ಅದೊಂದು ಕಾಲವಿತ್ತು ಜಮೀನಿನ ನಕ್ಷೆ ಹೊಲವನ್ನು ಅಳೆಯಬೇಕಾದರೆ ಕಚೇರಿಗಳಿಗೆ ಅಲೆದಾಡ ಬೇಕಾಗಿತ್ತು ಅದು ಈ ಈಗಲೂ ಕೂಡ ಚಾಲ್ತಿಯಲ್ಲಿದೆ ಆದರೆ ಕಾಲ ಬದಲಾಗಿದೆ 21ನೇ ಶತಮಾನದಲ್ಲಿ ತಂತ್ರಜ್ಞಾನದ ಮೂಲಕ ಸಲೀಸಾಗಿ ಕೂತ ಜಾಗದಲ್ಲೇ ನಿಮ್ಮ ಹೊಲದ ನಕ್ಷೆಯನ್ನು ಮೊಬೈಲ್ ನಲ್ಲಿ ನೋಡಬಹುದು. ಮೊಬೈಲಲ್ಲಿ ಹೊಲದ ನಕ್ಷೆಯನ್ನು ನೋಡಬೇಕಾದರೆ ಈ ಲೇಖನೆಯನ್ನು ಸಂಪೂರ್ಣವಾಗಿ ಓದಿ.
ನಿಮ್ಮ ಹೊಲದ ನಕ್ಷೆ ಹಾಗೂ ಯಾವ ಯಾವ ಕಾಲದಾರಿಗಳು ನಿಮ್ಮ ಹೊಲದಲ್ಲಿ ಬರುತ್ತವೆ ಹಾಗೂ ದಾರಿ ಎಲ್ಲಿಂದ ಎಲ್ಲಿಯವರೆಗೆ ಇದೆ ನಿಮ್ಮ ಜಮೀನಿನ ಸರ್ವೆ ನಂಬರ್ ಮತ್ತೆ ನಿಮ್ಮ ಜಮೀನ್ ಅಕ್ಕ ಪಕ್ಕ ಯಾವ ಸರ್ವೇ ನಂಬರ್ ಬರುತ್ತೆ ಈ ಎಲ್ಲವನ್ನು ಸುಲಭವಾಗಿ ನೋಡಬಹುದು. ಇದರಿಂದಾಗಿ ಕಚೇರಿಗಳಿಗೆ ಅಲೆದಾಡುವ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಸಮಯವೂ ಕೂಡ ಉಳಿಯುತ್ತದೆ.
ಮೊಬೈಲ್ ನಲ್ಲಿ ನಕ್ಷೆಯನ್ನು ನೋಡುವುದು ಹೇಗೆ ?
ಮೊದಲಿಗೆ ನೀವು ನಿಮ್ಮ ಆಂಡ್ರಾಯ್ಡ್ ಅಥವಾ ಯಾವುದೇ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಬ್ರೌಸರ್ ಅಥವಾ ಯಾವುದೇ ಬ್ರೌಸರ್ ಅನ್ನು ಓಪನ್ ಮಾಡಿಕೊಳ್ಳಿ ನಂತರ ಅಡ್ರೆಸ್ ಬಾರ್ ನಲ್ಲಿ
landrecords.karnataka.gov.in ಎಂದು ಬ್ರದರ್ ನಲ್ಲಿ ಟೈಪ್ ಮಾಡಿಕೊಳ್ಳಿ ನಂತರ ಚಾಲತಾನ ಅಥವಾ ವೆಬ್ಸೈಟ್ ಓಪನ್ ಆಗುತ್ತದೆ ಇದು ಕಂದಾಯ ಇಲಾಖೆಯ ಅಫೀಷಿಯಲ್ ವೆಬ್ಸೈಟ್ ಆಗಿದ್ದು ಹಂಗೆ ಕೆಳಗಡೆ ಸ್ಕ್ರೋಲ್ ಮಾಡುತ್ತಾ ಹೋಗಿ ಅಲ್ಲಿ ರೆವೆನ್ಯೂ ಮ್ಯಾಪ್ಸ್ ಅಂತ ಆಪ್ಷನ್ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದಾದ ನಂತರ ಮುಂದಿನ ಹಂತ ಓಪನ್ ಆಗುತ್ತದೆ ಅಲ್ಲಿ ರೆವೆನ್ಯೂ ಮ್ಯಾಪ್ಸ್ ಆಪ್ಷನ್ ನಲ್ಲಿ ಕೆಲವು ಜಾಗಗಳನ್ನು ಭರ್ತಿ ಮಾಡಬೇಕು ಅಂದರೆ ಮೊದಲು ನಿಮ್ಮ ಹೊಲವಿರುವ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕು ಹಾಗೆಯೇ ತಾಲೂಕನ್ನು ಸೆಲೆಕ್ಟ್ ಮಾಡಬೇಕು ನಂತರ ಹೋಬಳಿಯನ್ನು ಸೆಲೆಕ್ಟ್ ಮಾಡಬೇಕು ನಂತರ ಮ್ಯಾಪ್ ಟೈಪ್ ಅಲ್ಲಿ ಕದಸ್ತ್ರಲ್ ಮ್ಯಾಪ್ ಎಂಬ ಆಪ್ಷನ್ ಅನ್ನು ಸೆಟ್ ಮಾಡಬೇಕು ಹೋಬಳಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಹೆಸರುಗಳನ್ನು ನೋಡಬಹುದು.
ನಂತರ ಫೈಲನ್ನು ಫೈಲ್ ಡೌನ್ಲೋಡ್ ಮಾಡಬೇಕು ಡೌನ್ಲೋಡ್ ಮಾಡಿದ ಫೈಲನ್ನು ಓಪನ್ ಮಾಡಬೇಕು ಆ ಪಿಡಿಎಫ್ ನಲ್ಲಿ ನಿಮ್ಮ ಊರಿನ ಸಂಪೂರ್ಣ ಹೊಲದ ನಕ್ಷೆಯನ್ನು ಕಾಣಬಹುದು. ಈ ನಕ್ಷೆಯಲ್ಲಿ ನಿಮ್ಮ ಸರ್ವೆ ನಂಬರನ್ನು ಸರ್ಚ್ ಇನ್ ಡಾಕುಮೆಂಟ್ ನಲ್ಲಿ ಕೊಡಬೇಕು ಅದು ಅಕ್ರೋಬ್ಯಾಟ್ ಯಾಪ್ನಿಂದ ಸಾಧ್ಯ ಇಲ್ಲವಾದಲ್ಲಿ ಆ ನಕ್ಷೆಯಲ್ಲಿ ಸರ್ವೆ ನಂಬರ್ ಹುಡುಕಾಡಬೇಕಾಗುತ್ತದೆ.
ಸರ್ವೇ ನಂಬರ್ ಕಂಡ ನಂತರ ಹೊಲದ ದಾರಿಯನ್ನು ಕೂಡ ಕಾಣಬಹುದು. ನಿಮ್ಮ ಜಮೀನಿನ ಅಕ್ಕ ಪಕ್ಕ ಇರುವ ಸರ್ವೇ ನಂಬರ್ ಗಳನ್ನು ನೋಡಬಹುದು.ನಿಮ್ಮ ಜಮೀನಿಗೆ ಹೋಗುವ ದಾರಿ ಮತ್ತು ಊರಿನ ಎಲ್ಲ ಮಾಹಿತಿಗಳನ್ನು ಸಂಪೂರ್ಣವಾಗಿ ಈ ನಕ್ಷೆಯಲ್ಲಿ ಕಾಣಬಹುದು.ಒಂದು ವೇಳೆ ಮಾಹಿತಿಯಲ್ಲಿ ಏನಾದರೂ ತಿಳಿಯದಿದ್ದರೆ ಎಡಪಕ್ಕದಲ್ಲಿ ಅದರ ಮಾಹಿತಿ ಇರುತ್ತದೆ.ಯಾವ ಯಾವ ಗುರುತುಗಳಿಗೆ ಯಾವ ಯಾವ ಚಿಹ್ನೆಯಿದೆ ಎಂದು ತೋರಿಸುತ್ತದೆ.
ಚಿಹ್ನೆಗಳ ಸಹಾಯದಿಂದ ಗುಡಿಗಳು, ಕಾಲುದಾರಿಗಳು ಇನ್ನಿತರ ವಿವರಗಳು ನೋಡಲು ಸಿಗುತ್ತವೆ. ಈ ನಕ್ಷೆಯನ್ನು ತಯಾರು ಮಾಡಿದವರು ಕರ್ನಾಟಕ ಸರಕಾರದ ‘ಭೂ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ’. ಹೀಗೆ ಮಾಡುವುದರ ಮೂಲ ಉದ್ದೇಶ ರೈತರ ಕಾಲುದಾರಿ ಯಾವುದು ಮತ್ತು ಎಲ್ಲಿ ಬರುತ್ತದೆ ಮತ್ತು ಎತ್ತಿನಗಾಡಿಯ ದಾರಿ ತಿಳಿಯಲಿ ಎಂದು. ಇದು ಕೇವಲ ಕೃಷಿಕ ಜನರಿಗೆ ಅಷ್ಟೆ ಸಹಾಯ ವಾಗುವುದಿಲ್ಲ ಬದಲಿಗೆ ಎಲ್ಲರಿಗೂ ಬಹಳ ಉಪಕಾರಿ ಆಗುತ್ತದೆ.ದಿಶಾಂಕ್ ಆ್ಯಪ್ ( Dishank app) ಜಮೀನಿನ ನಕ್ಷೆ ಮತ್ತು ಹೊಲದ ಇನ್ನಿತರ ಮಾಹಿತಿ ವಿಷಯಗಳನ್ನು ತಿಳಿಸುವ ಇನ್ನೊಂದು ಉಪಯಕ್ತ್ ವಾದ ಆಧುನಿಕ ವಿಧಾನವೆಂದರೆ ಅದು ದಿಶಾಂಕ್ ಎಂಬ ಮೊಬೈಲ್ ಆ್ಯಪ್ ಮೂಲಕ . ಜಮೀನಿನ ನಕ್ಷೆಯನ್ನು ನೋಡಲು ದಿಶಾಂಕ್ ಯಾಪ್, ಡಿಶಾಂಕ್ ಆಪ್ ತುಂಬಾ ಉಪಯುಕ್ತ ಹಾಗೂ ಅತಿ ಸರಳವಾದದ್ದು ರೈತರು ಸರಳವಾಗಿ ಎಲ್ಲಿ ಬೇಕಾದರೂ ಕುಳಿತು ಮೊಬೈಲ್ ಮೂಲಕ ತಮ್ಮ ಜಮೀನಿನ ನಕ್ಷೆ, ಕಾಲುದಾರಿ ಇನ್ನಿತರ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ಈ ಆ್ಯಪ್ ಮೂಲಕ ನಿಮ್ಮ ಆಸ್ತಿಯ ನಿಖರವಾದ ಸರ್ವೆ ನಂಬರ್ ಏನು ಎಂದು ತಿಳಿದುಕೊಳ್ಳಬಹುದು , ಅದು ಸರ್ಕಾರಕ್ಕೆ ಸೇರಿದ್ದ ಜಾಗವೇ…. ಅಥವಾ ಅದು ಗೋಮಾಳಕ್ಕೆ ಸೇರಿದ್ದೆ ಅಥವಾ ಕೆರೆಯ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ ಅಥವಾ ಒತ್ತುವರಿಯಾಗಿದ ಪ್ರದೇಶವೂ ಎಂಬುದನ್ನು ಸುಲಭವಾಗಿ ತಿಳಿಯಬಹುದು.ಈಗ ನೀವು ಯಾವ ಕಚೇರಿಗಳಿಗೂ ಅಲೆಯುವ ಅವಶ್ಯಕಯಿಲ್ಲ ಮೊಬೈಲ್ ಮೂಲಕ ನೋಡಬಹುದು ಹಾಗೂ ನಿಮ್ಮ ಸಮಯವನ್ನು ಉಳಿಸಿಕೊಳ್ಳಬಹುದು. ಮನೆಯಲ್ಲಿಯೇ ಕುಳಿತು ಎಲ್ಲ ಹೊಲ ಆಸ್ತಿ ಜಾಗದ ವಿವರಗಳನ್ನು Dishank app ಮೂಲಕ ತಿಳಿದುಕೊಳ್ಳಬಹುದು. ಅದಷ್ಟೇ ಅಲ್ಲದೆ, ನೀವು ಯಾವ ಸರ್ವೆ ನಂಬರ್ ನಲ್ಲಿ ನಿಂತಿದ್ದೀರಿ ಎಂಬುದನ್ನು ಕೂಡ ತಕ್ಷಣ ತಿಳಿದುಕೊಳ್ಳಬಹುದು.ಹೌದು, ಭೂ ಕಂದಾಯ ರಸ್ತೆ ಮತ್ತು ಭೂ ದಾಖಲೆಗಳ ಇಲಾಖೆ, ಕಂದಾಯ ಇಲಾಖೆಯು ಈಗ ಹೊಸ ದಿಶಾಂಕ್ ಎಂಬ ಆ್ಯಪ್ ಎಲ್ಲರಿಗೂ ಪರಿಚಯಿಸಿದೆ. ಈ ಆ್ಯಪ್ ಮೂಲಕ ನೀವು ನಿಮ್ಮ ಆಸ್ತಿ ಜಾಗದ ಎಲ್ಲಾ ವಿವರಗಳನ್ನೆಲ್ಲ ತಕ್ಷಣದಲ್ಲಿ ತಿಳಿದುಕೊಳ್ಳಬಹುದು. ಇದು ಸಾಕಷ್ಟು ಜನರಿಗೆ ತುಂಬಾ ಉಪಯೋಗವಾಗಲಿದೆ. ಅದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ ಈ ಲೇಖನೆಯನ್ನು ಓದಿ…
ಕಂದಾಯ ಇಲಾಖೆಯ ದಾಖಲೆಯಲ್ಲಿ ಲಭ್ಯವಿರುವ 1960 ರ ಸರ್ವೆ ನಕಾಶೆಗಳ ಆಧಾರದಲ್ಲಿ ಈ ಆ್ಯಪ್ ನ್ನು ಅಭಿವೃದ್ಧಿಪಡಿಸಲಾಗಿದೆ.
ಭೂಮಿ ಖರೀದಿಸುವಷ್ಟೇ ಕಷ್ಟದ ಕೆಲಸ ಭೂಮಿಯ ನಕ್ಷೆಯ ವೆರಿಫಿಕೇಶನ್ (Verification) ನಿಮಗೆ ಮೋಸ ಮಾಡಲು ಎಲ್ಲಾ ಕಡೆಯಲ್ಲೂ ಭೂಬಕಾಸುರರು ಕಾದು ಕುಳಿತಿದ್ದಾರೆ. ಒಂದು ಸೈಟ್ ಖರೀದಿಸಬೇಕಾದರೆ, ಅದನ್ನು ಸಾಕಷ್ಟು ಕಡೆಯಂದ ವೆರಿಫೈ ಮಾಡಬೇಕಾಗುತ್ತದೆ. ಸಾಲ ಸೋಲ ಮಾಡಿ ಭೂಮಿ ಖರೀದಿಸುವಾಗ ಮೋಸ ಹೋಗಿ ಬಿಟ್ಟರೆ..!? ಪರಿಣಾಮ ಊಹಿಸುವುದೂ ಕಷ್ಟ. ಇದಕ್ಕೆಲ್ಲಾ ಪರಿಹಾರ ಎನ್ನುವಂತೆ ರಾಜ್ಯ ಸರ್ಕಾರ ರೂಪಿಸಿದೆ `ದಿಶಾಂಕ್ ಆಪ್’ (Dishaank App).
ದಿಶಾಂಕ್ ಅಪ್ಲಿಕೇಷನ್ ( Dishank app) ಕುರಿತು:-
ದಿಶಾಂಕ್ ಎನ್ನುವ ಈ ಆ್ಯಪ್ ಸಾಮಾನ್ಯ ಜನರಿಗೆ ಅತ್ಯುತ್ತಮ ಸಾಧನವಾಗುತ್ತದೆ. ಈ ಆ್ಯಪ್ ಅನ್ನು ಸುಮಾರು ಅರ್ಧ ಮಿಲಿಯನ್ ಗಿಂತಲೂ ಹೆಚ್ಚು ಜನರು ಡೌನ್‍ಲೋಡ್ ಮಾಡಿದ್ದಾರೆ. ಅದನ್ನು ಅವರು ನಿತ್ಯವೂ ಬಳಸುತ್ತಿದ್ದಾರೆ. ನಾವು ನಿಂತಿರುವ ಭೂಮಿಯ ಸಮೀಕ್ಷೆಯ ಸರ್ವೇ ಸಂಖ್ಯೆಯನ್ನು ದಿಶಾಂಕ್ ಅಪ್ಲಿಕೇಶನ್ ತಿಳಿಸಿಕೊಡುತ್ತದೆ. ಹಾಗೆಯೇ ನೀವು ನಿಂತಿರುವ ಅಥವಾ ಖರೀದಿಸಲಿರುವ ಭೂಮಿಯು ಸರ್ಕಾರಿ ಜಾಗವೇ ಅಥವಾ ಖಾಸಗೀ ಜಾಗವೇ ಎನ್ನುವ ಸ್ಪಷ್ಟ ಮಾಹಿತಿಯನ್ನು ಕೂಡ ನೀಡುತ್ತದೆ. ನೀವು ನಿಂತಿರುವ ಭೂಮಿಯು ಕೆರೆಯ ವ್ಯಾಪ್ತಿಗೆ ಬರುವುದೇ? ಅರಣ್ಯ ವ್ಯಾಪ್ತಿಗೆ ಬರುವುದೇ? ರಾಜ ಕಾಲುವೆ ವ್ಯಾಪ್ತಿಗೆ ಒಳಗಾಗಿರುವುದೇ? ಎನ್ನುವಂತಹ ಅನೇಕ ಮಾಹಿತಿಯನ್ನು ತಿಳಿಯಬಹುದು. ದಿಶಾಂಕ್ ಆ್ಯಪ್ ಬೆಂಗಳೂರು ಮಾತ್ರವಲ್ಲದೇ ರಾಜ್ಯದ 30 ಜಿಲ್ಲೆಯಗಳ ಪ್ರತಿ ಭೂ ಭಾಗದ ಮಾಹಿತಿಯನ್ನು ಹೊಂದಿದೆ.ಆಸ್ತಿಯನ್ನು ಕೆರೆಕುಂಟೆಗಳ ಆಸುಪಾಸಿನಲ್ಲಿ ಹೊಂದಿರುವವರು, ರಾಜಕಾಲುವಗಳ ಪಕ್ಕದಲ್ಲಿರುವರು, ಅದು ಯಾರ ಹೆಸರಿನಲ್ಲಿದೆ, ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿದೆಯೇ ಎಂಬುದನ್ನು ನೋಡಿಕೊಳ್ಳಲು ಅಭಿವೃದ್ಧಿಪಡಿಸಿದೆ.
ಇದರಲ್ಲಿ ಕಾಣಿಸುವ ನಕಾಶೆ ಕೇವಲ ಸಾಂಕೇತಿಕವಾದದ್ದು. ಪ್ರತಿ ಸರ್ವೆ ನಂಬರ್ ಗಳ ಗಡಿರೇಖೆಗಳನ್ನು ತೋರಿಸುತ್ತದೆ.ಗೂಗಲ್ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಲಭ್ಯವಿದ್ದು, ನಿಮ್ಮ ಮೊಬೈಲಿನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಸ್ಥಳದ (Location) ಅಪಡೇಟ್ ಮಾಡಿದರೆ ಆ ಸ್ಥಳವು ಯಾವ ಸರ್ವೇ ನಂಬರ್ ನಲ್ಲಿದೆ. ಈ ಜಾಗದಲ್ಲಿ ರಸ್ತೆಯಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಆಸ್ತಿ ಖರೀದಿಸುವುದಕ್ಕಿಂತ ಮುಂಚಿತವಾಗಿ ಈ ವಿವರಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.ಖಾತಾದಲ್ಲಿ ನಮೂದಿಸಿರುವ ಸರ್ವೆ ನಂಬರ್ ಸರಿಯಾಗಿದೆಯೇ ಎಂಬುದನ್ನು ಸಹ ಪರಿಶೀಲಿಸಬಹುದು.
ದಿಶಾಂಕ್ ಆ್ಯಪ್‌ಗಾಗಿ ಇಲ್ಲಿದೆ ಲಿಂಕ್ https://play.google.com/store/apps/details?id=com.ksrsac.sslr ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು.ಆದಾಗ್ಯೂ, ದಿಶಾಂಕ್ ಅಪ್ಲಿಕೇಶನ್ ನಿಂದ ಪಡೆದ ಮಾಹಿತಿಯು ಕಾನೂನು ಬದ್ಧವಾಗಿ ಸಮರ್ಥನೀಯವಲ್ಲ. ಇದನ್ನು ಕೇವಲ ಸೂಚಕ ಉದ್ದೇಶಗಳಿಗೆ ಅಥವಾ ಮಾಹಿತಿಗಳಿಗಾಗಿ ಮಾತ್ರ ಬಳಸಲಾಗುವುದು.
ಅದರ ಮೆಗಾ ಲ್ಯಾಂಡ್ ರೆಕಾರ್ಡ್ ಡಿಜಿಟಲೀಕರಣ ಕಾರ್ಯಕ್ರಮದ ಅಡಿಯಲ್ಲಿ, ಕರ್ನಾಟಕ ಸರ್ಕಾರವು ಮಾರ್ಚ್ 2018 ರಲ್ಲಿ ದಿಶಾಂಕ್ ಎಂಬ ಅಪ್ಲಿಕೇಶನ್ ಮೂಲಕ ಭೂಮಿ ಮತ್ತು ಆಸ್ತಿಯ ಪ್ರಮುಖ ವಿವರಗಳನ್ನು ಒದಗಿಸಲು ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು. ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ರಾಜ್ಯದ ಪ್ರಾಥಮಿಕ ಉದ್ದೇಶವೆಂದರೆ ಕರ್ನಾಟಕದಲ್ಲಿ ಆಸ್ತಿ-ಸಂಬಂಧಿತ ವಂಚನೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ಆಸ್ತಿ ಖರೀದಿದಾರರು ಮತ್ತು ಹೂಡಿಕೆದಾರರಿಗೆ ಭೂ ದಾಖಲೆಗಳಿಗೆ ಸುಲಭ ಪ್ರವೇಶವನ್ನು ಒದಗಿಸುವುದು. ಅಪ್ಲಿಕೇಶನ್‌ನ ಅಧಿಕೃತ ಹೆಸರು ದಿಶಾಂಕ್ ಆಗಿದ್ದರೂ, ಇದನ್ನು ಕೆಲವೊಮ್ಮೆ ದಿಶಾಕ್ ಅಪ್ಲಿಕೇಶನ್ ಎಂದು ಸಹ ಉಚ್ಚರಿಸಲಾಗುತ್ತದೆ.
ದಿಶಾಂಕ್ ಅಪ್ಲಿಕೇಶನ್‌ನಲ್ಲಿ ಮಾಹಿತಿ ಲಭ್ಯವಿದೆ
ದಿಶಾಂಕ್ ಅನ್ನು ಬಳಸಿಕೊಂಡು, ನೀವು ಕರ್ನಾಟಕದ ಯಾವುದೇ ಭೂಮಿ ಅಥವಾ ಆಸ್ತಿಯ ವಿವರಗಳನ್ನು ಪಡೆಯಬಹುದು. ಬಳಕೆದಾರರಿಗೆ ಖಾತಾ ಮತ್ತು ಪ್ಲಾಟ್‌ಗಳ ಸರ್ವೆ ಸಂಖ್ಯೆಯನ್ನು ತಿಳಿದುಕೊಳ್ಳಲು ಸಹಾಯ ಮಾಡುವುದರ ಜೊತೆಗೆ, ಅವರು ಖರೀದಿಸುತ್ತಿರುವ ಜಮೀನು ರಾಜಕಾಲುವೆಗಳು ಅಥವಾ ಕೆರೆಯ ಹಾಸಿಗೆಗಳು ಅಥವಾ ಯಾವುದೇ ಇತರ ಜಲಮೂಲಗಳು ಅಥವಾ ಸರ್ಕಾರಿ ಭೂಮಿಯಲ್ಲಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅಪ್ಲಿಕೇಶನ್ ಸಹಾಯ ಮಾಡುತ್ತದೆ. ದಿಶಾಂಕ್ ಆ್ಯಪ್‌ನಲ್ಲಿನ ಜಿಯೋ-ಉಲ್ಲೇಖಿತ ನಕ್ಷೆಯ ಮೂಲಕ, ನಿಮ್ಮ ಖಾತಾ ಪ್ರಮಾಣಪತ್ರದಲ್ಲಿ ನಮೂದಿಸಲಾದ ಭೂಮಿಯ ಸರ್ವೆ ಸಂಖ್ಯೆಯು ನಿಖರವಾಗಿದೆಯೇ ಎಂದು ನೀವು ಪರಿಶೀಲಿಸಬಹುದು. ಬಳಸಿ
ದಿಶಾಂಕ್ ಅಪ್ಲಿಕೇಶನ್‌ನಲ್ಲಿನ ವಿವರಗಳು
ಜಾಗದ ಸರ್ವೆ ಸಂಖ್ಯೆ
ಜಾಗದ ವಿಸ್ತಾರ
ಜಾಗದ ನಿಖರವಾದ ಸ್ಥಳ
ಭೂಮಿಯ ಮೇಲೆ ಯಾವುದೇ ನ್ಯಾಯಾಲಯದ ಆದೇಶಗಳುಇದ್ದಲ್ಲಿ
ಜಾಗದ ಮೇಲಿನ ಸರ್ಕಾರದ ನಿರ್ಬಂಧಗಳು
ಜಾಗದ ಮೇಲಿನ ಹೊರೆಗಳು
ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಿಂದ ಬಿಡುಗಡೆ ಮಾಡಲಾದ ದಿಶಾಂಕ್ ಅಪ್ಲಿಕೇಶನ್ ರಾಜ್ಯದಲ್ಲಿ ಲಭ್ಯವಿರುವ 1960 ರ ಸಮೀಕ್ಷೆಯ ನಕ್ಷೆಗಳನ್ನು ಆಧರಿಸಿದೆ. ಇದು ಬ್ರುಹತ್ ಬಿಡುಗಡೆ ಮಾಡಿದ ಒಂದೇ ರೀತಿಯ ಅಪ್ಲಿಕೇಶನ್‌ಗಳಿಗಿಂತ ಭಿನ್ನವಾಗಿದೆ ಬೆಂಗಳೂರು ಮಹಾನಗರ ಪಾಲಿಕೆ (BBMP), ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ರಾಜ್ಯದ ಇತರ ನಾಗರಿಕ ಸಂಸ್ಥೆಗಳು ಸೈಟ್‌ನ ಮೂಲ ಸ್ವರೂಪದ ಬಗ್ಗೆ ಮಾಹಿತಿಯನ್ನು ಒದಗಿಸುವುದಿಲ್ಲ ಎಂಬ ಅರ್ಥದಲ್ಲಿ. ಕರ್ನಾಟಕದಲ್ಲಿ ಭೂಮಿ, ಪ್ಲಾಟ್ ಅಥವಾ ವಸತಿ ಆಸ್ತಿಯನ್ನು ಖರೀದಿಸಲು ಯೋಜಿಸುವವರು ಖರೀದಿಸಲು ನಿರ್ಧರಿಸುವ ಮೊದಲು ಆಸ್ತಿ ಮಾಲೀಕರು ಒದಗಿಸಿದ ಸತ್ಯದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಅಪ್ಲಿಕೇಶನ್ ಅನ್ನು ಸಂಪರ್ಕಿಸಬೇಕು.
ದಿಶಾಂಕ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ
ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್‌ನಿಂದ ನಿರ್ಮಿಸಲಾದ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮ ಮೊಬೈಲ್ ಮತ್ತು ಡೆಸ್ಕ್‌ಟಾಪ್ ಸಾಧನಗಳಿಗಾಗಿ ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಆ್ಯಂಡ್ರಾಯ್ಡ್ ಬಳಕೆದಾರರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಬಹುದು. ಐಒಎಸ್ ಬಳಕೆದಾರರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ದಿಶಾಂಕ್ ಅಪ್ಲಿಕೇಶನ್‌ನಲ್ಲಿ ಭೂಮಿಯ ವಿವರಗಳು ಲಭ್ಯವಿದೆ
ದಿಶಾಂಕ್ ಅಪ್ಲಿಕೇಶನ್ ಸರ್ವೆ ಸಂಖ್ಯೆ ಮತ್ತು ಅದರ ನಿಖರವಾದ ಸ್ಥಳದಂತಹ ಭೂಮಿಯ ವಿವರಗಳನ್ನು ಮಾತ್ರ ಒದಗಿಸುತ್ತದೆ ಎಂಬುದನ್ನು ಗಮನಿಸಿ. ಅದರ ಮಾಲೀಕರ ಬಗ್ಗೆ ಮಾಹಿತಿಯನ್ನು ಪಡೆಯಲು, ನೀವು ರಾಜ್ಯದ ಭೂ ದಾಖಲೆ ವೆಬ್‌ಸೈಟ್, RTC ಭೂಮಿ ಪೋರ್ಟಲ್‌ಗೆ ಭೇಟಿ ನೀಡಬೇಕು. ಆದಾಗ್ಯೂ, ಅಪ್ಲಿಕೇಶನ್‌ನಲ್ಲಿ ಭೂಮಿ ಮತ್ತು ಆಸ್ತಿ ಮಾಲೀಕರ ವಿವರಗಳನ್ನು ಸೇರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.
. ಭೂಮಿಯ ಸರ್ವೇ ನಂಬರ್ ಸರಿಯಾಗಿದೆಯೇ ಅಥವಾ ತಪ್ಪಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು.
. ಎಲ್ಲಾ ಸಾರ್ವಜನಿಕರು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅತಿ ಉಪಯುಕ್ತ ಆಪ್ ಅದು ಏಕೆಂದರೆ ಜಾಗದ ಮಾಹಿತಿಯನ್ನು ತಕ್ಷಣದಲ್ಲಿ ಪಡೆಯಬಹುದು.
ಭೂಮಿ ಒತ್ತುವರಿಯಾಗಿದ್ದರೆ ಸುಲಭದಲ್ಲಿ ಪತ್ತೆ ಮಾಡಬಹುದು.
. ಗ್ರಾಮದ ವಿಲೇಜ್ ಮ್ಯಾಪ್ ಇದರಲ್ಲಿ ಸೂಪರ್ ಇಂಪೋಸ್ ಆಗಿರತ್ತದೆ. ನೀವು ನಿಂತಿರುವ ಜಾಗದ ಸಮಗ್ರ ಮಾಹಿತಿ ಅದರಲ್ಲಿ ಲಭ್ಯವಿರುತ್ತದೆ. ಸರ್ವೇ ನಂಬರ್ ಸಹಿತ ನಿಮಗೆ ಮಾಹಿತಿ ಸಿಗುತ್ತದೆ.
ಆ ಸರ್ವೆ ನಂಬರ್ ಮಾಲೀಕ ಯಾರು ಅನ್ನೋ ಮಾಹಿತಿ ಕೂಡಾ ನಿಮಗೆ ಸಿಗುತ್ತದೆ. ಹಾಗಾಗಿ, ನಿಮಗೆ ಮೋಸ ಮಾಡಲು ಸಾಧ್ಯವಿಲ್ಲ.
ಯಾವುದಾದರೂ ಆಸ್ತಿಯ ನಿಖರ ಸರ್ವೇ ನಂಬರ್ ಕುಳಿತಲ್ಲೇ ಹುಡುಕಬಹುದು.
30 ಜಿಲ್ಲೆಗಳ ಸುಮಾರು 70 ಲಕ್ಷ ಸರ್ವೆ ನಂಬರ್ಗಗಳಿಗೆ ಸಂಬಂಧಿಸಿದ ವಿವರಗಳು ಇದರಲ್ಲಿವೆ
ಹೊಸ ಆಸ್ತಿ ಖರೀದಿ, ಮಾರಾಟದ ವೇಳೆ ಈ ಆಪ್ ಬಹಳ ಉಪಯುಕ್ತ ಮಾಹಿತಿ ನೀಡಲಿದೆ.
ನೀವು ಒಂದು ಸೈಟ್ ಖರೀದಿಗೆ ಹೋಗುವಾಗ ಆ ಸೈಟಿನ ಜಾಗದಲ್ಲಿ ನಿಂತು ಈ ದಿಶಾಂಕ್ ಆಪ್ ಆನ್ ಮಾಡಿ. ಅಲ್ಲೇ ನಿಮಗೆ ಆ ಜಾಗದ ಸಮಸ್ತ ಮಾಹಿತಿ ಸಿಗುತ್ತದೆ. ಸರ್ಕಾರಿ ಖರಾಬು ಇತ್ತಾ ಅನ್ನೋದು ಗೊತ್ತಾಗುತ್ತೆ. ಒತ್ತುವರಿಯಾ, ರಾಜಾಕಾಲುವೆಇತ್ತಾ, ರಸ್ತೆ ಇತ್ತಾ, ಅದು ಮೀಸಲಿಟ್ಟ ಜಾಗವೇ ಎಲ್ಲಾ ಮಾಹಿತಿ ಸಿಗುತ್ತದೆ.
ಆಸ್ತಿಯ ಭೂಭಾಗದ ವಿವರ ನೀಡುತ್ತದೆ. ಕೆರೆಕುಂಟೆ, ಸುತ್ತಲಿನ ಪ್ರದೇಶ, ಅಸುಪಾಸಿನ ಆಸ್ತಿಯ ವಿವರ ನೀಡುತ್ತದೆ.
. ಕೊಟ್ಟಿರುವ ಸರ್ವೆ ನಂಬರಿನಲ್ಲಿ ಸರ್ಕಾರದ ಯಾವುದಾದರೂ ಆಸ್ತಿಗಳಿವೆಯಾ..? ಅಂದರೆ, ಕೆರೆ, ಕಟ್ಟೆ, ಕೊಳ್ಳ, ಜಮೀನು, ರಾಜಾಕಾಲುವೆ ಇದೆಯಾ ಅನ್ನೋ ಮಾಹಿತಿ ಕೂಡಾ ಸಿಗುತ್ತದೆ.
ಈ ವಿಷಯ ತಿಳಿದುಕೊಳ್ಳಿ. ದಿಶಾಂಕ್ ಆಪ್ ನಿಂದ ಸಿಗುವ ಮಾಹಿತಿ ಕಾನೂನು ಬದ್ದ ದಾಖಲೆ ಅಲ್ಲ. ದಿಶಂಕ್ ಅಪ್, ಇದು ಕೇವಲ ನಿಮ್ಮ ಹೊಲದ ಮಾಹಿತಿಯನ್ನು ಮಾತ್ರ ನೀಡುತ್ತದೆ ಕಾನೂನು ಬದ್ಧವಾದ ಮಾಹಿತಿ ಬೇಕಾದಲ್ಲಿ ಕಚೇರಿಯನ್ನು ಸಂಪರ್ಕಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡಂತೆ ವಿವರಣೆ ಓದಿರಿ ಪಾಲಿಸಿರಿ
ಈ ನವಯುಗದಲ್ಲಿ ಹತ್ತು ಹಲವಾರು ಆಪ್ ಗಳು ದಿನ ದಿನ ಹುಟ್ಟಿಕೊಳ್ಳುತ್ತಿದ್ದು ಅದರಲ್ಲಿ ರೈತರಿಗೆ ಸಹಾಯವಾಗಲೆಂದು 10 ಹಲವರು ಆಪ್ಗಳು ಹುಟ್ಟಿಕೊಂಡಿವೆ.
ರೈತರಿಗೆ ಈ ಯುಗದಲ್ಲಿ ಮೊಬೈಲನ್ನು ಹೇಗೆ ಬಳಸಬೇಕು ಎಂಬುದು ಗೊತ್ತಿರುವುದಿಲ್ಲ.
ಅದಕ್ಕಾಗಿ ಮೊದಲು ಮೊಬೈಲ್ ಬಳಕೆಯನ್ನು ನೀವು ಕಲಿತುಕೊಳ್ಳಬೇಕಾಗಿರುತ್ತದೆ ಆನಂತರ ಇದನ್ನು ಕಲಿತುಕೊಂಡು ನೀವು ಈ ಆಪ್ ಗಳ ಬಗ್ಗೆ ಮಾಹಿತಿಯನ್ನು ಹೊಂದಬೇಕಾಗುತ್ತದೆ.
ಮೊದಲು ಮೊಬೈಲ್ ಬಳಕೆಯನ್ನು ಕಲಿತುಕೊಂಡರೆ ನಂತರ ನೀವು ಕಲಿಯುತ್ತೀರಾ.
ಎಷ್ಟೇ ಅಲ್ಲವೇ ಎಲ್ಲ ಮಾಹಿತಿಗಳು ಅತಿ ಸುಲಭವಾಗಿ ನಿಮ್ಮ ಕೈಪಿಡಿಎಂತೆ ನಿಮ್ಮ ಮೊಬೈಲ್ ನಲ್ಲಿ ನಿಮಗೆ ದೊರೆಯುತ್ತವೆ.
ಹಾಗೆಯೇ ಕೇವಲ ಹತ್ತು ಹಲವಾರು ಆಪ್ಗಳನ್ನು ಇನ್ಸ್ಟಾಲ್ ಮಾಡಿದರೆ ಯಾವುದೇ ತರಹದ ಹೊರಗಡೆ ನೀವು ಹೋಗುವ ಅವಶ್ಯಕತೆ ಇರುವುದಿಲ್ಲ.
ಅದಕ್ಕಾಗಿ ಮೊದಲು ಉಪಯೋಗವನ್ನು ಕಲಿತುಕೊಳ್ಳಿ ನಂತರ ಇದರ ಉಪಯೋಗಗಳನ್ನು ತೆಗೆದುಕೊಳ್ಳಿ.
ರೈತರಿಗೆ ಸಹಾಯವಾಗಲೆಂದು ಹುಟ್ಟಿಕೊಂಡು ಯಾಪುಗಳು ಎಂದರೆ ದಿಶಾಂಕ ಯಾಪ್ ರೈತ ಮಿತ್ರ ಯಾಪ್ ಮೋದಿ ಯಾಪ್ .
ಹಾಗೆಯೇ ಇನ್ನೂ ಹತ್ತು ಹಲವಾರು ಆಪ್ಗಳು ಕೊಟ್ಟಿವೆ.
ಅದಕ್ಕಾಗಿ ನಿಮ್ಮ ಭೂಮಿಯ ಅಥವಾ ನಿಮ್ಮ ಹೊಲದ ನಕ್ಷೆ ನೋಡಬೇಕೆಂದರೆ ನೀವು ದಿಶಾಂಕ್ ಆಪ್ ಅನ್ನು ಬಳಸಬೇಕಾಗುತ್ತದೆ.
ಕೇವಲ ದಿಶಾಂಕ್ ಆಪನ್ನು ಹೇಗೆ ಬೆಳೆಸಬೇಕೆಂದು ನೀವು ಕಲಿತುಕೊಂಡರೆ ನಿಮ್ಮ ಹೊಲದ ಭೂ ನಕ್ಷೆಯನ್ನು ಅತಿ ಸುಲಭವಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ನೋಡಬಹುದಾಗಿದೆ. ಇದೊಂದು ಉತ್ತಮವಾದ ಸಾಧನವಾಗಿದೆ.
ಅದಕ್ಕಾಗಿ ಪ್ರೀತಿಯ ರೈತ ಬಾಂಧವರು ಮೊದಲು ಈ ದುಶಾಂತ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಬೇಕಾಗುತ್ತದೆ.
ಎಲ್ಲ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದರೆ ಮಾತ್ರ ನೀವು ಅತಿ ಸುಲಭವಾಗಿ ಈ ದಿಶಾಂಕ್ ಯಾಪನ್ನು ಬಳಸಲು ಉಪಯುಕ್ತವಾಗುತ್ತದೆ.
ಇನ್ನಿತರ ಯಾಪುಗಳು ಹುಟ್ಟಿಕೊಂಡಿದ್ದು ಬೆಳೆ ಪರಿಹಾರ ವೀಕ್ಷಣೆಗೆಂದೆ ಇನ್ನೊಂದು ಬೆಳೆ ಪರಿಹಾರ ಯಾಪುಗಳು ಹಾಗೆ ಇನ್ನು ಹತ್ತು ಹಲವಾರು ಆಪ್ ಗಳು ಪ್ಲೇ ಸ್ಟೋರ್ ನಲ್ಲಿ ನಿಮಗೆ ಲಭ್ಯವಿವೆ.
ಅದಕ್ಕಾಗಿ ಎಲ್ಲಾ ಯಾಪ್ ಗಳನ್ನು ನೀವು ಮೊದಲು ಸಂಪೂರ್ಣವಾಗಿ ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.
ಸಂಪೂರ್ಣ ಮಾಹಿತಿಯನ್ನು ಹೊಂದಬೇಕಾದಲ್ಲಿ ನೀವು ನಮ್ಮನ್ನು ಸಂಪರ್ಕಿಸಿರಿ ಅಥವಾ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿಕೊಂಡು ಕಲಿಯಿರಿ.
ಹೀಗೆ ಎಲ್ಲರ ಮಾಹಿತಿಗಳನ್ನು ಅತಿ ಸುಲಭವಾಗಿ ನೀವು ಕಲಿಯಬಹುದಾಗಿದೆ.
ಹಾಗೆ ಯಾಪ್ಗಳನ್ನು ಬಳಸಬೇಕಾದರೆ ಯಾವುದೇ ತರಹದ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ.
ಹೆಚ್ಚು ಕಮ್ಮಿ ಏನಾದರೂ ತಪ್ಪಾದರೆ ನಿಮ್ಮ ಅಕೌಂಟ್ ನಲ್ಲಿರುವ ದುಡ್ಡು ಮಾಯವಾಗುತ್ತವೆ.
ಅದಕ್ಕಾಗಿ ಅತಿ ಸೂಕ್ಷ್ಮತೆಯಿಂದ ಬಹು ಎಚ್ಚರಿಕೆಯಿಂದ ನೀವು ಕಲಿತುಕೊಳ್ಳಬೇಕಾಗುತ್ತದೆ.
ಕಾಗಿ ಪ್ರೀತಿಯ ರೈತ ಬಾಂಧವರೇ ಮೊದಲು ಸಂಪೂರ್ಣ ಮಾಹಿತಿಯನ್ನು ಸಂಕ್ಷಿಪ್ತ ರೀತಿಯಲ್ಲಿ ಕಲಿಯಿರಿ.
ನಂತರ ಮಾಹಿತಿಯಲ್ಲಿರುವ ಸಂಪೂರ್ಣವಾದ ಸಲಹೆಗಳನ್ನು ತೆಗೆದುಕೊಂಡು ನೀವು ಕಲಿತುಕೊಳ್ಳಲು ಸಹಾಯಕವಾಗಿರುತ್ತದೆ.
ಅದಕ್ಕಾಗಿ ರೈತರು ಈಗಿನ ಯುಗದಲ್ಲಿ ತಕ್ಕಂತೆ ನೀವು ಬದುಕಬೇಕು ಎಲ್ಲ ತರಹದ ಸಂಪೂರ್ಣವಾದ ವಿವರವಾದ ಮಾಹಿತಿಗಳನ್ನು ಪಡೆದುಕೊಳ್ಳಬೇಕು.
ನಾವು ನಮಗೆ ತಿಳಿದು ಬಿಟ್ಟು ರೈತರಿಗೆ ಸಹಾಯವಾಗಲೆಂದು ಎಲ್ಲ ತರಹದ ಮಾಹಿತಿಗಳನ್ನು ನಮ್ಮ ವೆಬ್ಸೈಟ್ನಲ್ಲಿ ನೀಡುತ್ತಿದ್ದೇವೆ.
ಕಾಗಿ ರೈತರು ನಮ್ಮನ್ನು ಸಂಪರ್ಕಿಸಿ ಅಥವಾ ನಮ್ಮ ವೆಬ್ಸೈಟ್ನಲ್ಲಿರುವ ಮಾಹಿತಿಯನ್ನು ಪಡೆದುಕೊಂಡು ಜೀವನವನ್ನು ಸಾಗಿಸಿರಿ.
ವಂದೇ ಮಾತರಂ ಎಂಬಂತೆ ನಾವು ಎಲ್ಲರೂ ಒಂದೇ ತರನಾಗಿ ಬಾಳಬೇಕು.
ಒಂದು ಭಾರತ ಹಲವಾರು ಹಂತಗಳಂತೆ ಎಲ್ಲರೂ ಒಟ್ಟಾಗಿ ಬಾಳೋಣ ಬನ್ನಿ ಧನ್ಯವಾದಗಳು ಅಂದಿಗೆ ನಿಮ್ಮ ಸಹಕಾರ ನಮ್ಮ ಮೇಲೆ ಸದಾಕರ ಇರಲಿ.
.
.