ರೈತರ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ದು ನಿಮಗೂ ಆಗಿದೆಯಾ ಈಗಲೇ ಚೆಕ್ ಮಾಡಿ… ಬೆಳೆ ಪರಿಹಾರ ಜಮಾ ಆಗದೆ ಇದ್ದರೆ ಏನು ಮಾಡಬೇಕು…?ಇಲ್ಲಿದೆ ನೋಡಿ…

ಈಗಾಗಲೇ ಸ್ವಲ್ಪ ರೈತರಿಗೆ ಬೆಳೆ ಪರಿಹಾರ ಜಮಾ ಆಗಿದ್ದು ನಿಮಗೂ ಸಹ ಜಮಾ ಆಗಿದೆಯ?

ಬೆಳೆ ಪರಿಹಾರವು 2 ಹಂತದಲ್ಲಿ ಜಮಾ ಆಗುತ್ತದೆ.
ಈಗಾಗಲೇ ರಾಜ್ಯ ಸರ್ಕಾರದಿಂದ ಕೆಲವು ಜಿಲ್ಲೆಗಳಲ್ಲಿ ರೈತರಿಗೆ ಬೆಳೆ ಪರಿಹಾರ ಜಮಾ ಆಗಿದೆ…

ನಿಮಗೆ ಬೆಳೆ ಪರಿಹಾರ ಜಮಾ ಆಗಿದೆ ಅಥವಾ ಇಲ್ಲವೋ ಈಗಲೇ ನೋಡಿ..

WhatsApp Group Join Now
Telegram Group Join Now

https://landrecords.karnataka.gov.in/PariharaPayment/

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಈ ವರ್ಷದ ಬೆಳೆ ಪರಿಹಾರ ಜಮಾ ಆಗಿದೆ ಅಥವಾ ಇಲ್ಲವೋ ಎಂಬುದು ನಿಮಗೆ ಅತಿ ಸುಲಭವಾಗಿ ತಿಳಿಯುತ್ತದೆ..

ನಿಮಗೆ ಇಲ್ಲಿಯವರೆಗೂ ಎಷ್ಟು ವರ್ಷದ ಬೆಳೆ ಪರಿಹಾರ ಜಮಾ ಆಗಿದೆ ಯಾವ ವರ್ಷದ ಬೆಳೆ ಪರಿಹಾರ ಜಮಾ ಆಗಿಲ್ಲ ಎಂಬುದು ನೋಡುವುದು ಹೇಗೆ…?

https://www.samrakshane.karnataka.gov.in/CropHome.aspx

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಅಲ್ಲಿ ಯಾವ ವರ್ಷದ ಬೆಳೆ ಪರಿಹಾರದ ಸ್ಟೇಟಸ್ ನೋಡುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್ ಅಲ್ಲಿ ಹಾಕಿ ನಿಮ್ಮ ಸ್ಟೇಟಸ್ ಅನ್ನು ನೀವು ನೋಡಿಕೊಳ್ಳಬಹುದು.

ಕೂಡಲೇ ನಿಮ್ಮ ಅನುಮಾನಗಳನ್ನು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲ ಮಾಹಿತಿಯನ್ನು ಪಡೆದುಕೊಂಡು  ಬಗೆಹರಿಸಿಕೊಳ್ಳಿ..

ಬೆಳೆ ಪರಿಹಾರ ಜಮಾ ಆಗದೇ ಇರಲು ಕಾರಣವೇನು..?

ಬೆಳೆ ಪರಿಹಾರ ಜಮಾ ಆಗಬೇಕೆಂದರೆ 10 ಹಲವಾರು ಕ್ರಮಗಳನ್ನು ನೀವು ಪಾಲಿಸಬೇಕಾಗುತ್ತದೆ ಅದಕ್ಕಾಗಿ ನೀವು ಇದರಲ್ಲಿ ಯಾವುದೇ ಒಂದು ಕ್ರಮವನ್ನು ಪಾಲಿಸದೆ ಆದಲ್ಲಿ ನಿಮಗೆ ಬೆಳೆ ಪರಿಹಾರ ಜಮಾ ಆಗುವುದಿಲ್ಲ..

ಈಗಾಗಲೇ ಹಲವಾರು ರೈತರು ಇದೇ ಪ್ರಶ್ನೆಯನ್ನು ನನಗೆ ಕೇಳಿದ್ದು ನಾನು ಅವರ ಸ್ಟೇಟಸ್ ಅನ್ನು ಪರಿಶೀಲಿಸಿದಾಗ ಅವರು ತಮ್ಮ ಬೆಳೆಯ ಜಿಪಿಆರ್ಎಸ್ ಮಾಡದೆ ಇರುವ ಕಾರಣ ಅವರಿಗೆ ಯಾವುದೇ ತರನಾದಂತಹ ಬೆಳೆ ಪರಿಹಾರ ಜಮಾ ಆಗಿಲ್ಲ..

ಅದಕ್ಕಾಗಿ ನೀವು ಸಹ ನಿಮ್ಮ ಸ್ಟೇಟಸ್ ಅನ್ನು ಮೊದಲು ಸರಿಯಾಗಿ ನೋಡಿಕೊಂಡು ನಿಮಗೆ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ..

ಇನ್ನು ಕೆಲವೇ ವಾರಗಳಲ್ಲಿ ರೈತರ ಖಾತೆಗೆ ನೇರವಾಗಿ 2022ನೇ ಸಾಲಿನ ಬೆಳೆ ವಿಮಾ ಜಮಾ ಆಗುತ್ತಿದ್ದು ಹಲವು ರೈತರು ಸಣ್ಣ ಸಣ್ಣ ತಪ್ಪುಗಳನ್ನು ಮಾಡಿದ್ದಾರೆ.

ಅದರಲ್ಲಿ ಪ್ರಮುಖವಾಗಿ ಬರುವುದೇ ಹೊಲದಲ್ಲಿ ಬೆಳೆದಿರುವ ಬೆಳೆಯ GPRS..

ಕೆಲವು ರೈತರು ಬೆಳೆ ವಿಮೆಗಾಗಿ ಬೇರೆ ಬೆಳೆ ಹೆಸರನ್ನು ನಮೂದಿಸಿದ್ದು ಹಾಗೆ ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಬೇರೆ ಬೆಳೆಯಾಗಿದ್ದು ಈ ಒಂದು ಸಣ್ಣ ತಪ್ಪಿನಿಂದಾಗಿ ಬೆಳೆ ವಿಮೆ ಜಮಾ ಆಗುವುದಿಲ್ಲ..

ಅದಕ್ಕಾಗಿ ಕೂಡಲೇ ರೈತ ಬಾಂಧವರು ಎಚ್ಚೆತ್ತುಕೊಂಡು ಈ ತಪ್ಪನ್ನು ಸರಿಪಡಿಸಿಕೊಂಡರೆ ನೀವು ಬೆಳೆ ಪರಿಹಾರ ಪಡೆದುಕೊಳ್ಳುವಲ್ಲಿ ಸಫಲರಾಗುತ್ತೀರಿ..

ಅದಕ್ಕಿಂತ ಮೊದಲು ನೀವು ಜಿಪಿಆರ್ಎಸ್ ಮಾಡಿರುವ ಬೇಳೆ ಹಾಗೂ ನೀವು ಬೆಳೆ ವಿಮೆಗಾಗಿ ಅರ್ಜಿ ಸಲ್ಲಿಸಿರುವ ಬೆಳೆ ಎರಡು ಒಂದೇ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ..

ಖಚಿತಪಡಿಸಿಕೊಳ್ಳಲು ಏನು ಮಾಡಬೇಕು…?

ಈ ಮೇಲ್ಕಂಡ ವಿಷಯವನ್ನು ನೀವು ಖಚಿತಪಡಿಸಿಕೊಳ್ಳಬೇಕೆಂದರೆ ನೀವು ಕೂಡಲೇ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಆಪ್ ಗೆ ಹೋಗಿ ಅಲ್ಲಿ ನೀವು ಬೆಳೆ ಸೂಚ್ಯಂಕ ಎಂದು ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ..

ಈ ಆಪ್ ಮೂಲಕ ನೀವು ಯಾವ ಬೆಳೆಯ ಜಿಪಿಆರ್ಎಸ್ ಆಗಿದೆ ಹಾಗೆ ನೀವು ಮಾಡಿರುವ ಜಿಪಿಆರ್ಎಸ್ ಮಾನ್ಯತೆ ಪಡೆದಿದೆಯೋ ಅಥವಾ ಎಲ್ಲವೂ ಎಂಬುದ ಸಂಪೂರ್ಣ ಮಾಹಿತಿಯನ್ನು ನೀವು ಮೊದಲು ಅರಿತುಕೊಳ್ಳಬೇಕಾಗಿದೆ…

Leave a Reply

Your email address will not be published. Required fields are marked *