ಕರ್ನಾಟಕದ ರೈತರಿಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಕರ್ನಾಟಕದಲ್ಲಿ ಹಲವಾರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದ್ದು ಈ ಬೆಳೆಯ ವಿಮೆ ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ದಯವಿಟ್ಟು ಫ್ರೂಟ್ಸ್ ಐಡಿಯನ್ನು ಪಡೆದುಕೊಳ್ಳಿ ಒಂದು ವೇಳೆ ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿ ಇರದೇ ಇದ್ದಲ್ಲಿ ನಿಮ್ಮ ಖಾತೆಗೆ ಯಾವುದೇ ತರನಾದಂತಹ ಬೆಳೆ ವಿಮೆ ಜಮಾ ಆಗುವುದಿಲ್ಲ ಈಗಲೇ ಈ ಫ್ರೂಟ್ಸ್ ಐಡಿಯಾ ಬಗ್ಗೆ ತಿಳಿದುಕೊಂಡು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡ
ರೆಜಿಸ್ಟ್ರೇಷನ್ ಮಾಡಲು ಬೇಕಾಗುವ ದಾಖಲೆಗಳು?
ಜಿಲ್ಲೆಯ ರೈತರು ತಮ್ಮ ಆಧಾರ್‌ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ಮತ್ತು ಶಾಖೆಯ ವಿವರ, ಐಎಫ್‌ಎಸ್ಸಿ ಕೋಡ್, ಮೊ.ಸಂಖ್ಯೆ, ಪರಿಶಿಷ್ಟ ಜಾತಿ, ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ತಮ್ಮ ಮಾಲಿಕತ್ವದ ಎಲ್ಲಾ ಜಮೀನಿನ ಸರ್ವೆ ನಂಬರ್‌ಗಳ ವಿವರಗಳನ್ನು ಹತ್ತಿರದ ತಹಶೀಲ್ದಾರ್‌ಕಚೇರಿ, ಕಂದಾಯ ನಿರೀಕ್ಷಕರ ಕಚೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಅಥವಾ ಕಂದಾಯ, ಕೃಷಿ , ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಸಂಗೋ ಪನೆ, ಸಹಕಾರ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಗಳಿಗೆ ಕೂಡಲೇ ಒದಗಿಸಿ ತಮ್ಮ ಮಾಲಿಕತ್ವದ ಎಲ್ಲಾ ಪಹಣಿಯ ದಾಖಲೆಗಳನ್ನು 15 ದಿನಗಳೊಳಗೆ ನೀಡಿ ನೋಂದಾಯಿಸಿಕೊಳ್ಳಬೇಕು.FID ಸಂಖ್ಯೆ ಎಂಬುದು ರೈತನ ಗುರುತಿನ ಚೀಟಿ ಆಗಿರುತ್ತದೆ. ಈ ಸಂಖ್ಯೆಯಿಂದ ರೈತನು ಹಲವಾರು ಜಮೀನಿನ ದಾಖಲೆಗಳು, ಅವನು ಬೆಳೆದ ಬೆಳೆ ಮತ್ತು ಆತನಿಗೆ ದೊರೆಯುವ ಸರ್ಕಾರದಿಂದ ಸೌಲಭ್ಯಗಳು ಪಡೆಯುವ ಅಧಿಕಾರವನ್ನು ಹೊಂದುತ್ತಾನೆ.ಮೊದಲು ರೈತರು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. https://fruits.karnataka.gov.in
ನಂತರ ಅಲ್ಲಿ ನೀವು ನಿಮ್ಮ ಹೆಸರು ಮತ್ತು ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿರಿ. ಆ ಮೇಲೆ Submit ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಇಷ್ಟಲ್ಲಾದ ಮೇಲೆ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ದಾಖಲಿಸಿ Proceed ಕ್ಲಿಕ್ ಮಾಡಿ, ಆಮೇಲೆ ನಿಮಗೆ ನಿಮ್ಮ ಎಫ್ ಐ ಡಿ ಖಾತೆಯನ್ನು ನಿರ್ವಹಿಸಲು ಒಂದು ಪಾಸ್ವರ್ಡ್ ಅನ್ನು ಇಟ್ಟುಕೊಳ್ಳುವುದು ಅವಶ್ಯವಾಗಿದೆ.
ಆದ ಕಾರಣ ನೀವು ಒಂದು ಪಾಸ್ವರ್ಡ್ ಅನ್ನು ಇಟ್ಟು ನಂತರ ಕ್ರಿಯೇಟ್ ಪಾಸ್ವರ್ಡ್ ಕ್ಲಿಕ್ ಮಾಡಿದಾಗ ನಿಮ್ಮ ರಿಜಿಸ್ಟ್ರೇಷನ್ ಮುಕ್ತಾಯಗೊಳ್ಳುತ್ತದೆ.
ನಂತರ ನೀವು ಲಾಗಿನ್ ಪೇಜ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಮೊದಲು ದಾಖಲಿಸಿರುವ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ನಮೂದಿಸಿ ಫ್ರೂಟ್ಸ್ ಪೋರ್ಟಲ್ ಗೆ ಲಾಗಿನ್ ಆಗಿರಿ.
ಅಲ್ಲಿ ನಿಮಗೆ ರಿಜಿಸ್ಟ್ರೇಷನ್ ಐಡಿ ಅಥವಾ FID ಸಿಗುತ್ತದೆ. ನೀವು ಮೊದಲೇ ಪಿಎಂ ಕಿಸಾನ್ ಸವಲತ್ತನ್ನು ಸರ್ಕಾರದಿಂದ ಪಡೆದುಕೊಂಡಿದ್ದರೆ ನಿಮ್ಮ ಅಪ್ಲಿಕೇಶನ್ approve ಆಗಿದೆ ಎಂದು ತೋರಿಸುತ್ತದೆ.
ಒಂದು ವೇಳೆ ನೀವು ಪಿಎಂ ಕಿಸಾನ್ ಯೋಜನೆಯ ಭಾಗವಾಗದ್ದೆ ಇದ್ದಲ್ಲಿ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಗೆ ಈ ಕೆಳಗೆ ನೀಡಲಾಗಿರುವ ದಾಖಲೆಗಳೊಂದಿಗೆ ಭೇಟಿ ನೀಡಿ ಫ್ರೂಟ್ಸ್ ಐಡಿಯನ್ನು ಪಡೆದುಕೊಳ್ಳಿ.
ಎಫ್‌ಐಡಿ ಮಾಡಿಸಲು ಬೇಕಾಗುವ ದಾಖಲೆಗಳು!
ರೈತರು ಎಫ್‌ಐಡಿ (FRUITS-Farmer Registration and Unified beneficiary Information System) ಮಾಡಿಸಿಕೊಳ್ಳಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ತಮ್ಮ ಹೆಸರಿನಲ್ಲಿರುವ ಎಲ್ಲ ಜಮೀನುಗಳ ಪಹಣಿ, ತಮ್ಮ ಮೊಬೈಲ್ ಸಂಖ್ಯೆ ಹಾಗೂ ಅಗತ್ಯವಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು.