ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ..
D ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ಯೋಜನೆ…
ಹೆಣ್ಣು ಮಕ್ಕಳಿಗೆ ಸಹಾಯವಾಗಲೆಂದು ಹಿಂದುಳಿದ ವರ್ಗದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡಲು ಒಂದು ಉತ್ತಮವಾದಂತಹ ನಿರ್ಧಾರವನ್ನು ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಒಂದು ಉತ್ತಮವಾದಂತಹ ಯೋಜನೆಯನ್ನು ಕೈಗೊಳ್ಳಲಾಗಿದೆ.
ಹಿಂದುಳಿದ ವರ್ಗದ ಹೆಣ್ಣು ಮಕ್ಕಳಿಗೆ ಸಹಾಯವಾಗಲೆಂದು ಈ ಯೋಜನೆ ತಂದಿದ್ದು ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡಲು ನಿರ್ಧರಿಸಿದ್ದಾರೆ.
ಈ ಉಚಿತವಾದ ಯೋಜನೆಯನ್ನು ಪಡೆದುಕೊಳ್ಳಬೇಕೆಂದರೆ ಮೊದಲು ನೀವು ಸ್ವಲ್ಪ ಕ್ರಮಗಳನ್ನು ಓದಿಕೊಂಡು ಪಾಲಿಸಬೇಕಾಗುತ್ತದೆ ಆಕ್ರಮಗಳು ಏನೆಂಬುದನ್ನು ಕೆಳಗಿನಂತಿವೆ ನೋಡೋಣ ಬನ್ನಿ..
1) ಉಚಿತವಾದ ಯಂತ್ರ ಬೇಕೆಂದರೆ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
2) ತರಬೇತಿಯ ಸರ್ಟಿಫಿಕೇಟ್ ಇರಬೇಕಾಗುತ್ತದೆ
3) ಆಧಾರ್ ಕಾರ್ಡ್ ಇನ್ಕಮ್ ಕಾಸ್ಟ್ ಎಲ್ಲವೂ ಬೇಕಾಗಿರುತ್ತದೆ
4) ಮೊಬೈಲ್ ನಂಬರ್ ಆಧಾರ್ ಕಾರ್ಡ್ ಗೆ ಲಿಂಕ್ ಇರಬೇಕಾಗುತ್ತೆ.
ಈ ಮೇಲಿನ ಕ್ರಮಗಳನ್ನು ಪಾಲಿಸಿದರೆ ಮಾತ್ರ ನಿಮಗೆ ಉಚಿತವಾದಂತಹ ಈ ಹೊಲಿಗೆ ಯಂತ್ರಗಳು ದೊರೆಯುತ್ತವೆ.
ಈ ಕ್ರಮಗಳನ್ನು ವಿವರಣೆಯೊಂದಿಗೆ ಇಲ್ಲಿ ನೋಡೋಣ ಬನ್ನಿ..
1) ಅರ್ಜಿಯನ್ನು ಸಲ್ಲಿಸುವುದು ಹೇಗೆ…?
ಹೌದು ಉಚಿತವಾದಂತ ಹಾಲಿಗೆ ಯಂತ್ರ ಬೇಕೆಂದರೆ ನೀವು ಮೊದಲು ಆನ್ಲೈನ್ ನಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಈ ಅರ್ಜಿಯನ್ನು ಸಲ್ಲಿಸಬೇಕೆಂದರೆ ನೀವು ನಿಮ್ಮ ಸಮೀಪದ ಸೆಂಟರ್ ಹಾಗೆ ಹೊಲಿಗೆ ತರಬೇತಿ ಕೇಂದ್ರದ ಸರ್ಟಿಫಿಕೇಟ್.
ಈ ದಾಖಲಾತಿಗಳು ಇದ್ದರೆ ನೀವು ಕೂಡಲೇ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡುತ್ತಿದ್ದು ಕೂಡಲೇ ಅರ್ಜಿಯನ್ನು ಸಲ್ಲಿಸಿ ಹಾಗೆ ಬಹುಬೇಗನೆ ನೀವು ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.
ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ನಿಮ್ಮ ಅರ್ಜಿಯನ್ನು ಅವರು ಪರಿಶೀಲಿಸಿ ಸರಿ ಇದ್ದಲ್ಲಿ ಮಾತ್ರ ನಿಮಗೆ ಯಂತ್ರವನ್ನು ಬಹುಬೇಗನೆ ನೀಡುತ್ತಾರೆ.
ಅದಕ್ಕಾಗಿ ಮೊದಲು ನಿಮ್ಮ ಸಮೀಪ ಇರುವ ನೆಟ್ ಸೆಂಟರ್ಗೆ ಹೋಗಿ ದಾಖಲಾತಿಗಳನ್ನು ತೆಗೆದುಕೊಂಡು ಅರ್ಜಿಯನ್ನು ಸಲ್ಲಿಸಿ. ಹಾಗೆಯೇ ಒಂದು ಮೊಬೈಲ್ ನಂಬರನ್ನು ನೀವು ಇದಕ್ಕೆ ನೀಡಬೇಕಾಗುತ್ತದೆ.
ನೀವು ಈ ಮೊಬೈಲ್ ನಂಬರ್ ಅನ್ನು ನೀಡಿದ ನಂತರ ನಿಮ್ಮ ಅರ್ಜಿಯ ಪರಿಶೀಲನೆ ಆಗಿದೆ ನಂತರ ಎಲ್ಲ ತರಹದ ಮೆಸೇಜುಗಳು ಈ ಮೊಬೈಲ್ ನಂಬರಿಗೆ ಬರುತ್ತವೆ.
ಯಾರು ಯಾರು ಈ ಯೋಜನೆಗೆ ಅರ್ಹತೆ ಪಡೆದಿದ್ದಾರೆ..?
ಈ ಯೋಜನೆ ಮಹಿಳೆಯರಿಗೆ ಸೀಮಿತವಾಗಿದ್ದು ಅದರಲ್ಲಿಯೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮಾತ್ರ ನೀಡಲು ಯೋಜಿಸಲಾಗಿದೆ.
ಅವು ಯಾವ ವರ್ಗಗಳೆಂದರೆ ಇಲ್ಲಿವೆ ನೋಡೋಣ ಬನ್ನಿ…
Category 1
Category 2A
Category 2B
Category 3A
Category 3B
ಈ ಮೇಲ್ಕಂಡ ಹಿಂದುಳಿದ ವರ್ಗದ ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆ ಅಡಿಯಲ್ಲಿ ಯಂತ್ರವನ್ನು ಪಡೆದುಕೊಳ್ಳಲು ಅರ್ಹತೆಯನ್ನು ಪಡೆದಿದ್ದಾರೆ.
ಇನ್ನು ಉಳಿದ ವರ್ಗಗಳಿಗೆ ನೀಡುವುದಿಲ್ಲ ಎಂದು ಖಚಿತಪಡಿಸಿದ್ದಾರೆ ಮುಂದಿನ ದಿನಗಳಲ್ಲಿ ಅವರಿಗೂ ಸಹ ನೀಡಬಹುದು ಏನು ಎಂಬುದನ್ನು ಸೂಚನೆಯನ್ನು ನೀಡಲಿದ್ದು ಇದಕ್ಕಾಗಿ ಸ್ವಲ್ಪ ಜನರು ಕಾಯಬೇಕಾಗುತ್ತದೆ.
ಈ ಯೋಜನೆಯ ಮಹತ್ವ..
ಹಿಂದುಳಿದ ವರ್ಗದ ಹೆಣ್ಣು ಮಕ್ಕಳಿಗೆ ಸಹಾಯವಾಗಲೆಂದು ಯೋಜನೆಯನ್ನು ಸೂಚಿಸಿ ಅದರಲ್ಲಿ ಮನೆಯಲ್ಲಿ ಕುಳಿತು ಕೊಂಡು ಕೆಲಸ ಮಾಡಲು ಇದೊಂದು ಉಪಯೋಗಕಾರಿಯದಂತಹ ಕೆಲಸವಾಗಿದ್ದು ಅದಕ್ಕಾಗಿ ಹೊಲಿಗೆ ಯಂತ್ರವನ್ನು ನೀಡುತ್ತಿದ್ದಾರೆ.
ಇದರಿಂದಾಗಿ ಹಿಂದುಳಿದ ಜನರಿಗೆ ಸಹಾಯವಾಗುತ್ತದೆ ಹಾಗೆ ಹೆಣ್ಣು ಮಕ್ಕಳ ಸಬಲೀಕರಣಕ್ಕೂ ಸಹ ಇದೊಂದು ಉತ್ತಮವಾದಂತಹ ಯೋಜನೆಯಾಗಿದೆ ಎಂದು ಸಹ ಎಲ್ಲರೂ ಅಭಿಪ್ರಾಯವನ್ನು ಪಟ್ಟಿದ್ದಾರೆ.
ಇದಲ್ಲದೆ ಈ ಯೋಜನೆಗೆ ಎಲ್ಲ ಮುಖಂಡರು ತಮ್ಮ ಉತ್ತಮವಾದಂತ ಅಭಿಪ್ರಾಯವನ್ನು ಸಹ ನೀಡಿದ್ದಾರೆ.
ಈಗಾಗಲೇ ದೇವರಾಜ್ ಅರಸು ಅವರ ಹೆಸರಿನಲ್ಲಿ 10 ಹಲವಾರು ಯೋಜನೆಗಳಿದ್ದು ಈ ಯೋಜನಾ ಅಡಿಯಲ್ಲಿ ವಿದ್ಯಾರ್ಥಿಗಳಿಗೂ ಸ್ಕಾಲರ್ಶಿಪ್ ಅನ್ನು ಸಹ ನೀಡುತ್ತಾ ಬಂದಿದ್ದಾರೆ ಹೀಗೆ ಎಲ್ಲ ತರಹದ ಸಹಾಯಕ್ಕೆ ನಿಂತ ಈ ಬಳಗಕ್ಕೆ ನಮ್ಮ ಕೋಟಿ ನಮನಗಳು
ಧನ್ಯವಾದಗಳು