ಹೊಸದಾಗಿ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರಿಗೆ ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಕಾರ್ಡ್ ವಿತರಿಸುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ ಹಾಗಾಗಿ ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡಲು ಸರ್ಕಾರ ಎಲ್ಲಾ ರೀತಿಯ ಕಾಸರತ್ತುಗಳನ್ನು ನಡೆಸುತ್ತಿದೆ, ಹೌದು. ಈಗಾಗಲೇ ಪಡಿತರ ಚೀಟಿಗಳಲ್ಲಿದ್ದ ಮೃತಪಟ್ಟವರ ಹೆಸರನ್ನು ಡಿಲೀಟ್ ಮಾಡಿರುವ ಸರಕಾರ ಈಗ ಕಳೆದ 6 ತಿಂಗಳಿಂದ ರೇಷನ್ ತೆಗೆದುಕೊಳ್ಳದವರ ಪಡಿತರ ಚೀಟಿಗಳನ್ನು ರದ್ದು ಮಾಡಲು ಹೊರಟಿದೆ. ಮತ್ತು ನೀವು white board ಕಾರ್ ಹೊಂದಿರುವವರಾದರೆ, ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ. ಮತ್ತು ನೀವು ಆ ರೇಷನ್ ಕಾರ್ಡ್ ರದ್ದಾಗಿರುವ(Ration card cancellation) ಲಿಸ್ಟ್ ನ ಲ್ಲಿ ಇದ್ದೀರಾ ಇಲ್ಲವೋ ಎಂದು ಪರಿಶೀಲಿಸಬೇಕೆಂದರೆ ನಮ್ಮ ವರದಿಯನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ.
ಪಡಿತರ ಚೀಟಿಯ ರದ್ದು ಪ್ರಾರಂಭ :
ಹೌದು, ಐಷಾರಾಮಿ ಕಾರು ಇದ್ದವರು, ಸರಕಾರಿ ಕೆಲಸ ಮಾಡುವವರು, 3 ಎಕರೆಗಿಂತ ಜಾಸ್ತಿ ಕೃಷಿ ಜಮೀನು ಇದ್ದವರು, ಹೆಚ್ಚಿಗೆ ಟ್ಯಾಕ್ಸ್ ಕಟ್ಟುವವರು ಹೀಗೆ ಅನೇಕ ಸೌಲಭ್ಯ ಇದ್ದವರು ಕೂಡಾ ನಕಲಿ BPL ಕಾರ್ಡ್ ಅನ್ನು ಹೊಂದಿದ್ದಾರೆ. ಆಹಾರ ಇಲಾಖೆಯು ಇಂತಹ ನಕಲಿ BPL ಕಾರ್ಡನ್ನು ಹೊಂದಿದವರ ಪತ್ತೆ ಹಚ್ಚಿ ಅವರ Ration card ರದ್ದುಗೊಳಿಸುತ್ತಿದ್ದಾರೆ, ಮತ್ತು ದಂಡ ಕೂಡ ವಿಧಿಸಲಾಗುತ್ತಿದೆ. 6 ತಿಂಗಳಿಂದ ಪಡಿತರ ಪಡೆಯದೇ ಇರುವ ಎಲ್ಲ 3.26 ಲಕ್ಷಕ್ಕೂ ಅಧಿಕ ಪಡಿತರ ಕಾರ್ಡ್‌ಗಳು ಪತ್ತೆಯಾಗಿವೆ. ಹೀಗಾಗಿ ಇವುಗಳ ದತ್ತಾಂಶವನ್ನು ಸಮರ್ಪಕವಾಗಿ ಸಂಗ್ರಹ ಮಾಡಿ ರದ್ದು ಮಾಡಲು ರಾಜ್ಯ ಸರ್ಕಾರ ಸಹ ಆದೇಶ ನೀಡಿದೆ. ಇದರಿಂದ ಯಾವೆಲ್ಲ ಗ್ಯಾರಂಟಿ ಯೋಜನೆಗೆ ಪಡಿತರ ಚೀಟಿ ಬೇಕೋ ಅದೆಲ್ಲದಕ್ಕೂ ಕಡಿವಾಣ ಬೀಳುವ ಲಕ್ಷಣ ಕಾಣುತ್ತಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಸುಮಾರು 4.6 ಲಕ್ಷ ನಕಲಿ ಕಾರ್ಡ್ ಇರುವವರಿಗೆ ದಂಡ ವಿಧಿಸಿದೆ. ಮತ್ತು ಸಾರಿಗೆ ಇಲಾಖೆಯ ಸಹಾಯದಿಂದ 12,583 ಜನರ BPL ಕಾರ್ಡ್ ಇದ್ದವರ ಐಷಾರಾಮಿ ಕಾರ್ ಮತ್ತು white board ಕಾರ್ ಗಳನ್ನು ಹೊಂದಿದ್ದಾರೆ ಎಂದು ಪತ್ತೆ ಹಚ್ಚಿದೆ.
ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗೆ ಕೊಕ್ !
ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳು ಬಿಪಿಎಲ್ & ಅಂಥೋದಯ ಪಡಿತರ ಚೀಟಿ ಇದ್ದವರಿಗೆ ಮಾತ್ರ ಸಿಗುತ್ತದೆ, ಒಂದು ವೇಳೆ ಬಿಪಿಎಲ್ & ಅಂಥೋದಯ ಕಾರ್ಡುಗಳು ರದ್ದಾದರೆ ಎಲ್ಲಾ ಗ್ಯಾರಂಟಿ ಯೋಜನೆಗಳಿಂದ ದೂರವಾಗ ಬೇಕಾಗುತ್ತದೆ. ಹೌದು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಕಾರ್ಡ್ ರದ್ದಾಗ ಫಲಾನುಭವಿಗಳಿಗೆ ಸಿಗುವುದಿಲ್ಲ
ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ನೋಡುವ ವಿಧಾನ :
ಹಂತ 1: ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ತೆರಳಬೇಕು ಅದಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :
https://ahara.kar.nic.in/Home/EServices
ಹಂತ 2: ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.
ನಂತರ ಈ ಪಡಿತರ ಚೀಟಿ ಎಂಬ ಆಯ್ಕೆಯಲ್ಲಿ ರದ್ದು ಮಾಡಲಾದ/ತಡೆಹಿಡಿಯಲಾದ ಪಡಿತರ ಚೀಟಿಯ ಪಟ್ಟಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 3: ನಂತರ ನಿಮಗೆ ಲಿಸ್ಟ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ತಿಂಗಳು ಹಾಗೂ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ
ಹಂತ 4: ನಂತರ ನೀವು ರದ್ದಾದ ಪಡಿತರ ಚೀಟಿಯ ಪಟ್ಟಿಯನ್ನು ನೋಡಬಹುದು, ಅದರಲ್ಲಿ ರದ್ದು ಆಗಿರುವುದಕ್ಕೆ ಕೆಲವೊಮ್ಮೆ ಕಾರಣವನ್ನು ಕೂಡ ನೀಡಲಾಗಿರುತ್ತದೆ.
ಈ ಮೇಲಿನ ಹಂತಗಳನ್ನು ಅನುಸರಿಸಿಕೊಂಡು, ನೀವು ಮನೆಯಲ್ಲಿಯೇ ಕುಳಿತುಕೊಂಡು ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬಹುದಾಗಿದೆ. ರದ್ದಾಗಿರುವುದಕ್ಕೆ ಕಾರಣವನ್ನು ನೀಡಿದ್ದರೆ ಅವುಗಳನ್ನು ಸರಿಪಡಿಸುವಂತಿದ್ದರೆ ಸರಿಪಡಿಸಿಕೊಂಡು ಪುನಃ ನೀವು ಅರ್ಜಿಗಳನ್ನು ಕೂಡ ಅಸಲಿಸಬಹುದಾಗಿದೆ.
ಹಂತ 1: ಮೊದಲಿಗೆ,ಕರ್ನಾಟಕ ಸರ್ಕಾರದ “ಮಾಹಿತಿ ಕಣಜ” website ಗೆ ಹೋಗಿ.
ಹಂತ 2: My Ration card details ವಿವರಗಳ ಪುಟ ತೆರೆದುಕೊಳ್ಳುತ್ತದೆ.
ಹಂತ 3: ನಂತರ ನಿಮ್ಮ ಜಿಲ್ಲೆ ಮತ್ತು ನಿಮ್ಮ ration card ಅಲ್ಲಿ ಇರುವ 12 ಸಂಖ್ಯೆಯ ನಂಬರ್ ಅನ್ನು ನಮೂದಿಸಿ. ನಂತರ ಸಲ್ಲಿಸು/submit ಇದಲ್ಲಿ ಕ್ಲಿಕ್ ಮಾಡಿ. ಅದು ಆದ ಬಳಿಕ my Ration shop details/ನನ್ನ ಪಡಿತರ ಅಂಗಡಿ ವಿವರದ ಪುಟ ತೆರೆಯುತ್ತದೆ. ನಂತರ card status/ಕಾರ್ಡ್ ಸ್ಥಿತಿ ಸಕ್ರಿಯ/active ಎಂದು ತೋರಿಸಿದರೆ ನಮ್ಮ Ration card ಚಾಲ್ತಿ ಇದೆ ಎಂದು ತಿಳಿಯಬಹುದಾಗಿದೆ.