ಅಪರೂಪದ ಘಟನೆ: ಅಣಬೆ ಕೃಷಿಯಿಂದ ದಿನಕ್ಕೆ 40 ಸಾವಿರ ಗಳಿಸುತ್ತಿರುವ ತಾಯಿ ಮಗ…. ಕೃಷಿಯಲ್ಲಿ ಲಾಭ ಇಲ್ಲ ಅಂದವರಿಗೆ ಇಲ್ಲಿದೆ ನೋಡಿ ಉತ್ತರ…!

ಈಗೀನ ಕಾಲದಲ್ಲಿ ಕೃಷಿಕರ ಸಂಖೆ ಕಡಿಮೆ ಆಗುತ್ತಾ ಬರುತ್ತಿದೆ ಹಾಗೂ ಆನೇಕ ಯುವಕರು ಜಾಬ್ ಗಳಿಗಾಗಿ ಸಿಟಿ ಕಡೆ ಮುಖ ಮಾಡುತ್ತಾರೆ ಇದಕ್ಕೆಲ್ಲ ಕಾರಣ ಕೃಷಿಯಲ್ಲಿ ಲಾಭವಿಲ್ಲ ಎಂದು,ಆದರೆ ಕೇರಳದಲ್ಲಿ ತಾಯಿ ಮಗ ಇಬ್ಬರೂ ಕೂಡಿ ಅಣಬೆ ಕೃಷಿ ಮಾಡಿ ಕೋಟ್ಯಂತರ ಗಳಿಕೆ ಮಾಡುತ್ತಿದ್ದಾರೆ.

ಭೌಶಾಸ್ತ್ರದಲ್ಲಿ ಪದವಿ ಮಾಡಿದರು ಅಣಬೆ ಕೃಷಿ ಯಲ್ಲಿ ತೊಡಗಿ ಸಾಧನೆ.

WhatsApp Group Join Now
Telegram Group Join Now

ಕೆಲವರು ಸರ್ಕಾರಿ ಕೆಲಸ ಅಥವಾ ತಮ್ಮ ಓದಿಗೆ ತಕ್ಕನಾದ ಕೆಲಸಕ್ಕೆ ಸೇರಬೇಕೆಂದು ಓದಿ, ನಂತರ ಆ ಕೆಲಸ ಸಿಗದಿದ್ದಾಗ ಮಾನಸಿಕ ಖಿನ್ನತೆಗೆ ಒಳಗಾಗಿ ಯಾವುದೇ ಕೆಲಸವನ್ನು ಮಾಡಲಾಗದೇ ಗೊಂದಲದಲ್ಲೇ ಕಾಲ ಕಳೆಯುತ್ತಾರೆ. ಆದರೆ ಕೇರಳದ ಯುವಕನೊಬ್ಬ ಓದು ಕೇವಲ ಜ್ಞಾನವನ್ನು ಬೆಳೆಸಿಕೊಳ್ಳುವುದಕ್ಕಾಗಿ, ದುಡಿಯುವುದಕ್ಕೆ ನೂರಾರು ದಾರಿಗಳಿವೆ ಎಂಬುದನ್ನು ಸಾಬೀತು ಮಾಡಿದ್ದಾರೆ.

Image

ಭೌತಶಾಸ್ತ್ರದಲ್ಲಿ ಪದವಿ ಹಾಗೂ ಸೋಷಿಯಲ್ ವರ್ಕ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೇರಳದ 31 ವರ್ಷದ ಜೀತು ಥಾಮಸ್ ಸ್ವಂತ ಉದ್ಯಮ ಪ್ರಾರಂಭಿಸುವ ಸಾಹಸಕ್ಕೆ ಕೈಹಾಕಿ, ಅದರಲ್ಲಿ ಯಶಸ್ಸು ಗಳಿಸಿ ನೂರಾರು ಯುವಕರಿಗೆ ಮಾದರಿಯಾಗಿದ್ದಾರೆ.
ಭೌತಶಾಸ್ತ್ರದಲ್ಲಿ ಪದವಿ ಹಾಗೂ ಸೋಷಿಯಲ್ ವರ್ಕ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೇರಳದ 31 ವರ್ಷದ ಜೀತು ಥಾಮಸ್ ಸ್ವಂತ ಉದ್ಯಮ ಪ್ರಾರಂಭಿಸುವ ಸಾಹಸಕ್ಕೆ ಕೈಹಾಕಿ, ಅದರಲ್ಲಿ ಯಶಸ್ಸು ಗಳಿಸಿ ನೂರಾರು ಯುವಕರಿಗೆ ಮಾದರಿಯಾಗಿದ್ದಾರೆ.
ಓದುತ್ತಿರುವಾಗಲೇ ಆತ ತನ್ನ ತಾಯಿ ಲೀನಾ ಥಾಮಸ್ ಜೊತೆಗೂಡಿ ಅಣಬೆ ಕೃಷಿ ಆರಂಭಿಸಿದ್ದ ಜೀತು, ಪದವಿ ಪಡೆದ ಬಳಿಕ ಎನ್​ಜಿಒ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಅಣಬೆ ಕೃಷಿಯಲ್ಲಿನ ಸಾಮರ್ಥ್ಯ ಮತ್ತು ಮಾರುಕಟ್ಟೆಯಲ್ಲಿ ಅದಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಗುರುತಿಸಿ ಪೂರ್ಣ ಸಮಯದ ಕೃಷಿಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಮಗ ಜೀತು ಯಾವಾಗಲೂ ಅಣಬೆ ಕೃಷಿಯ ಬಗ್ಗೆ ಕುತೂಹಲ ತೋರುತ್ತಿದ್ದದ್ದರಿಂದ ಅವನ ತಾಯಿ ಪ್ರೋತ್ಸಾಹಿಸಿದ್ದಾರೆ. ಅಣಬೆ ಬೇಸಾಯವನ್ನು ಸಂಶೋಧನೆ ಮಾಡುತ್ತಲೇ ಅದನ್ನೇ ಸೈಡ್ ಬಿಸಿನೆಸ್ ಮಾಡಿಕೊಂಡು ಇದೀಗ ಯಶಸ್ಸು ಸಾಧಿಸಿದ್ದಾರೆ. ಹಲವು ವರ್ಷಗಳಿಂದ ಯಶಸ್ವಿಯಾಗಿ ಅಣಬೆ ಫಾರ್ಮ್ ನಡೆಸುತ್ತಿರುವ ಅವರು ತಮ್ಮ ಬಳಿ ಬರುವ ರೈತರಿಗೆ, ಯುವಕರಿಗೆ ತರಬೇತಿಯನ್ನು ಸಹ ನೀಡುತ್ತಿದ್ದಾರೆ.

ದಿನಕ್ಕೇ 40 ಸಾವಿರ ಆದಾಯ

ಆರಂಭದಲ್ಲಿ ದಿನಕ್ಕೆ ಒಂದು ಅಣಬೆ ಪ್ಯಾಕೆಟ್ ಮಾರಾಟ ಮಾಡುತ್ತಿದ್ದ ತಾಯಿ ಮಗ ಇದೀಗ ನಾಲ್ಕು ವರ್ಷಗಳೊಳಗೆ ದಿನಕ್ಕೆ 40,000 ರೂಪಾಯಿ ಸಂಪಾದನೆ ಮಾಡುವ ಮಟ್ಟಕ್ಕೆ ತಮ್ಮ ಉದ್ಯಮವನ್ನು ವಿಸ್ತರಿಸಿಕೊಂಡಿದ್ದಾರೆ.
ಪಿರವಂನಲ್ಲಿರುವ ತಮ್ಮ ಮನೆಯ ಸಮೀಪದಲ್ಲೇ 5,000 ಚದರ ಅಡಿ ಸ್ಥಳದಲ್ಲಿ ಅಣಬೆ ಫಾರ್ಮ್ ಅನ್ನು ನಡೆಸುತ್ತಿದ್ದಾರೆ. ಅವರು ಪ್ರತಿದಿನ ಸುಮಾರು 80-100 ಕೆಜಿ ಅಣಬೆಯನ್ನು ಉತ್ಪಾದಿಸುತ್ತಾರೆ ಮತ್ತು ದಿನಕ್ಕೆ 35,000 ರಿಂದ 40,000 ರೂ ಸಂಪಾದಿಸುತ್ತಿದ್ದಾರೆ.
ಅಣಬೆಯನ್ನು ಬೆಳೆಯುವುದಕ್ಕೆ ತಾಪಮಾನವು 30 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗದ ನಿಯಂತ್ರಿತ ವಾತಾವರಣದ ಅಗತ್ಯವಿದೆ. ಅದಕ್ಕಾಗಿ 5,000 ಬೆಡ್​ಗಳ ಜಾಗದಲ್ಲಿ 20,000 ಬೆಡ್​ಗಳನ್ನು ಅಳವಡಿಸಲು ಅವರು ಆಯಕಟ್ಟಿನ ಕೊಠಡಿಯನ್ನು ವಿನ್ಯಾಸಗೊಳಿಸಿದ್ದಾರೆ.

ಪ್ರತಿ ಪ್ಯಾಕೆಟ್ ಬೆಲೆ 80ರೂ

ಪ್ರಸ್ತುತ ಎರ್ನಾಕುಲಂನಲ್ಲಿರುವ ಲೀನಾ ಮಶ್ರೂಮ್ ಫಾರ್ಮ್ ದಿನಕ್ಕೆ 200ಕೆಜಿ ಅಣಬೆ ಉತ್ಪಾದಿಸುತ್ತದೆ. ಅಲ್ಲದೆ, ಎರ್ನಾಕುಲಂ ಜಿಲ್ಲೆ ಹಾಗೂ ಅದರ ಸುತ್ತಮುತ್ತ 100ಕ್ಕೂ ಅಧಿಕ ರಿಟೇಲ್ ಅಂಗಡಿಗಳಿಗೆ ಅಣಬೆ ಪೂರೈಕೆ ಮಾಡುತ್ತಿದೆ. ಲೀನಾ ಮಶ್ರೂಮ್ ಫಾರ್ಮ್ 11 ಮಹಿಳೆಯರಿಗೂ ಉದ್ಯೋಗ ನೀಡಿದೆ.
ಇವರು 200ಗ್ರಾಂ ಅಣಬೆ ಪ್ಯಾಕೆಟ್ ಗಳನ್ನು ಸಿದ್ಧಪಡಿಸಿ ಸ್ಥಳೀಯ ಸೂಪರ್ ಮಾರ್ಕೆಟ್ ಗಳು, ಬೇಕರಿಗಳು ಹಾಗೂ ಇತರ ಶಾಪ್ ಗಳಿಗೆ ಪೂರೈಕೆ ಮಾಡುತ್ತಾರೆ. ಪ್ರತಿ ಪ್ಯಾಕೆಟ್ ಬೆಲೆ 80ರೂ. ಈ ಪ್ಯಾಕೆಟ್ ನಲ್ಲಿರುವ ಅಣಬೆಗಳನ್ನು ಫ್ರಿಜ್ ನಲ್ಲಿಟ್ಟರೆ ಐದು ದಿನಗಳ ಕಾಲ ಹಾಗೂ ಹೊರಗಡೆಯಾದ್ರೆ ಎರಡು ದಿನಗಳೊಳಗೆ ಬಳಸಬೇಕು.

Leave a Reply

Your email address will not be published. Required fields are marked *