ್ ಇಂಡಿಯಾ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು…!
ಕನ್ನಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಪ್ರಸ್ತುತ ಈ ನಮ್ಮ ಧ್ಯಾನ ಘರ್ಜನೆ ವೆಬ್ಸೈಟ್ನಲ್ಲಿ ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸ್ ಲಿಮಿಟೆಡ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಅರ್ಜಿ ಹೇಗೆ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳೇನು? ಹಾಗೆಯೇ ಅರ್ಜಿ ಶುಲ್ಕ ಎಷ್ಟಿರುತ್ತದೆ?
ಸಂಪೂರ್ಣ ವಿವರಣೆಯನ್ನು ತಿಳಿದುಕೊಂಡು ಅರ್ಜಿ ಈಗಲೇ ಸಲ್ಲಿಸಿ…!
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳ ಬಗ್ಗೆ ತಿಳಿದುಕೊಂಡು ಹಾಗೆಯೇ ಅರ್ಜಿ ಸಲ್ಲಿಸಲು ಬೇಕಾಗಿರುವ ಡೈರೆಕ್ಟ ಲಿಂಕ್ ನೋಡಿ
ಪ್ರಸ್ತುತ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಲಯಗಳಿಂದ ಸಂಬಂಧಿಸಿದ ವಿಷಯದಲ್ಲಿ ಬಿ.ಎಸ್‌ಸಿ, ಬಿ.ಕಾಮ್, ಬಿಎ, ಏರೋನಾಟಿಕಲ್ / ಮೆಕ್ಯಾನಿಕಲ್ / ಎಲೆಕ್ಟಿಕಲ್ / ಎಲೆಕ್ಟ್ರಾನಿಕ್ಸ್ / ಟೆಲಿಕಮ್ಯುನಿಕೇಷನ್ಸ್ / ಇನ್ನು ಮೆಂಟೇಶನ್ / ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ / ಇಂಡಸ್ಟ್ರಿಯಲ್ / ಪ್ರೊಡಕ್ಷನ್ / ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿಟೆಕ್ ಪದವಿ ಪೂರ್ಣಗೊಳಿಸಿರಬೇಕು
ಆಯ್ಕೆ ಪ್ರಕ್ರಿಯೆ
ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿದ ನಂತರ ಪರೀಕ್ಷೆ ಬರೆಯಲು ಅರ್ಹರಾದ ಅಭ್ಯರ್ಥಿಗಳ ಹೆಸರನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಎಂಎಸ್ ವರ್ಡ್, ಎಕ್ಸೆಲ್ ಮತ್ತು ಎಂಎಸ್ ಪವರ್ ಪಾಯಿಂಟ್ ಪರೀಕ್ಷೆ ನಡೆಸಿದ ನಂತರ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗುತ್ತದೆ.
ಸಂಸ್ಥೆಯ ಮಾನದಂಡಗಳಿಗೆ ಅನುಗುಣವಾಗಿ ಹುದ್ದೆಗಳ ಅನುಸಾರ ಕನಿಷ್ಠ 28 – ಗರಿಷ್ಠ. : 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಅನ್ವಯವಾಗಲಿದೆ.
ಅರ್ಜಿ ಶುಲ್ಕ: ಅಧಿಸೂಚನೆಯಲ್ಲಿ ತಿಳಿಸಲಾದ ಬ್ಯಾಂಕ್ ಖಾತೆಗೆ 1,000 ರೂಪಾಯಿ ಶುಲ್ಕ ಪಾವತಿಸಬೇಕು.
www.aiesl. in ನಲ್ಲಿ ನೀಡಲಾದ ಅಧಿಸೂಚನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಅಲ್ಲಿ ನೀಡಲಾದ ಅರ್ಜಿ ನಮೂನೆಯನ್ನು ಸಂಪೂರ್ಣ ಭರ್ತಿಮಾಡಿ ಆಫ್‌ಲೈನ್ ಅರ್ಜಿ ಸಲ್ಲಿಸಬೇಕು.
ಸ್ವಯಂ ದೃಢೀಕೃತ en modi [email protected] ಗೆ ಇ-ಮೇಲ್ ಮಾಡಬೇಕು
CHRO&AIESL, HR Department, 2nd Floor, CRA Building, Safdarjung Airport Complex, Aurobindo Marg, New Delhi-110003.