ಅಧಿಕೃತ ಬರಗಾಲ ಘೋಷಣೆ…!ರಾಜ್ಯ ಸರ್ಕಾರದ ಬರಗಾಲ ಹೊಸ ಯೋಜನೆಗಳ ಲಾಭವನ್ನು ಈಗಲೇ ಪಡೆದುಕೊಳ್ಳಿ…!

ಕರುನಾಡ ಜನತೆಗೆ ನಮಸ್ಕಾರಗಳು..!

WhatsApp Group Join Now
Telegram Group Join Now

ಈಗಾಗಲೇ ಅಧಿಕೃತವಾಗಿ ೧೯೩ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳನ್ನಾಗಿ ರಾಜ್ಯ ಸರ್ಕಾರದ ಹೊಸ ಬರಗಾಲ ಯೋಜನೆಗಳು ಆಯ್ಕೆ ಮಾಡಲಾಗಿದ್ದು ಇದರಿಂದಾಗಿ ಯಾವುದೇ ತರನಾದಂತಹ ತೊಂದರೆ ರೈತರಿಗೆ ಆಗಬಾರದೆಂದು ಸರ್ಕಾರವು ತಿಳಿದು ಸರ್ಕಾರವು ಜನರಿಗೆ ಗುಡ್ ನ್ಯೂಸ್ ನೀಡಿದೆ..

ಈಗಾಗಲೇ ಪ್ರಧಾನಮಂತ್ರಿಯವರು ಕೂಡ ಬರಗಾಲಿನಿಂದ ಯಾವುದೇ ತರನಾದಂತಹ ರೈತರಿಗೆ ಸಂಕಷ್ಟ ಬರಬಾರದೆಂದು ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು ಹಾಗೆಯೇ ಯಾರು ಸರಿಯಾದ ಮಾರ್ಗದಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುತ್ತಾರೋ ಅವರಿಗೆ ಮುಂದಿನ ದಿನಗಳಲ್ಲಿ ಬೆಳೆ ಪರಿಹಾರ ದೊರಕುತ್ತದೆ..

ಯಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿಲ್ಲವೂ ಇನ್ನೂ ಕೆಲವು ದಿನಗಳಲ್ಲಿ ಹಿಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಸಜ್ಜಾಗಿರಿ…

ರೈತರಿಗೆ ಸಂಕಷ್ಟ ಎದುರಾಗಬಾರದೆಂದು ಬೆಳೆ ಪರಿಹಾರ ಒಂದು ಮಾರ್ಗವಾದರೆ ಇನ್ನೊಂದು ಮಾರ್ಗದಡಿ ಅಂದರೆ ಕಾಂಗ್ರೆಸ್ ರಾಜ್ಯ ಸರ್ಕಾರವು ಜನರಿಗೆ ಈ ಬರಗಾಲ ಪೀಡಿತದಿಂದ ಸಂಕಷ್ಟ ಆಗಬಾರದೆಂದು ತಿಳಿದು ನರೇಗಾ ಯೋಜನೆ ಅಡಿಯಲ್ಲಿ ನೂರರಿಂದ 150 ದಿನಗಳ ಕೂಲಿ ವಿಸ್ತರಣೆಯನ್ನು ಮಾಡಲು ಮುಂದಾಗಿದೆ…

ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕೆಂದರೆ ಮೊದಲು ನೀವು ನರೇಗಾ ಯೋಜನೆ ಅಡಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ…

ನಂತರ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆ ಪಡೆದುಕೊಂಡು ಈ ಲಾಭವನ್ನು ಪಡೆದುಕೊಳ್ಳುವುದು ಉತ್ತಮವಾಗಿದೆ..

ಕಾಗಲಿ ಇದರ ಬಗ್ಗೆ ಅಧಿಕೃತವಾಗಿ ಕಾಂಗ್ರೆಸ್ ಸರ್ಕಾರ ಚಿಂತಿಸುತ್ತಿದ್ದು ಮುಂದಿನ ದಿನಗಳಲ್ಲಿ ಈ ನರೇಗಾ ಯೋಜನೆಯ ಸಂಪೂರ್ಣ ವಿವರಣೆಯನ್ನು ನೀಡುತ್ತಾರೆ…

ಇದಷ್ಟೇ ಅಲ್ಲವೇ ಬೆಳೆ ಹಾನಿಯ ಬಗ್ಗೆ ಸಮೀಕ್ಷೆಯನ್ನು ಕೂಡ ನಡೆಸಬಹುದು ಯಾವ ಯಾವ ಬೆಳೆಗೆ ಎಷ್ಟು ಪರಿಹಾರ ನೀಡಬೇಕೆಂದು ನಿರ್ಧರಿಸುತ್ತಿದ್ದು ಕೇವಲ ಸ್ವಲ್ಪ ದಿನಗಳಲ್ಲಿ ಮಾತ್ರ ಪತಿ ಹೆಕ್ಟರ್ ಗೆ ಎಷ್ಟು ಮೊತ್ತದ ಬೆಳೆ ಪರಿಹಾರ ನೀಡಬೇಕೆಂದು ಸಹ ಅಧಿಕೃತವಾಗಿ ಮಾಹಿತಿಯನ್ನು ನೀಡಲು ಮುಂದಾಗಿದ್ದಾರೆ…

ಇದಷ್ಟೇ ಅಲ್ಲದೆ ರೈತರಿಗೆ ಯಾವುದೇ ತರನಾದಂತಹ ತೊಂದರೆ ಆಗಬಾರದು ಎಂದು ಅಲ್ಪಾವಧಿ ಸಾಲ ಪಡೆದುಕೊಂಡಂತಹ ರೈತರಿಗೆ ಬ್ಯಾಂಕುಗಳು ಯಾವುದೇ ತರನಾದಂತಹ ಸಾಲ ಮರುಪಾವತಿಗೆ ಒತ್ತಡವನ್ನು ಹೇರಬಾರದೆಂದು ಕರ್ನಾಟಕದ ರಾಜ್ಯ ಸರ್ಕಾರವು ಬ್ಯಾಂಕ್ಗಳಿಗೆ ತಿಳಿಸಿದೆ…

ಹೀಗೆ ರಾಜ್ಯ ಸರ್ಕಾರವು ರೈತರ ಬಗ್ಗೆ ಚಿಂತಿಸುತ್ತಿದ್ದು ಯಾವುದೇ ತರನಾದಂತಹ ರೈತರಿಗೆ ಹಾನಿಯಾಗಬಾರದು ಎಂದು ಯೋಜನೆಗಳನ್ನು ಕೇವಲ ಸ್ವಲ್ಪ ದಿನಗಳಲ್ಲಿ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ…

ಕರುನಾಡ ಜನತೆಗೆ ನಮಸ್ಕಾರಗಳು 2023ನೇ ಸಾಲಿನ ಮುಂಗಾರು ಶುರುವಾದರೂ ಕೂಡ ಯಾವುದೇ ತರನಾದಂತಹ ಮಳೆ ಆಗದೆ ಇರುವುದಕ್ಕಾಗಿ ಕರ್ನಾಟಕದ ರೈತರು ಸಂಕಷ್ಟಕ್ಕೀಡಾಗಿದ್ದು ಇದರಿಂದಾಗಿ ರೈತರಿಗೆ ಸಹಾಯವಾಗಲೆಂದು ಪರಿಹಾರ ಘೋಷಿಸುವ ಮುನ್ನ ಬರಪೀಡಿತ ತಾಲೂಕುಗಳನ್ನು ಘೋಷಿಸಬೇಕಾಗುತ್ತದೆ ಇದರಿಂದಾಗಿ ಹಲವಾರು ತಾಲೂಕುಗಳನ್ನು ಈಗಾಗಲೇ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದು ಯಾವ ಯಾವ ತಾಲೂಕುಗಳು ಈಗಾಗಲೇ ಇದರಲ್ಲಿ ನೊಂದಾಯಿಸಿಕೊಂಡಿವೆ ಈಗಲೇ ತಿಳಿಯಿರಿ..

ರಾಜ್ಯದ ಮಳೆ, ಬೆಳೆ ಜಲಾಶಯಗಳ ಸಂಗ್ರಹಣಾ ಅಂತರ್ಜಲ, ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಕುರಿತು ಕಾಲಕಾಲಕ್ಕೆ ರಾಜ್ಯ ಹವಮಾನ ಅವಲೋಕನಾ ಸಮಿತಿಯು ಪರಿಶೀಲಿಸಿದೆ. ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಸರ್ಕಾರದ ಮುಖ್ಯ ಕಾರ್ಯದರ್ಶಿರವರು ಅವಲೋಕಿಸಿರುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಪ್ಪಿಗೆ ಮೇರೆಗೆ ಬರಪೀಡಿತ ತಾಲೂಕುಗಳ ಪಟ್ಟಿಗೆ ಅಧಿಸೂಚನೆ ಹೊರಡಿಸಲಾಗುವುದು. ಕೇಂದ್ರ ಸರಕಾರದ ಮಾರ್ಗಸೂಚಿಗಳ ಪ್ರಕಾರ, ಸಮೀಕ್ಷೆಯನ್ನು ಅನುಸರಿಸಿ, 161 ತಾಲೂಕುಗಳಲ್ಲಿ ತೀವ್ರ ಬರ ಮತ್ತು 34 ತಾಲೂಕುಗಳಲ್ಲಿ ಮಧ್ಯಮ ಬರವಿದೆ. ಹೀಗಾಗಿ 195 ತಾಲೂಕುಗಳಲ್ಲಿ ಬರಗಾಲವಿದೆ’ ಎಂದು ಉಪ ಸಮಿತಿಯ ಮುಖ್ಯಸ್ಥ ಕೃಷ್ಣ ಬೈರೇಗೌಡ ಹೇಳಿದರು.

40 ತಾಲೂಕುಗಳು ಮಳೆ ಕೊರತೆ ಎದುರಿಸುತ್ತಿವೆ, ಆದರೆ ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಎಂದು ಘೋಷಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.ಈ 40 ತಾಲೂಕುಗಳಲ್ಲಿ, ನಾವು ಉಪಗ್ರಹ ಚಿತ್ರಣವನ್ನು ನೋಡಿದಾಗ, ಹಸಿರು ಹೊದಿಕೆ ಅಥವಾ ಸಸ್ಯವರ್ಗದ ಬೆಳವಣಿಗೆ ಮತ್ತು ತೇವಾಂಶದ ತೊಂದರೆ ಕಂಡುಬರುವುದಿಲ್ಲ. ಕೇಂದ್ರದ ಮಾರ್ಗಸೂಚಿಗಳ ಅಡಿಯಲ್ಲಿ ಇವು ಕಡ್ಡಾಯ ಅವಶ್ಯಕತೆಗಳಾಗಿರುವುದರಿಂದ, ಅಲ್ಲಿ ಮಳೆಯ ಕೊರತೆಯ ಹೊರತಾಗಿಯೂ, ನಾವು ಅವುಗಳನ್ನು ಬರಪೀಡಿತ ಎಂದು ಘೋಷಿಸಲು ಸಾಧ್ಯವಿಲ್ಲ”ಎಂದರು

ರಾಜ್ಯದಲ್ಲಿ 31 ಜಿಲ್ಲೆಗಳಲ್ಲಿ ಒಟ್ಟು 236 ತಾಲೂಕುಗಳಿವೆ. “ನಾವು ಈ ವಿರೋಧಾತ್ಮಕ ವರದಿಗಳನ್ನು ಹೊಂದಿರುವುದರಿಂದ, ವೈಜ್ಞಾನಿಕವಾಗಿ ವಿಶ್ಲೇಷಿಸಿ, ಅಧ್ಯಯನ ನಡೆಸಿ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳು ಮತ್ತು ಒಂದು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಸಂಪುಟ ಉಪಸಮಿತಿ ಸೂಚಿಸಿದೆ ಎಂದರು.

ಬರ ಘೋಷಣೆಯಾದ ನಂತರ ಪೀಡಿತ ತಾಲೂಕುಗಳಲ್ಲಿ ಕಾರ್ಯಪಡೆಗಳನ್ನು ರಚಿಸಲಾಗುವುದು, ಕುಡಿಯುವ ನೀರು ಸರಬರಾಜು ಮಾಡಲು ಟ್ಯಾಂಕರ್‌ಗಳನ್ನು ವ್ಯವಸ್ಥೆ ಮಾಡಲು ಮತ್ತು ಬಾಡಿಗೆ ಬೋರ್‌ವೆಲ್‌ಗಳನ್ನು ನೀಡಲು ಹಣ ನೀಡಲಾಗುವುದು. ರೈತರಿಗೆ ಉಚಿತವಾಗಿ ಮೇವಿನ ಬೀಜಗಳನ್ನು ನೀಡಲಾಗುತ್ತಿದ್ದು, ಇದಕ್ಕಾಗಿ 20 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಪರಿಸ್ಥಿತಿಗೆ ಸ್ಪಂದಿಸಿ ಪರಿಹಾರ ನೀಡಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಪೂರ್ವಭಾವಿಯಾಗಿ ಮಾಡುತ್ತಿದೆ. ಬರಪೀಡಿತ ತಾಲೂಕುಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆಯಡಿ 100ರಿಂದ 150 ವ್ಯಕ್ತಿಗಳ ದಿನಗಳನ್ನು ಹೆಚ್ಚಿಸಲಾಗುವುದು. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *