ಅನ್ಯಭಾಗ್ಯ ಅಕ್ಕಿ ಬದಲಿಗೆ ಡಿಬಿಟಿ ಮುಂದುವರಿಕೆ; ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
ಜನರ ಮನೆ ಬಾಗಿಲಿಗೇ ನ್ಯಾಯದಾನ ಆಶಯದ ಬಹುದಿನಗಳ ಮಹತ್ವಾಕಾಂಕ್ಷೆಯಂತೆ ಒಟ್ಟು 100 ‘ಗ್ರಾಮ ನ್ಯಾಯಾಲಯ’ಗಳನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿತು. ‘‘ಪಂಚಾಯಿತಿಗಳು ಹಾಗೂ ಸಣ್ಣ ಪಂಚಾಯಿತಿಗಳ ಕ್ಲಸ್ಟರ್ ಮಟ್ಟದಲ್ಲಿ ಒಟ್ಟು 25 ಕೋಟಿ ರೂ. ವೆಚ್ಚದಲ್ಲಿ 100 ಗ್ರಾಮ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಜೆಎಂಎಫ್‌ಸಿ ಮಾದರಿಯಲ್ಲಿ ಈ ಕೋರ್ಟ್‌ಗಳು ಸ್ಥಾಪನೆಯಾಗಲಿದ್ದು, ಸಿವಿಲ್ ಮತ್ತು ಕ್ರಿಮಿನಲ್ ಎರಡೂ ರೀತಿಯ ಪ್ರಕರಣಗಳನ್ನು ನಿರ್ವಹಿಸಲಿವೆ.
ಬೆಂಗಳೂರು: ‘ಅನ್ನಭಾಗ್ಯ’ ಯೋಜನೆಯಡಿ ತಲಾ 5 ಕೆಜಿ ಅಕ್ಕಿ ಜತೆಗೆ ಹೆಚ್ಚುವರಿ 5 ಕೆಜಿ ಅಕ್ಕಿ ನೀಡುವ ಬದಲಿಗೆ ನಗದು ಪಾವತಿಸುವ ಹಾಲಿ ವ್ಯವಸ್ಥೆಯನ್ನೇ ಮುಂದುವರಿಸಲು ಸಂಪುಟ ಸಭೆ ನಿರ್ಧರಿಸಿತು.ರಾಜ್ಯಾದ್ಯಂತ 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ 400.24 ಕೋಟಿ ರೂ. ವೆಚ್ಚದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಸ್ಥಾವರ ಸ್ಥಾಪನೆ ಮಾಡುವ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ.
‘ ಎನ್‌ಜಿಟಿ ನಿರ್ದೇಶನದಂತೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮೊದಲ ಹಂತದಲ್ಲಿ 110 ಪೌರಸಂಸ್ಥೆಗಳಲ್ಲಿಅನುಷ್ಠಾನಗೊಳ್ಳಲಿದೆ. ಪ್ರತಿ ಕಂದಾಯ ವಿಭಾಗಕ್ಕೆ ಒಂದರಂತೆ ಒಟ್ಟು 4 ಟೆಂಡರ್ ಪ್ಯಾಕೇಜ್ ಮೂಲಕ ಯೋಜನೆ ಜಾರಿಗೆ ಸಂಪುಟ ನಿರ್ಣಯಿಸಿತು’ ಎಂದು ಸಭೆ ಬಳಿಕ ಕಾನೂನು ಸಚಿವ ಎಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.