ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಸಂಪೂರ್ಣ ಸರಿಯಾದ ಮಾಹಿತಿ ಇಲ್ಲಿದೆ ನೋಡಿ..!
ಈಗಾಗಲೇ ಜಾಲತಾಣಗಳಲ್ಲಿ ನೀವು 14ನೇ ಕಂತಿನ ಅರ್ಹತಾಪಟ್ಟಿ ಬಿಡುಗಡೆಯಾಗಿದೆ ಎಂಬ ಮಾಹಿತಿಯನ್ನು ಕೇಳಿರಬಹುದು ಆದರೆ ಇದು ನಿಜವೇ ಅಥವಾ ಸುಳ್ಳು ಎಂದು ಇಲ್ಲಿದೆ ನೋಡಿ..
14ನೇ ಕಂತಿನ ರೈತರ ಅರ್ಹತೆ ಪಟ್ಟಿ ಬಿಡುಗಡೆಯಾಗಿದೆಯಾ..?
ನಿಮಗೆ ಈಗಾಗಲೇ ತಿಳಿದಿರುವಂತೆ 13ನೇ ಕಂತಿನ ಪಿಎಂ ಕಿಸಾನ್ ಸನ್ಮಾನ ನಿಧಿಯ ಹಣವು ಫೆಬ್ರುವರಿ 28ನೇ ತಾರೀಖಿನಂದು ರೈತರ ಖಾತೆಗೆ ಜಮಾ ಆಗಿದೆ.
ಆದರೆ ಹಲವಾರು ರೈತರ ಖಾತೆಗೆ ಈ ಹಣ ಕೆಲವು ಕಾರಣಗಳಿಂದಾಗಿ ಜಮಾ ಆಗಿಲ್ಲ..
13ನೇ ಕಂತಿನ ಹಣ ಜಮಾ ಆದನಂತರ ಬೆನಿಫಿಸಿಯರಿ ಲಿಸ್ಟ್ ಬಿಟ್ಟು ನಂತರ ಎಲ್ಲ ಜಾಣತನಗಳಲ್ಲಿ ಈ ಬೆನಿಫಿಸಿಯಲ್ ಲಿಸ್ಟ್ ಅನ್ನು 14ನೇ ರೈತರ ಅರ್ಹತೆ ಪಟ್ಟಿ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ..
ನೆನಪಿನಲ್ಲಿಡಿ ಸ್ನೇಹಿತರೆ ಬೆನಿಫಿಸಸರಿ ಲಿಸ್ಟ್ ಎಂದರೆ ಕಳೆದ ಅಥವಾ ಹಳೆಯ ಕಂತಿನ ಹಣ ಜಮಾ ಆಗಿದ್ದ ರೈತರ ಹೆಸರನ್ನು ಈ ಬೆನಿಫಿಸಿರಿ ಲಿಸ್ಟ್ ನಲ್ಲಿ ತೋರಿಸಲಾಗುತ್ತದೆ…
ಇಲ್ಲಿಯವರೆಗೂ ಎಂದಿಗೂ ಮುಂದಿನ ಅಥವಾ ಮುಂಗಡಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.
ಅದಕ್ಕಾಗಿ ಈ ಸುಳ್ಳು ಸುದ್ದಿಯನ್ನು ನಂಬದೇ ನೀವು ಈ ಸುದ್ದಿಯನ್ನು ಹಬ್ಬಿಸಬೇಡಿ..
ಯಾವ ಯಾವ ರೈತರಿಗೆ 13ನೇ ಕ್ರಾಂತಿನ ಹಣ ಜಮಾ ಆಗಿದೆಯೋ ಅವರಿಗೆ ಯಾವುದೇ ತರನಾದಂತಹ ತೊಂದರೆ ಇಲ್ಲದೆ ಬರುವ ಮುಂದಿನ ದಿನಗಳಲ್ಲಿ ಅಂದರೆ ಮುಂದಿನ 14ನೇ ಕಂತಿನ ಹಣ ಜಮಾ ಆಗುವುದು ನಿಶ್ಚಿತ..
ಈಗಾಗಲೇ ಇಲ್ಲಿಯವರೆಗೂ ಪಿಎಂ ಕಿಸಾನ್ ಸನ್ಮಾನ ನಿಧಿಯಿಂದ 13 ಕಂತುಗಳು ಹಣ ರೈತರ ಖಾತೆಗೆ ಜಮಾ ಆಗಿದ್ದು ನಿಮಗೆ ಇಲ್ಲಿಯವರೆಗೂ ಎಷ್ಟು ಕಾಂತಿನ ಹಣ ಜಮಾ ಆಗಿದೆ ಯಾವ ಕಂತಿನ ಹಣ ಜಮಾ ಆಗಿಲ್ಲ ಎಂಬುದರ ಬಗ್ಗೆ ತಿಳಿದಿದೆಯೇ..?
ಕೂಡಲೇ ನಿಮಗೆ ಎಷ್ಟು ಕಂತಿನ ಹಣ ಬಂದಿದೆ ಎಂಬುದನ್ನು ತಿಳಿದುಕೊಳ್ಳಿ.
ಹಾಗೆಯೇ ನಿಮಗೆ ಇದರಲ್ಲಿ ಯಾವ ಕಂತಿನ ಹಣ ಬಂದಿಲ್ಲ ಎಂಬುದನ್ನು ಅರಿತುಕೊಂಡು ಈ ಕಂತಿನ ಹಣ ಬರಬೇಕೆಂದರೆ ಏನು ಮಾಡಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…
ನಿಮ್ಮ ಮೊಬೈಲ್ ನಲ್ಲಿ ನಿಮಗೆ ಎಷ್ಟು ಕಂತಿನ ಹಣ ಬಂದಿದೆ ಎಂಬುದನ್ನು ನೋಡುವುದು ಹೇಗೆ…?
https://pmkisan.gov.in/BeneficiaryStatus.aspx
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರನ್ನು ಹಾಕಿದರೆ ನಿಮಗೆ ಇಲ್ಲಿಯವರೆಗೂ ಎಷ್ಟು ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಎಂಬುದು ನಿಮಗೆ ತಿಳಿದು ಬರುತ್ತದೆ.
ಇದಷ್ಟೇ ಅಲ್ಲದೆ ನಿಮಗೆ ಯಾವ ಕಂತಿನ ಹಣ ಜಮಾ ಆಗಿಲ್ಲ ಇಲ್ಲಿಯವರೆಗೂ ಎಷ್ಟು ಹಣ ಜಮಾ ಆಗಿದೆ ಎಂಬುದರ ಸಂಪೂರ್ಣ ಸಂಕ್ಷಿಪ್ತವಾದ ವಿವರಣೆ ಇದರಿಂದ ನಿಮಗೆ ತಿಳಿಯುತ್ತದೆ..
ಅದಕ್ಕಾಗಿ ಕೂಡಲೇ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬುದು ತಿಳಿದುಕೊಳ್ಳುವುದು ಉತ್ತಮ.
ಹಣ ಜಮಾ ಆಗದೇ ಇರಲು ಕಾರಣವೇನು..?
ರೈತರ ಖಾತೆಗೆ ಏಕಕಾಲಕ್ಕೆ ಎಲ್ಲರಿಗೂ ಹಣ ಜಮಾ ಆಗುವ ಕಾರಣ ಎಲ್ಲರಿಗೂ ಈಗಾಗಲೇ ಈ ಕೆ ವೈ ಸಿ ಯನ್ನು ಮಾಡಿಸಿರಿ ಎಂದು ಹಲವು ಬಾರಿ ಗಡವನ್ನು ನೀಡಿದ್ದರೂ ಸಹ ಸ್ವಲ್ಪ ರೈತರು ಈ ಕೆ ವೈ ಸಿ ಅನ್ನು ಮಾಡಿಸಿಲ್ಲ.
ಅದಕ್ಕಾಗಿ ಈ ಕೆ ವೈ ಸಿ ಮಾಡಿಸದೆ ಇರುವುದು ಕಾಗಿ ಸಹ ನಿಮಗೆ ಹಣ ಜಮಾ ಆಗಿರುವುದಿಲ್ಲ.
ಇದಲ್ಲದೆ ನೀವು ನೀಡಿರುವ ಬ್ಯಾಂಕ್ ವಿವರ ಸರಿಯಾಗಿ ಇರದೇ ಇರುವ ಕಾರಣ ನಿಮ್ಮ ಖಾತೆಗೆ ಹಣ ಜಮಾ ಆಗಿರುವುದಿಲ್ಲ.
ಅಲ್ಲವೇ ರೈತರ ಖಾತೆಗೆ ಹಣ ಜಮಾ ಆಗಬೇಕೆಂದರೆ DBT ಸಹಾಯದಿಂದ ಹಣ ಜಮಾ ಆಗುವ ಕಾರಣ ನೀವು ನೀಡಿರುವ ಮಾಹಿತಿ ಸರಿಯಾಗಿ ಇರದೇ ಇದ್ದರೆ ನಿಮಗೆ ಹಣ ಜಮಾ ಆಗಿರುವುದಿಲ್ಲ ಅದಕ್ಕಾಗಿ ಮಧ್ಯಂತರ ತಡೆಯನ್ನು ಇಟ್ಟಿರುತ್ತಾರೆ..
ಹಣ ಜಮಾ ಆಗಬೇಕೆಂದರೆ ಏನು ಮಾಡಬೇಕು..?
ಪಿಎಂ ಕಿಸಾನ್ ಸನ್ಮಾನ ನಿಧಿಯ ಹಣ ಜಮಾ ಆಗಬೇಕೆಂದರೆ ನೀವು ಈ ಕೆಳಗಿನ ಕ್ರಮಗಳನ್ನು ಮೊದಲು ಪಾಲಿಸಿರಿ..
1) ಮೊದಲು ಈ ಕೆ ವೈ ಸಿ ಮಾಡಿಸಿದ್ದೀರಾ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ.
2) ಇದಾದ ನಂತರ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಕೂಡಲೇ ಭೇಟಿ ನೀಡಿ ಸಂಪೂರ್ಣ ವಿವರವಾದಂತಹ ಬ್ಯಾಂಕ್ ಖಾತೆಯನ್ನು ಅವರಿಗೆ ಮತ್ತೊಮ್ಮೆ ನೀಡಿದರೆ ನಿಮ್ಮ ಖಾತೆಗೆ ಹಣ ಜಮಾ ಆಗಲು ಅವರು ಸಹಾಯ ಮಾಡುತ್ತಾರೆ.
3) ಇದಷ್ಟೇ ಅಲ್ಲದೆ ನೀವು ಪಿಎಂ ಕಿಸಾನ್ ಸನ್ಮಾನ ಇದೆಯಾ ಹಣ ಜಮಾ ಆಗಲು ನೀಡಿರುವಂತಹ ಬ್ಯಾಂಕ್ ಖಾತೆಗೆ NPS Maping ಮಾಡಿಸಿರಬೇಕಾಗಿರುತ್ತದೆ ಅದಕ್ಕಾಗಿ ಒಂದು ಬಾರಿ ಬ್ಯಾಂಕಿಗೆ ಭೇಟಿ ನೀಡಿ NPS Maping ಕೆಲಸವನ್ನು ಮಾಡಿಸಿರಿ..
ಈ ಎಲ್ಲ ಕೆಲಸವನ್ನು ಮಾಡಿಸಬೇಕೆಂದರೆ ನೀವು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲವೇ ನಿಮ್ಮ ಸಮೀಪದ ಸೆಂಟರಿಗೆ ಹೋಗಿ ಬಯೋಮೆಟ್ರಿಕ್ ಮುಖಾಂತರ ಅವರು ನಿಮಗೆ ಹಣ ಬರಲು ಸಹಾಯವನ್ನು ನೀಡುತ್ತಾರೆ..