ಕರುನಾಡ ರೈತರಿಗೆ ನಮಸ್ಕಾರಗಳು…!
ಈಗಾಗಲೇ 2023 ನೇ ಸಾಲಿನ ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈಗಾಗಲೇ ಹಲವಾರು ರೈತರು ಅರ್ಜಿಯನ್ನು ಸಲ್ಲಿಸಿದ್ದು ಇನ್ನೂ ಹಲವು ದಿನಗಳು ಕಾಲ ಅರ್ಜಿ ಸಲ್ಲಿಸಲು ಕಾಲಾವಕಾಶ ಇದ್ದು ಇಷ್ಟರಲ್ಲಿ ಅರ್ಜಿಯನ್ನು ಕೂಡಲೇ ಸಲ್ಲಿಸಿ…
ಅಂದರೆ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ನಿಮ್ಮ ಬೆಳೆ ಹಾನಿಯಾಗಿದ್ದರೆ ಕೇಂದ್ರ ಸರ್ಕಾರದಿಂದ ಫಸಲ್ ಭೀಮಾ ಯೋಜನಾ ಅಂದರೆ ಪ್ರಧಾನಮಂತ್ರಿಯವರು ಈ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರಿಗೆ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿದ್ದರೆ ನಿಮಗೆ ಬೆಳೆ ಪರಿಹಾರದ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ…!
ಅದಕ್ಕಾಗಿ ಬೆಳೆ ಪರಿಹಾರ ಹಣ ಪಡೆದುಕೊಳ್ಳಬೇಕೆಂದರೆ ನೀವು ನಿಮ್ಮ ಹೊಲದಲ್ಲಿ ಬೆಳೆದಿರುವಂತಹ ಬೆಳೆಯ ಜಿಪಿಆರ್ಎಸ್ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ…
ಜಿಪಿಆರ್ಎಸ್ ಅಂದರೆ ನಿಮ್ಮ ಹೊಲದಲ್ಲಿರುವ ಯಾವ ಬೆಳೆಯನ್ನು ಬೆಳೆದಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಒಂದು ಆಪ್ ಬಿಡುಗಡೆಯಾಗಿದ್ದು ನೀವು ಕೇವಲ ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಒಂದನ್ನು ಇನ್ಸ್ಟಾಲ್ ಮಾಡಿಕೊಂಡು ಅದರಿಂದ ನಿಮ್ಮ ಹೊಲದಲ್ಲಿರುವ ಬೆಳೆಯ ಫೋಟೋ ಒಂದನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಇದರಿಂದಾಗಿ ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿದಂತಾಗುತ್ತದೆ…
ಅದಕ್ಕಾಗಿ ಎಲ್ಲ ರೈತರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ನಂತರ ಈ ಜಿಪಿಆರ್ಎಸ್ ಕಡ್ಡಾಯವಾಗಿ ಮಾಡಿಸಿ ಇಲ್ಲವಾದರೆ ನೀವು ಅರ್ಜಿ ಸಲ್ಲಿಸಿದ್ದರು ಕೂಡ ಜಿಪಿಆರ್ಎಸ್ ಮಾಡದೆ ಹೋದಲ್ಲಿ ನಿಮ್ಮ ಖಾತೆಗೆ ಯಾವುದೇ ತರನಾದಂತಹ ಹಣ ಜಮಾ ಆಗುವುದಿಲ್ಲ….
ಈಗಾಗಲೇ 2022ನೇ ಸಾಲಿನಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ರೈತರು ಹಾಗೆ ಜಿಪಿಆರ್ಎಸ್ ಮಾಡಿದಂತ ರೈತರಿಗೆ ಬೆಳೆವಿಮೆ ಅವರ ಖಾತೆಗೆ ನೇರವಾಗಿ ಜಮಾ ಆಗಿದ್ದು ಇನ್ನೂ ಕೇವಲ ಸ್ವಲ್ಪ ದಿನಗಳಲ್ಲಿ ಹಿಂಗಾರು ಬೆಳೆ ಪರಿಹಾರದ ಹಣವು ಕೂಡ ಜಮಾ ಆಗಲಿದ್ದು ನೀವು ಸಹ ಈ ವರ್ಷ ಅಂದರೆ 20204ನೇ ಸಾಲಿನಲ್ಲಿ ನಿಮ್ಮ ಖಾತೆಗೂ ಕೂಡ ಬೆಳೆ ಪರಿಹಾರದ ಹಣ ಬರುತ್ತದೆ…
https://play.google.com/store/apps/details?id=com.crop.offcskharif_2021
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಈ ಆಪ್ ಒಂದನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ಅತಿ ಸುಲಭವಾಗಿ ಜಿಪಿಆರ್ಎಸ್ ನೀವು ನಿಮ್ಮ ಮೊಬೈಲ್ ಮುಖಾಂತರ ಕೇವಲ ಎರಡು ನಿಮಿಷದಲ್ಲಿ ಮಾಡಿಕೊಳ್ಳಿ…
ಅಂದರೆ ಈ ಆಫ್ ಒಂದನ್ನು ಇನ್ಸ್ಟಾಲ್ ಮಾಡಿದ ನಂತರ ರೈತನ ಹೊಲದ ಪಹಣಿಯ ನಂಬರ್ ಹಾಕಿ ಹಾಗೆ ಸಂಪೂರ್ಣ ವಿವರಣೆ ಅಂದರೆ ಜಿಲ್ಲೆ ತಾಲೂಕು ಗ್ರಾಮ ಹೋಬಳಿ ಈ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ವಿವರಣೆ ನೀಡಿದ ನಂತರ ರೈತನ ಹೊಲದಲ್ಲಿ ನಿಂತುಕೊಂಡು ಯಾವ ಬೆಳೆಯನ್ನು ಬೆಳೆದಿದ್ದರೂ ಆ ಬೆಳೆಯ ಹೆಸರನ್ನು ನಮೂದಿಸಿ ನಂತರ ಫೋಟೋ ಅಪ್ಲೋಡ್ ಮಾಡಿದರೆ ನೀವು ಕೇವಲ ಎರಡು ನಿಮಿಷದಲ್ಲಿ ಜಿಪಿಆರ್ಎಸ್ ಮಾಡಿದಂತಾಗುತ್ತದೆ…
ಇದು ಕೇವಲ ಎರಡು ನಿಮಿಷದ ಕೆಲಸವಾಗಿದ್ದು ಇದರ ಬಗ್ಗೆ ನಿಮಗೆ ತಿಳುವಳಿಕೆ ಇಲ್ಲದೆ ಇದ್ದರೆ ದಯವಿಟ್ಟು ಯುಟ್ಯೂಬ್ ನಲ್ಲಿ ಹೋಗಿ ಬೆಳೆ ದರ್ಶಕ್ ಎಂದು ಸರ್ಚ್ ಬಾರ್ ನಲ್ಲಿ ಹುಡುಕಿದಾಗ ನಿಮಗೆ ಹಲವಾರು ವಿಡಿಯೋಗಳು ಅದರಲ್ಲಿ ಒಂದನ್ನು ಯಾವುದಾದರೂ ನೋಡಿ ನೀವು ಅತಿ ಸುಲಭವಾಗಿ ಕಲಿಯಿರಿ…
ನೆನಪಿನಲ್ಲಿಡಿ ಜಿಪಿಆರ್ಎಸ್ ಮಾಡದೆ ಹೋದಲ್ಲಿ ಯಾವುದೇ ತರನಾದಂತಹ ಬೆಳೆ ಪರಿಹಾರ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ….