ಪಿ ಎಂ ಕಿಸಾನ್ ಸಮ್ಮನ್ ನಿಧಿ ನೀಡುವಲ್ಲಿ 10 ಹಲವಾರು ಹೊಸ ಬದಲಾವಣೆಗಳನ್ನು ತರಲಾಗಿದೆ.
ಮೊದಲಿಗೆ 6,000 ಹಣವನ್ನು ನೀಡುತ್ತಿದ್ದು ಅದನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತಿತ್ತು ಆದರೆ ಇನ್ನು ಮುಂದೆ ರೂ.8000ಗಳನ್ನು ರೈತನಿಗೆ ನೀಡುತ್ತಿದ್ದು ಇನ್ನು ಮುಂದೆ ನಾಲ್ಕು ಕಂತುಗಳನ್ನು ಉಪಯೋಗಿಸಿಕೊಂಡು ಒಂದು ಕಂಠಿಗೆ ತಲಾ ಎರಡು ಸಾವಿರ ರೂಪಾಯಿಯಂತೆ ಒಟ್ಟು ನಾಲ್ಕು ಕಂತುಗಳ ಸೇರಿ 8,000ಗಳನ್ನು ಒಬ್ಬ ರೈತನಿಗೆ ನೀಡಲಾಗುತ್ತದೆ.
ಈ ಪಿಎಂ ಕಿಸಾನ್ ಹಣವನ್ನು ಪಡೆದುಕೊಳ್ಳಬೇಕೆಂದರೆ ನೀವು ಹೊಸ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಆ ನಿಯಮಗಳು. ಹೀಗಿವೆ ನೋಡೋಣ ಬನ್ನಿ.
1) ರೈತರು ಕಡ್ಡಾಯವಾಗಿ ಈ ಕೆವೈಸಿಯನ್ನು ಮಾಡಿಸಲೇಬೇಕು.
2) ಫಲದ ಪಹಣಿಯಲ್ಲಿ ನಿಮ್ಮ ಹೆಸರಿನ ಜೊತೆ ಜಂಟಿಯಾಗಿರುವ ರೈತನಿಗೂ ಹಣವನ್ನು ನೀಡಲಾಗುವುದಿಲ್ಲ ಕೇವಲ ಒಬ್ಬ ರೈತನಿಗೆ ಮಾತ್ರ ನೀಡಲಾಗುತ್ತದೆ.
3) ನಿಮ್ಮ ಹೊಲದ ಸಮಗ್ರ ಮಾಹಿತಿಯನ್ನು ಹಾಗೂ ನಿಮ್ಮ ಅಂದರೆ ರೈತನ ದಾಖಲಾತಿಗಳನ್ನು ನೀಡಬೇಕಾಗುತ್ತದೆ.
4) ಇದು ಡಿಜಿಟಲ್ ಯುಗ ಆಗಿದ್ದರಿಂದ ನಿಮ್ಮ ಬ್ಯಾಂಕಿನ ಖಾತೆಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಇರಲೇಬೇಕಾಗುತ್ತದೆ.
5) ಮುಂದಿನ ದಿನಗಳಲ್ಲಿOTP ಆಧಾರದ ಮೇಲೆ ಹಲವು ಕೆಲಸಗಳು ನಡೆಯುತ್ತಿರುವುದರಿಂದ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಇರಲೇಬೇಕಾಗುತ್ತದೆ.
ಹೊಸ ಅರ್ಜಿದಾರರಿಗೆ ತಂದ ಬದಲಾವಣೆಗಳು ಯಾವವು..?
ಮೊದಲು ಅರ್ಜಿಯನ್ನು ಸಲ್ಲಿಸಬೇಕೆಂದರೆ 2000 2019ರ ಪೂರ್ವದಲ್ಲಿ ಯಾರು ರೈತರು ಹೊಲವನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡಿರುತ್ತಾರೆ ಅವರಿಗೆ ಮಾತ್ರ ನೀಡಲಾಗುತ್ತಿತ್ತು.
ಆದರೆ ಈಗ ಹೊಸ ನಿಯಮ ಜಾರಿ ಆಗಿದ್ದರಿಂದ ನಿಮ್ಮ ಹೆಸರಿಗೆ ಹೊಲ ನೊಂದಾಯಿಸಿಕೊಂಡಿದ್ದರೆ ಕೂಡಲೇ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹಳೆಯ ನಿಯಮದಿಂದ ಹಲವಾರು ರೈತರು ಈ ಯೋಜನೆಯಿಂದ ದೂರವಿರುವುದರಿಂದ ಕೇಂದ್ರ ಸರ್ಕಾರವು ಎಲ್ಲರಿಗೂ ಸಹಾಯವಾಗಲೆಂದು ಈ ಹೊಸ ನಿಯಮವನ್ನು ಅಳವಡಿಸಿಕೊಂಡಿದ್ದಾರೆ…
4 ಕಂತು ಹಣ ಪಡೆಯಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕೇ..?
ಇದಕ್ಕಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಈಗಾಗಲೇ 13ನೇ ಕಂತಿನವರೆಗೂ ಯಾರಿಗೆ ಹಣ ಬಂದಿದೆಯೋ ಅವರಿಗೆ ಯಾವುದೇ ತೊಂದರೆ ಇಲ್ಲದೆ ಈ ವರ್ಷದಿಂದ ನಾಲ್ಕು ಕಂತಿನ ಹಣ ಬಂದೇ ಬರುತ್ತದೆ.
ಹಲವಾರು ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದು ನಿಜವಲ್ಲ ಯಾವುದೇ ತರನಾದಂತ ಪ್ರತ್ಯೇಕ ಅರ್ಜಿ ಸಲ್ಲಿಸಲು ಅವಶ್ಯಕತೆ ಇರುವುದಿಲ್ಲ ನಿಮಗೆ ಈಗಾಗಲೇ ಪಿಎಂ ಕಿಸಾನ್ ಸನ್ಮಾನ ನಿಧಿಯ 13ನೇ ಕಂತಿನವರೆಗೂ ಹಣ ಬಂದಿದೆಯೋ ಅವರಿಗೆ ಯಾವುದೇ ತೊಂದರೆ ಇಲ್ಲದೆ ನಾಲ್ಕು ಕಂತಿನ ಹಣ ಬಂದು ತಲುಪುತ್ತದೆ.
ಉಪಯುಕ್ತವಾದ ಹೆಚ್ಚಿನ ಮಾಹಿತಿ ಕೆಳಗಿದೆ
ಫಸಲ್ ಭೀಮಾ ಯೋಜನೆಯ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ
ಈಗಾಗಲೇ ಸ್ವಲ್ಪ ರೈತರಿಗೆ ಬೆಳೆ ಪರಿಹಾರ ಜಮಾ ಆಗಿದ್ದು ನಿಮಗೂ ಸಹ ಜಮಾ ಆಗಿದೆಯ?
ಬೆಳೆ ಪರಿಹಾರವು 2 ಹಂತದಲ್ಲಿ ಜಮಾ ಆಗುತ್ತದೆ.
ಈಗಾಗಲೇ ರಾಜ್ಯ ಸರ್ಕಾರದಿಂದ ಕೆಲವು ಜಿಲ್ಲೆಗಳಲ್ಲಿ ರೈತರಿಗೆ ಬೆಳೆ ಪರಿಹಾರ ಜಮಾ ಆಗಿದೆ…
ನಿಮಗೆ ಬೆಳೆ ಪರಿಹಾರ ಜಮಾ ಆಗಿದೆ ಅಥವಾ ಇಲ್ಲವೋ ಈಗಲೇ ನೋಡಿ..
https://landrecords.karnataka.gov.in/PariharaPayment/
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಈ ವರ್ಷದ ಬೆಳೆ ಪರಿಹಾರ ಜಮಾ ಆಗಿದೆ ಅಥವಾ ಇಲ್ಲವೋ ಎಂಬುದು ನಿಮಗೆ ಅತಿ ಸುಲಭವಾಗಿ ತಿಳಿಯುತ್ತದೆ..
ನಿಮಗೆ ಇಲ್ಲಿಯವರೆಗೂ ಎಷ್ಟು ವರ್ಷದ ಬೆಳೆ ಪರಿಹಾರ ಜಮಾ ಆಗಿದೆ ಯಾವ ವರ್ಷದ ಬೆಳೆ ಪರಿಹಾರ ಜಮಾ ಆಗಿಲ್ಲ ಎಂಬುದು ನೋಡುವುದು ಹೇಗೆ…?
https://www.samrakshane.karnataka.gov.in/CropHome.aspx
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಅಲ್ಲಿ ಯಾವ ವರ್ಷದ ಬೆಳೆ ಪರಿಹಾರದ ಸ್ಟೇಟಸ್ ನೋಡುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್ ಅಲ್ಲಿ ಹಾಕಿ ನಿಮ್ಮ ಸ್ಟೇಟಸ್ ಅನ್ನು ನೀವು ನೋಡಿಕೊಳ್ಳಬಹುದು.
ಕೂಡಲೇ ನಿಮ್ಮ ಅನುಮಾನಗಳನ್ನು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲ ಮಾಹಿತಿಯನ್ನು ಪಡೆದುಕೊಂಡು ಬಗೆಹರಿಸಿಕೊಳ್ಳಿ..
ಬೆಳೆ ಪರಿಹಾರ ಜಮಾ ಆಗದೇ ಇರಲು ಕಾರಣವೇನು..?
ಬೆಳೆ ಪರಿಹಾರ ಜಮಾ ಆಗಬೇಕೆಂದರೆ 10 ಹಲವಾರು ಕ್ರಮಗಳನ್ನು ನೀವು ಪಾಲಿಸಬೇಕಾಗುತ್ತದೆ ಅದಕ್ಕಾಗಿ ನೀವು ಇದರಲ್ಲಿ ಯಾವುದೇ ಒಂದು ಕ್ರಮವನ್ನು ಪಾಲಿಸದೆ ಆದಲ್ಲಿ ನಿಮಗೆ ಬೆಳೆ ಪರಿಹಾರ ಜಮಾ ಆಗುವುದಿಲ್ಲ..
ಈಗಾಗಲೇ ಹಲವಾರು ರೈತರು ಇದೇ ಪ್ರಶ್ನೆಯನ್ನು ನನಗೆ ಕೇಳಿದ್ದು ನಾನು ಅವರ ಸ್ಟೇಟಸ್ ಅನ್ನು ಪರಿಶೀಲಿಸಿದಾಗ ಅವರು ತಮ್ಮ ಬೆಳೆಯ ಜಿಪಿಆರ್ಎಸ್ ಮಾಡದೆ ಇರುವ ಕಾರಣ ಅವರಿಗೆ ಯಾವುದೇ ತರನಾದಂತಹ ಬೆಳೆ ಪರಿಹಾರ ಜಮಾ ಆಗಿಲ್ಲ..