Gruha Lakshmi Scheme: ‘ಗೃಹಲಕ್ಷ್ಮಿ’ ಹಣ ಇನ್ನೂ ಬರಲಿಲ್ಲ ಅಂತ ಚಿಂತಿಸ್ಬೇಡಿ: ಜಸ್ಟ್ ಈ ಕೆಲಸ ಮಾಡಿ, ಒಟ್ಟಿಗೆ 4 ಸಾವಿರ ಬರುತ್ತೆ
ಗೃಹಲಕ್ಷ್ಮಿ ಯೋಜನೆಯ ಹಣ ಯಜಮಾನಿ ಮಹಿಳೆಯರ ಖಾತೆಗೆ ಜಮಾ ಆಗದೇ ಇರೋದಕ್ಕೆ ಮುಖ್ಯ ಕಾರಣ, ಬ್ಯಾಂಕ್ ಖಾತೆಗೆ ( Bank Account ) ಆಧಾರ್ ಸಂಖ್ಯೆ ( Aadhar Number ) ಲಿಂಕ್ ಆಗದೇ ಇರೋದು ಒಂದಾಗಿದೆ. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗದೇ ಇದ್ರೇ ಬ್ಯಾಂಕ್ ಗೆ ತೆರಳಿ, ಆಧಾರ್ ಸಂಖ್ಯೆ ನೀಡಿ ಲಿಂಕ್ ಮಾಡಿಸಿ. ಆಗ ನಿಮ್ಮ ಗೃಹಲಕ್ಷ್ಮಿಯ 2000 ಸಹಾಯ ಧನ ನಿಮ್ಮ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆಯಾಗಲಿದೆ.
ಇನ್ನೂ ಕೆಲವರ ಹೆಸರು ಮಿಸ್ ಮ್ಯಾಚ್ ಆಗಿರುತ್ತೆ. ಅಂದರೇ ರೇಷನ್ ಕಾರ್ಡ್ ನಲ್ಲೇ ಒಂದು ಥರ, ಆಧಾರ್ ಕಾರ್ಡ್ ನಲ್ಲೇ ( Aadhar Card ) ಮತ್ತೊಂದು ರೀತಿ. ಬ್ಯಾಂಕ್ ಪಾಸ್ ಬುಕ್ ನಲ್ಲಿಯೇ ಮಗದೊಂದು ರೀತಿ ಇರುತ್ತದೆ. ಈ ಕಾರಣಕ್ಕೂ ಯಜಮಾನಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ರೂ 2000 ಹಣ ಜಮಾ ಆಗಿರೋದಿಲ್ಲ. ಈ ಹಿನ್ನಲೆಯಲ್ಲಿ ಇದನ್ನು ಗಮನಿಸಿ, ಸರಿಪಡಿಸಿ.
ಗೃಹ ಲಕ್ಷ್ಮೀ ಯೋಜನೆ ಹಣ ಯಜಮಾನಿ ಮಹಿಳೆಯರ ಖಾತೆಗೆ ವರ್ಗಾವಣೆಯಾಗಬೇಕಾದ್ರೇ, ಬ್ಯಾಂಕ್ ಖಾತೆ, ರೇಷನ್ ಕಾರ್ಡ್ ಗೆ ( Ration Card ) KYC ಅಪ್ ಡೇಟ್ ಆಗಿರೋದು ಕಡ್ಡಾಯವಾಗಿದೆ. ಒಂದು ವೇಳೆ E-KYC ಅಪ್ ಡೇಟ್ ಆಗದೇ ಇದ್ರೇ 2000 ಹಣ ನಿಮ್ಮ ಖಾತೆಗೆ ಜಮಾ ಆಗಿರೋದಿಲ್ಲ. ಸೋ ರೇಷನ್ ಅಂಗಡಿಗೆ ಹೋಗಿ ಪಡಿತರ ಚೀಟಿಗೆ ನಿಮ್ಮ ಆಧಾರ್ ಕಾರ್ಡ್ ಕೊಟ್ಟು ಇ-ಕೆವೈಸಿ ಅಪ್ ಡೇಟ್ ಮಾಡಿಸಿ. ಬ್ಯಾಂಕ್ ಗೆ ತೆರಳಿ ಆಧಾರ್ ಕಾರ್ಡ್ ನೀಡಿ ಅಲ್ಲೂ ಕೆವೈಸಿ ಅಪ್ ಡೇಟ್ ಮಾಡಿಸಿ.
ಒಟ್ಟಾರೆಯಾಗಿ ಈ ಎಲ್ಲಾ ಕೆಲಸವನ್ನು ನೀವು ಮಾಡಿದ್ರೇ ಗೃಹಲಕ್ಷ್ಮೀ ಯೋಜನೆಗೆ ( Gruha Lakshmi Scheme ) ಅರ್ಜಿ ಸಲ್ಲಿಸಿದಂತ ಯಜಮಾನಿ ಮಹಿಳೆಯರಿಗೆ 2000 ಹಣವಾಗಿ ಆಗಸ್ಟ್ ಹಾಗೂ ಸೆಪ್ಟೆಂಬರ್ ಎರಡು ತಿಂಗಳು ಸೇರಿ 4000 ಸಾವಿರ ಒಟ್ಟಿಗೆ ನಿಮ್ಮ ಖಾತೆಗೆ ಜಮಾ ಆಗಲಿದೆ.