ಪಡಿತರ ಚೀಟಿಯ ಬಗ್ಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ….
ಹೊಸ ಪಡಿತರ ಚೀಟಿ ಅರ್ಜಿಗಾಗಿ ಕೊನೆಯ ದಿನಾಂಕವನ್ನು ಮುಂದೂಡಿದ ರಾಜ್ಯ ಸರ್ಕಾರ..
ಈಗಾಗಲೇ ಪಡಿತರ ಚೀಟಿಗಾಗಿ ಹೊಸ ಅರ್ಜಿಯನ್ನು ನಿಲ್ಲಿಸಿದ್ದು ಈಗ ಮತ್ತೊಮ್ಮೆ ಹೊಸ ಪಡಿತರ ಚೀಟಿ ಗಾಗಿ ದಿನಾಂಕವನ್ನು ನಿಗದಿಪಡಿಸಿದೆ..
ಎಲ್ಲಿಯವರೆಗೂ ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದು…?
2022 ಡಿಸೆಂಬರ್ 31ರವರೆಗೆ ಹೊಸ ಪಡಿತರ ಚೀಟಿ ಅರ್ಜಿಗಾಗಿ ದಿನಾಂಕವನ್ನು ನಿಗದಿಪಡಿಸಿತ್ತು ಆದರೆ ಈಗ ಹಲವಾರು ಜನ ಅರ್ಜಿಯನ್ನು ಸಲ್ಲಿಸದೆ ಇರುವ ಕಾರಣ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಈಗ ಮತ್ತೊಮ್ಮೆ ದಿನಾಂಕವನ್ನು ಮುಂದುವರಿಸಿದ್ದಾರೆ..
ಜನವರಿ 31- 2023.
ಈ ತಿಂಗಳ ಜನವರಿ 31ನೇ ತಾರೀಖಿನವರೆಗೂ ಹೊಸ ಪಡಿತರ ಚೀಟಿ ಅರ್ಜಿಗಾಗಿ ದಿನಾಂಕವನ್ನು ನಿಗದಿಪಡಿಸಿದ್ದಾರೆ ಹಾಗೆ ಇದಲ್ಲದೆ ಪಡಿತರ ಚೀಟಿಯ ತಿದ್ದುಪಡಿಗಾಗಿಯೂ ಸಹ ಅವಕಾಶವನ್ನು ನೀಡಿದ್ದಾರೆ..
ಎಲ್ಲಿಯವರೆಗೂ ಪಡಿತರ ಚೀಟಿಯನ್ನು ತಿದ್ದಬಹುದು.?
ಜನವರಿ 31 2023ರವರೆಗೂ ಹಳೆಯ ರೇಷನ್ ಕಾರ್ಡ್ ಗಳನ್ನು ತೆಗೆದರೂ ಅವಕಾಶವನ್ನು ನೀಡಲಾಗಿದೆ ಹಲವಾರು ರೇಷನ್ ಕಾರ್ಡ್ ಗಳು ರದ್ದಿಯಾಗಿದ್ದು ರದ್ದುಪಡಿಸಿರುವ ಪಡಿತರ ಚೀಟಿಯನ್ನು ಮತ್ತೊಮ್ಮೆ ತಿದ್ದುಪಡಿ ಮಾಡಿ ನೀವು ಅವುಗಳನ್ನು ಚಾಲ್ತಿಯಲ್ಲಿ ಮಾಡಿಸಬೇಕಾಗುತ್ತದೆ ಅವಕಾಶವನ್ನು ಕೊಟ್ಟಿದ್ದಾರೆ.
ಈಗಾಗಲೇ ಸಾವಿರಗಟ್ಟಲೆ ಅರ್ಜಿಯನ್ನು ತಿರಸ್ಕರಿಸಿದ್ದು ಹೊಸ ಅರ್ಜಿ ಮತ್ತೊಮ್ಮೆ ನೀವು ಹಾಕಲು ಅವಕಾಶವನ್ನು ನೀಡಿದ್ದಾರೆ..
ತಿದ್ದುಪಡಿಗಾಗಿ ಅವಕಾಶವನ್ನು ನೀಡಿದ್ದು ಯಾವ ಯಾವ ತರಹದ ತಿದ್ದುಪಡಿಗಾಗಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಈ ಕೆಳಗಿನಂತಿವೆ ನೋಡೋಣ ಬನ್ನಿ…
ಪಡಿತರ ಚೀಟಿಯ ತಿದ್ದುಪಡಿಯ ಅವಕಾಶಗಳನ್ನು ಇಲ್ಲಿ ನೋಡಿ.
1) ಹೆಸರು ನೋಂದಾಯಿಸುವುದು.
2) ಹೆಸರನ್ನು ತಿದ್ದುವುದು.
3) ಸದಸ್ಯರ ಹೆಸರನ್ನು ಸೇರಿಸುವುದು.
4) ಸದಸ್ಯರ ಹೆಸರನ್ನು ತೆಗೆದುಹಾಕಲಾಗುವುದು.
5) ಸದಸ್ಯರ ಫೋಟೋ ಬದಲಾವಣೆ.
6) ಸದಸ್ಯರ ಫೋಟೋ ಸೇರ್ಪಡೆ.
7) ವಿಳಾಸ ಬದಲಾವಣೆ.
8) ನ್ಯಾಯಬೆಲೆ ಅಂಗಡಿಯ ಬದಲಾವಣೆ.
9) ಆಧಾರ್ ಕಾರ್ಡ್ ಜೋಡಣೆ.
ಈ ಮೇಲ್ಕಂಡ ಎಲ್ಲ ಕಾರಣಗಳಿಗಾಗಿ ತಿದ್ದುಪಡಿಯಾಗಿ ಅವಕಾಶವನ್ನು ಕಲ್ಪಿಸಲಾಗಿದ್ದು ನಿಮ್ಮ ಪಡಿತರ ಚೀಟಿಯಲ್ಲಿ ಏನಾದರೂ ತಪ್ಪಾಗಿದ್ದರೂ ಸಹ ನೀವು ಅದನ್ನು ಕೂಡಲೆ ತಿಂದಿಸಿಕೊಳ್ಳಬಹುದಾಗಿದೆ ತಿದ್ದಿಸಲು ಕೇವಲ ಜನವರಿ 31 2023 ರವರೆಗೆ ಅವಕಾಶವನ್ನು ನೀಡಲಾಗಿದ್ದು ಇದರಲ್ಲಿ ನೀವೇನಾದರೂ ತಿದ್ದುಪಡಿ ಮಾಡಿಸಿದೆ ಇದ್ದರೆ ಮುಂದೆ ಯಾವುದೇ ತರದ ತಿದ್ದುಪಡಿಗಾಗಿ ದಿನಾಂಕವನ್ನು ನಿಗದಿಪಡಿಸುವುದಿಲ್ಲ ಎಂದು ರಾಜ್ಯ ಸರ್ಕಾರವು ತಿಳಿಸಿದೆ.
ಅದಕ್ಕಾಗಿ ಕೂಡಲೇ ಎಚ್ಚೆತ್ತುಕೊಂಡು ಈ ತಿದ್ದುಪಡಿಯನ್ನು ಮಾಡಿಸಿಕೊಳ್ಳಬೇಕು ಹಾಗೆ ನಿಮ್ಮ ಪಡಿತರ ಚೀಟಿ ಮುಂದಿನ ದಿನಗಳಲ್ಲಿ ರದ್ದಾಗದಂತೆ ಕಾಯ್ದುಕೊಳ್ಳಲು ಇದೊಂದು ಉಪಯುಕ್ತವಾದಂತ ಅವಕಾಶವಾಗಿರುತ್ತದೆ..
ಈಗಾಗಲೇ ಸಾವಿರಾರು ಕಾರ್ಡುಗಳು ರದ್ದಾಗಿದ್ದು ನೀವು ನಿಮ್ಮ ಕಾರ್ಡನ್ನು ಯಾವುದೇ ತರಹದ ರದ್ದಾಗದಂತೆ ನೋಡಿಕೊಳ್ಳಿ ಇನ್ನು ಮುಂದೆ ರದ್ದಾದರೆ ಪುನಃ ಕಾರ್ಡನ್ನು ಚಾಲ್ತಿ ಮಾಡಲು ಅವಕಾಶವನ್ನು ನೀಡಲಾಗುವುದಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಪಡಿತರ ಚೀಟಿಯನ್ನು ತೆಗೆದು ಹಾಕಲು ಪಾಲಿಸಿರುವಂತಹ ಕಠಿಣ ಕ್ರಮಗಳನ್ನು ಇಲ್ಲಿ ನೋಡೋಣ ಬನ್ನಿ.
1) ಸರ್ಕಾರಿ ನೌಕರರ ಪಡಿತರ ಚೀಟಿ ತೆಗೆದುಹಾಕಲಾಗಿದೆ.
2) ಐದು ಎಕರೆಗಿಂತ ಹೆಚ್ಚು ಹೊಲವನ್ನು ಹೊಂದಿದ್ದಕ್ಕಾಗಿ ಪಡಿತರ ಚೀಟಿಯನ್ನು ತೆಗೆದು ಹಾಕಲಾಗಿದೆ.
3) ಅತಿ ಹೆಚ್ಚು ಆದಾಯ ಹೊಂದಿದ್ದಕ್ಕಾಗಿ ಪಡಿತರ ಚೀಟಿಯನ್ನು ತೆಗೆದು ಹಾಕಲಾಗಿದೆ.
4) ಸರಿಯಾದ ದಾಖಲಾತಿ ನೀಡಲಾಗದೆ ಇರುವುದಕ್ಕೆ ಪಡಿತರ ಚೀಟಿಯನ್ನು ತೆಗೆದು ಹಾಕಲಾಗಿದೆ.
5) ಕಡಿಮೆ ಸದಸ್ಯರನ್ನು ಹೊಂದಿರುವುದಕ್ಕಾಗಿ ಪಡಿತರ ಚೀಟಿಯನ್ನು ತೆಗೆದು ಹಾಕಲಾಗಿದೆ.
ಹೌದು ಹೀಗೆ ಅನೇಕ ತರಹದ ಕಠಿಣ ಕ್ರಮಗಳನ್ನು ಪಾಲಿಸಿದ್ದು ಇವುಗಳಲ್ಲಿ ಯಾವುದೇ ಒಂದು ಕ್ರಮವು ನೀವು ಪಾಲಿಸಿದರೆ ನಿಮ್ಮ ಪಡಿತರ ಚೀಟಿ ರದ್ದಾಗಿದೆ.
ರದ್ದಾಗಿರುವ ಪಡಿತರ ಚೀಟಿಯನ್ನು ಸಹ ನೀವು ಪುನಃ ವಿನಂತಿಯ ಮುಖಾಂತರ ಮತ್ತೊಮ್ಮೆ ಅದನ್ನು ಚಾಲ್ತಿಯಲ್ಲಿ ತರಲು ಸಹಾಯಕವಾಗಿದೆ.
ಜನರಿಗೆ ಹಲವಾರು ಬಾರಿ ಗೊತ್ತಿಲ್ಲದಂತೆ ಪಡಿತರ ಚೀಟಿಗಳು ರದ್ದಾಗಿದ್ದು ಅವುಗಳನ್ನು ಸಹ ಇನ್ನೊಮ್ಮೆ ಚಾಲ್ತಿ ಮಾಡಲು ರಾಜ್ಯ ಸರ್ಕಾರವು ಅವಕಾಶವನ್ನು ನೀಡಿದ್ದು ಅವುಗಳಿಗೂ ಸಹ ನೀವು ವಿನಂತಿಯ ಮೇರೆಗೆ ನಿಮ್ಮ ಪಡಿತರ ಚೀಟಿಯನ್ನು ಮತ್ತೊಮ್ಮೆ ಚಾಲ್ತಿ ಮಾಡಿಸಬಹುದಾಗಿದೆ.
ಪಡಿತರ ಚೀಟಿ ಲಾಭದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮಾಹಿತಿಯನ್ನು ಓದಿ..
ಕೇವಲ ಒಂದು ಪಡಿತರ ಚೀಟಿ ಇದ್ದರೆ 10 ಹಲವಾರು ಲಾಭಗಳು ದೊರಕುತ್ತವೆ ಎಂದು ಈಗಾಗಲೇ ನಿಮಗೆ ತಿಳಿದಿರುತ್ತದೆ.
ಪಡಿತರ ಚೀಟಿ ಹೊಂದಿದ್ದರೆ ಆಯುಷ್ಮಾನ್ ಭಾರತ ಕಾರ್ಡು ಸಹ ಉಚಿತವಾಗಿ ನಿಮಗೆ ದೊರೆಯುತ್ತದೆ.
ಈ ಆಯುಷ್ಮಾನ್ ಭಾರತ್ ಕಾರ್ಡಿನಿಂದ 5 ಲಕ್ಷ ವರೆಗೂ ಉಚಿತ ಆಸ್ಪತ್ರೆಯ ಖರ್ಚನ್ನು ರಾಜ್ಯ ಸರ್ಕಾರ ಕೊಟ್ಟು ನಿಭಾಯಿಸುತ್ತದೆ.
ಹಾಗೆಯೇ ತಿಂಗಳಿಗಾಗುವಷ್ಟು ಆಹಾರ ಧಾನ್ಯಗಳನ್ನು ಸಹ ನೀಡಲಾಗುತ್ತದೆ.
ಅಲ್ಲದೆ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಸ್ಕಾಲರ್ಶಿಪ್ ಅನ್ನು ಸಹ ನೀಡುತ್ತಾರೆ.
ಹೀಗೆ ಇನ್ನು ಹತ್ತು ಹಲವಾರು ಲಾಭಗಳಿದ್ದು ಕೂಡಲೇ ನಿಮ್ಮ ಕಡೆ ಪಡಿತರ ಚೀಟಿ ಇಲ್ಲದಿದ್ದರೆ ಅರ್ಜಿಯನ್ನು ಸಲ್ಲಿಸಿರಿ ಹಾಗೆ ಲಾಭವನ್ನು ಪಡೆದುಕೊಳ್ಳಿರಿ.