ಮುಂಗಾರು ಬೆಳೆಯ ಅರ್ಜಿಗಳು ಪರಿಶೀಲನೆ ಆಗುತ್ತಿದ್ದು ರೈತರು ಕಡ್ಡಾಯವಾಗಿ ಈ ಸೂಚನೆಗಳನ್ನು ಪಾಲಿಸಬೇಕು

ರೈತ ಬಾಂಧವರೇ ಈ ಕೆಳಗಿನ ಸೂಚನೆಗಳನ್ನು ಪಾಲಿಸಿದರೆ ಮಾತ್ರ ಮುಂಗಾರು ಮಳೆ ಪರಿಹಾರ ಸುಲಭವಾಗಿ ನಿಮ್ಮ ಅಕೌಂಟಿಗೆ ಬರುತ್ತವೆ

WhatsApp Group Join Now
Telegram Group Join Now

ಈಗಾಗಲೇ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಮುಂಗಾರು ಬೆಳೆ ಪರಿಹಾರ ಹಣವನ್ನು ಮಂಜೂರು ಮಾಡಿತ್ತು.
ಈಗ ಕೇಂದ್ರ ಸರ್ಕಾರವು ಬೆಳೆ ಸಮೀಕ್ಷೆ ಯನ್ನು ನಡೆಸುತ್ತಿದೆ.
ಫಲಾನುಭವಿಗಳಿಗೆ ಹಣವನ್ನು ಮಂಜೂರು ಮಾಡಲು ಕೇಂದ್ರ ಸರ್ಕಾರವು ತಯಾರಾಗಿದೆ.
ಹಣವನ್ನು ಮಂಜೂರು ಮಾಡುವುದಕ್ಕಿಂತ ಮೊದಲು ರೈತರ ಅರ್ಜಿಯ ಪರಿಶೀಲನೆ ಹಾಗೂ ಇನ್ನಿತರ ಪರಿಶೀಲನೆಗಳು ನಡೆಯುತ್ತಿವೆ.
ಈ ಅರ್ಜಿಯಲ್ಲಿ ಏನಾದರೂ ತಪ್ಪಾಗಿದ್ದರೆ ಹಣವನ್ನು ಕೇಂದ್ರ ಸರ್ಕಾರ ಮಂಜೂರು ಮಾಡುವುದಿಲ್ಲ.

ಅದಕ್ಕಾಗಿ ಈಗಲೇ ರೈತರು ಎಚ್ಚೆತ್ತುಕೊಳ್ಳಬೇಕು.
ಅಂದರೆ ನೀವು ನಿಮ್ಮ ಅರ್ಜಿಯನ್ನು ಪರಿಶೀಲಿಸಬೇಕು. ಹಾಗೆಯೇ ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಎಲ್ಲವೂ ನಿಮ್ಮ ಹೊಲದ ಪಹನಿಗೆ ಲಿಂಕ್ ಇದೆ ಇಲ್ಲ ಎಂಬುದನ್ನು ಪರಿಶೀಲಿಸಬೇಕು.
ಮತ್ತು ನಿಮ್ಮ ಹೊಲದಲ್ಲಿರುವ ಬೆಳೆ ಜಿಪಿಆರ್ಎಸ್ ಆಗಿದೆ ಇಲ್ಲ ಎಂಬುದು ಹಾಗೆ ಇನ್ನಿತರ ಕ್ರಮಗಳನ್ನು ನೀವು ಪರಿಶೀಲಿಸಿಕೊಳ್ಳಬೇಕು.
ನಿಮಗೆ ಅತಿ ಸುಲಭವಾಗಿ ಬೆಳೆ ಪರಿಹಾರ ದೊರಕಬೇಕೆಂದರೆ ಈ ಕೆಳಗಿನ ಮಾಹಿತಿಯನ್ನು ಓದಿ ಮತ್ತು ಅನುಸರಿಸಿ.

ಬೆಳೆ ಪರಿಹಾರ ದೊರಕಬೇಕೆಂದರೆ ಕೈಗೊಳ್ಳಬೇಕಾಗಿರುವ ಮುಂಜಾಗ್ರತ ಕ್ರಮಗಳು

1) ಹಾಕಿದ ಅರ್ಜಿ ಸರಿಯಾಗಿದೆ ಇಲ್ಲ ಎಂಬುದನ್ನು ನೋಡಬೇಕು.
2) ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಎಲ್ಲವೂ ಲಿಂಕ್ ಇದೆ ಎಂದು ಖಚಿತಪಡಿಸಿಕೊಳ್ಳಬೇಕು.
3)ನಿಮ್ಮ ಹೊಲದಲ್ಲಿರುವ ಬೆಳೆ ಜಿಪಿಆರ್ಎಸ್ ಆಗಿದೆ ಇಲ್ಲ ಎಂದು ನೋಡಿಕೊಳ್ಳಬೇಕು.
4) ಅರ್ಜಿಯಲ್ಲಿ ಸಲ್ಲಿಸಿದ ಬೆಳೆ ಹಾಗೂ ಜಿಪಿಆರ್ಎಸ್ ಮಾಡಿದ ಬೆಳೆ ಎರಡು ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.

ಹೀಗೆ ನೀವು ಮಾಡಿದರೆ ನಿಮಗೆ ಬೇರೆ ಪರಿಹಾರ ದೊರಕುವುದು.


1) ಹಾಕಿದ ಅರ್ಜಿ ಸರಿಯಾಗಿದೆ ಇಲ್ಲ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ..?

ಹೌದು ಬೆಳೆ ಪರಿಹಾರ ದೊರಕಬೇಕೆಂದರೆ ಮೊದಲು ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈಗಾಗಲೇ ಅರ್ಜಿಯನ್ನು ನೀವು ಸಲ್ಲಿಕೆ ಮಾಡಿರಬಹುದು.
ಅರ್ಜಿ ಸಲ್ಲಿಕೆ ಮಾಡಿದ ನಂತರ ನಿಮಗೆ ಅರ್ಜಿ ಸಲ್ಲಿಕೆ ಮಾಡಿದ ಒಂದು ಪ್ರತಿಯನ್ನು ನೀಡುತ್ತಾರೆ ಆ ಪ್ರತಿಯನ್ನು ನೀವು ನಿಮ್ಮ ಹತ್ತಿರ ಇಟ್ಟುಕೊಳ್ಳಬೇಕು.
ಆ ಪ್ರತಿಯಲ್ಲಿ ಇರುವ Acknowledgment ನಂಬರ್ ಅನ್ನು ನೀವು ನೀವು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಆ ನಂಬರ್ ಇಂದಲೇ ನಿಮ್ಮ ಅರ್ಜಿ ಸಲ್ಲಿಕೆಯಾಗಿದೆ ಅಥವಾ ಇಲ್ಲ ಎಂದು ನಿಮಗೆ ತಿಳಿಯುತ್ತದೆ.
ಇದನ್ನು ನೀವು ತಿಳಿಯಬೇಕಾದರೆ ಈ ನಂಬರ್ ಅನ್ನು ತೆಗೆದುಕೊಂಡು ನಿಮ್ಮ ಊರಿನಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು. ಆಗ ಅವರು ಅದನ್ನು ಪರಿಶೀಲಿಸಿ ಸರಿಯಾಗಿದೆ ಅಥವಾ ತಪ್ಪಾಗಿದೆ ಎಂದು ನಿಮಗೆ ತಿಳಿಸುತ್ತಾರೆ.

ಹಾಗೆ ನೀವು ಬ್ಯಾಂಕ್ ಅಕೌಂಟ್ ನಿಮ್ಮ ಹೊಲದ ಪಹಣಿಗೆ ಲಿಂಕ್ ಆಗಿದೆ ಇಲ್ಲ ಎಂದು ಖಚಿತ ಪಡಿಸಿಕೊಳ್ಳಬೇಕು. ಇಲ್ಲವಾದರೆ ದಯವಿಟ್ಟು ಆಧಾರ್ ಕಾರ್ಡಿಗೆ ನಿಮ್ಮ ಮೊಬೈಲ್ ನಂಬರನ್ನು ಲಿಂಕ್ ಮಾಡಿ ಅದನ್ನು ಸಹ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಿಸಿ.
ಯಾಕೆಂದರೆ ಕೇಂದ್ರ ಸರ್ಕಾರ ಅರ್ಜಿಯನ್ನು ಪರಿಶೀಲಿಸುವಾಗ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಮೊಬೈಲ್ ನಂಬರ್ ಲಿಂಕ್ ಇಲ್ಲದಿದ್ದರೆ ನಿಮಗೆ ಹಣ ಬರುವುದು ವಿಳಂಬವಾಗುತ್ತದೆ ಅಥವಾ ಬರದೇ ಇರಬಹುದು ಸಹ.
ಅದಕ್ಕಾಗಿ ತಾವು ಈ ಅರ್ಜಿಯನ್ನು ಪರಿಶೀಲಿಸಬೇಕು.
ಇವೆಲ್ಲವನ್ನು ನೀವು ಪರಿಶೀಲಿಸಿದರೆ ಪರಿಶೀಲನೆ ಮೊದಲೇ ಹಂತ ಮುಕ್ತಾಯವಾಗುತ್ತದೆ.
ಆದರೆ ಇವೆಲ್ಲವನ್ನೂ ಅಚ್ಚುಕಟ್ಟಾಗಿ ನೀವು ಮಾಡಬೇಕು.

ಬೆಳೆಯ GPRS ಎಂದರೇನು..?


ಹೌದು ಕೇಂದ್ರ ಸರ್ಕಾರವು ಕಟ್ಟುನಿಟ್ಟಾಗಿ ಈ ಜಿಪಿಆರ್ಎಸ್ ಎಂಬುದನ್ನು ಪಾಲಿಸುತ್ತದೆ.
ಜಿಪಿಆರ್ಎಸ್ ಅಂದರೆ ನಿಮ್ಮ ಹೊಲದಲ್ಲಿ ಬೆಳೆದಿರುವ ಬೆಳೆಯ ಫೋಟೋವನ್ನು ಹೊಡೆದು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಎಂದರ್ಥ. ಜಿಪಿ ಆರ್ ಎಸ್ ಅತಿ ಸುಲಭವಾಗಿ ಮಾಡಬೇಕೆಂದು ಕೇಂದ್ರ ಸರ್ಕಾರವು ಪ್ಲೇ ಸ್ಟೋರ್  ನಲ್ಲಿ ತನ್ನದೇ ಆದ App ಅನು ಸೃಷ್ಟಿಸಿದೆ ಅದರ ಹೆಸರೇ “https://play.google.com/store/apps/details?id=com.csk.KharifOfficer2022.cropsurvey”
ಬೆಳೆ ಖಾರಿಫ್. ಈ ಆಪ್ ನಲ್ಲಿ ನೀವು ನಿಮ್ಮ ಹೊಲದಲ್ಲಿರುವ ಬೆಳೆಯನ್ನು ಅತಿ ಸುಲಭವಾಗಿ ಜಿಪಿಆರ್ಎಸ್ ಅನ್ನು ಮಾಡಬಹುದು.
ಈ ಆಪ್ ನಲ್ಲಿ ಅತಿ ಸುಲಭವಾಗಿ ನೀವು ನಿಮ್ಮ ಹೊಲದಲ್ಲಿ ಇರುವ ಬೆಳೆಯ ಫೋಟೋ ಅನ್ನು ತೆಗೆದು ಅಪ್ಲೋಡ್ ಮಾಡಿದರೆ ಇನ್ನೊಂದು  ಮಹತ್ವ ಪೂರ್ಣವಾದ ಕಾರ್ಯ ಮುಕ್ತಾಯವಾಗುತ್ತದೆ.

ಈಗಾಗಲೇ ನೀವು ಜಿಪಿಆರ್ಎಸ್ ಅನ್ನು ಮಾಡಿಸಿರುತ್ತೀರಿ ಎಂದು ಭಾವಿಸುತ್ತೇನೆ. ಅಂದರೆ ಇದು ಮುಂಗಾರು ಬೆಳೆ ಪರಿಹಾರ ಆಗಿದ್ದರಿಂದ ಈಗ ಯಾವುದೇ ತರಹದ ಜಿಪಿಆರ್ಎಸ್ ಮಾಡಲು ಬರುವುದಿಲ್ಲ. ಆದರೆ ತಿದ್ದುಪಡಿ ಮಾಡುವುದು ಅತಿ ಸುಲಭ ಅದು ಹೇಗೆ ಎಂದು ಕೆಳಗೆ ಓದಿ ತಿಳಿದುಕೊಳ್ಳಿ.

ಅದಕ್ಕಿಂತ ಮೊದಲು ನೀವು ಇನ್ನೊಂದು App ಬಗ್ಗೆ ತಿಳಿದುಕೊಳ್ಳಬೇಕು.
ಅದುವೇ “ಬೆಳೆ ದರ್ಶಕ್”

ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ತಪ್ಪಾಗಿದ್ದರೆ ಈ ಬೆಳೆ ದರ್ಶನ್ ನಲ್ಲಿ ಹೋಗಿ ಆಕ್ಷೇಪಣೆ ಇದೆ ಎಂದು ಒತ್ತಿದರೆ ಇನ್ನೊಮ್ಮೆ ನಿಮ್ಮ ಹೊಲದಲ್ಲಿರುವ ಬೆಳೆಯನ್ನು ಜಿಪಿಆರ್ಎಸ್ ಮಾಡಬಹುದು.
ನಿಮ್ಮ ಹೊಲದಲ್ಲಿರುವ ಮುಂಗಾರಿನ ಬೆಳೆಯ ಜಿಪಿಆರ್ಎಸ್ ಕೇವಲ ಈ ಒಂದೇ ಮಾರ್ಗದಿಂದ ಬರಲು ಸಾಧ್ಯ.
ಮಾರ್ಗ ಬಿಟ್ಟು ಇನ್ನೊಂದು ಯಾವುದೇ ಮಾರ್ಗ ಇಲ್ಲ.
ಅದಕ್ಕಾಗಿ ಅಚ್ಚುಕಟ್ಟಾಗಿ ಈ ಮೇಲಿನ ಸೂಚನೆಗಳನ್ನು ಪಾಲಿಸಿ.

ಬೆಳೆ ದರ್ಶಕ್ ಅಂದರೇನು..?


ಬೆಳೆ ದರ್ಶಕ್ ಎಂದರೆ ನಿಮ್ಮ ಹೊಲದಲ್ಲಿ ನೀವು ಮಾಡಿರುವ ಬೆಳೆಯ ಜಿಪಿಆರ್ಎಸ್  ಸರಿಯಾಗಿದೆ ಅಥವಾ ತಪ್ಪಾಗಿದೆ ಎಂದು ನಿಮಗೆ ತಿಳಿಯುತ್ತದೆ.

ಹಾಗೆ ಕೇಂದ್ರ ಸರ್ಕಾರವು ನೀವು ಜಿಪಿಆರ್ಎಸ್ ಮಾಡಿರುವುದನ್ನು ಪರಿಶೀಲಿಸಿ ಸರಿಯಾಗಿದೆ ಎಂದು ಭಾವಿಸಿದೆಯೋ ಅಥವಾ ಇಲ್ಲವೋ ಎಂದು ಸಹ ನಿಮಗೆ ತಿಳಿಯುತ್ತದೆ.

ಅದಕ್ಕಾಗಿ ನೀವು ಈ ಬೆಳೆ ದರ್ಶಕ್ ಆ್ಯಪನ್ನು ಕೂಡಲೇ ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿ ಸರಿಯಾದ ನಿಮ್ಮ ಹೊಲದ ಮಾಹಿತಿಯನ್ನು ತುಂಬಿ .ಕೇಂದ್ರ ಸರ್ಕಾರವು ಸರಿಯಾಗಿದೆ ಎಂದು ಅಕ್ಷೇಪಿಸಿದೆ ಅಥವಾ ಇಲ್ಲವೋ ಎಂದು ನೋಡಿಕೊಳ್ಳಿ.

ಅಥವಾ ನೀವು ಜಿಪಿಆರ್ಎಸ್ ಮಾಡಿರುವುದೇ ತಪ್ಪಾಗಿದ್ದರೆ ಕೂಡಲೇ ಮೇಲೆ ಸೂಚಿಸಿರುವ ಹಾಗೆ ಮಾಡಿ.

ಈ ಮೇಲೆ ಸೂಚಿಸಿರುವ ಹಾಗೆ ನೀವೇನಾದರೂ ಮಾಡಿದ್ದೆ ಆದಲ್ಲಿ ನಿಮಗೆ ಕೇಂದ್ರ ಸರ್ಕಾರದಿಂದ ಮಂಜೂರಾದ ಮುಂಗಾರು ಬೆಳೆ ಪರಿಹಾರ ಬರುವುದು ಖಚಿತ.

ಈಗಾಗಲೇ ಕೇಂದ್ರ ಸರ್ಕಾರವು ಅರ್ಜಿಯನ್ನು ಪರಿಶೀಲಿಸುತ್ತಿದ್ದು ತಪ್ಪಾಗಿದ್ದ ಅರ್ಜಿಗಳನ್ನು ತೆಗೆದು ಹಾಕುತ್ತಿದೆ. ಅದಕ್ಕಾಗಿ ರೈತಬಾಂಧವರು  ನಾನು ಸೂಚಿಸಿರುವ ಹಾಗೆ ಪಾಲಿಸಿದ್ದೆ ಆದಲ್ಲಿ ನಿಮಗೆ ಖಂಡಿತವಾಗಿಯೂ ಬೆಳೆ ಪರಿಹಾರ  ದೊರಕುತ್ತದೆ.

ಸ್ಮಾರ್ಟ್ ಫೋನ್ ಇಲ್ಲದಿದ್ದರೆ ಹೇಗೆ ಮಾಡಬೇಕು..?

ಹಲವಾರು ರೈತರ ಕಡೆ ಸ್ಮಾರ್ಟ್ಫೋನ್ ಇಲ್ಲದ ಕಾರಣ ಅವರಿಗೆ ಬಹಳ ತೊಂದರೆ ಆಗುತ್ತದೆ. ನಿಮ್ಮ ಕಡೆ ಸ್ಮಾರ್ಟ್ ಫೋನ್ ಇಲ್ಲದಿದ್ದರೆ ತೊಂದರೆ ಇಲ್ಲ.
ಏಕೆಂದರೆ ರೈತರಿಗೆ ಸಹಾಯವಾಗಲೆಂದ ಕೇಂದ್ರ ಸರ್ಕಾರವು ಸಹಾಯವಾಣಿ ಸಂಖ್ಯೆ ಎಂದು ನಿರ್ದಿಷ್ಟವಾದ ಸಂಖ್ಯೆಯನ್ನು ನೀಡುತ್ತಿದೆ.
ಆ ಸಂಖ್ಯೆಗೆ ನೀವು ಕಾಲ್ ಮಾಡಿ ನಿಮ್ಮ ಅರ್ಜಿಯ ಬಗ್ಗೆ ನೀವು ಪರಿಶೀಲನೆ ಮಾಡಬಹುದು.
ಹಾಗೆ ನಿಮಗೆ ಏನಾದರೂ ಅನುಮಾನವಿದ್ದರೂ ಸಹ ಕೇಂದ್ರ ಸರ್ಕಾರವು ನಿಮಗೆ ಸಹಾಯಮಾಡುತ್ತದೆ.
ಸಹಾಯವಾಣಿ ಸಂಖ್ಯೆಯನ್ನು ನೀವು ನಿಮ್ಮ ರೈತ ಸಂಪರ್ಕದಲ್ಲಿ ಪಡೆಯಬಹುದು.

ಇನ್ನೂ ಸಹ ನಿಮಗೆ ಏನೂ ತಿಳಿಯದಿದ್ದರೂ ಚಿಂತೆ ಬೇಡ. ಅರ್ಜಿ ಸಲ್ಲಿಸಿದ ಪ್ರತಿಯನ್ನು ತೆಗೆದುಕೊಂಡು ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ನಿಮ್ಮ ಡೌಟ್ ಗಳನ್ನು ಕ್ಲಿಯರ್ ಮಾಡಿಕೊಳ್ಳಿ.
ಇಷ್ಟು ಮಾಡಿದ್ದೆ ಆದಲ್ಲಿ ಅತಿ ಸುಲಭವಾಗಿ ಮುಂದಿನ ಅಂದರೆ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಬೆಳೆ ಪರಿಹಾರ ನಿಮ್ಮ ಅಕೌಂಟಿಗೆ ಬರುತ್ತದೆ.

ಈಗಾಗಲೇ ಕೇಂದ್ರ ಸರ್ಕಾರವು ಹಿಂಗಾರು ಬೆಳೆ ಪರಿಹಾರ ಅರ್ಜಿ ಸಲ್ಲಿಕೆಗೆ ಕರೆದಿದ್ದು ಕೂಡಲೇ ಅರ್ಜಿಯನ್ನು ಸಲ್ಲಿಸಿ. ಹಿಂಗಾರು ಬೆಳೆ ಪರಿಹಾರ ಕ್ಕೂ ಇದೇ ಮೇಲಿನ ಕ್ರಮಗಳನ್ನು ಪಾಲಿಸಿ.

ಇವೆಲ್ಲವೂ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ಪ್ರಧಾನಮಂತ್ರಿಯವರು ಮಾಡಿರುವ ಮಾತುಪೂರ್ಣವಾದ ಘಟ್ಟವಾಗಿದೆ. ರೈತರಿಗೆ ಸಹಾಯವಾಗಲೆಂದೆ ಇಷ್ಟೊಂದು ಸೌಲಭ್ಯಗಳನ್ನು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಪ್ರಧಾನಮಂತ್ರಿಯವರು ಘೋಷಿಸುತ್ತಿದ್ದಾರೆ.
ಈಗಾಗಲೇ ಪ್ರಧಾನಮಂತ್ರಿಯವರು ಮುಂಗಾರು ಬೆಳೆಯ ಪರಿಹಾರವನ್ನು ಘೋಷಿಸಿದ್ದು ಇನ್ನು ಕೆಲವೇ ತಿಂಗಳುಗಳಲ್ಲಿ ಮುಂಗಾರಿನ ಹಣವು ರೈತರ ಅಕೌಂಟಿಗೆ ಜಮಾ ಆಗುತ್ತದೆ ಅದಕ್ಕಾಗಿ ನೀವೇನಾದರೂ ಮುಂಗಾರು ಬೆಳೆಯ ಪರಿಹಾರದಿಂದ ವಂಚಿತರಾಗಿದ್ದರೆ ದಯವಿಟ್ಟು ಈ ಹಿಂಗಾರು ಬೆಳೆಯ ಪರಿಹಾರವನ್ನು ಪಡೆದುಕೊಳ್ಳಿ.
ಹೀಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ.
ಹೀಗೆ ಎಲ್ಲ ತರಹದ ಮಾಹಿತಿಗಳನ್ನು ನಾವು ಸರಿಯಾದ ಸಮಯದಲ್ಲಿ ರೈತರಿಗೆ ನೀಡುತ್ತೇವೆ.
ಈ ಬೆಳೆ ಪರಿಹಾರವನ್ನು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ ಇನ್ನೂ ಕೇವಲ ಎರಡು ತಿಂಗಳಗಳಲ್ಲಿ GPRS ಮಾಡುವುದು ಶುರುವಾಗುತ್ತದೆ.
ಅವಾಗ ನಿಮ್ಮ ಹೊಲದಲ್ಲಿರುವ ಬೆಳೆಯನ್ನು ಜಿಪಿಆರ್ಎಸ್ ಮಾಡುವುದು ಹೇಗೆ ಎಂದು ಸರಿಯಾದ ಮಾಹಿತಿಯನ್ನು ನಿಮಗೆ ನಾವು ತಲುಪಿಸುತ್ತೇವೆ.
ಹೀಗೆ ನೀವು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಬರುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಿ.
ಪಿ ಎಂ ಕಿಸಾನ್ ಯೋಜನಾ ಅಡಿಯಲ್ಲಿರುವ ಎಲ್ಲ ಸೌಲಭ್ಯಗಳ ಮಾಹಿತಿಯನ್ನು ನಾವು ನಿಮಗೆ ತಲುಪಿಸುತ್ತೇವೆ.

ಪ್ರೀತಿಯ ರೈತ ಬಾಂಧವರೇ ಈ ಎಲ್ಲಾ ಸೌಲಭ್ಯಗಳನ್ನು ದಯವಿಟ್ಟು ಪಡೆದುಕೊಳ್ಳಿ ವಂಚಿತರಾಗಬೇಡಿ.
ಹಾಗೆಯೇ ನಿಮ್ಮ ಹೆಸರಿನಲ್ಲಿದ್ದ ಹೊಲದಲ್ಲಿ ಬೇರೆಯವರು ಸಹ ಜಿಪಿಆರ್ಎಸ್ ಮಾಡಿಸಿ ಹಣವನ್ನು ತಾವು ಪಡೆದುಕೊಳ್ಳುತ್ತಾರೆ.
ಅಂತಹ ಹೀನ ಕೆಲಸಕ್ಕೆ ಎಡೆ ಮಾಡಿ ಕೊಡಬೇಡಿ.
ಸ್ವಲ್ಪ ಎಚ್ಚರದಿಂದ ಈ ಹಿಂಗಾರು ಬೆಳೆ ಪರಿಹಾರವನ್ನು ಪಡೆದುಕೊಳ್ಳಿ .ಮೊದಲು ಅರ್ಜಿ ಸಲ್ಲಿಸುವ ಸಮಯ ಬಂದಿದೆ ಅರ್ಜಿಯನ್ನು ಸಲ್ಲಿಸಿ.
ಮಾಡಿದಲ್ಲಿ ನೀವು ಹಿಂಗಾರು ಬೆಳೆ ಪರಿಹಾರವನ್ನು ಪಡೆಯಬಹುದು

ನಿಮ್ಮ ಹೊಲದ ವಿಸ್ತರಣೆಯನ್ನು ನೋಡುವುದು ಹೇಗೆ..?


ಈ ಡಿಜಿಟಲ್ ಯುಗದಲ್ಲಿ ದಿನಬೆಳಗಾದರೆ ದಿನ ಹೊಸ ಹೊಸ ಮಾಹಿತಿಗಳು ಮೊಬೈಲ್ನಲ್ಲಿ ಬರುತ್ತಿದ್ದು ಈಗ ನಿಮ್ಮ ಹೊಲದ ನಕ್ಷೆಯನ್ನು ಸಹ ನೀವು ಅತಿ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ನೋಡಲು ಸಹಾಯವಾಗಲೆಂದು ಪ್ಲೇ ಸ್ಟೋರ್ ನಲ್ಲಿ ಸೃಷ್ಟಿಸಿದ್ದಾರೆ.ಅತಿ ಸುಲಭವಾಗಿ ಕೆಲವೇ ಕ್ಷಣಗಳಲ್ಲಿ ನೀವು ನಿಮ್ಮ ಮೊಬೈಲಲ್ಲಿ ಡಿಶಂಕ ಯಾಪ್ ಬಳಸಿಕೊಂಡು ನಿಮ್ಮ ಹೊಲದ ನಕ್ಷೆಯನ್ನು ಅತಿ ಸುಲಭವಾಗಿ ನೋಡಬಹುದು.ನೀವು ಬಿಶಾಂಕ ಯಾಪನ್ನು ಮೊದಲು ಇನ್ಸ್ಟಾಲ್ ಮಾಡಬೇಕೆಂದರೆ ಪ್ಲೇ ಸ್ಟೋರ್ ಗೆ ಹೋಗಿ ಸರ್ಚ್ ಬಾರ್ ನಲ್ಲಿ ಡಿಶಾಂಕ್ ಆಪ್ ಎಂದು ಸರ್ಚ್ ಮಾಡಬೇಕಾಗುತ್ತದೆ. ಆಗ ನಿಮಗೆ ಡಿಶಾಂಕ್ ಆಪ್ ದೊರೆಯುತ್ತದೆ ಮತ್ತು ಅದನ್ನು ನೀವು ಇನ್ಸ್ಟಾಲ್ ಮಾಡಬೇಕಾಗುತ್ತದೆ. ಇದನ್ನು ಇನ್ಸ್ಟಾಲ್ ಮಾಡಿದ ನಂತರ ಅದರಲ್ಲಿ ನಿಮ್ಮ ಹೊಲದ ವಿವರಣೆಯನ್ನು ಅಚ್ಚುಕಟ್ಟಾಗಿ ತುಂಬಬೇಕಾಗುತ್ತದೆ. ನಂತರ ಅದು ನಿಮಗೆ ನಿಮ್ಮ ಹೊಲದ ನಕ್ಷೆಯನ್ನು ನೀಡುತ್ತದೆ.ಈ ಹೊಲದ ನಕ್ಷೆಯಿಂದ ನಿಮಗೆ ಹತ್ತು ಹಲವಾರು ಲಾಭಗಳಿವೆ ಅಂದರೆ ನಿಮ್ಮ ಹೊಲದಲ್ಲಿ ಏನೇನಿದೆ ಎನ್ನೆಲ್ಲ ಎಂಬುದು ಅಚ್ಚುಕಟ್ಟಾಗಿ ನಿಮಗೆ ಈ ದಿಶಾಂಕ್ ಆಪ್ ನೀಡುತ್ತದೆ. ಅದಕ್ಕಾಗಿ ನೀವು ಈ ದಿಶಾಂಕ್ ಆಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ ಮತ್ತು ನಿಮ್ಮ ಹೊಲದ ನಕ್ಷೆಯನ್ನು ಅತಿ ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ಪಡೆದುಕೊಳ್ಳಿ.ಮೊದಲಿನ ತರಹ ಈಗ ತಹಸಿಲ್ದಾರ್ ಆಫೀಸ್ ಗೆ ಹೋಗಿ ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಕಾಗಿಲ್ಲ. ಕೇವಲ ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು. ಒಂದು ಸ್ಮಾರ್ಟ್ ಫೋನಿಂದ ನೂರಾರು ಲಾಭಗಳಿವೆ.ಹಾಗೆ ರೈತರಿಗೆ ಸಹಾಯವಾಗಲೆಂದು ಈಗಾಗಲೇ ಇನ್ನು ಹತ್ತು ಹಲವಾರು ಸೃಷ್ಟಿಯಾಗಿದ್ದು ಅವುಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿರಿ ಮತ್ತು ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇವೆ ಯಾವುದೇ ಸಂಕೋಚವಿಲ್ಲದೆ ನೀವು ನಮ್ಮನ್ನು ಪ್ರಶ್ನಿಸಿದಾಗ ಮಾತ್ರ ನಿಮಗೆ ಪ್ರತಿಯೊಂದು ಮಾಹಿತಿ ಅತಿ ಸುಲಭವಾಗಿ ದೊರೆಯುತ್ತವೆ.ಅದಕ್ಕಾಗಿ ಪ್ರೀತಿಯ ರೈತ ಬಾಂಧವರೇ ಈ ಯುಗದಲ್ಲಿ ದಯವಿಟ್ಟು ಸ್ಮಾರ್ಟ್ ಫೋನ್ ಅನ್ನು ಬಳಸುವುದು ಕಲಿಯಿರಿ. ಅದರಿಂದ ನಿಮಗೆ ಎಲ್ಲ ತರಹದ ಲಾಭಗಳು ದೊರೆಯುತ್ತವೆ ಅದಕ್ಕಾಗಿ ಸ್ಮಾರ್ಟ್ ಫೋನ್ ನಿಮ್ಮ ಹತ್ತಿರ ಇರಲೇಬೇಕು.

Leave a Reply

Your email address will not be published. Required fields are marked *