2023 ನೇ ಸಾಲಿನ ಬೆಳೆ ಪರಿಹಾರ ಅರ್ಜಿಗೆ ಮುನ್ಸೂಚನೆ ನೀಡಿದ ಸರ್ಕಾರ…!
ಕಳೆದ ವರ್ಷದಂತೆ ಈ ವರ್ಷವೂ ಕೂಡ ಮುಂಗಾರು ಮಳೆ ಪರಿಹಾರಕ್ಕೆ ಅರ್ಜಿಯನ್ನು ಇನ್ನು ಕೇವಲ ಸ್ವಲ್ಪ ದಿನದಲ್ಲಿ ಆಹ್ವಾನಿಸುತ್ತಿದ್ದು ಅರ್ಜಿ ಸಲ್ಲಿಸಬೇಕೆಂದರೆ ನಿಮ್ಮ ಹತ್ತಿರ ಯಾವ ದಾಖಲಾತಿಗಳು ಇರಬೇಕು ಹಾಗೆ ನೀವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ….
ಈಗಾಗಲೇ 2022ನೇ ಸಾಲಿನಲ್ಲಿ ಹಲವಾರು ರೈತರು ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದು ಹಾಗೆ ಅವರ ಖಾತೆಗೆ ಬೆಳೆ ಪರಿಹಾರದ ಹಣ ಜಮಾ ಆಗಿದ್ದು ಈಗ ಈ ವರ್ಷ 2020 ಆನ್ಲೈನ್ ಮುಖಾಂತರ ಶುರುವಾಗಲಿದ್ದು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಹಾಗೆ ಯಾವ ಯಾವ ದಾಖಲಾತಿಗಳು ನಿಮ್ಮ ಹತ್ತಿರ ಇರಬೇಕು ಹಾಗೆ ಯಾವ ಬೆಲೆಗೆ ಎಷ್ಟು ಹಣವನ್ನು ತುಂಬಬೇಕು ಎಂಬುದರ ಮಾಹಿತಿ ಇಲ್ಲಿದೆ ನೋಡಿ…
ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಲಭ್ಯವಿರುವ ಬೆಳೆಗಳ ಮಾಹಿತಿ ಇಲ್ಲಿದೆ ನೋಡಿ..
ಹತ್ತಿ ಈರುಳ್ಳಿ ಹೂವಿನ ಜೋಳ ತೊಗರಿ ಕಡಲೆ ಮುಸುಕಿನ ಜೋಳ ಸಜ್ಜಿ ಶೇಂಗಾ ದ್ರಾಕ್ಷಿ ನಿಂಬೆ ಎಳ್ಳು ಟೊಮೇಟೊ ವೀಳ್ಯದೆಲೆ ಕಬ್ಬು ಹಾಗೆ ಇನ್ನಿತರೆ ಬೆಳೆಗಳು ಲಭ್ಯವಿದ್ದು ಇದರಲ್ಲಿ ನೀವು ನಿಮ್ಮ ಹೊಲದಲ್ಲಿ ಯಾವ ಬೆಳೆಯನ್ನು ಬೆಳೆಯಲು ಶುರು ಮಾಡಿದ್ದೀರಿ ಆ ಬೆಳಗ್ಗೆ ಅರ್ಜೆಯನ್ನು ಸಲ್ಲಿಸಿ ಹಾಗೆ ಬೆಳೆ ಪರಿಹಾರ ಪಡೆದುಕೊಳ್ಳಲು ಪ್ರೀಮಿಯಂ ಮಾಡಿಸಿಕೊಳ್ಳಿ….
2023 ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಹಾಗೂ ಬಿತ್ತನೆ ಪ್ರಾರಂಭವಾಗಿದ್ದು, ರೈತರ ಹಿತದೃಷ್ಟಿಯಿಂದ ಕೃಷಿ ಇಲಾಖೆಯು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಬಿತ್ತನೆ ಪೂರ್ವದಲ್ಲಿ ಹಾಗೂ ಬಿತ್ತನೆ ಸಮಯದಲ್ಲೂ ಸಹ ಬೆಳೆ ವಿಮೆ ನೋಂದಣಿ ಮಾಡಬಹುದಾಗಿದೆ. ಅತಿವೃಷ್ಟಿ ಅಥವಾ ಅನಾವೃಷ್ಟಿ ಯಾವುದೇ ಪ್ರತಿಕೂಲ ಸಮಯದಲ್ಲಿಯೂತಮ್ಮ ಬೆಳೆಗಳಿಗೆ ಭದ್ರತೆಯನ್ನು ಒದಗಿಸಲು ರಾಜ್ಯದಾದ್ಯಂತ ರೈತರು ನಿಗದಿತ ಪ್ರೀಮಿಯಂ ಮೊತ್ತವನ್ನು ಹತ್ತಿರದ ಬ್ಯಾಂಕ್ ಶಾಖೆ/ ಗ್ರಾಮ ಒನ್ ಕೇಂದ್ರ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಪಾವತಿಸುವುದರ ಮೂಲಕ ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕದ ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಿ ನಿಮ್ಮ ಬೆಳೆಗಳಿಗೆ ಪ್ರೀಮಿಯಂ ಮಾಡಿಸಿಕೊಳ್ಳಿ ಹಾಗೆ ಒಂದು ವೇಳೆ ನಿಮ್ಮ ಬೆಳೆ ನಷ್ಟಕ್ಕೆಡಾದರೆ ಪ್ರೀಮಿಯಂ ದಿಂದ ಹಣವನ್ನು ಪಡೆದು ಸುರಕ್ಷಿತವಾಗಿರಿ ಎಂದು ಕರೆಯನ್ನು ನೀಡಿದ್ದು ರೈತರು ಈ ಕರೆಗೆ ಒಗಟು ತಮ್ಮ ಬೆಳೆಗಳು ನಾಶವಾದಲ್ಲಿ ಬೆಳೆ ಪರಿಹಾರ ಪಡೆದುಕೊಂಡು ಯಾವುದೇ ತರನಾದಂತಹ ಸಂಕಷ್ಟಕ್ಕೆ ಹಣವನ್ನು ಪಡೆದುಕೊಂಡು ಜೀವನವನ್ನು ಅತ್ಯುತ್ತಮವಾಗಿ ಮುನ್ನಡಿಸಲು ಇದೊಂದು ಕೇಂದ್ರ ಸರ್ಕಾರದಿಂದ ಉತ್ತಮವಾದಂತ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ…
ಅರ್ಜಿ ಸಲ್ಲಿಸಬೇಕೆಂದರೆ ನಿಮ್ಮ ಹತ್ತಿರ ಆಧಾರ್ ಕಾರ್ಡ್ ಹಾಗೆ ಹೊಲದ ಪಹಣಿ ಹಾಗೆ ರೈತನ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ವಿವರ ಇಷ್ಟು ನಿಮ್ಮ ಹತ್ತಿರ ಇದ್ದರೆ ಸಾಕು, ನೀವು ಅರ್ಜಿ ಸಲ್ಲಿಸಬಹುದಾಗಿದೆ…
ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಮಾನ್ಯ ಪ್ರಧಾನಿ ಮಂತ್ರಿಗಳಾದಂತಹ ನರೇಂದ್ರ ಮೋದಿಯವರು ಈ ಯೋಜನೆಯನ್ನು ತಂದಿದ್ದು ಈ ಯೋಜನೆ ಅಡಿಯಲ್ಲಿ ಭಾರತದಲ್ಲಿ ಎಲ್ಲ ಡಿ ಅರ್ಜಿಯನ್ನು ಸಲ್ಲಿಸುತ್ತಿದ್ದು ಯಾವ ಸ್ಥಳದಲ್ಲಿ ಬೆಳೆ ಹಾನಿಯಾಗುತ್ತದೆಯೋ ಆ ಸ್ಥಳದಲ್ಲಿ ಅಂದರೆ ರೈತರ ಖಾತೆಗೆ ನೇರವಾಗಿ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆ ಇಂತಹ ಒಂದು ಉತ್ತಮವಾದಂತ ಯೋಜನೆಯನ್ನು ನರೇಂದ್ರ ಮೋದಿ ಅವರು ತದ್ದಿದ್ದು ಇದರಿಂದಾಗಿ ದೇಶದ ಬೆನ್ನೆಲುಬು ಎಂದು ಕರೆಸಿಕೊಂಡಂತಹ ರೈತರಿಗೆ ಬಹುತೇಕವಾಗಿ ಬಹಳ ಸಹಾಯವಾಗಿದೆ…
ಇದರಿಂದಾಗಿ ಯಾವುದೇ ತರನಾದಂತಹ ಬೆಳೆ ಹಾನಿ ಉಂಟಾದಲ್ಲಿ ಫಸಲ್ ಭೀಮಾ ಯೋಜನೆಯಲ್ಲಿ ಅರ್ಜಿಯನ್ನು ಸಲ್ಲಿಸಿದರೆ ನಿಮ್ಮ ಖಾತೆಗೆ ನೇರವಾಗಿ ಬೆಳೆ ಪರಿಹಾರದ ಹಣ ದೊರೆಯುತ್ತದೆ…
ಅದಕ್ಕಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಉಂಟಾದಲ್ಲಿ ನೀವೇನಾದರೂ ನಿಮ್ಮ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರೆ ನಿಮ್ಮ ಖಾತೆಗೆ ನೇರವಾಗಿ ದೊರೆಯುತ್ತದೆ..
ಅದಕ್ಕಾಗಿ ಬೆಳೆ ಪರಿಹಾರ ಸಲ್ಲಿಸಿ ಹಾಗೆ ನಿಮ್ಮ ಸುತ್ತಮುತ್ತಲಿರುವ ರೈತರಿಗೆ ಇದರ ಬಗ್ಗೆ ಅರಿವನ್ನು ಮೂಡಿಸಿ ಅವರಿಗೂ ಸಹ ಅರ್ಜಿ ಸಲ್ಲಿಸಲು ಪ್ರೇರೇಪಿಸಿ.
ಧನ್ಯವಾದಗಳು…