ಬೆಳೆ ಪರಿಹಾರ ಅರ್ಜಿಯ ಪರಿಶೀಲನೆ ಆಗುತ್ತಿದ್ದು ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ನೋಡಿಕೊಳ್ಳಿ… ನಿಮ್ಮ ಅರ್ಜಿ ರದ್ದಾಗಿದ್ದರೆ ಕೂಡಲೇ ಹೀಗೆ ಮಾಡಿ…!

ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರು ಬೆಳೆ ಪರಿಹಾರ ಪಡೆದುಕೊಳ್ಳಲು ಅರ್ಹತೆ ಪಡೆದಿದ್ದಾರೆ ಅಥವಾ ಇಲ್ಲವೋ ನೋಡೋಣ ಬನ್ನಿ..

WhatsApp Group Join Now
Telegram Group Join Now

ಹೌದು ರೈತ ಬಾಂಧವರೇ ಕೆಲವು ರೈತರು ಅರ್ಜಿಯನ್ನು ಸಲ್ಲಿಸಿ ಹಲವಾರು ತಪ್ಪುಗಳನ್ನು ಮಾಡಿದ್ದರಿಂದ ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ.

ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ಹೇಗೆ ನೋಡಬೇಕೆಂಬುದು ಇಲ್ಲಿದೆ ಸಂಪೂರ್ಣ ಮಾಹಿತಿ…

ನಿಮ್ಮ ಆರ್ ಜಿ ಎಸ್ ಸ್ಟೇಟಸ್ ನೋಡಲು ಎರಡು ಮಾರ್ಗಗಳಿವೆ.


1) ಮೊದಲನೆಯದಾಗಿ ವೆಬ್ಸೈಟ್ನಲ್ಲಿ ನೋಡುವುದು


2) ಅಪ್ಲಿಕೇಶನ್ ಮೂಲಕ ಸಂಪೂರ್ಣ ವಿವರವಾದ ಮಾಹಿತಿಯನ್ನು ಪಡೆಯುವುದು..

ಇವು ಎರಡು ಮಾರ್ಗದಲ್ಲಿ ಅತಿ ಸುಲಭವಾದದ್ದು ಅಪ್ಲಿಕೇಶನ್ ಮೂಲಕ ಸಂಪೂರ್ಣ ವಿವರವಾದ ಮಾಹಿತಿಯನ್ನು ಪಡೆಯುವುದು..

ನಾನು ಈಗ ನಿಮಗೆ ಅಪ್ಲಿಕೇಶನ್ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ಹೇಗೆ ನೋಡಿಕೊಳ್ಳುವುದು ಎಂಬುದನ್ನು ತಿಳಿಸಿಕೊಡುತ್ತೇನೆ ಬನ್ನಿ..

https://play.google.com/store/apps/details?id=com.crop.offcskharif_2021

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಗೆಯೇ ಈ ಅಪ್ಲಿಕೇಶನ್ ಅನ್ನು ನೀವು ಮೊದಲು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ..

ಇದಾದ ನಂತರ ಈ ಅಪ್ಲಿಕೇಶನ್ ನಲ್ಲಿ ಕೇಳುವಂತಹ ಸಂಪೂರ್ಣ ಮಾಹಿತಿಯನ್ನು ನೀವು ಒದಗಿಸಬೇಕಾಗುತ್ತದೆ ಅಂದರೆ ರೈತರ ಜಿಲ್ಲೆ ಊರು ಹಾಗೆ ನಿಮ್ಮ ಹೊಲದ ಪಹಣಿ ನಂಬರ್ ಹಾಗೆ ನೀವು ಯಾವ ಬೆಳೆಯ ಅಪ್ಲಿಕೇಶನ್ ಅನ್ನು ಹಾಕಿದ್ದೀರಾ ಅದನ್ನು ನೀವು ನೀಡಬೇಕಾಗುತ್ತದೆ ಅಂದರೆ ಉದಾಹರಣೆಗೆ ಮುಂಗಾರು ಬೆಳೆ ಪರಿಹಾರ ಅಥವಾ ಹಿಂಗಾರು ಬೆಳೆ ಪರಿಹಾರ..

ಈ ಮಾಹಿತಿಯನ್ನು ನೀಡಿದ ನಂತರ ನಿಮಗೆ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಗೊತ್ತಾಗುತ್ತದೆ ನಿಮ್ಮ ಹೊಲದಲ್ಲಿ ಬೆಳೆದಿರುವ ಬೆಳೆ ಜಿಪಿಆರ್ಎಸ್ ಆಗಿದೆಯೋ ಅಥವಾ ಇಲ್ಲವೋ ಎಂಬ ಸಂಪೂರ್ಣ ಮಾಹಿತಿಯೂ ಸಹ ನಿಮಗೆ ದೊರೆಯುತ್ತದೆ..

ಇದಲ್ಲದೆ ನಿಮ್ಮ ಬೆಳೆ ಪರಿಹಾರದ ಜಿಪಿಆರ್ಎಸ್ ತಪ್ಪಾಗಿದ್ದರೆ ಆಕ್ಷೇಪಣೆ ಇದೆ ಎಂದು ಬಟನ್ ಅನ್ನು ಒತ್ತಿದರು ಸಹ ನಿಮಗೆ ಈಗಲೂ ಸಹ ತಿದ್ದಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ..

ಆಕ್ಷೇಪಣೆ ಇದೆ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೊಲದಲ್ಲಿರುವ ಬೆಳೆ ಇನ್ನೊಮ್ಮೆ ಜಿಪಿಆರ್ಎಸ್ ಮಾಡುತ್ತಾರೆ. ಆಗ ಸರಿಯಾದ ಬಳಿಕ ನಿಮಗೆ ಬೆಳೆ ಪರಿಹಾರ ಬರುವುದು ಖಚಿತವಾಗಿರುತ್ತದೆ..
ಇದಲ್ಲದೆ ಇನ್ನೊಂದು ಪ್ರಮುಖ ಮಾಹಿತಿ ಕೆಳಗಿದೆ ನೋಡಿ..

https:///Rpt_BeneficiaryStatus_pub.aspx

ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿಯನ್ನು ಅಂದರೆ ನಿಮ್ಮ ಜಿಲ್ಲೆಯ ತಾಲೂಕಿನ ನಿಮ್ಮ ಊರಿನ ಮಾಹಿತಿಯನ್ನು ನೀಡಿದರೆ ನೀವು ಕಿಸಾನ್ ಬೆನಿಫಿಟ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಸಹಾಯವಾಗುತ್ತದೆ..

ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಪಿಎಂ ಕಿಸಾನ್ ಹಣ ನಿಮ್ಮ ಅಕೌಂಟಿಗೆ ಯಾವುದೇ ತರಹದ ತೊಂದರೆ ಇಲ್ಲದೆ ಬರುತ್ತದೆ..

ಆಕಸ್ಮಿಕವಾಗಿ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ದಯವಿಟ್ಟು ನೋಂದಾಯಿಸಿಕೊಳ್ಳಿ ನೋಂದಾಯಿಸದಿದ್ದರೆ ಯಾವುದೇ ತರಹದ ಹಣ ಬರುವುದಿಲ್ಲ..

ಅದಕ್ಕಾಗಿ ನಾನು ಹೇಳಿದಂತೆ ಈ ಕ್ರಮಗಳನ್ನು ಪಾಲಿಸಿದರೆ ನಿಮಗೆ ಖಂಡಿತವಾಗಿಯೂ ಒಮ್ಮೆ ಒಂದನೇ ವಾರದಲ್ಲಿ ಹಣವು ಬಂದೇ ಬರುತ್ತದೆ ಅದಕ್ಕಾಗಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಪಾಲಿಸಿರಿ

ನಿಮ್ಮ ಅರ್ಜಿ ತಪ್ಪಾಗಿದ್ದರೆ ಹೇಗೆ ತಿದ್ದುಪಡಿ ಮಾಡಿಸಿಕೊಳ್ಳುವುದು…?

ನಿಮ್ಮ ಅಜ್ಜಿ ತಪ್ಪಾಗಿದೆ ಎಂದರೆ ಪೂರ್ತಿ ತಪ್ಪಂತಲ್ಲ ಅದರಲ್ಲಿ ಕೆಲವೊಂದು ತಪ್ಪುಗಳಿರುತ್ತವೆ ಉದಾಹರಣೆಗೆ ನೀವು ಹಾಕಿರುವಂತಹ ಬೆಳೆ ಅರ್ಜಿ ಹಾಗೆ ನೀವು ಹೊಲದಲ್ಲಿ ಬೆಳೆದಿರುವಂತಹ ಬೆಳೆಯ ಜಿಪಿಆರ್ಎಸ್ ಫೋಟೋಗಳು ತಪ್ಪಾಗಿ ಅಪ್ಲೋಡ್ ಮಾಡಿರಬಹುದು.
ಇದಲ್ಲದೆ ನೀವು ಹಾಕಿರುವಂತಹ ಅರ್ಜಿಯಲ್ಲಿ ಸುಮಾರು ಬೇರೆ ಬೇರೆ ತರಹದ ತಪ್ಪುಗಳನ್ನು ಮಾಡಿದರೆ ಕೂಡಲೆ ತಿಳಿಸಿಕೊಳ್ಳಿ.

ನೀವು ನಿಮ್ಮ ಅರ್ಜಿಯ ತಪ್ಪನ್ನು ತಿಳಿದುಕೊಳ್ಳಬೇಕೆಂದರೆ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅಲ್ಲಿ ಜಿಲ್ಲಾ ವಾರು ಸಹಾಯವಾಣಿ ಸಂಖ್ಯೆಗಳನ್ನು ಪಡೆದುಕೊಂಡು ಆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಅರ್ಜಿಯನ್ನು ಸಲ್ಲಿಸಿದ ಅಪ್ಲಿಕೇಶನ್ ನಂಬರನ್ನು ಅವರಿಗೆ ತಿಳಿಸಿದರೆ ಏನು ತಪ್ಪಾಗಿದೆ ಎಂದು ಅವರು ನಿಮಗೆ ತಿಳಿಸಿಕೊಡುತ್ತಾರೆ ಅದಕ್ಕಾಗಿ ನೀವು ಅವರ ಹತ್ತಿರ ಮನವಿಯನ್ನು ಮಾಡಿದರೆ ನೀವು ಮಾಡಿರುವಂತ ತಪ್ಪನ್ನು ಆದರೆ ನಿಮಗೆ ತಿದ್ದಿ ಸಹಾಯ ಮಾಡುತ್ತಾರೆ..

ನಿಮ್ಮ ಅರ್ಜಿ ಸರಿಪಡಿಸಲು ಇದೊಂದೇ ಮಾರ್ಗವಿದ್ದು ಇದನ್ನು ಕೂಡಲೇ ಪಾಲಿಸಿರಿ..

ಬೆಳೆ ಪರಿಹಾರದ ಪ್ರಾಮುಖ್ಯತೆ..

ವಾತಾವರಣದಲ್ಲಿ ಬದಲಾವಣೆಯಾಗುವುದರಿಂದ ಅಂದರೆ ಅತಿವೃಷ್ಟಿ ಅಥವಾ ಅನಾವೃಷ್ಟಿಯಾಗುವುದರಿಂದ ಬೆಳೆಗಳು ಹಾನಿಯ ಒಳಗಾಗುತ್ತಿರುವುದರಿಂದ ರೈತರು ಸಂಕಷ್ಟದಲ್ಲಿ ತನ್ನ ಜೀವನವನ್ನು ಕಳೆಯುತ್ತಿದ್ದಾನೆ.
ಇದನ್ನು ಆರಿತ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರೈತನಿಗೆ ಯಾವುದೇ ತರಹದ ಕೊರತೆ ಉಂಟಾಗಬಾರದು ಎಂದು ವರ್ಷಕ್ಕೆ ಎರಡು ಬಾರಿ ಬೆಳೆ ಪರಿಹಾರವನ್ನು ನೀಡಲು ಮುಂದಾಗಿದ್ದಾರೆ..

ಬೆಳೆಯ ಆಧಾರದ ಮೇಲೆ ಬೆಳೆ ಪರಿಹಾರವನ್ನು ನೀಡುತ್ತಿದ್ದು ಅದರಲ್ಲಿ ಮುಂಗಾರು ಬೆಳೆ ಪರಿಹಾರ ಹಾಗೆ ಹಿಂಗಾರು ಬೆಳೆ ಪರಿಹಾರ ಎಂದು ಬೇರೆ ಬೇರೆ ಮಾಡಿ ಅವುಗಳ ಆಧಾರದ ಮೇಲೆ ಪರಿಹಾರವನ್ನು ನೀಡುತ್ತಾ ಬಂದಿದ್ದಾರೆ.

2016ರ ನಂತರ ಯಾವುದೇ ವರ್ಷವೂ ತಪ್ಪದೇ ವರ್ಷಕ್ಕೆ ಎರಡು ಬಾರಿ ಬೆಳೆ ಪರಿಹಾರವನ್ನು ನೀಡುತ್ತಿದ್ದಾರೆ ರೈತರಿಗೆ ಸಹಾಯವಾಗಲೆಂದು ಅಂದರೆ ಈ ಬೆಳೆ ಪರಿಹಾರ ಅತಿ ಸುಲಭವಾಗಿ ದೊರಕಬೇಕೆಂದು ಚಿಂತಿಸಿದ ಸರ್ಕಾರಗಳು ಅಪ್ಲಿಕೇಶನ್ ಅನ್ನು ಯಾವುದೇ ಸೆಂಟರ್ ನಲ್ಲಿ ಹೋಗಿ ಹಾಕಲು ಒಂದು ಉತ್ತಮವಾದ ಕೆಲಸವನ್ನು ಕೈಗೊಂಡಿದ್ದಾರೆ..

ಹಾಗೆಯೇ ರೈತರು ಹೊಲದಲ್ಲಿ ಬೆಳೆದಿರುವಂತ ಬೆಳೆಯ ಜಿಪಿಆರ್ಎಸ್ ಮಾಡಲು ಸಹ ಒಂದು ಅಪ್ಲಿಕೇಶನ್ ಅನ್ನು ತಂದಿದ್ದು ಅಂದರೆ ಹುಟ್ಟು ಹಾಕಿದ್ದು ಅದನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ಕೂಡಲೇ ನೀವು ನಿಮ್ಮ ಹೊಲದಲ್ಲಿ ಬೆಳೆದಿರುವಂತಹ ಬೆಳೆಯ ಫೋಟೋವನ್ನು ಅಪ್ಲೋಡ್ ಮಾಡಲು ಸಹಾಯಕವಾಗುವಂತೆ ಒಂದು ಉತ್ತಮವಾದ ಕಾರ್ಯಕ್ಕೆ ಸೈ ಎಂದಿದ್ದಾರೆ..

ಅದಕ್ಕಾಗಿ ಈ ಡಿಜಿಟಲ್ಲಿಕರಣ ಯುಗದಲ್ಲಿ 10 ಹಲವಾರು ಆಪ್ ಗಳು ಸೃಷ್ಟಿಯಾಗಿದ್ದು ರೈತನು ಕೇವಲ ಒಂದು ಮೊಬೈಲ್ ನಲ್ಲಿ ಎಲ್ಲ ತರಹದ ಮಾಹಿತಿಯನ್ನು ಪಡೆದುಕೊಳ್ಳಲು ಉಪಯುಕ್ತಕರವಾಗಿದೆ..

ಇದಲ್ಲದೆ ಕೇವಲ ಒಂದು ಮೊಬೈಲ್ ರೈತನಲ್ಲೇ ಇರಬೇಕು ಹಾಗೆ ಈ ದೇಶದಲ್ಲಿ ಯುಗದಲ್ಲಿ 10 ಹಲವಾರು ಆಪ್ಗಳಿದ್ದು ಪ್ರತಿಯೊಂದು ಆಪನ್ನು ನೀವು ಬಳಸುವುದನ್ನು ಕಲಿತರೆ ಯಾವುದೇ ತರಹದ ಸಂಪರ್ಕಕ್ಕೆ ಹೋಗದೆ ಕೇವಲ ನಿಮ್ಮ ಮೊಬೈಲ್ ನಲ್ಲಿ ನೀವು ಎಲ್ಲ ತರಹದ ಜ್ಞಾನವನ್ನು ಪಡೆದುಕೊಳ್ಳಲು ಒಂದು ಸಹಾಯಕವಾಗಿದೆ..
ಅದಕ್ಕಾಗಿ ರೈತರಿಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು 10 ಹಲವಾರು ಆಪ್ ಗಳನ್ನು ಸೃಷ್ಟಿಸಿದ್ದು ಈ ಆಪ್ ನಲ್ಲಿ ರೈತರು ಲಾಗಿನ್ ಆದರೆ ಸಾಕು ಕೇವಲ ಅವನ ಕೈಗಡಿಯಂತೆ ಅವನಿಗೆ ಸಹಾಯವಾಗಲು ಎಲ್ಲ ತರಹದ ಮಾಹಿತಿ ಈ ಆಪ್ ಮೂಲಕ ಅವನಿಗೆ ಕೆಲವೇ ಕ್ಷಣದಲ್ಲಿ ಅವನಿಗೆ ದೊರಕುತ್ತದೆ..

ಅದಕ್ಕಾಗಿ ರೈತರು ಮೊದಲು ಮೊಬೈಲ್ ಅನ್ನು ಉಪಯೋಗ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ.
ಇದರ ಸಹಾಯದ ಅಡಿ ನೀವು ನಿಮಗೆ ಬೇಕಾದಂತ ಎಲ್ಲ ಮಾಹಿತಿಯನ್ನು ಕೂತು ಜಾಗದಲ್ಲಿ ಪಡೆದುಕೊಳ್ಳಲು ಒಂದು ಉಪಯುಕ್ತವಾದಂತ ಸಾಧನವಾಗಿದೆ..

ಬೆಳೆಯ ಜಿಪಿಆರ್‌ಎಸ್‌ ಎಂದರೇನು…?

ಹಲವಾರು ಬಾರಿ ರೈತರು ಗೋಲ್ಮಾಲ್ ಮಾಡುತ್ತಿರುವುದಕ್ಕಾಗಿ ರೈತರ ಹೊಲದಲ್ಲಿ ಯಾವ ಬೆಳೆಯನ್ನು ಬೆಳೆದಿದ್ದಾರೆ ಎಂದು ಸಮೀಕ್ಷೆ ಮಾಡಲು ಒಂದು ಉಪಯುಕ್ತವಾದಂತ ಸಾಧನ ಜಿಪಿಆರ್ಎಸ್ ಎಂದು ನಾವು ಹೇಳಿದರೆ ತಪ್ಪಾಗಲಾರದು..
ಏಕೆಂದರೆ ಯಾವುದೇ ತರಹದ ಗೋಲ್ಮಾಲ್ ನಡೆಯಬಾರದು ಎಂದು ಒಂದು ಉತ್ತಮವಾದಂತಹ ಉದ್ದೇಶದಿಂದ ಈ ಜಿಪಿಆರ್ಎಸ್ ಎಂಬ ಮಾದರಿಯ ಕೆಲಸವನ್ನು ಕೈಗೊಂಡಿದ್ದು ಇದರಿಂದ ಯಾವುದೇ ತರದ ಮೋಸಗಳು ಉಂಟಾಗುವುದಿಲ್ಲವೆಂದು ರಾಜ್ಯ ಸರ್ಕಾರ ಸೂಚನೆಯನ್ನು ನೀಡಿದೆ.

ನೀವು ನಿಮ್ಮ ಬೆಳೆಯ ಜಿಪಿಆರ್ಎಸ್ ಮಾಡದಿದ್ದರೆ ಯಾವುದೇ ತರಹದ ಬೆಳೆ ಪರಿಹಾರ ನಿಮಗೆ ದೊರಕುವುದಿಲ್ಲ ಎಂದು ಸಹ ಸೂಚನೆಯನ್ನು ನೀಡಿದ್ದು ಈಗಾಗಲೇ ರೈತರು ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಅನ್ನು ಮಾಡಿದ್ದಾರೆ ರಾಗಿಯೂ ಕೂಡ ಏರುಪೇರಾಗಿ ಫಲದಲ್ಲಿ ಬೆಳೆದಿರುವಂತ ಬೆಳೆಯ ಜಿಪಿಆರ್ಎಸ್ ಬೇರೆಯಾಗಿದ್ದು ಅದಕ್ಕಾಗಿ ರೈತರ ಅರ್ಜಿ ತಿರಸ್ಕರಿಸಲ್ಪಟ್ಟಿವೆ..
ಹತ್ತು ಹಲವಾರು ತಪ್ಪುಗಳು ಉಂಟಾಗಿದ್ದು ಇವುಗಳನ್ನು ಸರಿಪಡಿಸಿಕೊಳ್ಳಲು ಒಂದು ಉತ್ತಮವಾದಂತಹ ಕಾಲಾವಕಾಶ ಕೇಂದ್ರ ಸರ್ಕಾರವು ನೀಡಿದ್ದು ಈ ಕಾಲಾವಕಾಶದಲ್ಲಿ ಅರ್ಜಿಯ ಸ್ಟೇಟಸ್ ಅನ್ನು ಚೆಕ್ ಮಾಡಿಕೊಂಡು ಯಾವ ತರಹದ ತಪ್ಪಾಗಿದೆ ಎಂದು ಪರಿಶೀಲಿಸಿ ಅದನ್ನು ಸರಿಪಡಿಸಿಕೊಳ್ಳಲು ಒಂದು ಉತ್ತಮವಾದಂತ ಕೆಲಸಕ್ಕೆ ನಾಂದಿಯನ್ನು ಹಾಡಿದ್ದಾರೆ..

ಇದೊಂದು ಉತ್ತಮವಾದಂತ ಕಾರ್ಯವಾಗಿದ್ದು ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ನಮ್ಮ ರಾಜ್ಯ ಸರ್ಕಾರದ ಜನರು ಅಭಿಪ್ರಾಯವನ್ನು ತಿಳಿಸಿದ್ದಾರೆ.

ನೀವು ಈಗಾಗಲೇ ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ ಹಾಗೆ ಏನಾದರೂ ತಪ್ಪುಗಳು ಉಂಟಾಗಿದ್ದರೆ ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಭೇಟಿ ಮಾಡಿ ಅಲ್ಲಿ ಅವರ ಕಡೆಯಿಂದ ಜಿಲ್ಲಾ ವಾರು ಸಹಾಯವಾಣಿ ಸಂಖ್ಯೆಯನ್ನು ತೆಗೆದುಕೊಂಡು ಆ ಸಂಖ್ಯೆಗೆ ಕರೆ ಮಾಡಿ ನಿಮ್ಮ ಅರ್ಜಿಯಲ್ಲಿ ತಪ್ಪಾಗಿದ್ದರೆ ಕೂಡಲೇ ನಿಮ್ಮ ಅರ್ಜಿಯನ್ನು ಸರಿಪಡಿಸಿಕೊಳ್ಳಿ..

ಇದೊಂದು ಉತ್ತಮವಾದಂತಹ ಕೆಲಸವಾಗಿದ್ದು ಕೂಡಲೇ ನೀವು ಒಂದು ಅರ್ಜಿಯನ್ನು ಸರಿಪಡಿಸಿಕೊಳ್ಳಲು ಕಾಲಾವಕಾಶವನ್ನು ನೀಡಿದವರು ಈ ಕಾಲಾವಕಾಶ ಮತ್ತೆ ನೀಡಲಾಗುವುದಿಲ್ಲ ಹಾಗೆ ಕೂಡಲೇ ಅರ್ಜಿಯ ತಪ್ಪಿದ್ದರೆ ತಿಳಿದುಕೊಳ್ಳಲಿ ಎಂದು ಕಾಲಾವಕಾಶವನ್ನು ನೀಡಿದ್ದಾರೆ ಕೂಡಲೇ ನೀವು ಅರ್ಜಿ ತಪ್ಪಾಗಿದ್ದರೆ ಖಾತರಿ ಪಡಿಸಿಕೊಂಡು ಕೂಡಲೇ ಸರಿಪಡಿಸಿಕೊಳ್ಳಿ..
ಹೀಗೆ ರೈತರ ಸಂಕಷ್ಟದಲ್ಲಿ ಪಾಲ್ಗೊಳ್ಳಬೇಕೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವರ್ಷದಲ್ಲಿ ಎರಡು ಬಾರಿ ಬೆಳೆ ಪರಿಹಾರವನ್ನು ನೀಡಲು ನಿರ್ಧರಿಸಿದ್ದು ರೈತರು ಈ ಬೆಳೆ ಪರಿಹಾರವನ್ನು ಪಡೆದುಕೊಂಡು ಯಾವುದೇ ತರದ ಸಂಕಷ್ಟದಲ್ಲಿ ಒಳಗಾಗಬಾರದು ಎಂದು ಸರ್ಕಾರಗಳು ತಮ್ಮದೇ ಆದಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ…
ಪ್ರೀತಿಯ ರೈತ ಬಾಂಧವರೇ ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಬೆಳೆ ಪರಿಹಾರ ಪಡೆದುಕೊಳ್ಳುವಲ್ಲಿ ಸಫಲರಾಗಿರಿ…
ಹೀಗೆ ಅನೇಕ ಮಾಹಿತಿಗಳನ್ನು ನಾವು ನಿಮಗೆ ನೀಡುತ್ತಿದ್ದು ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ಅಂದರೆ ನಮ್ಮ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ ಹಾಗೆ ನಾವು ಶೇರ್ ಮಾಡುವಂತಹ ಎಲ್ಲಾ ತರದ ಮಾಹಿತಿಗಳು ನಿಮ್ಮ ಮೊಬೈಲ್ಗೆ ಮೊದಲು ಬಂದು ತಲುಪುತ್ತವೆ..

ಅದಕ್ಕಾಗಿ ಪ್ರೀತಿಯ ರೈತ ಬಾಂಧವರೇ ನಮ್ಮ ಮಾಹಿತಿಯನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿರಿ ಹಾಗೆ ನಮ್ಮ ಮಾಹಿತಿಯಂತೆ ನಡೆದುಕೊಂಡು ಎಲ್ಲ ತರದ ಲಾಭವನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿರಿ ಎಂದು ನಾನು ಹೇಳುತ್ತೇನೆ..
ಪೌತಿ ಖಾತೆ ಯೋಜನೆ, ಜಮೀನ್ ವರ್ಗಾವಣೆ ಈಗ ಅತಿ ಸರಳ…!
ನಿಮ್ಮ ಜಮೀನಿನ ಪಹಣಿಯು ತಂದೆ, ತಾತ, ಮುತ್ತಾತರ ಹೆಸರಿನಲ್ಲಿ ಇದ್ದು, ಅದನ್ನು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಬೇಕಾದರೆ, ರೈತರ ಬಳಿ ಸಾಕಷ್ಟು ದಾಖಲೆಗಳು ಇಲ್ಲದ ಕಾರಣ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲಾಗದ ಕಾರಣ ಅಂದರೆ ಪೂರ್ವಜರ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರು ಬೆಳೆ ಸಾಲುಗಳು, ಬೆಳೆ ವಿಮೆ, ಮುಂತಾದ ಸೌಲಭ್ಯಗಳನ್ನು ಪಡೆದು ಕೊಳ್ಳಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಮುಖ್ಯ ಕಾರಣವೆಂದರೆ ಉಳುಮೆ ಮಾಡುತ್ತಿರುವ ರೈತರ ಹೆಸರಿನಲ್ಲಿ ಪಹಣಿಯು ಇರುವದಿಲ್ಲ .ಇಂತಹ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ರಾಜ್ಯ ಕಂದಾಯ ಇಲಾಖೆ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅದರ ಹೆಸರು ಪೌತಿ ಖಾತೆ . ಈ ಯೋಜನೆಯ ಮೂಲಕ ರೈತರು ತಮ್ಮ ಹೆಸರಿನಲ್ಲಿ ಜಮೀನನ್ನು ಸರಳವಾಗಿ ವರ್ಗಾವಣೆ ಮಾಡಿಕೊಳ್ಳಬಹುದು.

ರಾಜ್ಯದಲ್ಲಿ ಪೌತಿ ಖಾತೆ ಬದಲಾವಣೆಗೆ ಇದ್ದ ನಿಯಮವನ್ನು ಸಡಿಲಗೊಳಿಸಿ ಆಂದೋಲನ ರೂಪದಲ್ಲಿ ಖಾತೆ ಬದಲಾವಣೆ ಮಾಡಲು ರಾಜ್ಯ ಸರ್ಕಾರ, ಕಂದಾಯ ಇಲಾಖೆ ನಿರ್ಧರಿಸಿದೆ . ಖಾತೆ ಬದಲಾವಣೆಗಾಗಿ 2.71 ಲಕ್ಷಕ್ಕೂ ಅಧಿಕ ಪ್ರಕರಣಗಳು ಕಾಯುತ್ತಿವೆ. ಭೂಮಿ ತಂತ್ರಾಂಶ, ಪರಿಹಾರ ತಂತ್ರಾಂಶದಲ್ಲಿ ಹಾಗೂ ಇತರ ತಂತ್ರಾಂಶಗಳಲ್ಲಿ ದಾಖಲಾಗದೇ ಇರುವ ಪ್ರಕರಣಗಳೂ ಬಹಳಷ್ಟಿದ್ದು, ಈ ಸಮಸ್ಯೆಗೆ ಒಂದೇ ಹಂತದಲ್ಲಿ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ.

Leave a Reply

Your email address will not be published. Required fields are marked *