ರೈತರಿಗೆ ಈ ಯೋಜನೆ ಅಡಿಯಲ್ಲಿ ಅತಿ ಹೆಚ್ಚಿನ ಹಣ ರೈತರ ಖಾತೆಗೆ ಜಮಾ ಆಗುತ್ತಿದ್ದು ಈ ಯೋಜನಾ ಅಡಿಯಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ರೈತರಿಗೆ ಈ ಬಾರಿ ಭರ್ಜರಿ ಗುಡ್ ನ್ಯೂಸ್ ಆಗಿದೆ
ಫಸಲ್ ಭೀಮಾ ಯೋಜನೆಯ ಬೆಳೆ ಪರಿಹಾರ ಇನ್ನೂ ಯಾರ ಖಾತೆಗೂ ಜಮಾ ಆಗಿಲ್ಲ ಆದರೆ ನಿಮಗೆ ಜಮಾ ಆಗುತ್ತದೆಯೋ ಅಥವಾ ಇಲ್ಲವೋ ಈಗಲೇ ನೋಡಿ
ರೈತರ ಖಾತೆಗೆ ಬೆಳೆ ಪರಿಹಾರದ ಹಣ ಜಮಾ ಆಗಿದೆ ಎಂದು ಸುಳ್ಳು ಸುದ್ದಿಗಳು ಹಬ್ಬಿಸುತ್ತಿದ್ದು ಈ ಸುದ್ದಿ ನಿಜವಲ್ಲ ಏಕೆಂದರೆ ಇಲ್ಲಿಯವರೆಗೂ ಯಾವುದೇ ತರಹದ ಬೆಳೆ ಪರಿಹಾರ ರೈತರ ಖಾತೆಗೆ ಜಮಾ ಆಗಿಲ್ಲ.
ಬರುವ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆ ಎಂದು ಸರ್ಕಾರವು ತಿಳಿಸಿದರು ಕೂಡ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಜಮಾ ಆಗಿದೆ ಎಂದು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ..
ಈ ಯಾವುದೇ ತರಹದ ಸುದ್ದಿಯನ್ನು ನಂಬಬೇಡಿ ಯಾವುದೇ ತರಹದ ಹಣವು ರೈತರ ಖಾತೆಗೆ ಜಮಾ ಆಗಿಲ್ಲ..
ರೈತರ ಖಾತೆ ಹಣ ಜಮಾ ಆಗುತ್ತದೆಯೋ ಅಥವಾ ಇಲ್ಲವೋ..?
ನೋಡುವುದು ಹೇಗೆ?
https://www.samrakshane.karnataka.gov.in/CropHome.aspx
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಹಣ ಜಮಾ ಆಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಖಾತರಿ ಪಡಿಸಿಕೊಳ್ಳಬಹುದಾಗಿದೆ..
ಇಲ್ಲಿ ನೀವು ಅರ್ಜಿ ಸಲ್ಲಿದ ಸ್ಟೇಟಸ್ ಕಾಣಿಸುತ್ತದೆ ಅದಕ್ಕಾಗಿ ನಿಮ್ಮ ಅರ್ಜಿ ಪೂರ್ಣಗೊಂಡಿದೆಯೋ ಅಥವಾ ಇಲ್ಲವೋ ಎಂಬುದರ ಮಾಹಿತಿಯನ್ನು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ತಿಳಿದುಕೊಳ್ಳಬಹುದಾಗಿದೆ.
ಮೂರು ಆದಾರದ ಮೇಲೆ ನೀವು ನಿಮ್ಮ ಸ್ಟೇಟಸ್ ಬಗ್ಗೆ ತಿಳಿದುಕೊಳ್ಳಬಹುದು.
1) ರೈತರ ಮೊಬೈಲ್ ನಂಬರ್ ಬಳಸಿ ಸ್ಟೇಟಸ್ ಅನ್ನು ನೋಡಬಹುದು.
2) ಅಪ್ಲಿಕೇಶನ್ ಹಾಕಿದ ನಂಬರನ್ನು ಸಹ ಬಳಸಿ ಸ್ಟೇಟಸ್ ಅನ್ನು ನೋಡಬಹುದು.
3) ಹೊಲದ ಪಹಣಿಯಾ ಸರ್ವೇ ನಂಬರನ್ನು ಸಹ ಬಳಸಿ ಸ್ಟೇಟಸ್ ಅನ್ನು ನೋಡಬಹುದಾಗಿದೆ.
ಈ ಮೂರು ವಿಧದಲ್ಲಿ ನೀವು ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನು ನೋಡಲು ಅತಿ ಸುಲಭವಾಗಿದೆ ಅತಿ ಸುಲಭದ ಮಾರ್ಗವೇನೆಂದರೆ ಮೊಬೈಲ್ ನಂಬರನ್ನು ಹಾಕಿ ನೋಡುವುದು ಅತ್ಯಂತ ಸುಲಭವಾದ ಮಾರ್ಗವಾಗಿದೆ.
ಬೆಳೆ ಪರಿಹಾರ ಬರಬೇಕೆಂದರೆ GPRS ಆಗಿರಬೇಕೇ?
ಹೌದು ನೀವು ಇಲ್ಲಿಯವರೆಗೂ ಅರ್ಜಿಯನ್ನು ಸಲ್ಲಿಸಿದ ನಂತರ ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿಸಲೇ ಬೇಕಾಗಿರುತ್ತದೆ ಏಕೆಂದರೆ ಅರ್ಜಿ ಸಲ್ಲಿಸಿದ ಬೆಳೆ ಬೇರೆಯಾಗಿದ್ದರೆ ಹಾಗೆ ಜಿಪಿಆರ್ಎಸ್ ಮಾಡಿದ ಬೆಳೆ ಬೇರೆಯಾಗಿದ್ದರೆ ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಬೆಳೆಯ ವಿಮೆಯ ಹಣ ಜಮಾ ಆಗುವುದಿಲ್ಲ.
ಅದಕ್ಕಾಗಿ ನೀವು ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ.
ಈ GPRS ಸರಿಯಾದ ಮಾಹಿತಿ ನೋಡುವುದು ಹೇಗೆ..?
https://play.google.com/store/apps/details?id=com.crop.offcskharif_2021
ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಆಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ನೀವು ಮೊದಲು ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ.
ಇದಾದ ಬಳಿಕ ಅಲ್ಲಿ ಕೆಳಕಂಡಂತೆ ಸರಿಯಾದ ಮಾಹಿತಿಯನ್ನು ನೀವು ತುಂಬಿದರೆ ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಆಗಿದೆಯೇ ಅಥವಾ ಇಲ್ಲವೋ ಎಂಬುದು ನಿಮಗೆ ತಿಳಿಯುತ್ತದೆ ಹಾಗೆ ನಿಮ್ಮ ಅಪ್ಲಿಕೇಶನ್ ರೈತ ಸಂಪರ್ಕ ಕೇಂದ್ರದಿಂದ ಅನ್ನು ಪಡೆದುಕೊಂಡಿದೆಯೋ ಅಥವಾ ಇಲ್ಲವೋ ಎಂಬುದು ಸಹ ನಿಮಗೆ ತಿಳಿದು ಬರುತ್ತದೆ ಅಪ್ಲಿಕೇಶನ್ ಪಡೆದುಕೊಂಡಿದ್ದರೆ ಮಾತ್ರ ಬೆಳೆಯ ವಿಮೆಯ ಹಣವನ್ನು ನೀವು ಪಡೆಯುವಲ್ಲಿ ಅರ್ಹತೆಯನ್ನು ಪಡೆದಿರುತ್ತೀರಿ ಎಂದರ್ಥ.
ಈ ಮೇಲಿನ ಮಾಹಿತಿ ಸರಿಯಾಗಿ ಓದಿ ತಿಳಿದುಕೊಂಡು ಇದರಂತೆ ಪಾಲಿಸಿರಿ ಹಾಗೆ ಬೆಳೆ ವಿಮೆಯ ಹಣವನ್ನು ಪಡೆದುಕೊಳ್ಳುವಲ್ಲಿ ಅರ್ಹತೆಯನ್ನು ಪಡೆದಿದ್ದರು ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿರಿ.