ಕರ್ನಾಟಕ ರಾಜ್ಯ ಸರ್ಕಾರದಿಂದ ರೈತರಿಗೆ ಸಹಾಯವಾಗಲೆಂದು 10 ಹಲವಾರು ಯೋಜನೆಗಳು ಈಗಾಗಲೇ ಲಭ್ಯವಿದ್ದು ಯಾವ ಯಾವ ಯೋಜನೆಗಳು ಲಭ್ಯವಿವೆ ಇಲ್ಲಿದೆ ನೋಡಿ ಮಾಹಿತಿ…
1) ಕೃಷಿ ಸಂಜೀವಿನಿ
2) ಐದು ಲಕ್ಷ ರೂಪಾಯಿ ವರೆಗೂ ಬಡ್ಡಿ ರೈತ ಸಾಲ
3) ಸರ್ಕಾರದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ವತಿಯಿಂದ ರೈತರ ಖಾತೆಗೆ 10 ಸಾವಿರ ರೂಪಾಯಿ ಜಮಾ
4) ಬೆಳೆ ಪರಿಹಾರ ಅರ್ಜಿ ಸಲ್ಲಿಕೆ
5) ವಿದ್ಯಾರ್ಥಿಗಳಿಗೆ ರೈತನಿಧಿ ಸ್ಕಾಲರ್ಶಿಪ್
6) ಕೃಷಿ ಸಿಂಚಾಯಿ
7) ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳ ವಿತರಣೆ
ಈ ಮೇಲ್ಕಂಡ ಎಲ್ಲ ಯೋಜನೆಗಳು ಈಗಾಗಲೇ ಲಭ್ಯವಿದ್ದು ಇವುಗಳನ್ನು ಹೇಗೆ ಪಡೆದುಕೊಳ್ಳಬೇಕು ಏನಿದರ ಉದ್ದೇಶ ಎಲ್ಲಾ ಮಾಹಿತಿ ಕೆಳಗೆ ಸಂಪೂರ್ಣ ಮಾಹಿತಿ ಇದೆ ಓದೋಣ ಬನ್ನಿ …
ಕೃಷಿ ಸಂಜೀವಿನಿ..!
ಪ್ರೀತಿಯ ರೈತ ಬಾಂಧವರೇ..
ಇಲ್ಲಿಯವರೆಗೂ ರೈತರು ತಮ್ಮ ಹೊಲದಲ್ಲಿರುವ ಮಣ್ಣಿನ ಗುಣಮಟ್ಟದ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಆದರೆ ಮಣ್ಣಿನ ಗುಣಮಟ್ಟದ ಪರೀಕ್ಷೆಯನ್ನು ರೈತರು ಮಾಡಿಸುವುದಿಲ್ಲವೆಂದು ಅರಿತುಕೊಂಡ ರಾಜ್ಯ ಸರ್ಕಾರವು ರೈತರಿಗೆ ಸಹಾಯವಾಗಲೆಂದು ಈ ಕೃಷಿ ಸಂಜೀವಿನಿ ಯೋಜನಾ ಅಡಿಯಲ್ಲಿ ರೈತರ ಇದ್ದ ಸ್ಥಳದಲ್ಲಿ ವಾಹನಗಳನ್ನು ಕಳುಹಿಸಿ ಅವರ ಹೊಲದಲ್ಲಿರುವ ಮಣ್ಣಿನ ಗುಣಮಟ್ಟತೆ ಹಾಗೂ ಅವರು ಕೃಷಿಗೆ ಉಪಯೋಗಿಸುತ್ತಿರುವ ಅಂತಹ ನೀರಿನ ಗುಣಮಟ್ಟತೆಯನ್ನು ಉಚಿತವಾಗಿ ಪರೀಕ್ಷಿಸಿ ಅದರ ಫಲಿತಾಂಶವನ್ನು ಕಡಿಮೆ ಸಮಯದಲ್ಲಿ ನೀಡಬೇಕೆಂದು ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.
ಕೃಷಿ ಸಂಜೀವಿನಿ 2022 ವರ್ಷದ ಮೇ ತಿಂಗಳಿನಲ್ಲಿ ಜಾರಿಗೆಗೋಳಿಸಿದ್ದು ಇದನ್ನು ಮುಂದಿನ ವರ್ಷದಲ್ಲಿ ಕಾರ್ಯರೂಪಕ್ಕೆ ತರಬೇಕೆಂದು ನಿರ್ಧಾರ ಮಾಡಲಾಗಿದೆ. ಈಗಾಗಲೇ ಕಡಿಮೆ ಸಂಖ್ಯೆಯಲ್ಲಿ ಈ ಕೃಷಿ ಸಂಜೀವಿನಿ ವಾಹನಗಳಿದ್ದು ಮುಂದಿನ ವರ್ಷವೂ ಇನ್ನೂ ಅತಿ ಹೆಚ್ಚು ವಾಹನಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರವು ಆಶ್ವಾಸನೆ ನೀಡಿದೆ.
ಈ ಯೋಜನೆಯ ಮುಖ್ಯ ಉದ್ದೇಶ..?
ಬಹಳಷ್ಟು ರೈತರು ಯಾವುದೇ ತರಹದ ತಮ್ಮ ಹೊಲದಲ್ಲಿರುವ ಮಣ್ಣಿನ ಪರೀಕ್ಷೆ ಮಾಡಿಸುವುದಿಲ್ಲವೆಂದು ಸರ್ಕಾರಕ್ಕೆ ಮಾಹಿತಿ ನೀಡಿದೆ.
ಅದಕ್ಕಾಗಿ ರೈತರಿಗೆ ಕೃಷಿಯಲ್ಲಿ ಸಹಾಯವಾಗಲೆಂದು ಹಾಗೂ ಅವರ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುವಂತಹ ಬೆಳೆ ಯಾವುದೆಂದು ಅವರಿಗೆ ಸಂಪೂರ್ಣ ಮಾಹಿತಿ ನೀಡುವುದಾಗಿ ಈ ಕೃಷಿ ಸಂಜೀವಿನಿ ಎಂಬ ಒಂದು ಯೋಜನೆಯನ್ನು ಜಾರಿಗೆ ಗೊಳಿಸಿತು.
ಬಹಳಷ್ಟು ರೈತರು ತಮ್ಮ ಹೊಲದಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ ಎಂಬುದನ್ನು ತಿಳಿಯದೆ ಯಾವುದಾದರೂ ಒಂದು ಬೆಳೆಯನ್ನು ಆಯ್ಕೆ ಮಾಡಿಕೊಂಡು ಬೆಳೆಯುತ್ತಾರೆ.
ಇದಕ್ಕಾಗಿ ಅತಿ ಹೆಚ್ಚು ಲಾಭವನ್ನು ನಮ್ಮ ಹೆಸರು ಪಡೆಯುತ್ತಿಲ್ಲ ಎಂದು ಒಂದು ವರದಿಯ ಪ್ರಕಾರ ತಿಳಿದು ಬಂದಿದೆ. ಹಾಗೆಯೇ ಅತಿ ಹೆಚ್ಚು ರಾಸಾಯನಿಕ ಗೊಬ್ಬರವನ್ನು ಬಳಸುತ್ತಿದ್ದಾರೆ ಎಂದು ಸಹ ಮಣ್ಣಿನ ಗುಣಮಟ್ಟತೆ ಕಳೆದುಕೊಳ್ಳುತ್ತಿದೆ ಎಂದು ಸಹ ಈ ವರದಿಯಿಂದ ವಿವರವಾಗಿ ತಿಳಿದು ಬಂದಿದೆ.
ಅದಕ್ಕಾಗಿ ಈ ಎಲ್ಲಾ ವಿಷಯಗಳನ್ನು ಪರಿಗಣಿಸಿ ಹೀಗೆ ತಪ್ಪು ಮುಂದುವರಿಯಬಾರದೆಂದು ರೈತರಿಗೆ ವೈಜ್ಞಾನಿಕತೆಯಿಂದ ಜ್ಞಾನವನ್ನು ನೀಡಲು ಬಯಸಿದ ರಾಜ್ಯ ಸರ್ಕಾರವು ಈ ಕೃಷಿ ಸಂಜೀವಿನಿ ಎಂಬ ಯೋಜನಾ ಅಡಿಯಲ್ಲಿ 100 ವಾಹನಗಳನ್ನು ಘೋಷಿಸಿ ಈ ವಾಹನಗಳು ರೈತರು ಇರುವಲ್ಲಿ ಹೋಗಿ ಅವರ ಮಣ್ಣಿನ ಗುಣಮಟ್ಟತೆ ಹಾಗೂ ನೀರಿನ ಗುಣಮಟ್ಟಕೆಯನ್ನು ಪರೀಕ್ಷಿಸಿ ಅದರ ಫಲಿತಾಂಶವನ್ನು ಕಡಿಮೆ ಸಮಯದಲ್ಲಿ ನೀಡುತ್ತಾರೆ. ಇದಲ್ಲದೆ ಅವರ ಮಣ್ಣಿನ ಪರೀಕ್ಷೆಯನ್ನು ಮಾಡಿದ ನಂತರ ಮಣ್ಣಿನಲ್ಲಿರುವ ನಿಜಾಂಶಗಳು ಮತ್ತು ಅರಿತುಕೊಂಡು ಯಾವ ಬೆಳೆ ಬೆಳೆದರೆ ಸೂಕ್ತವೆಂದು ರೈತರಿಗೆ ವಿವರವಾಗಿ ಮಾಹಿತಿಯನ್ನು ನೀಡುತ್ತಾರೆ.
ಹಾಗೆ ನಿಮ್ಮ ನೆಲಕ್ಕೆ ಎಷ್ಟು ಗೊಬ್ಬರವನ್ನು ಬಳಸಬೇಕು ಹಾಗೆ ಯಾವ ತರಹದ ಗೊಬ್ಬರ ಉಪಯುಕ್ತ ಎಂಬುದನ್ನು ಸಹ ಅತಿ ವಿವರವಾಗಿ ರೈತರಿಗೆ ತಿಳಿಸಿಕೊಡುವುದು ಈ ಯೋಜನೆಯ ಒಂದು ಮಹತ್ವದ ಉದ್ದೇಶವಾಗಿದೆ.
ಈಗಾಗಲೇ 2023 ನೇ ಸಾಲಿನ ಬಜೆಟ್ ನಲ್ಲಿ ರೈತರಿಗೆ ಸಹಾಯವಾಗಲೆಂದು ಬಡ್ಡಿ ರಹಿತ ಸಾಲವನ್ನು ಮೂರು ಲಕ್ಷದಿಂದ 5 ಲಕ್ಷದವರೆಗೆ ಏರಿಕೆ ಮಾಡಲಾಗಿತ್ತು..
ಆದರೆ ಹಲವು ರೈತರಿಗೆ ಇದನ್ನು ಹೇಗೆ ಪಡೆದುಕೊಳ್ಳಬೇಕು ಇದನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ಹತ್ತಿರ ಇರಬೇಕಾದ ದಾಖಲಾತಿಗಳು ಯಾವವು ಹಾಗೆ ಇದು ಪಡೆದುಕೊಂಡ ನಂತರ ನಾವು ಪಾಲಿಸಬೇಕಾದ ಕ್ರಮಗಳು ಯಾವುವು ಎಲ್ಲ ಸಂಪೂರ್ಣ ಬಗ್ಗೆ ಮಾಹಿತಿ ಹಲವು ರೈತರಿಗೆ ಗೊತ್ತಿರದ ಕಾರಣ ಈ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡೋಣ ಬನ್ನಿ..
ಹಲವಾರು ರೈತರು ಈ ಮೇಲ್ಕಂಡಂತೆ ಹೆಚ್ಚಿನ ಪ್ರಶ್ನೆಗಳನ್ನು ನನಗೆ ಕೇಳಿದ್ದು ನಿಮ್ಮ ಪ್ರಶ್ನೆಗೆ ಇಲ್ಲಿ ಸಂಪೂರ್ಣ ಉತ್ತರ ಇದೆ ಎಂದು ನಾನು ಭಾವಿಸುತ್ತೇನೆ..
1) 5 ಲಕ್ಷ ಬಡ್ಡಿ ರಹಿತ ಸಾಲವನ್ನು ಪಡೆಯಬೇಕೆಂದರೆ ಏನು ಮಾಡಬೇಕು..?
ನೀವು ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಮೊದಲು ನಿಮ್ಮ ಹತ್ತಿರ ಪರಿಪೂರ್ಣವಾದಂತಹ ದಾಖಲಾತಿಗಳು ಇರಬೇಕಾಗುತ್ತದೆ..
ಆ ದಾಖಲಾತಿಗಳು ಪರಿಪೂರ್ಣವಾಗಿದ್ದರೆ ಬ್ಯಾಂಕಿನವರು ನಿಮಗೆ ಯಾವುದೇ ತರಹದ ತೊಂದರೆ ಇಲ್ಲದೆ ಸಾಲವನ್ನು ನೀಡುತ್ತಾರೆ..
ದಾಖಲಾತಿಗಳು ಯಾವವು..?
1) ಮೊದಲನೆಯದಾಗಿ ನೀವು ನಿಮ್ಮ ಹೊಲದ ಕರೆಂಟ್ ವ್ಯಾಲ್ಯೂಯೇಷನ್ ಅಂದರೆ EC ಎಂಬ ಒಂದು ದಾಖಲಾತಿಯನ್ನು ನಿಮ್ಮ ಜಿಲ್ಲೆಯಗಳಿಂದ ಪಡೆದುಕೊಳ್ಳಬೇಕಾಗಿರುತ್ತದೆ..
2) ರೈತನ ಆಧಾರ್ ಕಾರ್ಡ್
3) ಹೊಲದ ಪಹಣಿ ಪತ್ರ
4) ಡಿಸಿಸಿ ಬ್ಯಾಂಕ್ ನಲ್ಲಿ ರೈತನ ಹೆಸರಿನಲ್ಲಿ ಒಂದು ಖಾತೆ
5) ಕಡ್ಡಾಯವಾಗಿ ಇಬ್ಬರು ಜಾಮೀನ್ದಾರರು ಬೇಕು
ಈ ಮೇಲ್ಕಂಡ ದಾಖಲಾತಿಗಳು ಹಾಗೆಯೇ ಇಬ್ಬರು ಜಾಮೀನ್ದಾರರು ನಿಮ್ಮ ಹತ್ತಿರ ಇದ್ದರೆ ನಿಮಗೆ ಯಾವುದೇ ತೊಂದರೆ ಇಲ್ಲದೆ 5 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ ದೊರೆಯುತ್ತದೆ..
ಈ ಮೇಲಿನ ದಾಖಲಾತಿಗಳನ್ನು ನೀವು ಮೊದಲು ಹೊಂದಿಸಿಕೊಂಡು ನಂತರ ಬ್ಯಾಂಕಿಗೆ ಹೋಗಿ ಸಂಪೂರ್ಣವಾದಂತಹ ದಾಖಲಾತಿಗಳನ್ನು ನೀಡಿದರೆ ಅವರು ಮೊದಲು ಅವುಗಳನ್ನು ಪರಿಶೀಲನೆ ಮಾಡುತ್ತಾರೆ..
ಇದಾದ ನಂತರ ನೀವು ನೀಡಿರುವಂತಹ ದಾಖಲಾತಿಗಳು ಪರಿಪೂರ್ಣವಾಗಿದ್ದರೆ ಯಾವುದೇ ತೊಂದರೆ ಇಲ್ಲದೆ ನಿಮಗೆ ಸಾಲವನ್ನು ನೀಡುತ್ತಾರೆ..
ಬಡ್ಡಿ ರಹಿತ ಸಾಲವನ್ನು ಪಡೆಯಬೇಕೆಂದರೆ ಯಾವ ಬ್ಯಾಂಕ್ ಉತ್ತಮವಾಗಿದೆ..?
ಅದುವೇ ಡಿಸಿಸಿ ಬ್ಯಾಂಕ್…
ಹೌದು ಸ್ನೇಹಿತರೆ ಡಿಸಿಸಿ ಬ್ಯಾಂಕ್ ಒಂದು ರೈತರಿಗೆ ಸಹಾಯವಾಗಲೆಂದು ಇದನ್ನು ಕೃಷಿಕರ ಬ್ಯಾಂಕ್ ಎಂದು ಸಹ ಕರೆಯಲಾಗುತ್ತದೆ…
ಬ್ಯಾಂಕಿನಲ್ಲಿ ನಿಮಗೆ ಬಡ್ಡಿ ರಹಿತ ಸಾಲವನ್ನು ನೀಡುತ್ತಾರೆ…
ಬಡ್ಡಿ ರಹಿತ ಸಾಲವನ್ನು ಪಡೆದುಕೊಂಡ ನಂತರ ಪಾಲಿಸಬೇಕಾದ ಕ್ರಮಗಳು ಯಾವುವು..?
ಯಾವುದೇ ತರಹದ ಬಡ್ಡಿ ರಹಿತ ಸಾಲವನ್ನು ಪಡೆಯಬೇಕಾದರೆ ಅದಕ್ಕೆ ಹತ್ತು ಹಲವಾರು ಕಠಿಣ ಕ್ರಮಗಳಿವೆ..
ಈ ಕ್ರಮಗಳಿಗೆ ನೀವು ಬದ್ಧವಾಗಿದ್ದರೆ ಮಾತ್ರ ಬ್ಯಾಂಕಿನವರು ನಿಮಗೆ ಹಣವನ್ನು ನೀಡುತ್ತಾರೆ..
ಮೊದಲನೇದಾಗಿ ಬಡ್ಡಿ ರೈತ ಸಾಲ ತೆಗೆದುಕೊಂಡ ಮೇಲೆ ಒಂದು ವರ್ಷದ ಒಳಗೆ ಪೂರ್ತಿ ಹಣವನ್ನು ಮರುಪಾವತಿಸಿ ಮತ್ತೊಮ್ಮೆ ಹಣವನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ…
ಆಕಸ್ಮಿಕವಾಗಿ ನೀವೇನಾದರೂ ಪೂರ್ತಿ ಹಣವನ್ನು ಮಂಗಳವಾಗಿ ತುಂಬಿ ತೆಗೆದುಕೊಳ್ಳದಿದ್ದರೆ ಒಂದು ವರ್ಷದ ಪೂರ್ತಿ ಬಡ್ಡಿ ಹಣವನ್ನು ನಿಮ್ಮ ಮೇಲೆ ಅವರು ಹಾಕುತ್ತಾರೆ..
ಹೌದು ಸ್ನೇಹಿತರೆ, ಇದೊಂದು ಸವಾಲ ಆಗಿದ್ದು ಈ ಸವಾಲಿಗೆ ನೀವು ಬದ್ಧವಾಗಿದ್ದರೆ ಮಾತ್ರ ಬಡ್ಡಿ ರಹಿತ ಸಾಲವನ್ನು ತೆಗೆದುಕೊಳ್ಳಿ ಅಥವಾ ನಿಮಗೆ ಎಷ್ಟು ಹಣ ಪಾವತಿ ಮಾಡಿ ತೆಗೆದುಕೊಳ್ಳಲು ಸಹಾಯವಾಗುತ್ತದೆ ಅಷ್ಟನ್ನು ಮಾತ್ರ ಬಡ್ಡಿ ರೈತ ಹಣವನ್ನು ಪಡೆದುಕೊಳ್ಳುವುದು ಒಂದು ಉತ್ತಮ ಕರವಾದ ಕೆಲಸವಾಗಿದೆ..
ಬಡ್ಡಿ ರಹಿತ ಸಾಲದ ಪ್ರಾಮುಖ್ಯತೆ…
ಖುಷಿ ರೈತರ ಸಂಕಷ್ಟವನ್ನು ಅರಿತ ರಾಜ್ಯ ಸರ್ಕಾರವು ಕೃಷಿಕರಿಗೆ ಉತ್ತೇಜನವನ್ನು ನೀಡಲು 2023ರ ಬಜೆಟ್ ನಲ್ಲಿ 3, ಲಕ್ಷ ಬಡ್ಡಿ ರಹಿತ ಹಣವನ್ನು ಐದು ಲಕ್ಷದವರೆಗೆ ಏರಿಕೆ ಮಾಡಿದ್ದಾರೆ..
ಅದಕ್ಕಾಗಿ ಹಲವು ರೈತರು ಈ ಉಪಯೋಗವನ್ನು ಪಡೆದುಕೊಂಡು ತಮ್ಮ ಕೃಷಿ ಕೆಲಸಗಳಲ್ಲಿ ಈ ಹಣವನ್ನು ತೊಡಗಿಸಿಕೊಂಡು ಉತ್ತಮ ಸಾಧನೆಯನ್ನು ಕೈಯ ಬೇಕೆಂಬುದು ಕರ್ನಾಟಕ ರಾಜ್ಯ ಸರ್ಕಾರದ ಒಂದು ಉತ್ತಮವಾದಂತಹ ನಿಲುವು ಆಗಿದೆ..
ಅದಕ್ಕಾಗಿ ಪ್ರೀತಿಯ ರೈತ ಬಾಂಧವರೇ ಈ ಹಣವನ್ನು ದುರುಪಯೋಗಪಡಿಸಿಕೊಳ್ಳದೆ ಕೃಷಿ ಕೆಲಸಕ್ಕೆ ಹಾಗೆ ನಿಮ್ಮ ಸ್ವಂತ ಹೊಲದ ಉದ್ದಾರದ ಕೆಲಸಕ್ಕೆ ಬಳಸಿಕೊಂಡರೆ ಈ ಬಡ್ಡಿ ರಹಿತ ಸಾಲ ನೀಡುವ ಯೋಜನೆಯು ಒಂದು ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತದೆ..