ಮಧ್ಯಂತರ ಬೆಳೆ ವಿಮೆ ಬಿಡುಗಡೆ..! ನಿಮ್ಮ ಖಾತೆಗೆ ಜಮಾ ಆಗಿದೆಯಾ ಈಗಲೇ ಚೆಕ್ ಮಾಡಿಕೊಳ್ಳಿ…! ರೈತರಿಗೆ ಸಂತಸದ ಸುದ್ದಿ…!

ಆತ್ಮೀಯ ರೈತ ಭಾಂದವರಿಗೆ ನಮಸ್ಕಾರಗಳು. ಈ ಲೇಖನದಲ್ಲಿ ನಿಮಗೆ ಬೆಳೆ ವಿಮೆ ಪರಿಹಾರ ಬಿಡುಗಡೆ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ಈ ಲೇಖನದ ಮೂಲಕ ನಿಮಗೆಲ್ಲರಿಗೂ ಉಪಯುಕ್ತವಾಗುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಕಳೆದ ವರ್ಷಗಳಲ್ಲಿ ವರ್ಷವಿಡೀ ಮಳೆ ಸುರಿದು ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ರೈತರಿಗೆ ಪರಿಹಾರ ನೀಡಲು ಸರ್ಕಾರವು ನಿರ್ಧರಿಸಿದೆ. ಬೆಳೆ ವಿಮೆ ಪಾವತಿಸಿದ ರೈತರಿಗೆ ಹಣ ನೇರ ಖಾತೆಗೆ ಜಮಾ ಆಗಲಿದೆ. ಇದರ ಬಗೆಗಿನ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ. ಈ ಲೇಖನವು ಎಲ್ಲರಿಗೂ ಸಹಾಯವಾಗುತ್ತದೆ ಎಂಬಲ್ಲಿ ತಪ್ಪದೇ ಈ ಲೇಖನವನ್ನು ಶೇರ್ ಮಾಡಿ.

ರೈತರಿಗೆ ಗುಡ್ ನ್ಯೂಸ್…! ಈಗಲೇ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ಬೆಳೆ ವಿಮೆಯ ಹಣ ಪಡೆದುಕೊಳ್ಳಿ…!ಫಸಲ್ ಭೀಮಾ ಯೋಜನೆ ಪಟ್ಟಿ, ಮಧ್ಯಂತರ ಬೆಳೆ ವಿಮೆ ಜಮೆಯಾಗಿರುವ ಸ್ಟೇಟಸ್ , ಹಾಗೂ ಹೆಸರು ಬೆಳೆಗೆ ವಿಮೆ ಹಣ ಎಷ್ಟು ಕೊಡುತ್ತಾರೆ ಎಂಬ ಎಲ್ಲ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಿ.

ಹಲವಾರು ವರ್ಷಗಳಿಂದ ರೈತರ ಬೆಳೆಗಳು ಹಾನಿಯಾಗುತ್ತಿದ್ದು ರೈತರಿಗೆ ನೆರವಾಗಲು ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮೂಲಕ ರೈತರು ತಮ್ಮ ಹೊಲದಲ್ಲಿ ತಾವು ಬೆಳೆಯುವಂತಹ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬೇಕು, ಹಾಗೂ ಮುಂದೆ ಬೆಳಗಳು ಹಾನಿಯಾದಲ್ಲಿ ರೈತರಿಗೆ ಇನ್ಶೂರೆನ್ಸ್ ಕಂಪನಿಗಳ ವತಿಯಿಂದ ಬೆಳೆವಿಮೆ ಕ್ಲೇಮ್ ಆಗುತ್ತದೆ.

ಸರ್ಕಾರದ ಈ ನಿರ್ಧಾರದಿಂದ 15.16 ಲಕ್ಷ ಹೆಕ್ಟೇರ್ ಸಂತ್ರಸ್ತ ಪ್ರದೇಶದ 27.36 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ನಿರಂತರ ಮಳೆಯಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಸರ್ಕಾರದಿಂದ ನೆರವನ್ನು ನೀಡಲಾಗುತ್ತದೆ. ನಾವು ಫಸಲ್ ಬಿಮಾ ಹೊಸ ಪಟ್ಟಿಯನ್ನು ನೋಡಿದರೆ, ಪ್ರಧಾನ ಮಂತ್ರಿ ಪಿಕ್ ವಿಮಾ ಯೋಜನೆಯಡಿ, ರೈತರಿಗೆ ಮುಂಗಾರು ಹಂಗಾಮಿನಲ್ಲಿ (kharif season insurance amount) ವಿಮಾ ಮೊತ್ತದ ಎರಡು ಪ್ರತಿಶತ ಮತ್ತು ಹಿಂಗಾರು ಹಂಗಾಮಿನಲ್ಲಿ ಒಂದುವರೆ ಪ್ರತಿಶತ ಮತ್ತು ವಿಮಾ ಮೊತ್ತದ ಐದು ಪ್ರತಿಶತವನ್ನು ನಗದು ಪಾವತಿಸಲಾಗುತ್ತದೆ.

ಹಾಗಾಗಿ ರೈತರ ಉಳಿದ ಕಂತುಗಳನ್ನು ರಾಜ್ಯ ಸರಕಾರವೇ ಭರಿಸಲಿದೆ. ಸಾಲಗಾರ ಮತ್ತು ಸಾಲ ಪಡೆಯದ ರೈತರಿಗೆ ಈ ಯೋಜನೆಯನ್ನು ಐಚ್ಛಿಕಗೊಳಿಸಲಾಗಿದೆ ಮತ್ತು ಗುತ್ತಿಗೆ ಭೂಮಿ ಹೊಂದಿರುವ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಬೆಳೆಗಳಿಗೆ ವಿಮಾ ರಕ್ಷಣೆ ಅನ್ವಯವಾಗಲಿದೆ. ಆದ್ದರಿಂದ ಹಿಂಗಾರು ಋತುವಿನ ಗೋಧಿ, ಜೋಳ, ಕಡಲೆ, ಬೇಸಿಗೆ ಕಡಲೆ ಇತ್ಯಾದಿಗಳಿಗೆ ವಿಮಾ ರಕ್ಷಣೆ ಇರುತ್ತದೆ.

2022ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಪ್ರವಾಹಕ್ಕೆ 12 ಲಕ್ಷ ರೈತರಿಗೆ 13,600 ರೂ.ಗಳ ಪರಿಹಾರವನ್ನು ನೀಡಲಾಗುವುದು. ಆದ್ದರಿಂದ ಹತ್ತು ಜಿಲ್ಲೆಗಳ ಸಂತ್ರಸ್ತ ರೈತರಿಗೆ ಮೂರು ಹೆಕ್ಟೇರ್‌ವರೆಗೆ 13600 ರೂ.ಗಳ ಪರಿಹಾರವನ್ನು ನೀಡಲಾಗುತ್ತದೆ.

ರಾಜ್ಯಕ್ಕೆ 42 ಕೋಟಿ ರೂಪಾಯಿ ಬೆಳೆವಿಮೆ:-

ಈ ಜಿಲ್ಲೆಗೆ ಸಿಂಹಪಾಲು 34.99 ಕೋಟಿ ಬಿಡುಗಡೆ
ಗದಗ ಜಿಲ್ಲೆಗೆ ಸಿಂಹಪಾಲು:- ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಹೆಸರು ಬೆಳೆ ನಾಶವಾಗಿದ್ದು, 42 ಕೋಟಿ ರೂ. ವಿಮೆ ನೀಡಲು ಖಾಸಗಿ ವಿಮೆ ಕಂಪನಿ ಒಪ್ಪಿಕೊಂಡಿದೆ. ಅದರಲ್ಲಿ ಗದಗ ಜಿಲ್ಲೆಗೆ ಸಿಂಹಪಾಲು 34.99 ಕೋಟಿ ರೂ. ದೊರೆತಿದೆ.

ಪ್ರಸಕ್ತ ಮುಂಗಾರು ಆರಂಭದಲ್ಲಿ ಕೆಲವೆಡೆ ಹೆಸರು ಬಿತ್ತನೆ ಜರುಗಿತ್ತು. ಆದರೆ, ಸಕಾಲಕ್ಕೆ ಮಳೆಯಾಗದ ಕಾರಣ ಕೃಷಿ ಇಲಾಖೆಯ ಬಿತ್ತನೆ ಗುರಿ ಸಾಧ್ಯವಾಗಿರಲಿಲ್ಲ. ಬಿತ್ತಿದ ಬೆಳೆಯೂ ನಾಶವಾಗಿದೆ. ಹೆಸರು ಬೆಳೆ ಪರಿಹಾರಕ್ಕೆ ರೈತ ಮುಖಂಡರು ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೈತ ಮುಖಂಡರು, ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ವಿಮೆ ಕಂಪನಿ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದು, ಸಂಕಷ್ಟ ಸೂತ್ರದ ಮೂಲಕ ವಿಮೆ ಪರಿಹಾರ ಕಂಡುಕೊಳ್ಳಲಾಗಿದೆ. ಪ್ರತಿ ಹೆಕ್ಟೇ‌ರಗೆ ರೈತನ ಖಾತೆಗೆ ಸರಾಸರಿ 8312.5 ರೂ. ಗಳು ಜಮೆ ಆಗಲಿದೆ. ‘ಹೆಸರು ಬೆಳೆ ವಿಮೆಗೆ ಮಂಜೂರಾತಿಯ ಆಡಳಿತಾತ್ಮಕ ಪ್ರಕ್ರಿಯೆ ಮುಗಿದಿದ್ದು, ಸದ್ಯದಲ್ಲೆ ರೈತರ ಖಾತೆಗೆ ಜಮೆ ಆಗಲಿದೆ’ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಪ್ರತಿಕ್ರಿಯಿಸಿದ್ದಾರೆ.

ಮಧ್ಯಂತರ ಬೆಳೆ ವಿಮೆ ಬಿಡುಗಡೆ!

ನಮಸ್ಕಾರ ಆತ್ಮೀಯ ರೈತ ಬಾಂಧವರೇ,ಈ ಜಿಲ್ಲೆಯ ರೈತರಿಗೆ ಶೇಕಡ 25 ರಷ್ಟು ಮಧ್ಯಂತರ ಬೆಳೆವಿಮೆ (bele vime)ಬಿಡುಗಡೆ ಮಾಡಲು ಸರ್ಕಾರವು ಇನ್ಸೂರೆನ್ಸ್ ಕಂಪನಿಗೆ ಆದೇಶಿಸಿದೆ. ಅನಾವೃಷ್ಟಿಯ ಕಾರಣದಿಂದಾಗಿ ಈ ಬಾರಿ ಕರ್ನಾಟಕ ರಾಜ್ಯದಲ್ಲಿ, ಬಹುತೇಕ ಬೆಳೆಗಳು ಹಾನಿಯಾಗಿದ್ದು ಮಳೆ ಇಲ್ಲದೆ ರೈತನ ಜೀವನ ಸಂಕಷ್ಟದಲ್ಲಿದೆ.

ಎರಡು ಮೂರು ಬಾರಿ ಬಿತ್ತನೆ ಮಾಡಿದರು, ಬೀಜ, ಗೊಬ್ಬರ,ಎಣ್ಣೆ ಹೀಗೆ ರೈತ ಹಣ ಖರ್ಚು ಮಾಡಿ ಸರಿಯಾದ ಬೆಳೆ ಇಲ್ಲದೆ ಕಷ್ಟದಲ್ಲಿದ್ದಾನೆ, ಇದಕ್ಕಾಗಿ ಸ್ಪಂದಿಸಿರುವಂತಹ ಸರ್ಕಾರವು ಈಗಾಗಲೇ ರಾಜ್ಯದಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು ಈ ತಾಲೂಕುಗಳಿಗೆ ಸದ್ಯದಲ್ಲಿಯೇ ಬೆಳೆ ಪರಿಹಾರವನ್ನು ನೀಡಲಾಗುವುದು.

ಇನ್ನೂ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ ಶೇಕಡ 25% ರಷ್ಟು ಮಧ್ಯಂತರ ಬೆಳೆ ವಿಮೆ ಬಿಡುಗಡೆಗೆ ಸರ್ಕಾರ ಆದೇಶಿಸಿದೆ. ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಧ್ಯಂತರ ಬೆಳೆವಿಮೆ ಬಿಡುಗಡೆಗೆ ಆದೇಶಿಸಲಾಗಿದೆ ಎಂದು ಹಾನಗಲ್ ಶಾಸಕರಾದಂತಹ ಶ್ರೀನಿವಾಸ್ ಮಾನೆ ಅವರು ತಿಳಿಸಿದ್ದಾರೆ.

ಮೊದಲನೆಯದಾಗಿ ಈ ಕೆಳಗೆ ತೋರಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನಾವು ಕೆಳಗೆ ಸೂಚಿಸಿದ ಎಲ್ಲ ಮಾಹಿತಿಗಳನ್ನು ಅದರಲ್ಲಿ ಹಾಕಿ go ಎಂದು ಕ್ಲಿಕ್ ಮಾಡಿ.. https://samrakshane.karnataka.gov.in/

ವರ್ಷ ಹಾಗೂ ಋತು ಆಯ್ಕೆ ಮಾಡಿ
ವರ್ಷ:2023-24
ಋತು:kharif /ಮುಂಗಾರಿ ನಂತರ Go ಮೇಲೆ ಕ್ಲಿಕ್ ಮಾಡಬೇಕು.
ನಂತರ ಅಲ್ಲಿ ಕಾಣುವ ಮುಖಪುಟದಲ್ಲಿ ಚೆಕ್ ಸ್ಟೇಟಸ್ check status ಮೇಲೆ ಕ್ಲಿಕ್ ಮಾಡಬೇಕು.

ನಂತರ ಬರುವ ಮುಖಪುಟದಲ್ಲಿ ನಿಮ್ಮ ಆಧಾರ್ ನಂಬರ್ ಅಥವಾ ಅಪ್ಲಿಕೇಶನ್ ನಂಬರ್ ನಮೂದಿಸಿ ನಿಮ್ಮ ಖಾತೆಗೆ ಎಷ್ಟು ಬೆಳೆ ವಿಮೆ ಪರಿಹಾರ ಜಮಾ ಆಗಿದೆ ಎಂಬ ಮಾಹಿತಿಯನ್ನು ಅಲ್ಲಿ ಪಡೆಯಿರಿ.

ನಿಮ್ಮ ಖಾತೆಗಳಿಗೂ ಜಮೆ ಆಗಿರಬಹುದು ಆದ ಕಾರಣ ಮೇಲೆ ತಿಳಿಸಿದಂತಹ ಸ್ಟೆಪ್ಸ್ ಗಳನ್ನು ಅನುಸರಿಸಿ ನಿಮಗೂ ಜಮೆಯಾಗಿದೆಯೋ ಇಲ್ಲವೋ ಸ್ಟೇಟಸ್ ಅನ್ನು ತಿಳಿದುಕೊಳ್ಳಿ.

ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಯಾವ ಜಿಲ್ಲೆಗೆ ಯಾವ ಇನ್ಶೂರೆನ್ಸ್ ಕಂಪನಿ ಇರುವ ಬಗ್ಗೆ ಮಾಹಿತಿಯನ್ನು ನೀವು ತಿಳಿದುಕೊಳ್ಳುತ್ತೀರಿ…
https://samrakshane.karnataka.gov.in/HomePages/frmKnowYourInsCompany.aspx

ನಮ್ಮ ರಾಜ್ಯದಲ್ಲಿ ಇರುವಂತಹ ಇನ್ಸೂರೆನ್ಸ್ ಕಂಪನಿಗಳ ಪಟ್ಟಿ ಈ ಕೆಳಗಿನಂತಿವೆ…
Bajaj allianz GIC
SBI General Insurance
Future general India Insurance Company
HDFC ergo General Insurance Company Limited
Universal sompo GIC
SBI General Insurance
Agriculture insurance company of India
ICICI Lombard GIC

ಹೊಸ ಓಪನ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆಗ ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಕಂಪನಿ ಯಾವುದು ಎಂಬುದರ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ.

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೊಲದ ಸರ್ವೆ ನಂಬರನ್ನು ನಮೂದಿಸಿ ಬೆಳೆ ವಿಮೆ ಏನೇನೋ ಪರಿಸ್ಥಿತಿಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ. ನಿಮ್ಮ ಜಿಲ್ಲೆ ತಾಲೂಕು ಗ್ರಾಮ ಹೋಬಳಿ ಹಾಗೂ ನಿಮ್ಮ ಹೊಲದ ಸರ್ವೆ ನಂಬರ್ ನಮೂದಿಸಿ. ನಿಮ್ಮ ಹೊಲದ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
https://samrakshane.karnataka.gov.in/HomePages/AppliOnSurveyNos.aspx

Leave a Reply

Your email address will not be published. Required fields are marked *