SBI Bank ಇಂದ ಶೈಕ್ಷಣಿಕ ವಿದ್ಯಾರ್ಥಿ ವೇತನವನ್ನು ಶಾಲಾ ಮಕ್ಕಳಿಗೆ ನೀಡಬೇಕೆಂಬ ದೂರದೃಷ್ಟಿಯಿಂದ ಈ ಯೋಜನೆಯನ್ನು ಬಿಡುಗಡೆ ಮಾಡಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಅವರಿಗೆ ಸಹಾಯ ಮಾಡುತ್ತಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಯಾರು ಸಲ್ಲಿಸಬಹುದು ಮತ್ತು ಹೇಗೆ ಸಲ್ಲಿಸಬಹುದು ಎಂಬ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಈ ವಿದ್ಯಾರ್ಥಿ ವೇತನದ ಯೋಜನೆ ಹೆಸರು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
ಈ ಯೋಜನೆ ಹೆಸರು SBIF ಆಶಾ ವಿದ್ಯಾರ್ಥಿವೇತನ 2023. ವಿದ್ಯಾರ್ಥಿಗಳು ಈ ಯೋಜನೆ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿದೆ. ಹಾಗಾಗಿ ಯಾರು ಸಲ್ಲಿಸಬಹುದು ಮತ್ತು ದಾಖಲೆಗಳು ಏನು ಬೇಕು ಎಂದು ಬೇಗನೆ ತಿಳಿದು ಈ ಯೋಜನೆಗೆ ಕೂಡಲೇ ಅರ್ಜಿ ಸಲ್ಲಿಸಿ ಹಣವನ್ನು ಪಡೆಯಿರಿ.
ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?
6ನೇ ತರಗತಿಯಿಂದ 12ನೇ ತರಗತಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆ ವಿದ್ಯಾರ್ಥಿಯು ಹಿಂದಿನ ವರ್ಷದಲ್ಲಿ 75 ಪ್ರತಿಶತ ಅಂಕಗಳನ್ನು ಪಡೆದಿರಬೇಕು. ಆ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಕಡಿಮೆ ಇರಬೇಕು.

ಎಷ್ಟು ಹಣವನ್ನು ನೀಡುತ್ತಾರೆ ಮತ್ತು ದಾಖಲೆಗಳು ಏನು ಬೇಕು?
ಒಬ್ಬ ವಿದ್ಯಾರ್ಥಿಗೆ ಒಂದು ವರ್ಷಕ್ಕೆ 10 ಸಾವಿರ ರೂಪಾಯಿ ವಿದ್ಯಾರ್ಥಿ ವೇತನವನ್ನು ಈ ಯೋಜನೆ ಅಡಿಯಲ್ಲಿ ನೀಡುತ್ತಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಹಿಂದಿನ ವರ್ಷದ marks card, ಅವನು ಶಾಲೆಯ ಗುರುತಿನ ಐಡಿ, ಜಾತಿ ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ಜೆರಾಕ್ಸ್, ಅರ್ಜಿದಾರರ ಒಂದು ಫೋಟೋ ಮತ್ತು ಇನ್ನಿತರ ದಾಖಲಾತಿಗಳನ್ನು ಇಟ್ಟುಕೊಂಡು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.buddy4study.com/page/sbi-asha-scholarship-program ಮೊದಲು ನೀವು ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಡೌನ್ಲೋಡ್ ಮಾಡಿಕೊಳ್ಳಲು ನಿಮ್ಮ ಹತ್ತಿರ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ಬಳಸಿಕೊಂಡು Buddy4Study ಅಲ್ಲಿ ನೊಂದಣಿ ಮಾಡಿಕೊಳ್ಳಬೇಕು. ನಿಮಗೆ ಈ ಮಾಹಿತಿ ನೀಡಿದರೆ ನೀವು ಮೊಬೈಲ್ ನಲ್ಲಿ ಮಾಡಬಹುದು ಅಥವಾ ನಿಮ್ಮ ಹತ್ತಿರದ ಕಂಪ್ಯೂಟರ್ ಅಂಗಡಿ ಅಥವಾ ಸೇವಾ ಕೇಂದ್ರ ಭೇಟಿ ನೀಡಿ.
ಮೊದಲು ವಿದ್ಯಾರ್ಥಿಯ ಆರ್ಥಿಕ ಪರಿಸ್ಥಿತಿ ಮತ್ತು ಅವನ ಶೈಕ್ಷಣಿಕ ಅರ್ಹತೆಯನ್ನು ನೋಡಿಕೊಂಡು ವಿದ್ಯಾರ್ಥಿಯ ಆಯ್ಕೆಯನ್ನು ಮಾಡಲಾಗುವುದು. ಮೊದಲು ಇದನ್ನೆಲ್ಲಾ ನೋಡಿ ವಿದ್ಯಾರ್ಥಿಯ ಕಿರು ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ ನಂತರ ಎಲ್ಲ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಶಾರ್ಟ್ ಲಿಸ್ಟ್ ಅನ್ನು ಮಾಡುತ್ತಾರೆ.
ಕೊನೆಗೆ ಆ ವಿದ್ಯಾರ್ಥಿಗೆ ನೇರ ಸಂದರ್ಶನವನ್ನು ಮಾಡಿ ಆತನು ಅರ್ಹತೆಯನ್ನು ಹೊಂದಿದ್ದರೆ ಮಾತ್ರ ಈ ಯೋಜನೆಯಿಂದ 10,000ಗಳನ್ನು ಪಡೆಯಲು ಆತ ಅರ್ಹನಾಗುತ್ತಾನೆ. ಒಂದುವೇಳೆ ಅವನು ಆಯ್ಕೆಯಾದರೆ ಅವನ ಖಾತೆಗೆ ನೇರವಾಗಿ 10,000 ಬಂದು ತಲುಪುತ್ತದೆ.