ನಮಸ್ಕಾರ ಆತ್ಮೀಯ ರೈತ ಬಾಂಧವರೇ ರಾಜ್ಯದಲ್ಲಿ ಈ ವರ್ಷ ಮುಂಗಾರು ದುರ್ಬಲವಾಗಿದ್ದರಿಂದ ರಾಜ್ಯದಲ್ಲಿರುವ ಒಟ್ಟು 236 ತಾಲೂಕುಗಳ ಪೈಕಿ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಾರದ ಹಿಂದೆಯೇ ಪೂಸಿಸಿದ್ದಾರೆ. ಈಗ ಬರ ಘೋಷಣೆ ಮಾಡಿ ವಾರಗಳೇ ಕಳೆದರೂ ಇನ್ನೂ ರೈತರಿಗೆ ಪರಿಹಾರ ಹಣ ಬಂದಿಲ್ಲ ಈ ಕೂಡಲೇ ರೈತರಿಗೆ ಪರಿಹಾರ ಹಣ ನೀಡಬೇಕೆಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೇಳಿಕೊಂಡಿದ್ದಾರೆ
ರೈತರಿಗೆ ಪ್ರತಿ ಎಕರೆಗೆ 25, ಸಾವಿರ ರೂಪಾಯಿ ಬೆಳೆ ಪರಿಹಾರ ನೀಡಬೇಕು ಎಂದು ಲಿಂಗರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದರು ಆದಷ್ಟು ಬೇಗನೆ ರೈತರಿಗೆ ಬೆಳೆ ಪರಿಹಾರ ದೊರೆಯಬೇಕು ಏಕೆಂದರೆ ಮುಂಗಾರು ಹಂಗಾಮನ ಯಾವುದೇ ಬೆಳೆಗಳು ರೈತರಿಗೆ ಕೈಗೆ ಬಂದಿರುವುದಿಲ್ಲ ಹಾಗಾಗಿ ಈಗ ಹಿಂಗಾರು ಬಿತ್ತನೆಗಾಗಿ ಬೀಜ ಗೊಬ್ಬರ ಹಾಗೂ ಬಿತ್ತನೆ ಮಾಡಲು ರೈತರಿಗೆ ಹಣದ ಅವಶ್ಯಕತೆ ಇದ್ದು ಕೂಡಲೇ ರೈತರಿಗೆ ಪ್ರತಿ ಎಕರೆಗೆ 25,000 ಸಾವಿರ ರೂಪಾಯಿ ಪರಿಹಾರ ನೀಡಬೇಕು.
ಕಲಬುರಗಿಯ ಪ್ರಮುಖ ಬೆಳೆ ತೊಗರಿಯು ಮಳೆಯ ಅಭಾವದಿಂದ ಸಕಾಲಕ್ಕೆ ಬಿತ್ತನೆಯಾಗದಿದ್ದರಿಂದ ಸಂಪೂರ್ಣ ನೆಲಕಚ್ಚಿವೆ.ಮಳೆ ಇಲ್ಲದೆ ಕಬ್ಬು,ಬಾಳೆ, ಇನ್ನಿತರ ವಾಣಿಜ್ಯ ಬೆಳೆಗಳು ಕೂಡ ನಷ್ಟವಾಗಿವೆ. ಇದರಿಂದ ರೈತರು ಮತ್ತಷ್ಟು ಗಾಬರಿಯಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳು ಬರ ಪೀಡಿತ ಪ್ರದೇಶಗಳಾಗಿವೆ.ಮುಂಗಾರು ಬೆಳೆಗಳಾದ ಹೆಸರು,ಉದ್ದು, ಎಳ್ಳು ಸೇರಿದಂತೆ ಇತರೆ ಬೆಳೆಗಳು ಮಳೆಯ ಕೊರತೆಯಿಂದ ಬಹುತೇಕ ಕಡೆ ಬಿತ್ತ ನೆಯಾಗಿಲ್ಲ.ಹೀಗಾಗಿ ರೈತರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ.ಬೀಜ ಹಾಗೂ ರಸಗೊಬ್ಬರಗಳನ್ನು ಸಾಲ ಮಾಡಿ ಖರೀದಿಸಲಾಗಿದೆ.ಕೆಲವು ಕಡೆ ರೈತರು ಬಿತ್ತನೆ ಕಾರ್ಯಮಾಡಿ ಕೈ ಸುಟ್ಟುಕೊಂಡಿದ್ದಾರೆ.
ಬರ ಪೀಡಿತ ತಾಲೂಕುಗಳು ಎಂದು ಗುರುತಿಸಿರುವ ಸರಕಾರ ಕೂಡಲೇ ಅಲ್ಲಿಯ ಎಲ್ಲಾ ರೈತರಿಗೂ ಎಕರೆಗೆ 25 ಸಾವಿರ ಪರಿಹಾರದ ಹಣ ನೀಡಬೇಕು. ಹಿಂಗಾರು ಬೆಳೆಗಳ ಬಿತ್ತನೆ ಕಾರ್ಯಕ್ಕೆ ಅನುಕೂಲವಾಗುತ್ತದೆ.ಬೆಳೆ ಸಾಲ ಬಡ್ಡಿ ಸಮೇತ ಮನ್ನಾ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರದ ಬರ ಘೋಷಣೆ ಲಾಭಗಳೇನು?
– ಮಳೆಯಾಶ್ರಿತ ಪ್ರದೇಶಗಳಲ್ಲಿ ಶೇಕಡ 33 ಕ್ಕಿಂತ ಹೆಚ್ಚು ಬೆಳೆ ಹಾನಿಗೆ ಹೆಕ್ಟೇರ್‌ಗೆ 8,500 ರೂಪಾಯಿ
– ಮಳೆಯಾಶ್ರಿತ ಪ್ರದೇಶಗಳಲ್ಲಿ % 33 ಕ್ಕಿಂತ ಕಡಿಮೆ ಬೆಳೆ ಪಾನಿಯಾಗಿದ್ದರೆ ಪ್ರತಿ ಹೆಕ್ಟೇರ್‌ಗೆ 1000 ನಷ್ಟ ಪರಿಹಾರ
– ನಿರಾವರಿ ಪ್ರದೇಶಗಳಲ್ಲಿ ಬೆಳೆ ಹಾನಿ ಪ್ರತಿ ಹೆಕ್ಟೇರ್‌ಗೆ 17000 ನಷ್ಟ ಪರಿಹಾರ

– ಬಾಳೆ ಟೊಮೇಟೊ ತೆಂಗು ಆಲೂಗಡ್ಡೆ ಬೆಳೆ ಹಾನಿಗೆ ಪ್ರತಿ ಹೆಕ್ಟರಿಗೆ 22,500 ನಷ್ಟ ಪರಿಹಾರ
– ಜಾನುವಾರುಗಳಿಗೆ ನೀರು ಸೇರಿ ಮೇವು ಇತ್ಯಾದಿ ಪೂರೈಕೆಗೆ ದಿನಕ್ಕೆ ತಲ 80 ರೂಪಾಯಿಗಳು.
– ಕೇಂದ್ರ ಸರ್ಕಾರದ ತಂಡದ ಶಿಫಾರಸಿನ ಮೇರೆಗೆ ನೀವು ಸಾಗಾಣಿಕೆ ವೆಚ್ಚ ಕೇಂದ್ರದಿಂದ ಪಾವತಿ.