2023ರ ಕರ್ನಾಟಕ ಬಜೆಟ್ ನಲ್ಲಿ ಕರ್ನಾಟಕದ ಜನತೆಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ..!
ಹೌದು ಸ್ನೇಹಿತರೆ, ಕರ್ನಾಟಕದ ಜನತೆಗೆ ಈ ಬಾರಿ ಬಜೆಟ್ ನಲ್ಲಿ ಅತಿ ಹೆಚ್ಚು ನಿರೀಕ್ಷಿತ ಯೋಜನೆಗಳನ್ನು ನೀಡಲಾಗಿದ್ದು ಅಲ್ಲದೆ ಪ್ರತಿಯೊಬ್ಬರಿಗೂ ಸಹ ಈ ಬಜೆಟ್ನಲ್ಲಿ ಯೋಜನೆಗಳು ಲಭ್ಯವಿವೆ..
ಈ ಬಜೆಟ್ಟನ್ನು ಮೊದಲು ಐದು ಯೋಜನೆಯ ಭಾಗಗಳಾಗಿ ವಿಂಗಡಿಸಲಾಗಿದೆ ಅವುಗಳೆಂದರೆ
1) ಕೃಷಿಗೆ ಮಹತ್ವ
2) ಮಹಿಳೆಯರ ಸಬಲೀಕರಣ
3) ಮಠ ಮಂದಿರಗಳ ಉದ್ದಾರ
4) ಪ್ರವಾಸಿ ಸ್ಥಾನಗಳ ಅಭಿವೃದ್ಧಿ
5) ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕಕ್ಕೆ ವಿವಿಧ ರೀತಿಯ ಯೋಜನೆಗಳು
ಭಾರತದ ಬೆನ್ನೆಲುಬು ಕೃಷಿ ಎಂಬ ಮಾತನ್ನು ಈ ಬಜೆಟ್ ನಲ್ಲಿ ಎತ್ತಿ ಹಿಡಿಯಲಾಗಿದೆ.
ಬಜೆಟ್ ನಲ್ಲಿ ಕೃಷಿಕರಿಗೆ ನೀಡಿದ ಯೋಜನೆಗಳು ಯಾವವು…?

2023ರ ಬಜೆಟ್ ನಲ್ಲಿ ಕೃಷಿಕರಿಗೆ ಅತಿ ಹೆಚ್ಚು ಯೋಜನೆಗಳನ್ನು ನೇಮಕ ಮಾಡಲಾಗಿದ್ದು ಈ ಯೋಜನೆಗಳು ಈ ಕೆಳಗಿನಂತಿವೆ ನೋಡೋಣ ಬನ್ನಿ..
1) ಕುಷಿಕರಿಗೆ ಐದು ಲಕ್ಷ ರೂಪಾಯಿವರೆಗೂ ಬಡ್ಡಿ ರೈತ ಸಾಲ ನೀಡಲು ನಿರ್ಧರಿಸಲಾಗಿದೆ
2) ಚಿಕ್ಕ ರೈತರಿಗೆ ಹೊಸ ಹೊಸ ಯೋಜನೆಗಳು ನೇಮಕ ಮಾಡಲಾಗಿದೆ
3) 10 ಲಕ್ಷ ರೂಪಾಯಿ ಮೇಲ್ಪಟ್ಟ ಸಾಲಗಳಿಗೆ ದರ ನಾಲ್ಕು ಪರ್ಸೆಂಟ್ ನಷ್ಟು ಬಡ್ಡಿ ದರವನ್ನು ಸರ್ಕಾರವು ತುಂಬಲು ನಿರ್ಧಾರ ಮಾಡಿದೆ
4) 40 ಲಕ್ಷ ರೈತರಿಗೆ ಸಾಲವನ್ನು ಹೊಸ ಯೋಜನೆಯ ರೂಪದಲ್ಲಿ ನೀಡಲು ನಿರ್ಧಾರ ಮಾಡಲಾಗಿದೆ
5) ಹೊಸದಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ರೂಪದಲ್ಲಿ 10,000 ಬೀಜ ಮತ್ತು ಗೊಬ್ಬರಗಳನ್ನು ಖರೀದಿಸಲು ಸಹಾಯವಾಗಲೆಂದು ಹೊಸ ಯೋಜನೆ ತರಲಾಗಿದೆ
ಹೀಗೆ ಹತ್ತು ಹಲವಾರು ಅನೇಕ ಹೊಸ ಯೋಜನೆಗಳನ್ನು ಕೃಷಿಗೆಂದೆ ಮೀಸಲಿಟ್ಟು ರೈತರಿಗೆ ನಿರೀಕ್ಷೆಯಂತೆ ಅವರಿಗೆ ಹೊಸ ಯೋಜನೆಗಳನ್ನು ತಂದಿದ್ದಾರೆ..
ಮಹಿಳೆಯರ ಸಬಲೀಕರಣಕ್ಕೆ ಯೋಜನೆಗಳು ಯಾವವು..?
ಮಹಿಳೆಯರ ಸಬಲೀಕರಣವನ್ನು ಇನ್ನಷ್ಟು ಬಲವನ್ನಾಗಿ ಮಾಡುವುದಕ್ಕಾಗಿ 2023ರ ಬಜೆಟ್ ನಲ್ಲಿ ಹೊಸ ಯೋಜನೆಗಳನ್ನು ಮಹಿಳಾ ಸಬಲೀಕರಣ ಮಾಡಲು ನಿರ್ಧರಿಸಲಾಗಿದೆ..
ಮಹಿಳೆಯರು ಅಂದರೆ ಕೂಲಿ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ಮಾಸಿಕವಾಗಿ 500 ರಿಂದ 2000 ವರೆಗೂ ಹಣವನ್ನು ನೀಡುವುದಾಗಿ ಹೇಳಿದ್ದಾರೆ
ಇದಲ್ಲದೆ ಸಣ್ಣ ಉದ್ಯೋಗದಲ್ಲಿ ಮಹಿಳೆಯರಿಗೆ ಹೊಸ ಹೊಸ ಟೆಕ್ನಾಲಜಿಗಳ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ.
ಮಹಿಳೆಯರ ಉತ್ತೇಜನಕ್ಕಾಗಿ ಇನ್ನೂ ಮೂರ್ನಾಲ್ಕು ಹೊಸ ಯೋಜನೆಗಳು ಲಭ್ಯವಿವೆ..
ಮಲೆನಾಡಿನ ಜನರಿಗೆ ಅಂತರ್ಜಲ ಮಟ್ಟದ ಹೆಚ್ಚಿಸಲು ಹೊಸ ಯೋಜನೆಗಳನ್ನು ಸರ್ಕಾರ ತಂದಿದೆ..
ಮಳೆನಾಡಿನಲ್ಲಿ ಬೇಸಿಗೆಕಾಲದಲ್ಲಿ ನೀರಿನ ಅವಾಂತರ ಸೃಷ್ಟಿ ಆಗಬಾರದೆಂದು ಕೃಷಿಕರಿಗೆ ಸಹಾಯವಾಗಲೆಂದು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಅಲ್ಲಲ್ಲಿ ನೀರಿನ ಕೆರೆಗಳನ್ನು ಸೃಷ್ಟಿಸಿ ನೀರನ್ನು ತುಂಬಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಹೊಸ ಯೋಜನೆಯನ್ನು ಈ ಬಜೆಟ್ ನಲ್ಲಿ ಮಂಡಿಸಿದ್ದಾರೆ.
ಇದು ಅಷ್ಟೇ ಅಲ್ಲದೆ ಹಲವಾರು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವಲ್ಲಿ ಅತಿ ಹೆಚ್ಚಿನ ಮೊತ್ತದ ಹಣವನ್ನು ಮೀಸಲಿಟ್ಟಿದ್ದಾರೆ..
ಮಹಿಳೆಯರಿಗೆ ಉಚಿತ ಬಸ್ ಪಾಸ್ ಅನ್ನು ಈ ಬಜೆಟ್ ಮುಖಾಂತರ ನೀಡಲು ಮುಂದಾಗಿದ್ದಾರೆ..
ಹೀಗೆ ಹತ್ತು ಹಲವಾರು ಹೊಸ ಯೋಜನೆಗಳು ಜನರಿಗೆ ಪೂರಕವಾಗಿದ್ದು ಈ ಯೋಜನೆಗಳನ್ನು ಓದಿಕೊಂಡು ಪರಿಪೂರ್ಣವಾಗಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರಿ…