ವೀಳ್ಯದೆಲೆ ಬೆಳೆದರೆ ಬಾಳೆ ಬಂಗಾರ..!!
ಉತ್ತರ ಕರ್ನಾಟಕದಲ್ಲಿ ನಾವು ವೀಳ್ಯದೆಲೆಯನ್ನು ತಿನ್ನು ಎಲೆ ಎಂದು ಕರೆಯುತ್ತೇವೆ.
ವೀಳ್ಯದೆಲೆಯನ್ನು ಹಸಿರು ಬಂಗಾರ ಎಂದು ಕರೆಯುತ್ತಾರೆ. ಕಾರಣ ವೀಳ್ಯದೆಲೆಯ ಬೆಲೆ ಬಹು ಜಾಸ್ತಿ.
ಒಂದು ಎಕರೆಗೆ ಕಡಿಮೆ ಅಂದರೂ ಸಹ 5 ಲಕ್ಷದಿಂದ 10 ಲಕ್ಷದವರೆಗೆ ಲಾಭವನ್ನು ನಾವು ತೆಗೆಯಬಹುದು.
ಉತ್ತರ ಕರ್ನಾಟಕದಲ್ಲಿ ಜಾಸ್ತಿ ನೀರಾವರಿ ಇರುವ ಭಾಗದಲ್ಲಿ ರೈತರು ಕೇವಲ ಕಬ್ಬನ್ನು ಮಾತ್ರ ಬೆಳೆಯುತ್ತಾರೆ.
ಆದರೆ ಈ ವೀಳ್ಯದೆಲೆ ಬಗ್ಗೆ ಅವರಿಗೆ ತಿಳಿದಿಲ್ಲ.
ಒಂದು ಎಕರೆಗೆ ಕಬ್ಬು ಬೆಳೆದರೆ ಒಂದು ಲಕ್ಷದಿಂದ ಎರಡು ಲಕ್ಷದವರೆಗೆ ಮಾತ್ರ ಲಾಭ ಬರುತ್ತದೆ.
ಆದರೆ ಈ ವೀಳ್ಯದೆಲೆಯನ್ನು ನಾವು ಒಂದು ಎಕರೆಯಲ್ಲಿ ಬೆಳೆದರೆ ಕಡಿಮೆ ಅಂದರೂ ಸಹ 5 ಲಕ್ಷದಿಂದ 10 ಲಕ್ಷದ ರುಪಾಯಿವರೆಗೂ ಲಾಭವನ್ನು ತೆಗೆಯಬಹುದು..!!
ಇದನ್ನು ಕೇಳಿ ನಿಮಗೆ ಅಚ್ಚರಿ ಅನಿಸಬಹುದು ಆದರೆ ಇದು ನಿಜ ಸಂಗತಿ.
ಈ ವೀಳ್ಯದೆಲೆಯನ್ನು ಹಲವಾರು ಕಡೆ ಬಳಸಲಾಗುತ್ತದೆ
1) ದೇವರ ಪೂಜೆಯಲ್ಲಿ
2) ತಿನ್ನಲು
3) ಹೂವಿನ ಅಲಂಕಾರದಲ್ಲಿ
4) ಔಷಧೀಯ ತಯಾರಿಕೆಯಲ್ಲಿ
5) ಹಲವಾರು ಕಾರ್ಯಕ್ರಮಗಳಲ್ಲಿ
ಹೌದು ನಾವು ದೈನಂದಿನ ಬದುಕಿನಲ್ಲಿ ವೀಳ್ಯದೆಲೆಯನ್ನು ಅತಿ ಹೆಚ್ಚು ಬಳಸುತ್ತೇವೆ.
ನಾವು ತಿನ್ನಲು ದೇವರ ಪೂಜೆಯಲ್ಲಿ ಹೂವಿನ ಅಲಂಕಾರಗಳಲ್ಲಿ ಮತ್ತು ಔಷಧಿಯ ತಯಾರಿಕೆಯಲ್ಲಿ ಮತ್ತು ಹಲವಾರು ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಬಳಸುತ್ತೇವೆ.
ಉತ್ತರ ಕರ್ನಾಟಕದಲ್ಲಿ ರೈತರು ಕೇವಲ ಕಬ್ಬನ್ನು ಮಾತ್ರ ಬೆಳೆಯುತ್ತಾರೆ.
4 ಎಕರೆ ಕಬ್ಬನ್ನು ಬೆಳೆಯುವ ಬದಲು ಒಂದು ಎಕರೆ ಈ ವೀಳ್ಯದೆಲೆಯನ್ನು ನಾವು ಬೆಳೆದರೆ ಅತಿ ಹೆಚ್ಚು ಲಾಭವನ್ನು ತೆಗೆಯುತ್ತೇವೆ.
ಈ ವೀಳ್ಯದೆಲೆಯನ್ನು ಬೆಳೆಯಲು ಕೇವಲ ನಾವು ಅತಿ ಹೆಚ್ಚು ತಿಪ್ಪೆ ಗೊಬ್ಬರವನ್ನು ಮಾತ್ರ ಬಳಸುತ್ತೇವೆ ಮತ್ತು ಯಾವುದೇ ಔಷದಿಯ ಅಗತ್ಯವಿರುವುದಿಲ್ಲ.
ಮತ್ತು ಇದರ ಜೊತೆಗೆ ಹೊಲದಲ್ಲಿ ನಾವು ನುಗ್ಗೆ ಗಿಡ ಮತ್ತು ಹಲವಾರು ಗಿಡಗಳನ್ನು ಬೆಳೆಸುವುದರಿಂದಲೂ ಸಹ ಅದರಿಂದಲೂ ನಮಗೆ ಲಾಭ ದೊರೆಯುತ್ತದೆ.
ಭಾರತೀಯ ಪರಂಪರೆಯಲ್ಲಿ ವೀಳ್ಯದೆಲೆಗೆ ಅದರ ಪ್ರಾಮುಖ್ಯತೆ ಇದೆ.
ಹಲವಾರು ತಲೆಮಾರುಗಳಿಂದ ವೀಳ್ಯದೆಲೆಯನ್ನು ನಮ್ಮ ಹಿರಿಯರು ಊಟ ಆದ ನಂತರ ಸೇವಿಸುತ್ತಲೇ ಬಂದಿದ್ದಾರೆ.
ಕಾರಣ ವೀಳ್ಯದೆಲೆಗೆ ಅತಿ ಹೆಚ್ಚು ಔಷಧಿಯ ಮೌಲ್ಯವಿದೆ.
ವಿಳೆದೆಲೆ ಬೆಳೆಯುವ ವಿಧಾನ!
ವೀಳ್ಯದೆಲೆಗೆ ನೆರಳು ಅತಿ ಅವಶ್ಯಕ.
ವೀಳ್ಯದೆಲೆ ಅಗಿಯನ್ನು ಮೊದಲು ನಾವು ತಲಿಸಿಕೊಳ್ಳಬೇಕು.
ನೆಲವನ್ನು ಹದ ಮಾಡಿಕೊಂಡು ಮತ್ತು ಆ ನೆಲಕ್ಕೆ ಅತಿ ಹೆಚ್ಚು ನೀರನ್ನು ಬಿಟ್ಟು ಹಸಿ ಜಾಗದಲ್ಲಿ ನಾವು ವೀಳ್ಯದೆಲೆಯನ್ನು ಹಚ್ಚಬೇಕು.
ಒಂದು ಸಾಲಿನಿಂದ ಇನ್ನೊಂದು ಸಾಲಿಕೆ ಕಡಿಮೆ ಅಂದರೂ ಸಹ 3 ಫೀಟ್ ಅಂತರವಿರಬೇಕು.
ಮತ್ತು ಒಂದು ಅಗಿಂದ ಇನ್ನೊಂದು ಅಗಿಗೆ ಕಡಿಮೆ ಎಂದರೆ ಸಹ 1 ಫೀಟ್ ಅಂತರವಿರಬೇಕು.
ಒಂದು ಎಚ್ಚರಿಕೆ ಏನೆಂದರೆ ವಿಳೆದೆಲೆಗೆ ತಗಲುವ ರೋಗಗಳ ಬಗ್ಗೆ ನಮಗೆ ಅರಿವಿರಬೇಕು.
ವಿಳ್ಳೇದೆಲೆ ಅಗಿ ನೆಡುವುದಕ್ಕಿಂತ ಮೊದಲು ನಾವು ಅದಕ್ಕೆ ಸಪೋರ್ಟ್ ಎಂದು ಒಂದು ಎತ್ತರವಾದ ಗಿಡವನ್ನು ಬೆಳೆಸಬೇಕು ಅಂದರೆ ಉದಾಹರಣೆಗೆ ನುಗ್ಗೆ ಗಿಡವನ್ನು ಬೆಳೆಸಿ ಅದರ ಜೊತೆಗೆ ವೀಳ್ಯದೆಲೆಯನ್ನು ಎತ್ತರಕ್ಕೆ ಬೆಳೆಯಲು ಸಹಕರಿಸಬೇಕು.
ಅತಿ ಹೆಚ್ಚು ತಿಪ್ಪೆ ಗೊಬ್ಬರವನ್ನು ಮಾತ್ರ ನಾವು ಇದಕ್ಕೆ ಬಳಸಬೇಕು.
ನುಗ್ಗೆ ಗಿಡ ಬೆಳೆಯುವುದರಿಂದಲೂ ಸಹ ನಮಗೆ ಅತಿ ಹೆಚ್ಚು ಲಾಭವು ದೊರಕುತ್ತದೆ.
ವೀಳ್ಯದೆಲೆ ಬೆಳೆಯಲು ವಹಿಸಬೇಕಾದ ಜಾಗರೂಕತೆಗಳು..!!
1) ರೋಗಲಕ್ಷಣಗಳ ಬಗ್ಗೆ ಅರಿವು
2) ಯಾವುದೇ ಜಾನುವಾರುಗಳು ತಿನ್ನದಂತೆ ಎಚ್ಚರವಹಿಸುವುದು
3) ಅತಿ ಹೆಚ್ಚು ತಿಪ್ಪೆಯ ಗೊಬ್ಬರವನ್ನು ಬಳಸುವುದು
4) ಕಳೆ ತೆಗೆಯುವುದು
5)ಎಲೆಯ ಬಣ್ಣ ಹಳದಿಯಾಗದಂತೆ ತಡೆಯುವುದು
ಈ ಮೇಲ್ಕಂಡ ಜಾಗರೂಕತೆಗಳನ್ನು ನಾವು ವಹಿಸಿದೆ ಇದ್ದಲ್ಲಿ ನಮಗೆ ನಷ್ಟ ಉಂಟಾಗುತ್ತದೆ.
ಯಾವುದೇ ಬೆಳೆಯನ್ನು ಬೆಳೆಯುವ ಮೊದಲು ನಮಗೆ ಅದರ ಬಗ್ಗೆ ಸ್ವಲ್ಪ ಜ್ಞಾನ ಮತ್ತು ಅರಿವು ಇರಬೇಕು.
ಏನಾದರೂ ತಿಳಿಯದಿದ್ದರೆ ಸಂಪರ್ಕಿಸಿ.
ವೀಳ್ಯದೆಲೆಯ ಮಹತ್ವ..!!
ವಿಳ್ಳೆದೆಲೆಯಲ್ಲಿ ಅತಿ ಹೆಚ್ಚು ಔಷಧೀಯ ಗುಣಗಳಿವೆ.
ಅದಕ್ಕಾಗಿ ನಮ್ಮ ಹಿರಿಯರು ಊಟದ ನಂತರ ಈ ವಿಳೇದೆಲೆಯನ್ನು ತಿನ್ನುತ್ತಿದ್ದರು.
ಈಗಲೂ ಸಹ ವೀಳ್ಯದೆಲೆಯನ್ನು ಅತಿ ಹೆಚ್ಚು ಜನರು ತಿನ್ನುತ್ತಾರೆ.
ವೀಳ್ಯದೆಲೆ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಕಂಟ್ರೋಲ್ ಮಾಡುತ್ತದೆ.
ವಿಳೆದೆಲೆ ತಿನ್ನುವುದರಿಂದ ನಮ್ಮ ದೇಹದಲ್ಲಿ ಇರುವ ಹಲವಾರು ರೋಗಕ್ಕೆ ಉಂಟಾಗುವ ಬ್ಯಾಕ್ಟೀರಿಯಾ ಗಳನ್ನು ಸಹ ಇದು ಕೊಲ್ಲುತ್ತದೆ.
ಮತ್ತೂ ರಕ್ತದಲ್ಲಿರುವ “ಹಿಮೋಗ್ಲೋಬಿನ್” ಅನ್ನು ಸಹ ಹೆಚ್ಚಿಸುತ್ತದೆ.
ಇನ್ನು ಹಲವಾರು ಉಪಯೋಗಗಳು ಇರುವುದರಿಂದ ಈ ಒಳ್ಳೆಯದನ್ನು ನಾವು ಸೇವಿಸಬೇಕು.
ಇನ್ನು ದೇವರ ಪೂಜೆಯಲ್ಲಿ ಸಹ ಅತಿ ಹೆಚ್ಚು ವಿಳ್ಳೆದೆಲೆಯನ್ನು ಬಳಸುತ್ತಾರೆ.
ಅಲಂಕಾರದಲ್ಲಿಯೂ ಸಹ ಅತಿ ಹೆಚ್ಚಾಗಿ ಈ ವೀಳ್ಯದೆಲೆಯನ್ನು ಬಳಸಲಾಗುತ್ತದೆ.
ವೀಳ್ಯದೆಲೆ ಲಾಭದ ಮಹತ್ವ.!!
ಪ್ರೀತಿಯ ರೈತ ಬಾಂಧವರೇ ಈ ವಿಡಿಯೋದಲ್ಲಿ ಏನು ಹಲವಾರು ಕಡೆ ಅತಿ ಹೆಚ್ಚಾಗಿ ಬಳಸುವುದರಿಂದ ಇದರ ಬೆಲೆ ಅತಿ ಹೆಚ್ಚು.
ಅದಕ್ಕಾಗಿ ನಾವು ನಮ್ಮ ಹೊಲದಲ್ಲಿ ಕಡಿಮೆಯಾದರೂ ಸಹ ಒಂದು ಎಕರೆ ಜಾಗದಲ್ಲಿ ಈ ವೀಳ್ಯದೆಲೆಯನ್ನು ಬೆಳೆಯುವುದು ಸೂಕ್ತ.
ಒಂದು ಎಕರೆಗೆ ನಾವು ಒಳ್ಳೆಯದಲ್ಲೇನು ಬೆಳೆದರೆ ಕೇವಲ ಒಂದು ಲಕ್ಷ ರೂಪಾಯಿ ದವರೆಗೆ ಮಾತ್ರ ಖರ್ಚ ಉಂಟಾಗುತ್ತದೆ.
ಒಂದು ಎಕರೆಗೆ 5 ರಿಂದ 10 ಲಕ್ಷ ರೂಪಾಯಿವರೆಗೆ ಲಾಭ ದೊರಕುತ್ತದೆ.
ಅದಕ್ಕಾಗಿ ಕಬ್ಬಿನ ಬದಲು ಒಂದು ಎಕರೆಯಾದರೂ ಸಹ ಈ ವೀಳ್ಯದೆಲೆಯನ್ನು ಬೆಳೆಯುವುದು ಸೂಕ್ತ.
ಸೂಚನೆ:
1)ರೋಗಗಳ ಬಗ್ಗೆ ಸ್ವಲ್ಪ ಅರಿವನ್ನು ನಾವು ಇಟ್ಟುಕೊಳ್ಳಬೇಕಾಗುತ್ತದೆ.
2)ಮತ್ತು ಎಲೆಯನ್ನು ಹಳದಿ ಯಾಗದಂತೆ ತಡೆಯಬೇಕು
3) ಅತಿ ಹೆಚ್ಚು ತಿಪ್ಪೆ ಗೊಬ್ಬರವನ್ನು ಬಳಸಬೇಕು
4) ವೀಳ್ಯದೆಲೆಗೆ ನೆರಳಿನ ಅವಶ್ಯಕತೆ ಇದೆ
5) ಈ ಬೆಳೆ ಮಳೆ ಆಶ್ರಿತವಲ್ಲ ಅತಿ ಹೆಚ್ಚು ನೀರು ಬೇಕು
ಇಷ್ಟು ಜ್ಞಾನ ಹೊಂದಿದ್ದಲ್ಲಿ ನಾವು ವೀಳ್ಯದೆಲೆಯನ್ನು ಬೆಳೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಒಂದು ಉದಾಹರಣೆ
ನಮ್ಮ ನೆರೆಯ ಹೊಲದ ರೈತರು ಒಬ್ಬರು ಈ ವೀಳ್ಯದೆಲೆಯನ್ನು ಬೆಳೆಯುತ್ತಿದ್ದಾರೆ.
ಅವರು 17 ವರ್ಷದಿಂದ ಈ ವೀಳ್ಯದೆಲೆಯನ್ನು ಬೆಳೆಯುತ್ತಿದ್ದು ಅತಿ ಹೆಚ್ಚು ಪ್ರಮಾಣದ ಲಾಭವನ್ನು ಕಂಡುಕೊಂಡಿದ್ದಾರೆ.
ಅವರ ಸಹಾಯದಿಂದ ನಾನು ಈಗ ಈ ವೇಳೆಯಲ್ಲಿ ಬೆಳೆಯಲು ಶುರು ಮಾಡಿದ್ದೇನೆ.
ಅದಕ್ಕಾಗಿ ಈ ಲಾಭದ ಮಹತ್ವವನ್ನು ತಿಳಿದುಕೊಂಡು ನಾನು ಬೆಳೆಯಲು ಶುರು ಮಾಡಿದ್ದೇನೆ.
ನಿಮಗೆ ತಿಳಿಯದಿದ್ದರೆ ನಾನು ಕಳಿಸಿರುವ ಚಿತ್ರಗಳನ್ನು ನೋಡಿಕೊಂಡು ಅರ್ಥಮಾಡಿಕೊಳ್ಳಬಹುದು.
ಜ್ಞಾನವನ್ನು ಹೊಂದಿಕೊಂಡು ಈ ವೀಳ್ಯದೆಲೆಯನ್ನು ಬೆಳೆಯಲು ಶುರು ಮಾಡಿ.
ವೀಳ್ಯದೆಲೆ ಬೆಳೆಯಿರಿ ಅತಿ ಹೆಚ್ಚು ಲಾಭವನ್ನು ಪಡೆಯಿರಿ.!!
ಹೆಚ್ಚಿನ ಮಾಹಿತಿಗಾಗಿ ತಿಳಿದುಕೊಂಡು ಬೆಳೆಯುವುದು ಸೂಕ್ತ.
ವೀಳ್ಯದೆಲೆಯನ್ನು ಬೆಳೆಯಿರಿ ಬಾಳನ್ನು ಬಂಗಾರ ಮಾಡಿಕೊಳ್ಳಿ.
ಈ ವೀಳ್ಯದೆಲೆ ಲಾಭ ಅತಿ ಹೆಚ್ಚಾಗಿರುವುದರಿಂದ ಇದನ್ನು ಹಸಿರು ಬಂಗಾರ ಎನ್ನುತ್ತಾರೆ.
ಧನ್ಯವಾದಗಳು.