ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ(Sukanya Sumruddhi Yojana) ಕುರಿತು ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಮನೆಯಲ್ಲಿ ಹೆಣ್ಣು ಮಗುವಿದ್ದರೆ ಅವಳ ಶಿಕ್ಷಣ ಮತ್ತು ಮದುವೆ ಒಳ್ಳೆಯ ರೀತಿಯಲ್ಲಿ ಸಂಪೂರ್ಣವಾಗಲಿ ಎಂದು ಪಾಲಕರು ಮೊದಲಿನಿಂದಲೂ ಹುಡುಕೆ(Invest) ಶುರುಮಡುತ್ತಾರೆ. ಒಳ್ಳೆಯ ಆರ್ಥಿಕ ಪರಿಸ್ಥಿತಿ(Economic situation) ಇದ್ದವರು ಮುಂಗಡವಾಗಿ ಹೂಡಿಕೆಯನ್ನು ಮಾಡಲು ಮುಂದಾಗುತ್ತಾರೆ, ಆದರೆ ಬಿಕ್ಕಟ್ಟಿನಲ್ಲಿದ್ದವರು ಮುಂಗಡ ಯೋಜನೆಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ಇಂತಹ ಪರಿಸ್ಥಿತಿಯಿಂದ ಬಳಲುತ್ತಿರುವ ಜನರಿಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ‘ಸುಕನ್ಯಾ ಸಮೃದ್ಧಿ ಯೋಜನೆ (SSY)’ ಎಂಬ ಯೋಜನೆಯನ್ನು ಪ್ರಾರಂಭಿಸಿದ್ದಾರೆ.
SSY ಹೆಣ್ಣು ಮಗುವಿಗೆ ಸಂಬಂಧಿಸಿದ ಶಿಕ್ಷಣ ಮತ್ತು ಮದುವೆ ಸಮಸ್ಯೆಗಳನ್ನು ನಿಭಾಯಿಸುವ ಗುರಿಯನ್ನು ಹೊಂದಿದೆ. ಹೆಣ್ಣು ಮಗುವಿನ ಪಾಲಕರು / ಪೋಷಕರಿಗೆ ತಮ್ಮ ಮಗುವಿನ ಸರಿಯಾದ ಶಿಕ್ಷಣ ಮತ್ತು ನಿರಾತಂಕದ ಮದುವೆಯ ವೆಚ್ಚಗಳಿಗಾಗಿ ಹೂಡಿಕೆಯನ್ನು ನಿರ್ಮಿಸಲು ಅನುಕೂಲವಾಗುವಂತೆ ಹೆಣ್ಣು ಮಗುವಿಗೆ ಉಜ್ವಲ ಭವಿಷ್ಯ ಹಾಗೂ ಭದ್ರತೆಯ ಉದ್ದೇಶಕ್ಕಾಗಿಯೇ SSY ಸುಕನ್ಯಾ ಸಮೃದ್ಧಿ ಖಾತೆಯನ್ನು ಪರಿಚಯಿಸಿದೆ.
ಸುಕನ್ಯಾ ಸಮೃದ್ಧಿ ಯೋಜನೆಯು ಪೋಸ್ಟ್ ಆಫೀಸ್ನ ಹಾಗೂ ಸಾರ್ವಜನಿಕ / ಖಾಸಗಿ ಬ್ಯಾಂಕ್ ನ ಉಳಿತಾಯ ಯೋಜನೆ(saving scheme)ಯಾಗಿದೆ.
ಈ ಯೋಜನೆಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗಳ ಹೆಸರಿನಲ್ಲಿ ಆಕೆಯ ಪೋಷಕರು ಅಥವಾ ಕಾನೂನು ಪಾಲಕರು ತೆರೆಯಬಹುದು.
ಖಾತೆ ತೆರೆಯುವುದು ಹೇಗೆ?
ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಶಾಖೆಗೆ ಭೇಟಿ ನೀಡಿ. ಅರ್ಜಿಯನ್ನು ಪಡೆದು ಕೇಳಿರುವ ಮಾಹಿತಿಯನ್ನು ನಮೂದಿಸಿ ಮತ್ತು ಅದರ ಜೊತೆಗೆ ಜನನ ಪ್ರಮಾಣಪತ್ರ (birth certificate), ಗುರುತಿನ ಪುರಾವೆ, ಮತ್ತು ವಿಳಾಸ ಪುರಾವೆಗಳನ್ನು ಸಲ್ಲಿಸಿ ಖಾತೆಯನ್ನು ತೆರೆಯಬಹುದು.
ಎಷ್ಟು ಹಣವನ್ನು ಠೇವಣಿ ಇಡಬೇಕಾಗುತ್ತದೆ?
ಒಂದು ಆರ್ಥಿಕ ವರ್ಷದಲ್ಲಿ ಠೇವಣಿ ಕನಿಷ್ಠ 250 ರೂ.ಗಳಿಂದ ಗರಿಷ್ಠ 1.50 ಲಕ್ಷ ರೂ.ಗಳವರೆಗೆ ಠೇವಣಿ ಮಾಡಬಹುದು. ನೀವು ವರ್ಷಕ್ಕೆ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದರೆ ಮುಕ್ತಾಯದ ನಂತರ ಹೆಚ್ಚಿನ ಆದಾಯ(income)ವನ್ನು ಪಡೆಯುತ್ತಿರಿ. 15 ವರ್ಷಗಳವರೆಗೆ ನಿರಂತರ ಉಳಿತಾಯವನ್ನು ಮುಂದುವರಿಸಬೇಕು, ನಂತರ ಒಟ್ಟು ಮೊತ್ತ ಬಿಡುಗಡೆಯಾಗುತ್ತದೆ.
21 ವರ್ಷ ಆದ ನಂತರ ದೊಡ್ಡ ಹಣದ ಕಂತು ಕೈ ಸೇರಲಿದೆ :
ಪೋಷಕರು ಪ್ರತಿ ಮಗುವಿನ ಹೆಸರಿನಲ್ಲಿ ಒಂದು ಖಾತೆಯನ್ನು ಮಾತ್ರ ತೆರೆಯಬಹುದು. ಕುಟುಂಬಕ್ಕೆ ಎರಡು ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗಳನ್ನು ತೆರೆಯಲು ಅವಕಾಶವಿದೆ, ಅಂದರೆ ಮನೆಯಲ್ಲಿ ಇಬ್ಬರರು ಹೆಣ್ಣು ಮಕ್ಕಳಿಗೆ ಖಾತೆ ತೆರೆಯಲು ಅವಕಾಶ ನೀಡಲಾಗುತ್ತದೆ.
ಈ ಯೋಜನೆಯು ದೀರ್ಘಾವಧಿಯ ಹೂಡಿಕೆಯ ಉತ್ತಮ ಮಾಧ್ಯಮವಾಗಿದೆ. ಹಾಗೂ ಇದರ ಮ್ಯಾಚುರಿಟಿ ಅವಧಿಯು 21 ವರ್ಷ ಆಗಿರುತ್ತದೆ, ಅಂದರೆ ಖಾತೆಯನ್ನು ತೆರೆದ 21 ವರ್ಷಗಳ ನಂತರ ಸಂಪೂರ್ಣ ಮೊತ್ತವನ್ನು ನೀಡಲಾಗುತ್ತದೆ.
ಹೆಣ್ಣು ಮಗು ಜನಿಸಿದ ತಕ್ಷಣ ಆಕೆಯ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆದು ತಿಂಗಳಿಗೆ 5,000 ಹೂಡಿಕೆ ಮಾಡಿದರೆ ವರ್ಷಕ್ಕೆ 60 ಸಾವಿರ ಹೂಡಿಕೆಯಾಗುತ್ತದೆ. ಹೂಡಿಕೆಯ ಅವಧಿ 15 ವರ್ಷ, 15 ವರ್ಷ ನೀವು ಹೂಡಿಕೆ ಮಾಡಿದ್ದೇ ಆದಲ್ಲಿ ಸರಾಸರಿ 9 ಲಕ್ಷ ಹೂಡಿಕೆಯನ್ನು ಮಾಡುತ್ತೀರಿ.
ಈ 9 ಲಕ್ಷದ ಹೂಡಿಕೆಗೆ ಸಿಗುವ ಬಡ್ಡಿಯ ಮೊತ್ತ 17,93,814 ರೂ. ಇದರರ್ಥ ನಿಮ್ಮ 9 ಲಕ್ಷಕ್ಕೆ ಸೇರಿಸಲಾದ ಈ ಬಡ್ಡಿಯು ಮುಕ್ತಾಯದ ಮೇಲೆ 26,93,814 ಕ್ಕೆ ಬರುತ್ತದೆ. ಹೀಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ 27 ಲಕ್ಷಗಳನ್ನು ಪಡೆಯಬಹುದು