ಕರುನಾಡ ಜನತೆಗೆ ನಮಸ್ಕಾರಗಳು…!
ಈಗಾಗಲೇ ನಿಮಗೆ ತಿಳಿದಿರುವಂತೆ ರೈತರಿಗೆ ಸಹಾಯವಾಗಲೆಂದು ಹಲವಾರು ವಿವಿಧ ತರನಾದಂತಹ ಕೃಷಿ ಚಟುವಟಿಕೆಗಳಿಗೆ ಬ್ಯಾಂಕಿನಲ್ಲಿ ಲೋನ್ ದೊರೆಯುತ್ತಿದ್ದು ಅದೇ ರೀತಿಯಾಗಿ ಈಗ ಕುರಿ ಸಾಕಾಣಿಕೆ ಎಂಬ ಹೊಸ ಯೋಜನೆಯಲ್ಲಿ ರೈತರಿಗೆ 5 ಲಕ್ಷ ವರೆಗೂ ಕಡಿಮೆ ಬಡ್ಡಿ ದರದ ಬ್ಯಾಂಕಿನಲ್ಲಿ ಲೋನ್ ದೊರೆಯುತ್ತಿದ್ದು ಈ ಲೋನ್ ಅನ್ನು ಹೇಗೆ ಪಡೆದುಕೊಳ್ಳಬೇಕು ಯಾವ ಬ್ಯಾಂಕಿನಲ್ಲಿ ಲಭ್ಯವಿದೆ ಎಂಬುದರ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ…
ಈಗಾಗಲೇ ನಿಮಗೆ ತಿಳಿದಿರುವಂತೆ ಬ್ಯಾಂಕಿನಲ್ಲಿ ಕೃಷಿ ಸಹಾಯಕ್ಕಾಗಿ ಮೂರು ಲಕ್ಷ ವರೆಗೂ ಬಡ್ಡಿ ರೈತ ಲೋನ್ ದೊರೆಯುತ್ತಿದ್ದು ಆದರೆ ಈಗ ಕುರಿ ಸಾಕಣಿಕೆ ಎಂಬ ಹೊಸ ಯೋಜನೆ ಅಡಿಯಲ್ಲಿ ರೈತರಿಗೆ 5 ಲಕ್ಷ ವರೆಗೂ ಲೋನ್ ಲಭ್ಯವಿದೆ…
ಈ ಲೋನ್ ಪಡೆದುಕೊಳ್ಳಬೇಕೆಂದರೆ ರೈತರು ತಮ್ಮ ಹೆಸರಿನಲ್ಲಿ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರಬೇಕು ಹಾಗೆಯೇ ಲೋನ್ ಪಡೆದುಕೊಳ್ಳಬೇಕೆಂದರೆ ನೀವು ನಿಮ್ಮ ಹೊಲದ ಪಹಣಿಯ ಜೆರಾಕ್ಸ್ ಹಾಗೆ ಬ್ಯಾಂಕಿನಲ್ಲಿ ಕೇಳಿರುವಂತ ಡಾಕ್ಯುಮೆಂಟ್ಸ್ಗಳನ್ನು ನೀಡಬೇಕಾಗುತ್ತದೆ ಇದಾದ ನಂತರ ಹಂತ ಹಂತವಾಗಿ ಈ ಹಣವನ್ನು ಬಿಡುಗಡೆ ಮಾಡುತ್ತಾರೆ ಅಂದರೆ ಮೊದಲನೇ ಹಂತದಲ್ಲಿ ಒಂದು ಲಕ್ಷದ ರುಪಾಯಿವರೆಗೂ ನೀಡುತ್ತಾರೆ .
ನಂತರ ಕುರಿ ಸಾಕಾಣಿಕೆ ಮಾಡುವಾಗ ಷಡ್ ನಿರ್ಮಾಣ ಹಂತದಲ್ಲಿ ಮತ್ತೊಂದು ಮೊತ್ತದ ಹಣ ಹೀಗೆ ನಾಲ್ಕು ಹಂತದಲ್ಲಿ ಹಣ ಬಿಡುಗಡೆಯಾಗುತ್ತಿದ್ದು ಹೀಗೆ ನೀವು ರೈತರು ಈ ಲೋನ್ ಅನ್ನು ಪಡೆದುಕೊಂಡು ಕುರಿ ಸಾಕಾಣಿಕೆ ಮಾಡುವುದು ಉತ್ತಮಕರವಾಗಿದೆ.
ಕುರಿ ಸಾಕಾಣಿಕೆಯಿಂದ ಆಗುವಂತಹ ಲಾಭಗಳು…
ಕುರಿ ಸಾಕಾಣಿಕೆಯಿಂದಾಗಿ ಹಲವಾರು ಲಾಭಗಳು ಉಂಟಾಗುತ್ತಿದ್ದು ಇದರಿಂದ ಕುರಿ ಗೊಬ್ಬರ ಮೂಲವಾಗಿ ಬಹುತೇಕವಾಗಿ ರೈತರಿಗೆ ಸಹಾಯವಾಗುವಂಥದ್ದು ಪ್ರಸ್ತುತ ದಿನಮಾನಗಳಲ್ಲಿ ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದು ಇದರಿಂದಾಗಿ ಭೂಮಿಯಲ್ಲಿರುವ ಸಾವಯವ ಸಾಯುತ್ತಿದ್ದು ಇದರಿಂದಾಗಿ ಸಾವಯವ ಕೃಷಿ ಮಾಡಬೇಕೆಂದರೆ ಜೈವಿಕ ಗೊಬ್ಬರಗಳನ್ನು ಬಳಸಬೇಕಾಗುತ್ತದೆ ಆ ಜೈವಿಕ ಗೊಬ್ಬರಗಳಲ್ಲಿ ಕುರಿಗಳ ಗೊಬ್ಬರ ಕೂಡ ಒಂದಾಗಿದೆ ಇದರಿಂದಾಗಿ ಈ ಗೊಬ್ಬರವನ್ನು ಬಳಸುವುದರಿಂದ ಭೂಮಿಯಲ್ಲಿರುವ ಸಾರ ಹೆಚ್ಚಾಗುತ್ತದೆ ಇದಾದ ನಂತರ ಸಾವಯವ ಕೃಷಿಗೂ ಉತ್ತೇಜನ ನೀಡಿದಂತಾಗುತ್ತದೆ…
ಇದಷ್ಟೇ ಅಲ್ಲವೇ ಕುರಿಗಳಿಂದ ಹಲವಾರು ಲಾಭಗಳಿದ್ದು ಈ ಲಾಭಗಳ ಬಗ್ಗೆ ನಿಮಗೆ ಈಗಾಗಲೇ ತಿಳಿದಿದ್ದು ಆಸಕ್ತಿ ಉಳ್ಳವರು ಬ್ಯಾಂಕಿನಿಂದ ಈ ಲೋನ್ ಅನ್ನು ಪಡೆದುಕೊಂಡು ಕೃಷಿ ಸಾಕಾಣಿಕೆ ಮಾಡುವಲ್ಲಿ ತಪ್ಪಲ್ಲಾಗಲು ಬ್ಯಾಂಕ್ ಲೋನ್ ಪಡೆದುಕೊಂಡು ಮಾಡುವುದು ಉತ್ತಮವಾಗಿದೆ..
ಹಲವಾರು ಬ್ಯಾಂಕುಗಳಲ್ಲಿ ಈ ಲೋನ್ ಲಭ್ಯವಿದ್ದು ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್ ಹಾಗೆ ಡಿಸಿಸಿ ಬ್ಯಾಂಕ್ ಮುಂತಾದ ಬ್ಯಾಂಕುಗಳಲ್ಲಿ ಲಭ್ಯವಿದ್ದು ಈ ಬ್ಯಾಂಕಿನಲ್ಲಿ ನೀವು ಈ ಲೋನ್ ಅನ್ನು ಪಡೆದುಕೊಳ್ಳಲು ಅರ್ಹತೆಯನ್ನು ಪಡೆದಿರುತ್ತಾರೆ…..
ಹೆಚ್ಚಿನ ಮಾಹಿತಿಗಾಗಿ
ಕರುನಾಡ ಜನತೆಗೆ ನಮಸ್ಕಾರಗಳು 2020 ಮೂರನೇ ಸಾಲಿನ ಮುಂಗಾರು ಶುರುವಾದರೂ ಕೂಡ ಯಾವುದೇ ತರನಾದಂತಹ ಮಳೆ ಆಗದೆ ಇರುವುದಕ್ಕಾಗಿ ಕರ್ನಾಟಕದ ರೈತರು ಸಂಕಷ್ಟಕ್ಕೀಡಾಗಿದ್ದು ಇದರಿಂದಾಗಿ ರೈತರಿಗೆ ಸಹಾಯವಾಗಲೆಂದು ಪರಿಹಾರ ಘೋಷಿಸುವ ಮುನ್ನ ಬರಪೀಡಿತ ತಾಲೂಕುಗಳನ್ನು ಘೋಷಿಸಬೇಕಾಗುತ್ತದೆ ಇದರಿಂದಾಗಿ ಹಲವಾರು ತಾಲೂಕುಗಳನ್ನು ಈಗಾಗಲೇ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದು ಯಾವ ಯಾವ ತಾಲೂಕುಗಳು ಈಗಾಗಲೇ ಇದರಲ್ಲಿ ನೊಂದಾಯಿಸಿಕೊಂಡಿವೆ ಈಗಲೇ ತಿಳಿಯಿರಿ..
ರಾಜ್ಯದ ಮಳೆ, ಬೆಳೆ ಜಲಾಶಯಗಳ ಸಂಗ್ರಹಣಾ ಅಂತರ್ಜಲ, ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಕುರಿತು ಕಾಲಕಾಲಕ್ಕೆ ರಾಜ್ಯ ಹವಮಾನ ಅವಲೋಕನಾ ಸಮಿತಿಯು ಪರಿಶೀಲಿಸಿದೆ. ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಸರ್ಕಾರದ ಮುಖ್ಯ ಕಾರ್ಯದರ್ಶಿರವರು ಅವಲೋಕಿಸಿರುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಪ್ಪಿಗೆ ಮೇರೆಗೆ ಬರಪೀಡಿತ ತಾಲೂಕುಗಳ ಪಟ್ಟಿಗೆ ಅಧಿಸೂಚನೆ ಹೊರಡಿಸಲಾಗುವುದು. ಕೇಂದ್ರ ಸರಕಾರದ ಮಾರ್ಗಸೂಚಿಗಳ ಪ್ರಕಾರ, ಸಮೀಕ್ಷೆಯನ್ನು ಅನುಸರಿಸಿ, 161 ತಾಲೂಕುಗಳಲ್ಲಿ ತೀವ್ರ ಬರ ಮತ್ತು 34 ತಾಲೂಕುಗಳಲ್ಲಿ ಮಧ್ಯಮ ಬರವಿದೆ.
ಹೀಗಾಗಿ 195 ತಾಲೂಕುಗಳಲ್ಲಿ ಬರಗಾಲವಿದೆ’ ಎಂದು ಉಪ ಸಮಿತಿಯ ಮುಖ್ಯಸ್ಥ ಕೃಷ್ಣ ಬೈರೇಗೌಡ ಹೇಳಿದರು.40 ತಾಲೂಕುಗಳು ಮಳೆ ಕೊರತೆ ಎದುರಿಸುತ್ತಿವೆ, ಆದರೆ ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಎಂದು ಘೋಷಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.ಈ 40 ತಾಲೂಕುಗಳಲ್ಲಿ, ನಾವು ಉಪಗ್ರಹ ಚಿತ್ರಣವನ್ನು ನೋಡಿದಾಗ, ಹಸಿರು ಹೊದಿಕೆ ಅಥವಾ ಸಸ್ಯವರ್ಗದ ಬೆಳವಣಿಗೆ ಮತ್ತು ತೇವಾಂಶದ ತೊಂದರೆ ಕಂಡುಬರುವುದಿಲ್ಲ. ಕೇಂದ್ರದ ಮಾರ್ಗಸೂಚಿಗಳ ಅಡಿಯಲ್ಲಿ ಇವು ಕಡ್ಡಾಯ ಅವಶ್ಯಕತೆಗಳಾಗಿರುವುದರಿಂದ, ಅಲ್ಲಿ ಮಳೆಯ ಕೊರತೆಯ ಹೊರತಾಗಿಯೂ, ನಾವು ಅವುಗಳನ್ನು ಬರಪೀಡಿತ ಎಂದು ಘೋಷಿಸಲು ಸಾಧ್ಯವಿಲ್ಲ”ಎಂದರುರಾಜ್ಯದಲ್ಲಿ 31 ಜಿಲ್ಲೆಗಳಲ್ಲಿ ಒಟ್ಟು 236 ತಾಲೂಕುಗಳಿವೆ. “ನಾವು ಈ ವಿರೋಧಾತ್ಮಕ ವರದಿಗಳನ್ನು ಹೊಂದಿರುವುದರಿಂದ, ವೈಜ್ಞಾನಿಕವಾಗಿ ವಿಶ್ಲೇಷಿಸಿ, ಅಧ್ಯಯನ ನಡೆಸಿ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳು ಮತ್ತು ಒಂದು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಸಂಪುಟ ಉಪಸಮಿತಿ ಸೂಚಿಸಿದೆ ಎಂದರು.ಬರ ಘೋಷಣೆಯಾದ ನಂತರ ಪೀಡಿತ ತಾಲೂಕುಗಳಲ್ಲಿ ಕಾರ್ಯಪಡೆಗಳನ್ನು ರಚಿಸಲಾಗುವುದು, ಕುಡಿಯುವ ನೀರು ಸರಬರಾಜು ಮಾಡಲು ಟ್ಯಾಂಕರ್ಗಳನ್ನು ವ್ಯವಸ್ಥೆ ಮಾಡಲು ಮತ್ತು ಬಾಡಿಗೆ ಬೋರ್ವೆಲ್ಗಳನ್ನು ನೀಡಲು ಹಣ ನೀಡಲಾಗುವುದು.
ರೈತರಿಗೆ ಉಚಿತವಾಗಿ ಮೇವಿನ ಬೀಜಗಳನ್ನು ನೀಡಲಾಗುತ್ತಿದ್ದು, ಇದಕ್ಕಾಗಿ 20 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಪರಿಸ್ಥಿತಿಗೆ ಸ್ಪಂದಿಸಿ ಪರಿಹಾರ ನೀಡಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಪೂರ್ವಭಾವಿಯಾಗಿ ಮಾಡುತ್ತಿದೆ. ಬರಪೀಡಿತ ತಾಲೂಕುಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆಯಡಿ 100ರಿಂದ 150 ವ್ಯಕ್ತಿಗಳ ದಿನಗಳನ್ನು ಹೆಚ್ಚಿಸಲಾಗುವುದು. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.