ಜಾನುವಾರಗಳಲ್ಲಿ ಕಂಡು ಬರುವ ಚರ್ಮಗಂಟು ರೋಗ :
ಕಳೆದ ವರ್ಷದಲ್ಲಿ ಭಾರತದಾದ್ಯಂತ ಚರ್ಮಗಂಟು ರೋಗಿನಿಂದ ಅನೇಕ ಹಸು ದನ ಕರುಗಳು ಮರಣ ಹೊಂದಿದವು. ಆದರೆ ಈ ವರ್ಷ ಸಮರ್ಪಕವಾಗಿ ನಡೆದ ಲಸಕೀಕರಣದಿಂದ ಈ ಬಾರಿ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿಲ್ಲ.
ಚರ್ಮ ಗಂಟು ರೋಗದ ಲಕ್ಷಣಗಳು ಮತ್ತು ಯಾವ ರೀತಿ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕೆಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ಮೂಲತಃ ಆಫ್ರಿಕಾದ ಈ ಸೋಂಕು 2019 ರಲ್ಲಿ ಮೊದಲ ಬಾರಿಗೆ ಭಾರತ ದೇಶದ ಒಡಿಶಾ ರಾಜ್ಯದಲ್ಲಿ ಕಾಣಿಸಿಕೊಂಡಿತ್ತು.
ನಂತರದ ದಿನಗಳಲ್ಲಿ ಕರ್ನಾಟಕ ರಾಜ್ಯಕ್ಕೂ ಆವರಿಸಿ ಅನೇಕ ಹಾನಿ ಉಂಟನ್ನು ಮಾಡಿತ್ತು. ಕಳೆದ ವರ್ಷದಲ್ಲಿ ಮಳೆಯ ಪ್ರಮಾಣವು ಹೆಚ್ಚಾಗಿದ್ದರಿಂದ ಕೆರೆ ನೀರುಗಳಲ್ಲಿ ನೀರು ತುಂಬಿದ್ದರಿಂದ ಈ ರೋಗವನ್ನು ಹರಡಿಸುವ ವೈರಾಣುಗಳು ಮತ್ತು ನೊಣಗಳು ಹೆಚ್ಚಾಗಿ ಅನೇಕ ಜಾನುವಾರುಗಳನ್ನು ಬಲಿ ತೆಗೆದುಕೊಂಡಿತ್ತು.
ಅನೇಕ ಜಾನುವಾರುಗಳು ಮರಣ ಹೊಂದಿದ್ದಲ್ಲದೆ ಅನೇಕ ಹಸುಗಳ ಹಾಲು ಉತ್ಪಾದನೆಯನ್ನು ಕೂಡ ಕುಂಟಿತಗೊಳಿಸಿ ಹೈನು ಉದ್ಯಮದಲ್ಲಿ ದೊಡ್ಡ ಹಾನಿ ಉಂಟು ಮಾಡಿತ್ತು.
ಈ ವರ್ಷ ಮಳೆಯ ಪ್ರಮಾಣವೂ ಕಡಿಮೆ ಇರುವುದರಿಂದ ಚರ್ಮಗಂಟು ರೋಗ ಅಷ್ಟೊಂದು ಕಂಡು ಬಂದಿಲ್ಲ. ಈ ರೋಗವನ್ನು ಹೊರಡಿಸುವ ಸೊಳ್ಳೆಗಳು ಅಥವಾ ವೈರಾಣುಗಳು ಹೆಚ್ಚಾಗಿ ನೀರಿನಲ್ಲಿ ಕಂಡುಬರುತ್ತವೆ. ಅದರಲ್ಲೂ ಮಳೆಯ ನೀರಿನಿಂದ ಉತ್ಪತ್ತಿಯಾಗುತ್ತವೆ.
ಚರ್ಮಗಂಟು ರೋಗದ ಲಕ್ಷಣಗಳು :
- ಮೊದಲಿಗೆ ಜ್ವರ ಕಾಣಿಸಿಕೊಳ್ಳುತ್ತದೆ.
- ಜ್ವರ ಬಂದ ಒಂದು ವಾರದಲ್ಲಿ ಜಾನುವಾರಗಳ ಮೈ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ.
- ಚರ್ಮ ತುರಿಗಳಾಗುತ್ತವೆ.
- ಕಣ್ಣು ಮತ್ತು ಮೂಗಿನಲ್ಲಿ ಜಲ್ಲಿನ ತರಹದ ದ್ರವ ಸೋರುವುದು .

- ರಕ್ತ, ವೀರ್ಯ ಕೂಡ ಸೋರುವುದು. ರೋಗವನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಎಚ್ಚರಿಕೆಗಳು:https://chat.whatsapp.com/CxOrmUyzkkD5f67dfye5kV
- ದನದ ಕೊಟ್ಟಿಗೆಗಳನ್ನು ಸ್ವಚ್ಛವಾಗಿಡಿ.
- ಸಣ್ಣಕರುಗಳನ್ನು ಆಕಳಿನಿಂದ ದೂರವಿಡಿ.
- ಸಣ್ಣ ಕರುಗಳಿಗೆ ಆಕಳಿನ ಹಾಲು ಕುಡಿಸಬೇಡಿ.
https://chat.whatsapp.com/CxOrmUyzkkD5f67dfye5kV
- ರೋಗದಿಂದ ಬಳಲುತ್ತಿರುವ ಜಾನುವಾರುಗಳನ್ನು ಆರೋಗ್ಯವಂತ ಜಾನುವಾರುಗಳಿಂದ ದೂರವಿಡಿ.
- ಆದಷ್ಟು ಸೊಳ್ಳೆಗಳಿಂದ ದೂರವಿಡಲು ಪ್ರಯತ್ನಿಸಿ.
- ಈ ರೋಗದಿಂದ ತಡೆಗಟ್ಟಲು ಮುಖ್ಯವಾಗಿ ತೆಗೆದುಕೊಳ್ಳಬಹುದಾದ ಎಚ್ಚರಿಕೆವೇನೆಂದರೆ ಲಸಿಕೆ ಕೊಡಿಸುವುದು.
ಈ ಒಂದು ರೋಗವು ಬೇರೆ ದೇಶದಿಂದ ಹರಡಿದ್ದರಿಂದ ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ ಕೇಂದ್ರ ಸರ್ಕಾರದ ಅನುದಾನದಲ್ಲಿ ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷದಿಂದ ಇಲ್ಲಿಯವರೆಗೆ ಇಪ್ಪತ್ತೈದು ಲಕ್ಷಕ್ಕಿಂತ ಹೆಚ್ಚು ಜಾನುವಾರುಗಳಿಗೆ ಕಳೆದ ವರ್ಷ ಲಸಿಕೆ ಹಾಕಲಾಗಿದೆ. ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ ಒಂದು ಜಾನುವಾರುವಿಗೆ ಮೂರು ಡೋಸ್ ಲಸಿಕೆ ಹಾಕಿಸುವುದು ಕಡ್ಡಾಯ. ಏಕೆಂದರೆ ಒಂದು ಬಾರಿ ಲಸಿಕೆ ಹಾಕಿಸುವುದರಿಂದ ಯಾವುದೇ ಜಾನುವಾರುವಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವುದಿಲ್ಲ.
- ಇದರಿಂದ ಮೂರು ಡೋಸ್ ಲಸಿಕೆ ಹಾಕಿಸುವುದು ಕಡ್ಡಾಯ ಎಂದು ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಸಿದೆ. ಈ ವರ್ಷ ಚರ್ಮಗಂಟು ರೋಗ ಕಡಿಮೆಯಾಗಿದ್ದರಿಂದ ಹೈನೋಧ್ಯಮ ಕೂಡ ಹೆಚ್ಚಾಗಿದೆ.
- ಒಂದು ದಿನಕ್ಕೆ ನಮ್ಮ ರಾಜ್ಯದಲ್ಲಿ ಕನಿಷ್ಠ ಸರಾಸರಿ 13 ಲಕ್ಷ ಲೀಟರ್ ಗಿಂತ ಹಾಲು ಹೆಚ್ಚಳವಾಗಿದೆ. ಪ್ರತಿಯೊಬ್ಬ ರೈತರು ಹೈನೋದ್ಯಮ ಅಥವಾ ತಮ್ಮ ಜಾನುವಾರಗಳ ಆರೋಗ್ಯವನ್ನು ಚೆನ್ನಾಗಿಡಲು ಮೂರು ಡೋಜ ಲಸಿಕೆಯನ್ನು ಹಾಕಿಸಿ ತಮ್ಮ ಪ್ರಾಣಿಗಳ ಆರೋಗ್ಯವನ್ನು ಚೆನ್ನಾಗಿರಿ ಮತ್ತು ನಿಮ್ಮ ಹೈನೋದ್ಯಮವನ್ನು ಹಿಗ್ಗಿಸಿ.