ಪ್ರೀತಿಯ ರೈತ ಬಾಂಧವರೇ..!
ರೈತರೇ ನೀವು ಈಗಾಗಲೇ ಮುಂಗಾರು ಬೆಳೆಯ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದೀರಿ ಎಂದು ನಾವು ಭಾವಿಸುತ್ತೇವೆ.
ಹಲವಾರು ಕಾರಣಗಳಿಂದಾಗಿ ಬೆಳೆಯಮೆಯನ್ನು ನೀಡಲು ನಿರ್ಧರಿಸಿದ ಕೇಂದ್ರ ಸರ್ಕಾರವು ಕಠಿಣ ಕ್ರಮಗಳನ್ನು ತಂದಿದೆ.
ಹಲವಾರು ರೈತರು ತಪ್ಪುಗಳನ್ನು ಮಾಡುತ್ತಿರುವುದರಿಂದ ಅಂತಹ ಅರ್ಜಿಗಳನ್ನು ತೆಗೆದು ಹಾಕಲೆಂದು ನಿರ್ಧರಿಸಿದ ಕೇಂದ್ರ ಸರ್ಕಾರವು ಕಠಿಣ ಸೂಚನೆಗಳನ್ನು ರೈತರಿಗೆ ಈಗಾಗಲೇ ನೀಡಿದೆ.ಈ ಸೂಚನೆಗಳನ್ನು ಪಾಲಿಸಿದವರಿಗೆ ಮಾತ್ರ ಬೆಳೆಯುಮೆ ನೀಡಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.ಅದಕ್ಕಾಗಿ ಇನ್ನು ಒಂದು ತಿಂಗಳು ಕಾಲಾವಕಾಶ ಇದ್ದು ಯಾವುದೇ ತರಹದ ತಪ್ಪನ್ನು ಮಾಡಿದರೆ ಈಗಲೇ ಕೆಳಗಿನ ಸೂಚನೆಗಳನ್ನು ಓದಿ ಮತ್ತು ತಿದ್ದುಕೊಳ್ಳಿರಿ.
ಕಠಿಣ ಕ್ರಮಗಳು ಮತ್ತು ಸೂಚನೆಗಳು ಈ ಕೆಳಗಿನಂತಿವೆ.
1) ಸರಿಯಾಗಿ ಹೊಲದ ಪಹಣಿಯ ಮಾಹಿತಿ ನೀಡಿರಬೇಕು.
2) ಅರ್ಜಿಯಲ್ಲಿ ಯಾವುದೇ ತಪ್ಪುಗಳಿರಬಾರದು.
3) ಹೊಲದಲ್ಲಿರುವ ಬೆಳೆಯ GPRS ಆಗಿರಬೇಕು.
4) ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಹಾಗೂ ಮೊಬೈಲ್ ನಂಬರ್ ಲಿಂಕ್ ಇರಬೇಕು.
5)e-kyc ಕಡ್ಡಾಯವಾಗಿ ಮಾಡಿಸಬೇಕು.
6) ಅರ್ಜಿ ಸಲ್ಲಿಸಿದ ದಾಖಲೆಗಳನ್ನು ಮುಂದಿನ ಪರಿಶೀಲನೆಗಾಗಿ ಕಾಯ್ದಿಟ್ಟುಕೊಂಡಿರಬೇಕು.
ಹೀಗೆ ಇನ್ನು ಹತ್ತು ಹಲವಾರು ಕಠಿಣ ಕ್ರಮಗಳು ಮತ್ತು ಸೂಚನೆಗಳಿದ್ದು ಅವುಗಳನ್ನು ಪಾಲಿಸಿದ್ದೆ ಆದಲ್ಲಿ ನಿಮಗೆ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಹಣವು ಬಂದೇ ಬರುತ್ತದೆ.
ರೈತರಿಗೆ ಯಾವುದೇ ತರಹದ ಮೋಸವಾಗಬಾರದೆಂದು ಕೇಂದ್ರ ಸರ್ಕಾರವು ನೇರವಾಗಿ ರೈತರ ಖಾತೆಗೆ ಹಣವನ್ನು ಜಮಾ ಮಾಡುವುದಾಗಿ ತಿಳಿಸಿದೆ.ಅದಕ್ಕಾಗಿ ಬ್ಯಾಂಕ್ ಅಕೌಂಟ್ ನ ಮಾಹಿತಿಯನ್ನು ಸರಿಯಾಗಿ ನೀಡಬೇಕೆಂದು ಕೇಂದ್ರ ಸರ್ಕಾರ ರೈತರಿಗೆ ಮನವಿ ಮಾಡಿದೆ.ಅದಕ್ಕಾಗಿ ನೀವೇನಾದರೂ ಮೇಲ್ಕಂಡಿರುವ ಸೂಚನೆಗಳನ್ನು ಈಗಲೇ ಪಾಲಿಸಿ ಎಂದು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.ಅದಕ್ಕಾಗಿ ರೈತ ಬಾಂಧವರು ಈ ಸೂಚನೆಗಳನ್ನು ಸರಿಯಾಗಿ ಓದಿಕೊಂಡು ಮತ್ತು ಅವುಗಳನ್ನು ಪಾಲಿಸಿ ಎಂಬುವುದು ನಮ್ಮ ಮನವಿ.
GPRS ತಪ್ಪಾಗಿದ್ದರೆ ತಿದ್ದುವುದು ಹೇಗೆ..?
ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮತ್ತು ಅರ್ಜಿ ಸಲ್ಲಿಸಿರುವ ಬೆಳೆಯು ಎರಡು ಬೇರೆಯಾಗಿದ್ದರೆ ಕೂಡಲೇ ನೀವು ನಿಮ್ಮ ರೈತರ ಸಂಪರ್ಕ ಕೇಂದ್ರಕ್ಕೆ ಹೋಗಿ ತಪ್ಪಾಗಿದೆ ಎಂದು ಮನವಿಯನ್ನು ಸಲ್ಲಿಸಬೇಕು.
ಹೀಗೆ ಮಾಡಿದಾಗ ನಿಮ್ಮ ಮನವಿಯನ್ನು ಸ್ವೀಕರಿಸಿ ಅವರು ಇನ್ನೊಮ್ಮೆ ನಿಮ್ಮ ಹೊಲದಲ್ಲಿರುವ ಬೆಳೆಯನ್ನು ಜಿಪಿಆರ್ಎಸ್ ಮಾಡುತ್ತಾರೆ.ಆಗ ಮಾತ್ರ ನಿಮಗೆ ಹಣ ಬರಲು ಸಾಧ್ಯವಾಗುತ್ತದೆ.
ಇಲ್ಲವಾದಲ್ಲಿ ನೀವು ಹಾಕಿರುವಂತಹ ಅರ್ಜಿಯನ್ನು ಕೇಂದ್ರ ಸರ್ಕಾರವು ತಪ್ಪಾಗಿದೆ ಎಂದು ತೆಗೆದು ಹಾಕಲು ನಿರ್ಧರಿಸುತ್ತದೆ.ಅದಕ್ಕಾಗಿ ರೈತ ಬಾಂಧವರೇ ಕೇವಲ ಸಣ್ಣ ತಪ್ಪಿನಿಂದಾಗಿ ಅತಿ ಹೆಚ್ಚು ಬೆಳೆ ವಿಮೆ ಬರುವುದನ್ನು ಕಳೆದುಕೊಳ್ಳಬೇಡಿ.ಹಾಗೆ ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆ ಎಂಬುದನ್ನು ಸಹ ನೀವು ಖಚಿತ ಪಡಿಸಿಕೊಳ್ಳಬೇಕು.ಇಲ್ಲವಾದಲ್ಲಿ ಇದು ಒಂದು ಕಾರಣವೂ ನಿಮಗೆ ಹಣ ಬರುವುದನ್ನು ತಪ್ಪಿಸುತ್ತದೆ.
ಅದಕ್ಕಾಗಿ ಮೇಲ್ಕಂಡ ಸೂಚನೆಗಳನ್ನು ಇನ್ನೊಮ್ಮೆ ತಪ್ಪದೇ ಓದಿರಿ ಮತ್ತು ಸರಿಯಾಗಿ ತಿಳಿದುಕೊಂಡು ಅರ್ಥೈಸಿಕೊಂಡು ಪಾಲಿಸಿ.ಹಾಗೆ ನಿಮಗೆ ತಿಳಿಯದ ಸಮಸ್ಯೆಗಳಿದ್ದರೆ ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ರೈತ ಸಂಪರ್ಕ ಕೇಂದ್ರದ ಸಹಾಯವಾಣಿ ಸಂಖ್ಯೆ ಇದೆ ಅದಕ್ಕೆ ಈಗಲೇ ಕಾಲ್ ಮಾಡಿ ನಿಮ್ಮ ತಪ್ಪುಗಳನ್ನು ತಿದ್ದುಕೊಳ್ಳಬಹುದು.ಅದಕ್ಕಾಗಿ ಇನ್ನು ಒಂದು ತಿಂಗಳು ಕಾಲಾವಕಾಶ ಇದ್ದು ಕೂಡಲೇ ನೀವು ಮಾಡಿರುವಂತಹ ತಪ್ಪುಗಳನ್ನು ತಿದ್ದುಕೊಳ್ಳಲು ಕೇಂದ್ರ ಸರ್ಕಾರವು ಅನುಮತಿಸಿದೆ ಮತ್ತು ಒಂದು ಉತ್ತಮವಾದಂತಹ ಅವಕಾಶವನ್ನು ನೀಡಿದೆ.
ಅರ್ಜಿ ಒಪ್ಪಿಗೆ ಇದೆ ಅಥವಾ ಇಲ್ಲವೋ ಎಂಬುದು ನೋಡುವುದು ಹೇಗೆ..?
ಈ ಡಿಜಿಟಲ್ಲಿ ಬರಲಿ ರೈತರಿಗೆ ಸಹಾಯವಾಗಲೆಂದು 10 ಹಲವಾರು ಕೇಂದ್ರ ಸರ್ಕಾರ ಸೃಷ್ಟಿಸಿದ್ದು ಈ ಆಪ್ ಮೂಲಕ ನಿಮ್ಮ ಅರ್ಜಿ ಸರಿಯಾಗಿದೆಯೋ ಅಥವಾ ಇಲ್ಲವೋ ಎಂದು ನೀವು ತಿಳಿದುಕೊಳ್ಳಲು ಸಹಾಯಕವಾಗಿದೆ.ಅದಕ್ಕಾಗಿ ನೀವು ಮೊದಲು ಪ್ಲೇ ಸ್ಟೋರ್ ನಲ್ಲಿ ಹೋಗಿ “ಬೆಳೆ ದರ್ಶಕ್2022-23” ಎಂದು ಸರ್ಚ್ ಮಾಡಿದರೆ ಈ ಆಪ್ ನಿಮಗೆ ಸುಲಭವಾಗಿ ದೊರಕುತ್ತದೆ.ಈ ಆಪನ್ನು ಕೂಡಲೇ ನೀವು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ.ಹಾಗೆ ನಿಮ್ಮ ಅರ್ಜಿಯ ಬಗ್ಗೆ ಪರಿಶೀಲನೆ ಮಾಡಲು ಈ ಬಹಳ ಉಪಯುಕ್ತವಾಗಿದೆ ಮತ್ತು ಬಹು ಮುಖ್ಯವಾಗಿದೆ.ಈ ಆಪ್ ನಲ್ಲಿ ನಿಮ್ಮ ಹೊಲದ ಪಹಣಿಯ ಸಂಪೂರ್ಣ ಮಾಹಿತಿಯನ್ನು ಯಾವುದೇ ತಪ್ಪಿಲ್ಲದೆ ತುಂಬಿರಿ.ಆನಂತರ ನಿಮ್ಮ ಒಲವು ಯಾವ ಜಿಲ್ಲೆಗೆ ಸೇರಿದೆ ಯಾವ ತಾಲೂಕಿಗೆ ಸೇರಿದೆ ಎಂಬುವ ಮಾಹಿತಿಯನ್ನು ಸರಿಯಾಗಿ ತುಂಬಿರಿ.
ಅವಾಗ ಈ ಆಪ್ ಮೂಲಕ ನಿಮ್ಮ ಅರ್ಜಿ ಸರಿಯಾಗಿ ಸರ್ಕಾರದಿಂದ ಮನ್ನಣೆ ಪಡೆದಿದೆಯೋ ಅಥವಾ ಇಲ್ಲವೋ ಎಂಬುದು ನಿಮಗೆ ಖಚಿತಪಡಿಸಿಕೊಳ್ಳಲು ಸರಿಯಾದ ಮಾಹಿತಿ ದೊರೆಯುತ್ತದೆ.ಸರಿಯಾಗಿದೆ ಎಂದು ಮನ್ನಣೆ ಪಡೆದಿದ್ದರೆ ನೀವು ಯಾವುದೇ ತಪ್ಪು ಮಾಡಿಲ್ಲ ಎಂದರ್ಥ.ಅದಕ್ಕಾಗಿ ಪ್ರೀತಿ ಬಾಂಧವರೇ ಬೆಳೆ ದರ್ಶಕ್ ಆಪ್ ಮೂಲಕ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ.ಇದನ್ನು ಬಿಟ್ಟು ಇನ್ನೊಂದು ಮಾರ್ಗವಿದೆ ಅದುವೇ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುವುದು.ಅಲಿಯು ಸಹ ನಿಮಗೆ ಬೇಕಾಗಿರುವ ಮಾಹಿತಿಯನ್ನು ಸರಿಯಾಗಿ ನೀಡುತ್ತಾರೆ.ಇಲ್ಲದೆ ಈ ಬೆಳೆ ದಶಕ ಮೂಲಕ ನೋಡಿರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಎಲ್ಲವನ್ನು ತಿಳಿದುಕೊಳ್ಳಿ.
ಕೇವಲ ಈ ಎರಡು ಮಾರ್ಗಗಳಿದ್ದು ಇವುಗಳಲ್ಲಿ ನೀವು ಒಂದನ್ನು ಪಾಲಿಸಿದರೆ ಸಾಕು.ಇಷ್ಟು ಮಾಡಿದ್ದೆ ಆದಲ್ಲಿ ಮತ್ತು ವಿಕ್ರಮಗಳನ್ನು ಪಾಲಿಸಿದ್ದೆ ಆದಲ್ಲಿ ನಿಮಗೆ ಫೆಬ್ರವರಿ ತಿಂಗಳಲ್ಲಿ ಬೆಳೆವಿಮೆ ಬಂದೇ ಬರುತ್ತದೆ.
ಹೆಚ್ಚಿನ ಮಾಹಿತಿಗಾಗಿ:-
ರೈತರ ಅನುಕೂಲಕ್ಕಾಗಿ ಬೆಳೆ ಪರಿಹಾರಗಳನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂಬುದು ಸರ್ಕಾರದ ಒಂದು ಒಳ್ಳೆಯ ಉದ್ದೇಶವಾಗಿದೆ.ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ರೈತರ ಬೆಳೆಗಳು ಹಾಳಾಗುತ್ತಿದ್ದು ಇದನ್ನು ಅಂದರೆ ಈ ಕಷ್ಟವನ್ನು ಬರಿಸಲು ಕೇಂದ್ರ ಸರ್ಕಾರಗಳು ಮತ್ತು ರಾಜ್ಯ ಸರ್ಕಾರಗಳು ಮುಂದಾಗಿದ್ದು ಸ್ವಲ್ಪ ಹಣವನ್ನು ರೈತರ ಕಷ್ಟವನ್ನು ಬರಿಸಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಈ ಉತ್ತಮವಾದಂತಹ ಕೆಲಸಕ್ಕೆ ಮನ್ನಣೆಯನ್ನು ನೀಡಿವೆ.ಅದಕ್ಕಾಗಿ ಜನರೇ ಎಚ್ಚೆತ್ತುಕೊಂಡು ಉಪಯುಕ್ತವಾದಂತ ಒಂದು ಒಳ್ಳೆಯ ಸೌಕಾರ್ಯವನ್ನು ಪಡೆದುಕೊಂಡು ನಿಮ್ಮ ನಷ್ಟವನ್ನು ಭರಿಸಿಕೊಳ್ಳಿ.ಹೀಗೆ ಅನೇಕ ತರಹದ ಸೌಲಭ್ಯಗಳು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಎರಡು ಸಹ ನೀಡುತ್ತಿದ್ದು ಇವುಗಳ ಉಪಯೋಗವನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳಬೇಕೆಂಬುದು ನಮ್ಮ ಆಶಯ ಮತ್ತು ಇದಕ್ಕೆ ಬೇಕಾದಂತಹ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದೇವೆ ಈ ಮಾಹಿತಿಯನ್ನು ಕೇವಲ ನಿಮ್ಮ ಮೊಬೈಲ್ ನಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.ದಿನೇ ದಿನೇ ಎಲ್ಲ ಸೌಲಭ್ಯಗಳ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿವೆ ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಧನ್ಯವಾದಗಳು.