ಕರುನಾಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಇನ್ಸೂರೆನ್ಸ್ ಎಂಬ ಪದ್ಧತಿಯು ಪ್ರಸ್ತುತ ದಿನಮಾನಗಳಲ್ಲಿ ಅತಿ ಹೆಚ್ಚಿನ ಮಹತ್ವವನ್ನು ಪಡೆದಿದ್ದು ಇದೀಗ ಸಾಕುಪ್ರಾಣಿಗಳ ಇನ್ಸೂರೆನ್ಸ್ ಕೂಡ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಇದು ಯಾವ ಯೋಜನೆ ಯಾವ ಯೋಜನೆ ಅಡಿಯಲ್ಲಿ ಆಕಳು ಅಥವಾ ಎಮ್ಮೆಗಳು ಸತ್ತರೆ ರೈತರ ಖಾತೆಗೆ ಹಣ ಜಮಾ ಆಗುತ್ತದೆ ಎಂಬ ಸಂಪೂರ್ಣ ಮಾಹಿತಿ ಈಗಲೇ ತಿಳಿಯಿರಿ..!
ಅನುಗ್ರಹ ಯೋಜನೆ ಜಾರಿ ಕುರಿ ಮತ್ತು ಮೇಕೆ ಸತ್ತರೆ ಸರ್ಕಾರದಿಂದ ಹಣ ಬಿಡುಗಡೆ.ಆತ್ಮೀಯ ರೈತ ಬಾಂಧವರೇ ಕರ್ನಾಟಕ ಬಜೆಟ್ 2023- 24 ಘೋಷಣೆಯಾಗಿದೆ.
ಈ ಬಾರಿ ನಮ್ಮ ಮಾನ್ಯ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಪಶು ಸಂಗೋಪನ ಕ್ಷೇತ್ರಕ್ಕೆ ಅತಿ ಪ್ರಾಮುಖ್ಯತೆ ನೀಡಿದ್ದು ಇದರ ಅಭಿವೃದ್ಧಿಗಾಗಿ ಹಲವಾರು ರೀತಿಯ ಒತ್ತನ್ನು ನೀಡಿದ್ದಾರೆ. ಹಿಂದಿನ ಬಾರಿ ಸಿದ್ದರಾಮಯ್ಯ ಅವರ ಸರಕಾರವಿದ್ದಾಗ ಅನುಗ್ರಹ ಯೋಜನೆಯು ಚಾಲ್ತಿಯಲ್ಲಿತ್ತು.
ಆದರೆ ಬಿಜೆಪಿ ಸರ್ಕಾರವು ಬಂದಮೇಲೆ ಈ ಅನುಗ್ರಹ ಯೋಜನೆಯನ್ನು ರದ್ದುಗೊಳಿಸಲಾಗಿತ್ತು. ಈಗ ಮತ್ತೆ ಸಿದ್ದರಾಮಯ್ಯ ಅವರು ಬಂದ ಕಾರಣ ರೈತರಿಗೂ ಉಪಯುಕ್ತವಾಗಲೆಂದು ಈ ಪಶು ಸಂಗೋಪನೆ ಕಾರ್ಯವನ್ನು ಅದರ ಜೊತೆ ನಂದಿನಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಕೆಳಗಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಏನಿದು ಅನುಗ್ರಹ ಯೋಜನೆ?
ಪಶು ಸಂಗೋಪನೆಯಡಿಯಲ್ಲಿ ಸಾಕುವಂತಹ ಪ್ರಾಣಿಗಳು ಮಾಲೀಕರಿಗೆ ಅವುಗಳ ಅಸುನಿಗಿದಾಗ ಪರಿಹಾರವನ್ನು ನೀಡಲು ಈ ಅನುಗ್ರಹ ಯೋಜನೆ ಬಂದಿತ್ತು. ಈ ಯೋಜನೆಯಿಂದ ಗೋಗಳು ಕುರಿಗಳು ಮೇಕೆಗಳು, ಹಸು ಹೆಮ್ಮೆ ಎತ್ತು ಮರಣ ಹೊಂದಿದರೆ ಅವುಗಳ ಮಾಲೀಕರಿಗೆ ಸಿಗಲಿದೆ ಸರ್ಕಾರದಿಂದ ಪರಿಹಾರ ಧನ. ಇಷ್ಟೇ ಅಲ್ಲದೆ ಚರ್ಮರೋಗದಿಂದ ಸಾವನ್ನು ಒಪ್ಪಿದ ಹಸುಗಳಿಗೂ ಕೂಡ ಪರಿಹಾರ ಧನವನ್ನು ನೀಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಒಟ್ಟು 32000 ಜಾನುವಾರುಗಳು ಈ ಚರ್ಮರೋಗದಿಂದ ತುತ್ತಾಗಿದ್ದವು ಅದರಲ್ಲಿ 25000 ಗೋ ಗಳಿಗೆ 53 ಕೋಟಿ ರೂಪಾಯಿಗಳನ್ನು ಪರಿಹಾರ ನೀಡಿದೆ. ಉಳಿದ ಪ್ರಾಣಿಗಳು ಕೂಡ 12 ಕೋಟಿ ಪರಿಹಾರವನ್ನು ಮೀಸಲಿಟ್ಟಿದೆ.
ಸರ್ಕಾರದಿಂದ ಈ ಯೋಜನೆ ಅಡಿ ಎಷ್ಟು ಪರಿಹಾರ ಧನ ಸಿಗುತ್ತದೆ?
ಮೇಕೆ, ಕುರಿ ಅಸುನೀಗಿದರೆ ತಲಾ ಮೇಕೆ – ಕುರಿಗೆ 5 ಸಾವಿರ ರೂ. ಪರಿಹಾರ. ಗೋವುಗಳು (ಹಸು-ಎಮ್ಮೆ-ಎತ್ತು) ಮರಣ ಹೊಂದಿದರೆ ತಲಾ 10,000 ರೂ. ಪರಿಹಾರ ನೀಡುತ್ತೇವೆ ಎಂದು ನಮ್ಮ ಮಾನ್ಯ ಮುಖ್ಯಮಂತ್ರಿಗಳು ಈ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಆದಕಾರಣ ರೈತರು ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ತಮ್ಮ ಪ್ರಾಣಿಗಳು ಸಾವನ್ನಪ್ಪಿದರೆ ಈ ಕೆಳಗಿನ ರೀತಿ ಅರ್ಜಿಯನ್ನು ಸಲ್ಲಿಸಿ ಈ ಪರಿಹಾರ ಧನವನ್ನು ಪಡೆದುಕೊಳ್ಳಬಹುದು.
ಈ ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ಬಳಿ ಇರುವ ಕುರಿ ಮೇಕೆ ಮೃತಪಟ್ಟರೇ ನೀವು ಮೊದಲು ನಿಮ್ಮ ಹತ್ತಿರದ ಪಶು ಸಂಗೋಪನೆ ಇಲಾಖೆಯಲ್ಲಿ ಪಶು ವೈದ್ಯರನ್ನು ಭೇಟಿ ಮಾಡಿ ಮರಣೋತ್ತರ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಆ ಪ್ರಾಣಿಗಳ ಮಾಲೀಕರು ಬೇಕಾಗುವ ಎಲ್ಲ ದಾಖಲಾತಿಗಳನ್ನು ಅಂದರೆ ನಿಮ್ಮ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಎಲ್ಲವನ್ನು ತೆಗೆದುಕೊಂಡು ಅಧಿಕಾರಿಗಳಿಗೆ ತಲುಪಿಸಬೇಕು
ಹೈನುಗಾರಿಕೆ ಮಾಡುವವರಿಗೆ ಗುಡ್ ನ್ಯೂಸ್…!
ಹೈನುಗಾರಿಕೆ ಮಾಡುವಂತಹ ಜನರಿಗೆ ಸಾಲದ ಸೌಲಭ್ಯ ದೊರೆಯಲಿದ್ದು ಹಾಗೆ ಹಾಲಿನ ಬೆಲೆಯ ಬಗ್ಗೆ ಮಾಹಿತಿ ಈಗಲೇ ತಿಳಿಯಿರಿ…!
ಮುಂಗಾರು ಸಮಯದಲ್ಲಿ ಸರಿಯಾಗಿ ಮಳೆ ಆಗದೆ ಇರುವುದಕ್ಕಾಗಿ ರೈತರು ಪರದಾಡುತ್ತಿದ್ದು ಮೇವಿನ ಸಮಸ್ಯೆಯಿಂದ ರೈತರು ಮಾರುತಿದ್ದಕ್ಕಾಗಿ ಹಾಲಿನ ಬೆಲೆಯಲ್ಲಿ ಕೊಂಚಮಟ್ಟಿಗೆ ಬೆಲೆ ಏರಿಕೆಯಾಗಿದೆ ಮೊದಲು ಒಂದು ಲೀಟರ್ಗೆ 35 ನೀಡುತ್ತಿದ್ದರು ಇದೀಗ 36 ರುಪಾಯಿವರೆಗೂ ಒಂದು ಲೀಟರ್ಗೆ ನೀಡುತ್ತಿದ್ದು ಒಂದು ಲೀಟರ್ಗೆ ಒಂದು ರೂಪಾಯಿ ಏರಿಕೆಯಾಗಿದೆ…!
ಹಾಗೆ ಹಾಲಿನ ಬೆಲೆಯೂ ಫ್ಯಾಟ್ ಮುಖಾಂತರ ಗುರುತಿಸುತ್ತಿದ್ದು ನಿಮ್ಮ ಹಾಲಿನ ಫ್ಯಾಟ್ ಸರಿಯಾಗಿ ಇದ್ದರೆ ಅತಿಹೆಚ್ಚಿನ ಮೊತ್ತದ ಹಣವನ್ನು ನೀವು ಪಡೆಯುತ್ತೀರಿ…
ಹೈನುಗಾರಿಕೆ ಮಾಡಲು ಬಯಸುತ್ತಿದ್ದರೆ ಹೈನುಗಾರಿಕೆ ಆಧಾರದ ಮೇಲೆ ಸಾಲವನ್ನು ಪಡೆದುಕೊಳ್ಳಿ…
ಕನ್ನಡ ಜನತೆಗೆ ನಮಸ್ಕಾರಗಳು ನಿಮಗೆ ತಿಳಿದಿರುವಂತೆ ಕೃಷಿ ಕೆಲಸಕ್ಕಾಗಿ ಹೈನುಗಾರಿಕೆ ಹಾಗೆ ಕುರಿ ಸಾಕಾಣಿಕೆ ಹೀಗೆ ಹತ್ತು ಹಲವಾರು ಕೆಲಸಗಳಿಗಾಗಿ ಬ್ಯಾಂಕಿನಲ್ಲಿ ಬಡ್ಡಿ ರೈತ ಅಥವಾ ಅತಿ ಕಡಿಮೆ ಪ್ರಮಾಣದ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದ್ದು ಈ ಸಾಲವನ್ನು ಯಾವ ಬ್ಯಾಂಕಿನಲ್ಲಿ ನೀಡುತ್ತಿದ್ದಾರೆ ಹೇಗೆ ಈ ಸಾಲವನ್ನು ಪಡೆದುಕೊಳ್ಳಬೇಕು ಎಷ್ಟು ಸಾಲವು ದೊರೆಯಲಿದೆ ಎಂಬ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ…!
ಹೈನುಗಾರಿಕೆ ಸಾಲ ಪಡೆಯುವುದು ಹೇಗೆ…?
ಕರ್ನಾಟಕ ರಾಜ್ಯ ಸರ್ಕಾರವು ಹೈನುಗಾರಿಕೆಗೆ ಮಹತ್ವವನ್ನು ನೀಡಿದ್ದು ಹಾಗೆ ಕೆಎಂಎಫ್ ನಿಂದ ರೈತರಿಗೆ ಅತಿ ಹೆಚ್ಚಿನ ಲಾಭವು ದೊರೆಯುತ್ತಿದ್ದು ಈಗ ಈ ಸಾಲವನ್ನು ಹೇಗೆ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…!
ಈ ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಿಮಗೆ ಎರಡು ಅವಕಾಶಗಳಿರುತ್ತದೆ. ಒಂದು ನೇರವಾಗಿ ಬ್ಯಾಂಕ್ನಿಂದ ಪಡೆದುಕೊಳ್ಳಬಹುದು ಅಥವಾ ನೀವು ಹಾಲು ಹಾಕುವ ಹಾಲಿನ ಡೈರಿ ವತಿಯಿಂದ ಪಡೆದುಕೊಳ್ಳಬಹುದು ಎರಡು ಸಾಲವನ್ನು ನೀಡುತ್ತವೆ ಆದರೆ ಎರಡು ಬ್ಯಾಂಕ್ ಮುಖಾಂತರ ಸಾಲವನ್ನೇ ನೀಡುತ್ತಿದ್ದು ಅದಕ್ಕೆ ಡಿಸಿಸಿ ಬ್ಯಾಂಕ್ ಅಂದರೆ ಡಿಸ್ಟ್ರಿಕ್ಟ್ ಕೋಆಪರೇಟಿವ್ ಬ್ಯಾಂಕ್ ಮುಖಾಂತರ ಸಾಲವನ್ನು ಪಡೆದುಕೊಳ್ಳುವುದು ಉತ್ತಮ…
ಕೇವಲ ಎರಡು ಪರ್ಸೆಂಟ್ ನಷ್ಟು ಮಾತ್ರ ಬಡ್ಡಿದರ ಇದ್ದು ನಿಮಗೆ 3,00,000 ವರೆಗೂ ಹೈನುಗಾರಿಕೆಗೆ ಸಾಲವು ಸಿಗುತ್ತಿದ್ದು ಈ ಸಾಲವನ್ನು ಡಿಸಿಸಿ ಅಂದರೆ ಡಿಸ್ಟ್ರಿಕ್ಟ್ ಕೋಆಪರೇಟಿವ್ ಬ್ಯಾಂಕ್ ಮುಖಾಂತರ ಪಡೆದುಕೊಳ್ಳಬಹುದಾಗಿದೆ…
ಸಾಲ ಪಡೆದುಕೊಳ್ಳಲು ಬೇಕಾಗಿರುವ ದಾಖಲಾತಿಗಳು…?
ಈ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಡಿಸಿಸಿ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರಬೇಕು ಅದಷ್ಟೇ ಅಲ್ಲದೆ ನೀವು ಸಾಲ ಪಡೆದುಕೊಳ್ಳಲು ಅರ್ಹತೆಯನ್ನು ಪಡೆದುಕೊಳ್ಳಬೇಕೆಂದರೆ ನಿಮ್ಮ ಸಮೀಪ ಬರುವ ಸರ್ಕಾರಿ ಡೈರಿ ಅಂದರೆ ಕೆಎಂಎಫ್ ಡೈರಿ ಮುಖಾಂತರ ಮಾನ್ಯತೆಯನ್ನು ಪಡೆದಿರಬೇಕಾಗಿರುತ್ತದೆ ಅಂದಾಗ ಮಾತ್ರ ನಿಮಗೆ ಈ ಸಾಲವು ದೊರೆಯುತ್ತದೆ…!
ಇನ್ನೊಂದು ರೀತಿಯಲ್ಲಿ ಸಾಲ ಪಡೆದುಕೊಳ್ಳಬೇಕೆಂದರೆ ಕೆಎಂಎಫ್ ಮುಖಂತರ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಅತಿ ಕಡಿಮೆ ಪ್ರಮಾಣದ ಸಾಲವನ್ನು ನೀಡುತ್ತಾರೆ ಅಂದರೆ 50ರಿಂದ 1 ಲಕ್ಷ ವರೆಗೂ ಮಾತ್ರ ಅವರು ಸಾಲವನ್ನು ನೀಡುತ್ತಾರೆ ಅದಕ್ಕಾಗಿ ಬ್ಯಾಂಕಿನ ಮುಖಾಂತರ ಪಡೆದುಕೊಂಡರೆ ನೀವು 3,00,000 ವರೆಗೂ ಸಾಲವನ್ನು ಪಡೆದುಕೊಳ್ಳಬಹುದಾಗಿದೆ..
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪ ಇರುವ ಡಿಸಿಸಿ ಬ್ಯಾಂಕ್ ನಲ್ಲಿ ತಿಳಿದುಕೊಳ್ಳಿ ಹಾಗೆ ಇತರರಿಗೂ ಇದರ ಬಗ್ಗೆ ಮಾಹಿತಿಯನ್ನು ನೀಡಿ..
ಧನ್ಯವಾದಗಳು.