ಸರ್ಕಾರಿ ಹುದ್ದೆಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್…! KPSC ವತಿಯಿಂದ 300 KAS ಹುದ್ದೆಗಳಿಗೆ ಅರ್ಜಿ ಆಹ್ವಾನ ಈಗಲೇ ಅರ್ಜಿ ಸಲ್ಲಿಸಿ

KPSC ಯಿಂದ 300 ಕೆಎಎಸ್ ಹುದ್ದೆಗಳ ನೇಮಕಾತಿ: ರಾಜ್ಯ ಸರ್ಕಾರದಿಂದ ಪ್ರಕ್ರಿಯೇ ಆರಂಭ- ಸಂಪೂರ್ಣ ವಿವರಗಳು: KPSC KAS Jobs 2023

WhatsApp Group Join Now
Telegram Group Join Now

ಕರ್ನಾಟಕ ಲೋಕಸೇವಾ ಆಯೋಗದಿಂದ ಶೀಘ್ರದಲ್ಲಿಯೇ ಮತ್ತೊಂದು ಬೃಹತ್ ನೇಮಕಾತಿ ಅಧಿಸೂಚನೆ ಹೊರಬಿಳಲಿದ್ದು, ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಕೆಎಎಸ್  ಗ್ರೂಪ್ ಎ & ಬಿ ಹುದ್ದೆಗಳ ನೇಮಕಾತಿ ನಡೆಯಲಿದೆ. 300 ಕೆಎಎಸ್ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಆಸಕ್ತಿ ತೋರಿಸಿದ್ದು, ಆರ್ಥಿಕ ಇಲಾಖೆಯ ಅನುಮತಿ ಪಡೆದು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಶೀಘ್ರದಲ್ಲಿಯೇ ಕೆಪಿಎಸ್ಸಿಯಿಂದ ಅಧಿಸೂಚನೆ ಹೊರಬೀಳಲಿದ್ದು, ಆಸಕ್ತರು ಈಗಿನಿಂದಲೇ ಪರೀಕ್ಷೆಗಾಗಿ ಸಿದ್ದತೆ ನಡೆಸಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಿ.

ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಯುವ ಕೆಎಎಸ್  ಹುದ್ದೆಗಳ ನೇಮಕಾತಿ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಚರ್ಚಿಸಲಾಗಿದೆ.ಹುದ್ದೆಗಳ ವಿವರ/ Post Details:

ಹುದ್ದೆಗಳ ಹೆಸರು: ಕೆಎಎಸ್ ಗ್ರೂಪ್ ಎ & ಬಿ

ಹುದ್ದೆಗಳ ಸಂಖ್ಯೆ: 300 ಹುದ್ದೆಗಳು

ಆಯ್ಕೆ ಪ್ರಾಧಿಕಾರ: ಕರ್ನಾಟಕ ಲೋಕಸೇವಾ ಆಯೋಗ

ಕೆಲಸದ ಸ್ಥಳ: ಕರ್ನಾಟಕ


Educational Qualification:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಮುಗಿಸಿರಬೇಕು.

ಗರಿಷ್ಟ ಪ್ರಯತ್ನದ ಮಿತಿಗಳು:

ಸಾಮಾನ್ಯ ಅರ್ಹತಾ ಅಭ್ಯರ್ಥಿಗಳು:  ಗರಿಷ್ಟ 5 ಬಾರಿ ಪ್ರಯತ್ನಿಸಬಹುದು,

2ಎ, 2ಬಿ, 3ಎ & 3ಬಿ ಅಭ್ಯರ್ಥಿಗಳು : ಗರಿಷ್ಟ 07 ಬಾರಿ ಪ್ರಯತ್ನಿಸಬಹುದು

ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ಅಭ್ಯರ್ಥಿಗಳು : ಪ್ರಯತ್ನಗಳ ಮಿತಿ ಇರುವುದಿಲ್ಲ.

ಅರ್ಜಿ ಶುಲ್ಕ/ Application Fees:

ಸಾಮಾನ್ಯ  ಅರ್ಹತಾ ಅಭ್ಯರ್ಥಿಗಳಿಗೆ : ರೂ. 600/-

ಪ್ರವರ್ಗ 2ಎ, 2ಬಿ, 3ಎ & 3ಬಿ ಅಭ್ಯರ್ಥಿಗಳಿಗೆ ರೂ. 300/-

ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ. 50/-

ಪ.ಜಾ/ ಪಪಂ/ ಪ್ರವರ್ಗ 1/ ಅಂಗವಿಕಲ: ಅರ್ಜಿ ಶುಲ್ಕ ಇರುವುದಿಲ್ಲ.

ವಯೋಮಿತಿ/ Age Limit:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18  ವರ್ಷ ಪೂರೈಸಿರಬೇಕು & ಗರಿಷ್ಟ 35 ವರ್ಷ ಮೀರಿರಬಾರದು.

 ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ

ಇತರೆ ಹಿಂದೂಳಿದ ವರ್ಗ (OBC) : 03 ವರ್ಷ

ಮಾಜಿ ಸೈನಿಕರಿಗೆ: 05 ವರ್ಷ

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೆಳಗಿನ ಹಂತಗಳನ್ನು ನಡೆಸಲಾಗುತ್ತದೆ.

ಹಂತ 1: ಪೂರ್ವಭಾವಿ ಪರೀಕ್ಷೆ

ಹಂತ 2: ಮುಖ್ಯ ಪರೀಕ್ಷೆ

ಹಂತ 3: ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ನಿಗದಿಪಡಿಸಿದ ದಿನಾಂಕಗಳಂದು ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಪ್ರಾಧಿಕಾರದ  ವೆಬ್ ಸೈಟ್ www.kpsc.kar.nic.in  ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ.

Leave a Reply

Your email address will not be published. Required fields are marked *