ರಷ್ಯಾದ ರಸಗೊಬ್ಬರ ಕಂಪನಿಗಳು ಇದು ವರೆಗೂ ಭಾರತಕ್ಕೆ ನೀಡುತ್ತಿದ್ದ ರಿಯಾಯಿತಿಯನ್ನು ರದ್ದುಪಡಿಸಿವೆ. ಈ ಪರಿಣಾಮ ಮುಂದಿನ ದಿನಗಳಲ್ಲಿ ರಸಗೊಬ್ಬರ ದರ ಏರಿಕೆಯಾಗುವ ಸಾಧ್ಯತೆಗಳಿವೆ.
ಜಾಗತಿಕ ಮಾರುಕಟ್ಟೆಯಲ್ಲಿನ ಪೂರೈಕೆ ವ್ಯತ್ಯಯ ದಿಂದಾಗಿ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಗೊಬ್ಬರ ಕಂಪನಿಗಳು ಡೈ ಅಮೋನಿಯಂ ಪಾಸ್ಟೇಟ್ (ಡಿಎಪಿ) ಸೇರಿದಂತೆ ನೀಡುತ್ತಿದ್ದ ರಿಯಾಯಿತಿ ಹಿಂಪಡೆದಿವೆ.
ಹೀಗಾಗಿ ರಿಯಾಯಿತಿ ನಾನಾ ರಸಗೊಬ್ಬರಗಳಿಗೆ ನಿಲ್ಲಿಸಿದ ರಷ್ಯಾ ಮಾರುಕಟ್ಟೆ ದರದಲ್ಲೇ ಗೊಬ್ಬರ ಖರೀದಿಸುವುದರಿಂದ ಭಾರತಕ್ಕೆ ಆಮದು ವೆಚ್ಚ ಹೆಚ್ಚಳವಾಗಲಿದೆ.
2022-23ನೇ ಹಣಕಾಸು ವರ್ಷದಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಂಡ ರಸಗೊಬ್ಬರ ಪ್ರಮಾಣ ಶೇ.246ರಷ್ಟು ಹೆಚ್ಚಳವಾಗಿತ್ತು. ದಾಖಲೆಯ 40 ಲಕ್ಷ ಮೆಟ್ರಿಕ್ ಟನ್ಗಳಿಗೂ ಅಧಿಕ ಪ್ರಮಾಣದ ರಸಗೊಬ್ಬರವನ್ನು ಈ ಅವಧಿಯಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಂಡಿತ್ತು.
ರಷ್ಯಾದ ಮಾರಾಟ ಸಂಸ್ಥೆಗಳು ಡಿಎಪಿ, ಯೂರಿಯ ಮತ್ತು ಎನ್ಪಿಕೆ ಗೊಬ್ಬರಗಳ ಮೇಲೆ ರಿಯಾಯಿತಿ ಘೋಷಿಸಿ, ಜಾಗತಿಕ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಭಾರತಕ್ಕೆ ನೀಡಿದ್ದವು.
ಆ ಮೂಲಕ ಭಾರತದ ಗೊಬ್ಬರ ಮಾರುಕಟ್ಟೆಯಲ್ಲಿ ಚೀನಾ, ಈಜಿಫ್, ಜೋರ್ಡಾನ್ ಮತ್ತು ಯುಎಇ ಗೊಬ್ಬರ ಸಂಸ್ಥೆಗಳ ಪಾಲನ್ನು ರಷ್ಯಾ ತನ್ನದಾಗಿಸಿಕೊಂಡು ಪಾರಮ್ಯ ಮೆರೆದಿತ್ತು
ಸಬ್ಸಿಡಿಯೊಂದೇ ಪರಿಹಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರದ ಬೆಲೆ ಏರುಗತಿಯಲ್ಲಿ ಸಾಗಿದೆ. ರಷ್ಯಾ ಕಂಪನಿಗಳು ರಿಯಾಯಿತಿ ಹಿಂಪಡೆಯುವ ತೀರ್ಮಾನ ದಿಂದಾಗಿ ಭಾರತದಲ್ಲಿ ರಸಗೊಬ್ಬರ ಬೆಲೆ ಹೆಚ್ಚುವ ಆತಂಕ ಎದುರಾಗಿದೆ.
ಬೆಲೆ ಏರಿಕೆಯ ಹೊರ ದೇಶದ ರೈತರ ಮೇಲೆ ಬೀಳದಂತೆ ತಡೆಗಟ್ಟಲು ಸಬ್ಸಿಡಿ ಘೋಷಿಸುವುದೊಂದೇ ಭಾರತ ಸರಕಾರದ ಮುಂದಿರುವ ಆಯ್ಕೆ” ಎಂದು ಉದ್ಯಮ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಷ್ಯಾದ ರಸಗೊಬ್ಬರ ಕಂಪನಿಗಳು ಇದು ವರೆಗೂ ಭಾರತಕ್ಕೆ ನೀಡುತ್ತಿದ್ದ ರಿಯಾಯಿತಿಯನ್ನು ರದ್ದುಪಡಿಸಿವೆ. ಈ ಪರಿಣಾಮ ಮುಂದಿನ ದಿನಗಳಲ್ಲಿ ರಸಗೊಬ್ಬರ ದರ ಏರಿಕೆಯಾಗುವ ಸಾಧ್ಯತೆಗಳಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ಪೂರೈಕೆ ವ್ಯತ್ಯಯ ದಿಂದಾಗಿ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಗೊಬ್ಬರ ಕಂಪನಿಗಳು ಡೈ ಅಮೋನಿಯಂ ಪಾಸ್ಟೇಟ್ (ಡಿಎಪಿ) ಸೇರಿದಂತೆ ನೀಡುತ್ತಿದ್ದ ರಿಯಾಯಿತಿ ಹಿಂಪಡೆದಿವೆ.
ಹೀಗಾಗಿ ರಿಯಾಯಿತಿ ನಾನಾ ರಸಗೊಬ್ಬರಗಳಿಗೆ ನಿಲ್ಲಿಸಿದ ರಷ್ಯಾ ಮಾರುಕಟ್ಟೆ ದರದಲ್ಲೇ ಗೊಬ್ಬರ ಖರೀದಿಸುವುದರಿಂದ ಭಾರತಕ್ಕೆ ಆಮದು ವೆಚ್ಚ ಹೆಚ್ಚಳವಾಗಲಿದೆ. 2022-23ನೇ ಹಣಕಾಸು ವರ್ಷದಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಂಡ ರಸಗೊಬ್ಬರ ಪ್ರಮಾಣ ಶೇ.246ರಷ್ಟು ಹೆಚ್ಚಳವಾಗಿತ್ತು. ದಾಖಲೆಯ 40 ಲಕ್ಷ ಮೆಟ್ರಿಕ್ ಟನ್ಗಳಿಗೂ ಅಧಿಕ ಪ್ರಮಾಣದ ರಸಗೊಬ್ಬರವನ್ನು ಈ ಅವಧಿಯಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಂಡಿತ್ತು.