ಆರ್ ಬಿ ಐ : 291 ಆಫೀಸರ್ ಹುದ್ದೆಗಳ ನೇಮಕ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ.
ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವ ಎಲ್ಲಾ ನಿರುದ್ಯೋಗಿಗಳಿಗೆ ಆರ್‌ಬಿಐನಿಂದ ಸಂತಸದ ಸುದ್ದಿ. ಈ ಒಂದು ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು, ಅರ್ಹತೆಗಳೇನು ಮತ್ತು ಎಲ್ಲಿ ಅರ್ಜಿ ಸಲ್ಲಿಸುವುದು ಎಂಬ ವೆಬ್ ಸೈಟ್ನ ಲಿಂಕ್ ಅನ್ನು ಈ ಪುಟದ ಕೊನೆಯ ಭಾಗದಲ್ಲಿ ನಾವು ನಿಮಗೆ ನೀಡಿರುತ್ತೇವೆ.
ಭಾರತೀಯ ರಿಸರ್ವ್ ಬ್ಯಾಂಕ್ ( ಆರ್ ಬಿ ಐ ) 291 ಆಫೀಸರಗಳು ಗ್ರೇಡ್ ಬಿ ಹುದ್ದೆಯ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜೂನ್ 9 ರಿಂದ 14 ರ ತನಕ ವಿಸ್ತರಿಸಲಾಗಿದೆ.
ಎಷ್ಟೋ ಅರ್ಜಿದಾರರು ತಾಂತ್ರಿಕ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ಆಗದಿದ್ದರಿಂದ ಆರ್ ಬಿ ಯು ಈ ಒಂದು ಕೊನೆ ದಿನಾಂಕವನ್ನು ವಿಸ್ತರಿಸಲಾಗಿದೆ.
ಈ ಹುದ್ದೆಗೆ ಎರಡು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ಇರಲಿದ್ದು.
ಮೊದಲನೆಯದಾಗಿ ಸ್ಪರ್ಧಾತ್ಮಕ ಪರೀಕ್ಷೆ ನಂತರ ಸಂದರ್ಶನದ ಮೂಲಕ ಅಭ್ಯರ್ಥಿಗಳ ನೇಮಕ ನಡೆಯಲಿದೆ ಎಂದು ಇವರ ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಸಿದ್ದಾರೆ.
ಆರ್‌ಬಿಐ ನ ಗ್ರೇಡ್ ಬಿ ಹುದ್ದೆಗಳಲ್ಲಿ ವಿವಿಧ ತರಹದ ಹುದ್ದೆಗಳು ಖಾಲಿ ಇದ್ದು, ಅವು ಯಾವುವು ಎಂದು ನಿಮಗೆ ಕೆಳಗೆ ತಿಳಿಸಲಿದ್ದೇವೆ.
(1).ಆಫೀಸರ್ ಗ್ರೇಡ್ ‘ಬಿ'(ಡಿ ಆರ್ -ಜನರಲ್ ):
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನೆಂದರೆ
- ಪದವಿಯನ್ನು ಮುಗಿಸಿರಬೇಕು.
- ಪದವಿಯಲ್ಲಿ ಕನಿಷ್ಠ 60% ಅಂಕ ಪಡೆದಿರಬೇಕು, ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಕನಿಷ್ಠ ಶೇಕಡಾ 50% ಅಂಕಗಳನ್ನು ಪಡೆದಿರಬೇಕು. ಮತ್ತು ಸ್ನಾತಕೋತ್ತರ ಪದವಿ ಪಡೆದವರು ಅಥವಾ ಇದಕ್ಕೆ ಸರಿಸಮಾನವಾದ ತಾಂತ್ರಿಕ ಅಥವಾ ವೃತ್ತಿ ವಿದ್ಯಾರ್ಥಿಯನ್ನು ಪಡೆದವರು ಕನಿಷ್ಠ ಶೇಕಡ 50% ಅಂಕಗಳೊಂದಿಗೆ ಪಾಸಾಗಿರಬೇಕು. ಹೀಗಿದ್ದರೆ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
(2). ಆಫೀಸರ್ ಗ್ರೇಡ್ ‘ಬಿ ‘ ( ಡಿ ಆರ್ – ಡಿಇಪಿಆರ್) :
ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಫೈನಾನ್ಸ್ ಅಥವಾ ಎಕನಾಮಿಕ್ಸ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದವರು ಅಥವಾ ಎಕನಾಮಿಕ್ಸ್ / ಫೈನಾನ್ಸ್ ನಲ್ಲಿ ಎಂಬಿಎ ಮಾಡಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆರ್‌ಬಿಐನ ಎಲ್ಲಾ ಹುದ್ದೆಗಳು ದೊಡ್ಡ ಹುದ್ದೆಗಳು ಮತ್ತು ಗೌರವಾನ್ವಿತ ಹುದ್ದೆಗಳಾಗಿದ್ದು ತಾವು ಈ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 8 ನೇ ತಾರೀಕು ಆಗಿತ್ತು.
ಮತ್ತೆ ಈ ಹುದ್ದೆಗಳ ಅರ್ಜಿ ಸಲ್ಲಿಸಿಕೆಗೆ ಕೊನೆ ದಿನಾಂಕವನ್ನು ವಿಸ್ತಾರ ಮಾಡಿದ್ದು ಈ ಒಂದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
- ಆಫೀಸರ್ ಗ್ರೇಡ್ ‘ಬಿ ‘- ( ಡಿಆರ್ – ಡಿಎಸ್ಐಎಮ್ ): ಇವತೆಗೆ ಅರ್ಜಿ ಸಲ್ಲಿಸಲು ಸ್ಟ್ಯಾಟಿಸ್ಟಿಕ್/ ಮ್ಯಾಥೆಮ್ಯಾಟಿಕಲ್ ಸ್ಟ್ಯಾಟಿಸ್ಟಿಕ್ಸ್ / ಮ್ಯಾಥೆಮೆಟಿಕಲ್ ಎಕನಾಮಿಕ್ಸ್ ಮತ್ತು ಇನ್ಫಾರ್ಮೆಟಿಕ್ಸ್ ನಲ್ಲಿ ಕನಿಷ್ಠ 55 ಪರ್ಸೆಂಟ್ ಅಂಕಗಳೊಂದಿಗೆ ಮಾಸ್ಟರ್ ಡಿಗ್ರಿ ಪಡೆದವರು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ: ಎಸ್ಸಿ ಎಸ್ಟಿ ಮತ್ತು ವಿಕಲಚೇತನರಿಗೆ ಅರ್ಜಿ ಶುಲ್ಕ ರೂ. 100 ಮಾತ್ರ ಪಾವತಿಸಬೇಕು.
ಸಾಮಾನ್ಯ ಇತರೆ ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕ 850 ರೂಪಾಯಿಯನ್ನು ಪಾವತಿಸಬೇಕು.
ಲಿಂಕ್ : https://rbidocs.rbi.org.in
ಆರ್ ಬಿ ಐ : 291 ಆಫೀಸರ್ ಹುದ್ದೆಗಳ ನೇಮಕ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ.
ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವ ಎಲ್ಲಾ ನಿರುದ್ಯೋಗಿಗಳಿಗೆ ಆರ್‌ಬಿಐನಿಂದ ಸಂತಸದ ಸುದ್ದಿ. ಈ ಒಂದು ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು, ಅರ್ಹತೆಗಳೇನು ಮತ್ತು ಎಲ್ಲಿ ಅರ್ಜಿ ಸಲ್ಲಿಸುವುದು ಎಂಬ ವೆಬ್ ಸೈಟ್ನ ಲಿಂಕ್ ಅನ್ನು ಈ ಪುಟದ ಕೊನೆಯ ಭಾಗದಲ್ಲಿ ನಾವು ನಿಮಗೆ ನೀಡಿರುತ್ತೇವೆ.
ಭಾರತೀಯ ರಿಸರ್ವ್ ಬ್ಯಾಂಕ್ ( ಆರ್ ಬಿ ಐ ) 291 ಆಫೀಸರಗಳು ಗ್ರೇಡ್ ಬಿ ಹುದ್ದೆಯ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜೂನ್ 9 ರಿಂದ 14 ರ ತನಕ ವಿಸ್ತರಿಸಲಾಗಿದೆ.
ಎಷ್ಟೋ ಅರ್ಜಿದಾರರು ತಾಂತ್ರಿಕ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ಆಗದಿದ್ದರಿಂದ ಆರ್ ಬಿ ಯು ಈ ಒಂದು ಕೊನೆ ದಿನಾಂಕವನ್ನು ವಿಸ್ತರಿಸಲಾಗಿದೆ.
ಈ ಹುದ್ದೆಗೆ ಎರಡು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ಇರಲಿದ್ದು.
ಮೊದಲನೆಯದಾಗಿ ಸ್ಪರ್ಧಾತ್ಮಕ ಪರೀಕ್ಷೆ ನಂತರ ಸಂದರ್ಶನದ ಮೂಲಕ ಅಭ್ಯರ್ಥಿಗಳ ನೇಮಕ ನಡೆಯಲಿದೆ ಎಂದು ಇವರ ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಸಿದ್ದಾರೆ.
ಆರ್‌ಬಿಐ ನ ಗ್ರೇಡ್ ಬಿ ಹುದ್ದೆಗಳಲ್ಲಿ ವಿವಿಧ ತರಹದ ಹುದ್ದೆಗಳು ಖಾಲಿ ಇದ್ದು, ಅವು ಯಾವುವು ಎಂದು ನಿಮಗೆ ಕೆಳಗೆ ತಿಳಿಸಲಿದ್ದೇವೆ.
(1).ಆಫೀಸರ್ ಗ್ರೇಡ್ ‘ಬಿ'(ಡಿ ಆರ್ -ಜನರಲ್ ):
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನೆಂದರೆ
- ಪದವಿಯನ್ನು ಮುಗಿಸಿರಬೇಕು.
- ಪದವಿಯಲ್ಲಿ ಕನಿಷ್ಠ 60% ಅಂಕ ಪಡೆದಿರಬೇಕು, ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಕನಿಷ್ಠ ಶೇಕಡಾ 50% ಅಂಕಗಳನ್ನು ಪಡೆದಿರಬೇಕು. ಮತ್ತು ಸ್ನಾತಕೋತ್ತರ ಪದವಿ ಪಡೆದವರು ಅಥವಾ ಇದಕ್ಕೆ ಸರಿಸಮಾನವಾದ ತಾಂತ್ರಿಕ ಅಥವಾ ವೃತ್ತಿ ವಿದ್ಯಾರ್ಥಿಯನ್ನು ಪಡೆದವರು ಕನಿಷ್ಠ ಶೇಕಡ 50% ಅಂಕಗಳೊಂದಿಗೆ ಪಾಸಾಗಿರಬೇಕು. ಹೀಗಿದ್ದರೆ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
(2). ಆಫೀಸರ್ ಗ್ರೇಡ್ ‘ಬಿ ‘ ( ಡಿ ಆರ್ – ಡಿಇಪಿಆರ್) :
ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಫೈನಾನ್ಸ್ ಅಥವಾ ಎಕನಾಮಿಕ್ಸ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದವರು ಅಥವಾ ಎಕನಾಮಿಕ್ಸ್ / ಫೈನಾನ್ಸ್ ನಲ್ಲಿ ಎಂಬಿಎ ಮಾಡಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆರ್‌ಬಿಐನ ಎಲ್ಲಾ ಹುದ್ದೆಗಳು ದೊಡ್ಡ ಹುದ್ದೆಗಳು ಮತ್ತು ಗೌರವಾನ್ವಿತ ಹುದ್ದೆಗಳಾಗಿದ್ದು ತಾವು ಈ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 8 ನೇ ತಾರೀಕು ಆಗಿತ್ತು. ಮತ್ತೆ ಈ ಹುದ್ದೆಗಳ ಅರ್ಜಿ ಸಲ್ಲಿಸಿಕೆಗೆ ಕೊನೆ ದಿನಾಂಕವನ್ನು ವಿಸ್ತಾರ ಮಾಡಿದ್ದು ಈ ಒಂದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.