ಈ ಕೋವಿಡ್ ಎಂಬ ಮಹಾಮಾರಿಯ ರೋಗದ ದಿನಗಳಲ್ಲಿ ಲಾಕ್ಡೌನ್ ಎಂಬ ವ್ಯವಸ್ಥೆಯನ್ನು ತರಲಾಗಿತ್ತು. ಅದಕ್ಕಾಗಿ ಅವಾಗ ಕಾರ್ಮಿಕರಿಗೆ ಧನಸಹಾಯ ಮಾಡಲೆಂದು ಕರ್ನಾಟಕ ಸರ್ಕಾರವು ಈ ಕಾರ್ಮಿಕ ಕಾರ್ಡ್ ಅನ್ನು ಸೃಷ್ಟಿಸಿತು.
ಈ ಕಾರ್ಡನ್ನು ಕೇವಲ ಕೂಲಿ ಕಾರ್ಮಿಕರಿಗೆ ಮಾತ್ರ ನೀಡಲಾಗುತ್ತದೆ.
ಈ ಕಾರ್ಡಿನಿಂದ ಹಲವಾರು ಉಪಯೋಗಗಳಿವೆ-
1) 50000 ವರೆಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್
2) ಕಾರ್ಮಿಕರಿಗೆ ಪಿಂಚಣಿ
3) ಕಾರ್ಮಿಕರಿಗೆ ಉಚಿತ ಬಸ್ ಪಾಸ್
4) ಕಾರ್ಮಿಕರ ಹೆಣ್ಣು ಮಕ್ಕಳ ಮದುವೆಯ ಸಮಯದಲ್ಲಿ ಎರಡು ಲಕ್ಷ ರೂಪಾಯಿವರೆಗೂ ಸಹಾಯಧನ
5) ಕಾರ್ಮಿಕರ ಜೀವವಿಮೆ
6) ಕಾರ್ಮಿಕರಿಗೆ ಹೆಣ್ಣು ಮಗು ಜನಿಸಿದರೆ 20 ಸಾವಿರ ವರೆಗೆ ಸಹಾಯಧನ
7) ಕಾರ್ಮಿಕರಿಗೆ ಗಂಡು ಮಗು ಜನಿಸಿದರೆ 10000 ವರೆಗೆ ಸಹಾಯಧನ
8) ಕಾರ್ಮಿಕರಿಗೆ ಜೀವನ ನಡೆಸಲು ತಿಂಗಳಿಗೊಮ್ಮೆ ಆಹಾರ ಕಿಟ್
9) ಕಾರ್ಮಿಕರು ಕೆಲಸ ಮಾಡುವ ಸಮಯದಲ್ಲಿ ಮರಣ ಹೊಂದಿದರೆ ಅವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಸಹಾಯಧನ
10) ಕಾರ್ಮಿಕರು ಕೆಲಸ ಮಾಡುವಾಗ ಅಂಗಾಂಗಗಳನ್ನು ಕಳೆದುಕೊಂಡರೆ ಒಂದು ಲಕ್ಷ ರೂಪಾಯಿ ವರೆಗೂ ಸಹಾಯಧನ
11) ಕಾರ್ಮಿಕರ ಮಕ್ಕಳಿಗೆ ಮೀಸಲಾತಿ
ಹಲವಾರು ಯೋಜನೆಗಳಿವೆ.
ಕಾರ್ಮಿಕ ಕಾರ್ಡ್ ಮಾಡಿಸಲು ಬೇಕಾದ ಡಾಕ್ಯುಮೆಂಟ್ಸ್ ಗಳು
1) ಇತ್ತೀಚಿನ 2 ಭಾವಚಿತ್ರಗಳು
2) ಆಧಾರ್ ಕಾರ್ಡ್
3) ಬ್ಯಾಂಕ್ ಪಾಸ್ ಬುಕ್
4) ರೇಷನ್ ಕಾರ್ಡ್
5) ವೋಟರ್ ಐಡಿ
ಇಷ್ಟು ಡಾಕ್ಯುಮೆಂಟ್ಸ್ ಗಳು ನಿಮ್ಮ ಹತ್ತಿರದಲ್ಲಿದ್ದರೆ ನೀವು ಸುಲಭವಾಗಿ ಕಾರ್ಮಿಕ ಕಾರ್ಡನ್ನು ತೆಗೆಸಿಕೊಳ್ಳಬಹುದು.
ಕಾರ್ಮಿಕ ಕಾರ್ಡನ್ನು ಪಡೆಯುವುದು ಹೇಗೆ.?
ಕಾರ್ಮಿಕ ಕಾರ್ಡನ್ನು ನೀವು ಅತಿ ಸುಲಭವಾಗಿ ಪಡೆಯಬಹುದು. ಮೊದಲು ನೀವು ಆನ್ಲೈನ್ ನಲ್ಲಿ ಕಾರ್ಮಿಕ ಕಾಡಿಗಾಗಿ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಇತ್ತೀಚಿನ ಎರಡು ಭಾವಚಿತ್ರಗಳು, ಆಧಾರ್ ಕಾರ್ಡ್, ವೋಟರ್ ಐಡಿ, ಮತ್ತು ಇತರೆ ಡಾಕ್ಯುಮೆಂಟ್ಸ್ ಗಳು ಬೇಕಾಗುತ್ತವೆ.
ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ವೆರಿಫಿಕೇಶನ್ಗಾಗಿ ಒಂದು ನಂಬರಿಗೆ ಕಾರ್ಮಿಕರ ಅಧಿಕಾರಿಗಳು ಫೋನ್ ಮಾಡುತ್ತಾರೆ.
ಆಗ ಅವರು ಫೋನನ್ನು ಮಾಡಿದಾಗ ನೀವು ಸರಿಯಾದ ಮಾಹಿತಿಯನ್ನು ನೀಡಿದರೆ ನಿಮ್ಮ ಕಾರ್ಮಿಕ ಕಾರ್ಡ್ ಅಪ್ಲಿಕೇಶನ್ ವೆರಿಫಿಕೇಶನ್ ಆಗುತ್ತದೆ.
ಆದ ನಂತರ ನಿಮಗೆ ಕಾರ್ಮಿಕರು ದೊರೆಯುತ್ತದೆ.
30 ದಿನಗಳ ಬಳಿಕ ಕಾರ್ಮಿಕ ಕಾರ್ಡ್ ನಿಮ್ಮ ಮನೆಬಾಗಿಲಿಗೆ ಬರುತ್ತದೆ.
ಸ್ನೇಹಿತರೆ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳಿ ಹಲವಾರು ಲಾಭಗಳನ್ನು ಪಡೆದುಕೊಳ್ಳಿ ಈ ಲಾಭಗಳಿಂದ ವಂಚಿತರಾಗಬೇಡಿ.
ಏನಾದರೂ ಡೌಟ್ ಗಳಿದ್ದರೆ ನನ್ನನ್ನು ಸಂಪರ್ಕಿಸಿರಿ.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ.?
ಮೊದಲು ನೀವು ಈ ಮೇಲ್ಕಂಡ ಎಲ್ಲಾ ಡಾಕ್ಯುಮೆಂಟ್ಗಳನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳಬೇಕು.
1) ಸೇವಾ ಸಿಂಧು ಫೋಟೋನಲ್ಲಿ ಒಂದು ಅಕೌಂಟ್ ಅನ್ನು ಕಾರ್ಮಿಕನ ಹೆಸರಿನಲ್ಲಿ ಕ್ರಿಯೇಟ್ ಮಾಡಬೇಕು.
2)Digi Locker ಎಂಬ ಆಪನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು.
3) ಡಿಜಿ ಲಾಕರ್ ಆಪ್ ನಲ್ಲಿ ಕಾರ್ಮಿಕನ ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
4) ಇದಾದ ನಂತರ ಡಿಜಿ ಲಾಕರ್ ನಲ್ಲಿರುವ ಆಧಾರ್ ಕಾರ್ಡನ್ನು ಸೇವಾಸಿಂದು portal ನಲ್ಲಿ ಲಿಂಕ್ ಮಾಡಬೇಕು.
5) ಆಮೇಲೆ ಪೋರ್ಟಲ್ನಲ್ಲಿ ಕಂಡ ಎಲ್ಲ ಮಾಹಿತಿಗಳನ್ನು ಸರಿಯಾಗಿ ತುಂಬಬೇಕು.
6) ಕೊನೆಯದಾಗಿ ಕಾರ್ಮಿಕನ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲಿಗೆ ಒಟಿಪಿ ಬರುತ್ತದೆ.
7) ಓಟಿಪಿಯನ್ನು ತುಂಬಿ ನಂತರ ನೀವು ಸಬ್ಮಿಟ್ ಎಂಬ ಬಟನ್ ಅನ್ನು ಒತ್ತಬೇಕು.
8) ಇಷ್ಟು ಕೆಲಸ ಮಾಡಿದರೆ ಆನ್ಲೈನ್ ನಲ್ಲಿ ಅಪ್ಲಿಕೇಶನ್ ತುಂಬಿದಂತೆ ಆಗುತ್ತದೆ.
ಕಾರ್ಮಿಕ ಕಾರ್ಡನ್ನು ಅಪ್ರೂವ್ ಮಾಡಿಸುವುದು ಹೇಗೆ.??
ಕಾರ್ಮಿಕ ಕಾರ್ಡ್ ಅಪ್ಲಿಕೇಶನ್ ಹಾಕಿದ ನಂತರ ಅದನ್ನು ಅಪ್ರೂವ್ ಮಾಡಿಸುವುದು ಒಂದು ಮಹತ್ವದ ಕೆಲಸವಾಗಿದೆ.
ಅಧಿಕಾರಿಗಳು ನಿಮಗೆ ಸಂಬಂಧಿಸಿದ ಮಾಲೀಕರಿಗೆ ಕರೆ ಮಾಡಿ ನೀವು ಕೆಲಸ ಮಾಡುತ್ತೀರೋ ಅಥವಾ ಇಲ್ಲವೋ ಎಂದು ತಿಳಿದುಕೊಂಡು ನಿಮ್ಮ ಕಾರ್ಡನ್ನು ಅವರು ಅಪ್ರೂವ್ ಮಾಡುತ್ತಾರೆ.
ಅದಕ್ಕಾಗಿ ನೀವು ಸರಿಯಾದ ನಂಬರ್ ಅನ್ನು ಕೊಟ್ಟು ಕರೆ ಮಾಡಿದಾಗ ಹೌದು ಎಂದು ಉತ್ತರಿಸಿದರೆ ಅವರು ನಿಮ್ಮ ಕಾರ್ಡನ್ನು ಅಪ್ರುವಲ್ ಮಾಡುತ್ತಾರೆ.
ಇದಾದ ನಂತರ ನಿಮ್ಮ ಮೊಬೈಲಿಗೆ ಕಾರ್ಮಿಕ ಕಾಡಿನ ನಂಬರ್ ಮೆಸೇಜ್ ಮೂಲಕ ಬರುತ್ತದೆ.
ಇಷ್ಟು ನೀವು ಕೆಲಸವನ್ನು ಮಾಡಿದರೆ ಕಾರ್ಮಿಕ ಕಾರ್ಡ್ ಪಡೆಯುತ್ತೀರಿ ಹಾಗೆ ಅದರ ಲಾಭವನ್ನು ತಪ್ಪದೇ ಪಡೆಯಿರಿ.
ಕಾರ್ಮಿಕ ಕಾರ್ಡಿನ ನಿಲುವು-
ರಾಜ್ಯ ಸರ್ಕಾರವು ಕೋವಿಡ್ ಲಾಕ್ಡೌನ್ ಟೈಮಿನಲ್ಲಿ ಕಾರ್ಮಿಕರಿಗೆ ಬದುಕಲೆಂದೆ ಸಹಾಯ ಮಾಡಲು ಈ ಕಾರ್ಮಿಕ ಕಾಡು ಪದ್ಧತಿಯನ್ನು ಸೃಷ್ಟಿಸಿತು. ಆಮೇಲೆ ಕಾರ್ಮಿಕರ ಮಕ್ಕಳಿಗೆ ಸಹಾಯ ಮಾಡಲೆಂದು ಕಾರ್ಮಿಕ ಕಾಡು ಹೊಂದಿರುವ ಕಾರ್ಮಿಕರ ಮಕ್ಕಳಿಗೆ ಐವತ್ತು ಸಾವಿರ ವರೆಗೆ ಸ್ಕಾಲರ್ಷಿಪ್ಪನ್ನು ಪ್ರತಿ ವರ್ಷ ನೀಡುತ್ತದೆ.
60 ವರ್ಷದ ನಂತರ ಕಾರ್ಮಿಕರಿಗೆ ಪಿಂಚಣಿ ಎಂದು ಸಾವಿರ ರೂಪಾಯಿಯನ್ನು ವಿತರಿಸುವ ಉದ್ದೇಶವನ್ನು ಸಹ ಕರ್ನಾಟಕ ಸರ್ಕಾರ ಹೊಂದಿದೆ. ಕಾರ್ಮಿಕರು ಕೆಲಸ ಮಾಡುವಾಗ ಏನಾದರೂ ಸಾವನ್ನಪ್ಪಿದ್ದಲ್ಲಿ ಕಾರ್ಮಿಕರ ಕುಟುಂಬಕ್ಕೆ 2 ಲಕ್ಷದ ವರೆಗೂ ಸರ್ಕಾರ ಹಣವನ್ನು ನೀಡುತ್ತದೆ.
ಕಾರ್ಮಿಕರು ಕೆಲಸ ಮಾಡುವಾಗ ಏನಾದರೂ ಅವಗಡ ಸಂಭವಿಸಿ ಅಂಗಾಂಗಗಳನ್ನು ಕಳೆದುಕೊಂಡರು ಸಹ ಕರ್ನಾಟಕ ಸರ್ಕಾರ ಒಂದು ಲಕ್ಷ ರೂಪಾಯಿ ಸಹಾಯಧನ ನೀಡುತ್ತದೆ.
ಕಾರ್ಮಿಕರು ಮನೆ ಕಟ್ಟುವಾಗಲು ಸಹ ಕರ್ನಾಟಕ ಸರ್ಕಾರವು 2 ಲಕ್ಷ ರೂಪಾಯಿ ಹಣವನ್ನು ನೀಡುತ್ತದೆ.
ಕಾರ್ಮಿಕರ ಮಕ್ಕಳಿಗೆ ಶಿಕ್ಷಣದ ಉತ್ತೇಜನ ನೀಡಲು ಸರ್ಕಾರವು ಮೀಸಲಾತಿಯನ್ನು ಸಹ ತರುತ್ತಿದೆ.
ಕಾರ್ಮಿಕರು ಅವರು ಕೆಲಸ ಮಾಡುವ ಸ್ಥಳ ಅವರ ಊರಿನಿಂದ ದೂರವಿದ್ದರೂ ಸಹ ಬಸ್ ಪಾಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತದೆ.
ಕಾರ್ಮಿಕರ ಮಕ್ಕಳ ಮದುವೆ ಸಮಾರಂಭದಲ್ಲಿ ಸಹ ಅತಿಹೆಚ್ಚು ಸಹಾಯಧನವನ್ನು ನೀಡುತ್ತದೆ.
ಇಷ್ಟೆಲ್ಲ ಸಹಾಯಗಳು ಕೇವಲ ಕರ್ನಾಟಕ ಸರ್ಕಾರವು ಮಾತ್ರ ಮಾಡುತ್ತದೆ. ಬೇರೆ ರಾಜ್ಯದಲ್ಲಿ ಮತ್ತು ಇನ್ಯಾವ ರಾಜ್ಯದಲ್ಲಿಯೂ ಸಹ ಇಂತಹ ಯೋಜನೆ ಹಾಕಿಕೊಂಡಿಲ್ಲ.
ಕರ್ನಾಟಕ ರಾಜ್ಯ ಸರ್ಕಾರವು ಅತಿ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಲೇ ಬರುತ್ತಿದೆ.
ಇದೊಂದು ಶ್ಲಾಘನೀಯ ವಿಷಯ.
ಸರ್ಕಾರದಿಂದಲೂ ಈ ಕಾರ್ಮಿಕ ಕಾರ್ಡಿಗೆ ಹಲವಾರು ಶ್ಲಾಘನೀಯ ದೊರೆತಿವೆ.
ಅದಕ್ಕಾಗಿ ಪ್ರಧಾನಿ ಮೋದಿ ಅವರು ಸಹ ಸಹಾಯಧನವನ್ನು ನೀಡಿದ್ದಾರೆ.
ಈ ಕಾರ್ಮಿಕ ಕಾರ್ಡನ್ನು ನೀವು ಮಾಡಿಸಿಕೊಳ್ಳಿ ಹಲವಾರು ಲಾಭಗಳನ್ನು ಪಡೆಯಿರಿ ದಯವಿಟ್ಟು ಈ ಲಾಭಗಳಿಂದ ವಂಚಿತರಾಗಬೇಡಿ.
ತಿಂಗಳಿಗಾಗುವಷ್ಟು ತಿನ್ನುವ ಎಣ್ಣೆ ಪೇಸ್ಟ್ ಹಲವಾರು ಕಿಟ್ ಗಳನ್ನು ಕೊಟ್ಟು ಸಹಾಯ ಮಾಡುತ್ತಿದೆ ನಮ್ಮ ಕರ್ನಾಟಕ ಸರ್ಕಾರ.ಇಷ್ಟೆಲ್ಲ ಸಹಾಯಗಳು ಕೇವಲ ಕರ್ನಾಟಕ ಸರ್ಕಾರವು ಮಾತ್ರ ಮಾಡುತ್ತದೆ. ಬೇರೆ ರಾಜ್ಯದಲ್ಲಿ ಮತ್ತು ಇನ್ಯಾವ ರಾಜ್ಯದಲ್ಲಿಯೂ ಸಹ ಇಂತಹ ಯೋಜನೆ ಹಾಕಿಕೊಂಡಿಲ್ಲ.
ಏನಾದರೂ ಡೌಟ್ ಗಳಿದ್ದರೆ ನನ್ನನ್ನು ಸಂಪರ್ಕಿಸಿರಿ.
ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ
ವಿದ್ಯಾರ್ಥಿವೇತನ 2022: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ಕರ್ನಾಟಕ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ 2022
ಕರ್ನಾಟಕ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳನ್ನು ಶಿಕ್ಷಣದತ್ತ ಉತ್ತೇಜಿಸಲು ಕರ್ನಾಟಕ ಸರ್ಕಾರದ ಉಪಕ್ರಮವಾಗಿದೆ. ಹಣಕಾಸಿನ ಕೊರತೆಯಿಂದಾಗಿ ಅನೇಕ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ತ್ಯಜಿಸುತ್ತಾರೆ. ಕಟ್ಟಡ ಕಾರ್ಮಿಕರ ಅನೇಕ ಮಕ್ಕಳು ಹಣಕಾಸಿನ ಕೊರತೆಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಯೋಜನೆಯೊಂದಿಗೆ ಸರ್ಕಾರವು ಅವರಿಗೆ ಹಣಕಾಸಿನ ನೆರವು ನೀಡುವ ಮೂಲಕ ಅವರ ಸಮಸ್ಯೆಯನ್ನು ಪರಿಹರಿಸಲು ಬಯಸುತ್ತದೆ. ಅರ್ಜಿಯನ್ನು ಸಲ್ಲಿಸಲು ಅಧಿಕಾರಿಗಳು ನಿಗದಿಪಡಿಸಿದ ಕೆಲವು ಅರ್ಹತಾ ಷರತ್ತುಗಳಿವೆ. ಕೆಳಗೆ ವಿವರಿಸಿದಂತೆ ನೀವು ಅರ್ಹತೆಯನ್ನು ಪೂರೈಸಿದರೆ ನಂತರ ನೀವು ಕೊನೆಯ ದಿನಾಂಕದ ಮೊದಲು ಅರ್ಜಿಯನ್ನು ಸಲ್ಲಿಸಬಹುದು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಸಹಾಯದ ಮುಖ್ಯಾಂಶಗಳು
ಯೋಜನೆಯ ಹೆಸರು: ಕರ್ನಾಟಕ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ
ಆರಂಭಿಸಿದವರು: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
ಇದಕ್ಕಾಗಿ ಪ್ರಾರಂಭಿಸಲಾಗಿದೆ: ಕಟ್ಟಡ ಕಾರ್ಮಿಕರ ಮಕ್ಕಳು
ಪ್ರಯೋಜನಗಳು: ವಿತ್ತೀಯ
ಅಪ್ಲಿಕೇಶನ್ ವಿಧಾನ: ಆನ್ಲೈನ್
ಅಧಿಕೃತ ಸೈಟ್: karbwwb.karnataka.gov.in
ಅರ್ಹತೆಯ ಮಾನದಂಡ
ವಿದ್ಯಾರ್ಥಿಯು ನೋಂದಾಯಿತ ಕಟ್ಟಡ ಕಾರ್ಮಿಕರ ಮಗುವಾಗಿರಬೇಕು
ವಿದ್ಯಾರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
ಕುಟುಂಬದ ಇಬ್ಬರು ಮಕ್ಕಳಿಗೆ ಮಾತ್ರ ನೆರವು ಸಿಗಲಿದೆ
ಕಾರ್ಮಿಕರು ಮಂಡಳಿಗೆ ಪಾವತಿಸಬೇಕಾದ ಬಾಕಿಯನ್ನು ಹೊಂದಿರಬಾರದು
ಅರ್ಜಿದಾರರು ಪ್ರಸ್ತುತ ಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಓದುತ್ತಿರಬೇಕು
ದೂರ ಶಿಕ್ಷಣ ಕೋರ್ಸ್‌ಗಳು, ಹೋಮ್ ಸ್ಟಡಿ ಕೋರ್ಸ್‌ಗಳು ಮತ್ತು ಆನ್‌ಲೈನ್ ಕೋರ್ಸ್‌ಗಳು ಅರ್ಹವಾಗಿರುವುದಿಲ್ಲ
ಅವಶ್ಯಕ ದಾಖಲೆಗಳು
(ಅಗತ್ಯವಿದ್ದರೆ) ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಅರ್ಜಿ ಪ್ರಕ್ರಿಯೆ ಮತ್ತು ಪರಿಶೀಲನೆ
ಮುಂದಿನ ಶೈಕ್ಷಣಿಕ ವರ್ಷದ 6 ತಿಂಗಳೊಳಗೆ ಅರ್ಜಿ ಸಲ್ಲಿಸಲಾಗಿದೆ
ಮೊದಲ ಮಗುವಿಗೆ ಶಿಕ್ಷಣದ ವಿವರಗಳು
ಎರಡನೇ ಮಗುವಿಗೆ ಶಿಕ್ಷಣದ ವಿವರಗಳು
ಉದ್ಯೋಗ ಪ್ರಮಾಣಪತ್ರ
ಮಾರ್ಕ್ಸ್ ಕಾರ್ಡ್ ಮತ್ತು ಸ್ಟಡಿ ಸರ್ಟಿಫಿಕೇಟ್.
ಮೊದಲ ಮಗುವಿನ ಫೋಟೋ
ಎರಡನೇ ಮಗುವಿನ ಫೋಟೋ
ಬ್ಯಾಂಕ್ ಖಾತೆಯ ಪುರಾವೆ
ಬೋರ್ಡ್ ನೀಡಿದ ಗುರುತಿನ ಪುರಾವೆ/ಸ್ಮಾರ್ಟ್ ಕಾರ್ಡ್ (ದೃಢೀಕರಿಸಿದ ಪ್ರತಿ)
ಪಡಿತರ ಚೀಟಿ
ಕಾರ್ಮಿಕ ಅಧಿಕಾರಿಯಿಂದ ಪರಿಶೀಲನೆ ಮತ್ತು ಅನುಮೋದನೆ
SLI/LI ಮೂಲಕ ಚಂದಾದಾರಿಕೆ ಪ್ರಮಾಣಪತ್ರ
ಕರ್ನಾಟಕ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ ಅರ್ಜಿ ವಿಧಾನ
ವಿದ್ಯಾರ್ಥಿವೇತನ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು, ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು
ನೀವು ಹೌದು ಎಂದು ಆರಿಸಿದರೆ, ಆಧಾರ್ ಸಂಖ್ಯೆ ನಿಮ್ಮ ಹೆಸರಿನ ಲಿಂಗದಂತಹ ಆಧಾರ್ ಪ್ರಕಾರ ವಿವರಗಳನ್ನು ನಮೂದಿಸಬೇಕು
ನೀವು ಬೇಡವೆಂದು ಆರಿಸಿದರೆ ನಿಮ್ಮ ID ಸಂಖ್ಯೆಯನ್ನು ನಮೂದಿಸಬೇಕು
ಭದ್ರತಾ ಕೋಡ್ ಅನ್ನು ನಮೂದಿಸಿ ಮತ್ತು ಘೋಷಣೆಯನ್ನು ಓದಿದ ನಂತರ ಚೆಕ್ಬಾಕ್ಸ್ ಅನ್ನು ತೆಗೆದುಕೊಳ್ಳಿ
ಮುಂದುವರೆಯಲು ಆಯ್ಕೆಯನ್ನು ಆರಿಸಿ ಮತ್ತು ಅರ್ಜಿ ನಮೂನೆಯು ತೆರೆಯುತ್ತದೆ
ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ ಮತ್ತು ಅದನ್ನು ಸಲ್ಲಿಸಿ
ಪೋರ್ಟಲ್‌ನೊಂದಿಗೆ ಲಾಗ್ ಇನ್ ಮಾಡಿ ಮತ್ತು ಕರ್ನಾಟಕ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ ಲಿಂಕ್ ಅನ್ನು ಆಯ್ಕೆ ಮಾಡಿ
ಅನ್ವಯಿಸು ಆಯ್ಕೆಯನ್ನು ಒತ್ತಿರಿ ಮತ್ತು ಫಾರ್ಮ್ ಪರದೆಯ ಮೇಲೆ ತೆರೆಯುತ್ತದೆ
ಕೇಳುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
ಅಪ್ಲಿಕೇಶನ್ ಅನ್ನು ಒಮ್ಮೆ ಪರಿಶೀಲಿಸಿ ಮತ್ತು ಯಾವುದೇ ಬದಲಾವಣೆಗಳನ್ನು ಮಾಡುವ ಅಗತ್ಯವಿಲ್ಲದಿದ್ದರೆ ಅದನ್ನು ಸಲ್ಲಿಸಿ.
SSP ಲಾಗಿನ್
ವಿದ್ಯಾರ್ಥಿವೇತನ ವಿದ್ಯಾರ್ಥಿಗಳಿಗೆ ಲಾಗ್ ಇನ್ ಮಾಡಲು, ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು
ಪೋರ್ಟಲ್‌ನ ಮುಖಪುಟದಿಂದ, ನೀವು ಎಸ್‌ಎಸ್‌ಪಿ ವಿದ್ಯಾರ್ಥಿ ಖಾತೆ ಲಿಂಕ್‌ಗೆ ಲಾಗ್ ಇನ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನೀವು ಲಾಗಿನ್ ಫಾರ್ಮ್ ಅನ್ನು ಕಂಡುಕೊಳ್ಳುವ ಹೊಸ ಪುಟವು ತೆರೆಯುತ್ತದೆ.
SSP ಲಾಗಿನ್
ಈಗ ಈ ಲಾಗಿನ್ ಫಾರ್ಮ್‌ನಲ್ಲಿ, ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
ಪರದೆಯ ಮೇಲೆ ಇರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
ಈಗ ಸ್ಟೂಡೆಂಟ್ ಲಾಗಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಇಲಾಖೆ ಲಾಗಿನ್
ವಿದ್ಯಾರ್ಥಿವೇತನ ವಿದ್ಯಾರ್ಥಿಗಳಿಗೆ ಲಾಗ್ ಇನ್ ಮಾಡಲು, ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು
ಪೋರ್ಟಲ್‌ನ ಮುಖಪುಟದಿಂದ, ನೀವು ಇಲಾಖೆಯ ಲಾಗಿನ್ ಲಿಂಕ್ ಅನ್ನು ಕ್ಲಿಕ್ ಮಾಡಬೇಕು
ನೀವು ಲಾಗಿನ್ ಫಾರ್ಮ್ ಅನ್ನು ಕಂಡುಕೊಳ್ಳುವ ಹೊಸ ಪುಟವು ತೆರೆಯುತ್ತದೆ.
ಇಲಾಖೆ ಲಾಗಿನ್
ಈಗ ಈ ಲಾಗಿನ್‌ನಲ್ಲಿ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
ಪರದೆಯ ಮೇಲೆ ಇರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
ಈಗ ಸ್ಟೂಡೆಂಟ್ ಲಾಗಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಿಮ್ಮ ವಿದ್ಯಾರ್ಥಿ ಐಡಿಯನ್ನು ತಿಳಿದುಕೊಳ್ಳಿ
ವಿದ್ಯಾರ್ಥಿವೇತನ ವಿದ್ಯಾರ್ಥಿಗಳಿಗೆ ಲಾಗ್ ಇನ್ ಮಾಡಲು, ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು
ಪೋರ್ಟಲ್‌ನ ಮುಖಪುಟದಿಂದ, ನೀವು ನಿಮ್ಮ ವಿದ್ಯಾರ್ಥಿ ಐಡಿಯನ್ನು ತಿಳಿಯಿರಿ ಲಿಂಕ್ ಅನ್ನು ಕ್ಲಿಕ್ ಮಾಡಬೇಕು
ನೀವು ಅರ್ಜಿ ನಮೂನೆಯನ್ನು ಕಂಡುಕೊಳ್ಳುವ ಹೊಸ ಪುಟವು ತೆರೆಯುತ್ತದೆ.
ನಿಮ್ಮ ವಿದ್ಯಾರ್ಥಿ ಐಡಿಯನ್ನು ತಿಳಿದುಕೊಳ್ಳಿ
ನೀಡಿರುವ ಬಾಕ್ಸ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
ಈಗ ಗೆಟ್ ಸ್ಟೂಡೆಂಟ್ ಐಡಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ವಿದ್ಯಾರ್ಥಿ ಐಡಿ ದೊರೆಯುತ್ತದೆ.
ನಿಮಗೆ ಬೇಕಾದ ಉಪಯುಕ್ತವಾದ ಮಾಹಿತಿ
ಒಂದು ಬಾರಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಒಂದು ಸಮಿತಿಯನ್ನು ರಚಿಸಿ ಕಾರ್ಮಿಕರ ಬಗ್ಗೆ ಸಮಾಲೋಚಿಸಿ ಮತ್ತು ಪರಿಶೀಲನೆ ನಡೆಸಿ ಎಂದು ನಿರ್ಧರಿಸಿದರು.
ಅವಾಗ ತಿಳಿದು ಬಂದಿದ್ದೆ ಕಾರ್ಮಿಕರು ಜೀವನವು ನಡೆಸಲು ಬಹು ಕಷ್ಟಕರವಾಗಿದೆ ಎಂದು.
ಅದಕ್ಕಾಗಿ ಕಾರ್ಮಿಕರಿಗೆ ಸಹಾಯವಾಗಲೆಂದು ರಾಜ್ಯ ಸರ್ಕಾರವು ಮತ್ತು ಕೇಂದ್ರ ಸರ್ಕಾರವು ನಿರ್ಧರಿಸಿತು.
ಹಲೋ ಭಾರೀ ಸಮಿತಿಯನ್ನು ರಚಿಸಿದಾಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿರ್ಧರಿಸಿತು.
ಎಲ್ಲರ ಸಲಹೆಗಳನ್ನು ತೆಗೆದುಕೊಳ್ಳಬೇಕೆಂದು ಸಮಿತಿಯ ಮೀಟಿಂಗ್ಗಳನ್ನು ಹಲವು ಬಾರಿ ನಡೆಸಲಾಯಿತು.
ಎಲ್ಲರ ಒಪ್ಪಿಗಳನ್ನು ಕೇಳುತ್ತಾ ತಿಳಿಯುತ್ತಾ ಕಾರ್ಮಿಕರ ಸೌಕರ್ಯಗಳನ್ನು ನೀಡಲು ಸರ್ಕಾರವು ಮುಂದಾದವು.
ಅದಕ್ಕಾಗಿ ಕಾರ್ಮಿಕ ಎಂಬ ಯೋಜನೆಯನ್ನು ಸರ್ಕಾರಗಳು ರಚಿಸಿದವು.
ಲಾಕ್ಡೌನ್ ಸಮಯದಲ್ಲಿ ಕಾರ್ಮಿಕರಿಗೆ ಸಹಾಯವಾಗಲೆಂದು ಕಾರ್ಮಿಕ ಕಾರ್ಡನ್ನು ರಚಿಸಿ ಆ ಕಾರ್ಡ್ ಇದ್ದವರಿಗೆ ಮಾತ್ರ ಸೌಲಭ್ಯಗಳನ್ನು ನೀಡಲು ಮುಂದಾದವು.
ಹಾಗೆ ಯಾವ ಸೌಲಭ್ಯಗಳು ನೀಡಿದರೆ ಅವರಿಗೆ ಸಹಾಯವಾಗುತ್ತದೆ ಎಂದು ದಿನೇ ದಿನೇ ಯೋಚಿಸುತ್ತಾ ಒಂದು ನಿರ್ಧಾರಕ್ಕೆ ಸರ್ಕಾರಗಳು ಬಂದವು ಹಾಗೂ ನಿರ್ಧಾರವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಸಮಾಜಕ್ಕೆ ತಿಳಿಸಿದವು.
ಅದಕ್ಕಾಗಿ ಕಾರ್ಮಿಕ ಕಾರ್ಡ್ ಇರುವ ಕಾರ್ಮಿಕರಿಗೆ ಅತಿ ಹೆಚ್ಚು ಸೌಲಭ್ಯಗಳನ್ನು ನೀಡಲೆಂದು ನಿರ್ಧರಿಸಿದ ರಾಜ್ಯ ಸರ್ಕಾರವು ತಿಂಗಳಿಗೊಮ್ಮೆ ಬೇಕಾದಂತ ಎಲ್ಲ ಸರಕಾರಣಗಳನ್ನು ನೀಡುತ್ತಾ ಬಂದಿದ್ದಾರೆ.
ಹಾಗೆಯೇ ಉಪಯುಕ್ತವಾದ ಸರಕಾರರನ್ನು ನೀಡುತ್ತ ಕಾರ್ಮಿಕರ ಮಕ್ಕಳಿಗೆ ಸಹಾಯವಾಗಲೆಂದು ಸ್ಕಾಲರ್ಶಿಪ್ ಅನ್ನು ಘೋಷಿಸಿ ಕಾರ್ಮಿಕರಿಗೆ ಖುಷಿ ಪಡಿಸಲು ಎನ್ನುತ್ತಾ ಹಲವಾರು ಕಾರಣಗಳನ್ನು ನೀಡಿ ಸರ್ಕಾರ ಘನತೆಯನ್ನು ಹೆಚ್ಚಿಸಿಕೊಂಡಿತು.
ಹಾಗೆಯೇ ನಿಮಗೂ ಸಹ ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದರೆ ನೀವು ಮೊದಲು ಮಾಡಬೇಕಾದ ಕೆಲಸವೇನೆಂದರೆ ಕಾರ್ಮಿಕ ಕಾರ್ಡನ್ನು ಮಾಡಿಸಬೇಕು.
ಕಾರ್ಮಿಕ ಕಾರ್ಡನ್ನು ಮಾಡಿಸಬೇಕೆಂದರೆ ನೀವು ಅತಿ ಹೆಚ್ಚು ಪಾಲನೆಗಳನ್ನು ಪಾಲಿಸಬೇಕಾಗುತ್ತದೆ ಅದಕ್ಕಾಗಿ ಪಾಲಿಸಬೇಕಾದಂತ ಸೂಚನೆಗಳನ್ನು ಒಮ್ಮೆ ನೀವು ಸರಿಯಾದ ಕ್ರಮದಲ್ಲಿ ಓದಬೇಕು ಈಗಾಗಲೇ ಇವುಗಳ ಬಗ್ಗೆ ನಾವು ಮೇಲ್ಕಂಡಂತೆ ರಚಿಸಿದ್ದು ಅವುಗಳನ್ನು ಸರಿಯಾಗಿ ಓದಿ ಮತ್ತು ಅವುಗಳನ್ನು ಹಿಂಬಾಲಿಸಿರಿ. ಒಂದು ಬಾರಿ ನೀವೇನಾದರೂ ಕಾರ್ಮಿಕ ಕಾರ್ಡ್ ಮಾಡಿಸಿದರೆ ವರ್ಷಕ್ಕೊಮ್ಮೆ ಅದನ್ನು ರಿನಿವಲ್ ಮಾಡಿಸಬೇಕಾಗುತ್ತದೆ.
ಅದಕ್ಕಾಗಿ ಎಲ್ಲ ಸಂಪೂರ್ಣ ಮಾಹಿತಿಯನ್ನು ಮೇಲ್ಕಂಡಂತೆ ಓದಿ ತಿಳಿದುಕೊಳ್ಳಿ ಮತ್ತು ಅವುಗಳನ್ನು ಪಾಲಿಸಿ ಹಾಗೆ ಸರ್ಕಾರ ನೀಡುವಂತ ಎಲ್ಲ ತರಹದ ಸೌಲಭ್ಯಗಳನ್ನು ಪಡೆದುಕೊಂಡು ಸಂತೋಷದಿಂದ ನಿಮ್ಮ ಜೀವನವನ್ನು ನಡೆಸಿರಿ.
ಹೀಗೆ ಅನೇಕ ತರಹದ ಸುತ್ತಿನಗಳನ್ನು ಪಾಲಿಸಿ ನಿಮ್ಮ ಜೀವನವನ್ನು ಆನಂದವಾಗಿ ನಡೆಸಿರಿ ಎಲ್ಲ ತರಹದ ಸೌಲಭ್ಯ ಪಡೆಯಿರಿ ಖುಷಿಯಾಗಿರಿ. ಇದುವೇ ನಮ್ಮ ಆಶಯವಾಗಿರುವುದರಿಂದ ಕಾರ್ಮಿಕ ಕಾಡಿನ ಬಗ್ಗೆ ಎಲ್ಲ ತರಹದ ಸಂಪೂರ್ಣ ಮಾಹಿತಿಯನ್ನು ನಾವು ನೀಡಿದ್ದೇವೆ .ಧನ್ಯವಾದಗಳು.