ಆರೋಗ್ಯವೇ ಭಾಗ್ಯ ಅನಾರೋಗ್ಯವೇ ನರಕ ಎಂದು ನಮ್ಮ ಪೂರ್ವಜರು ಹೇಳಿದ್ದಾರೆ ಆರೋಗ್ಯ ಎಂಬುದು ಅತ್ಯಮೂಲ್ಯ ವಾದದ್ದು. ಆದರೆ ಈ ಆಧುನಿಕ ದಿನಗಳಲ್ಲಿ ರೋಗದಿಂದ ಬಳಲುತ್ತಿರುವ ಜನಸಂಖ್ಯೆ ಹೆಚ್ಚುತ್ತಿದೆ ಹಾಗೂ ಅನಾರೋಗ್ಯಕ್ಕೆ ತುತ್ತಾದವರು ಆಸ್ಪತ್ರೆಗಳಿಗೆ ಮುಖ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆ ಎಂಬುದು ಮೇಲ್ವರ್ಗಕ್ಕೆ ಮಾತ್ರ ಸೀಮಿತವಾಗಿದೆ ಏಕೆಂದರೆ ಆಸ್ಪತ್ರೆಯಾಗುವುದು ವೆಚ್ಚ ಭರಿತವಾಗಿದ್ದು ಬಡವರು ಹಾಗೂ ಮಾಧ್ಯಮ ವರ್ಗದವರಿಗೆ ಆಸ್ಪತ್ರೆ ಮೆಟ್ಟಿಲೇರುವುದು ಕಷ್ಟವಾಗಿದೆ ಹೀಗಾಗಿ ಕೆಳ ವರ್ಗದವರು ಗುಣಮಟ್ಟದ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ ಹಾಗೂ ಅನೇಕ ಜನರು ಸಾವಿಗೀಡಾಗುತ್ತಿದ್ದಾರೆ ಹೀಗಾಗಿ ಶ್ರೀಮಂತರಂತೆ ಬಡಜನರು ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುವ ಸಲುವಾಗಿ ಹೊಸ ಯೋಜನೆಯನ್ನು ರೂಪಿಸಿದೆ ಅದುವೇ ಪ್ರಧಾನ ಮಂತ್ರಿ ಜಾನ್ ಆರೋಗ್ಯ ಯೋಜನ (PM-JAY )ಅಥವಾ ಆಯುಷ್ಮಾನ್ ಭಾರತ ಈಗಾಗಲೇ ಲಕ್ಷಾಂತರ ಮಂದಿ ಯೋಜನೆಯ ಸದುಪಯೋಗವನ್ನು ಪಡೆದುಕೊಂಡಿದ್ದಾರೆ
ಈ ಯೋಜನೆಯನ್ನು ಯಾರು ಪಡೆದು ಪಡೆದುಕೊಳ್ಳಬಹುದು ಮತ್ತು ಹೇಗೆ ಪಡೆದುಕೊಳ್ಳಬಹುದು ಹಾಗೂ ಅನುಕೂಲಗಳು ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ಲೇಖನೆಯನ್ನು ಓದಿ.
ಯಾವುದೇ ಒಂದು ದೇಶ ಮುಂದುವರಿಯ ಬೇಕಾಗಿದ್ದಾರೆ ಅಲ್ಲಿನ ಜನರ ಆರೋಗ್ಯ ಬಹಳ ಮುಖ್ಯವಾಗುತ್ತದೆ ಹಾಗೂ ಎಲ್ಲ ವರ್ಗದವರಿಗೂ ಸಮಾನ ಮತ್ತು ಉನ್ನತ ಮಟ್ಟದ ಚಿಕಿಸ್ತಾ ಸೌಲಭ್ಯಗಳು ದೊರೆಯಬೇಕಾಗುತ್ತದೆ.
ಏನಿದು ಆಯುಷ್ಮಾನ್ ಭಾರತ್ ಯೋಜನೆ ?
ಸಪ್ಟೆಂಬರ್ 28ರಂದು ಶ್ರೀ ನರೇಂದ್ರ ಮೋದಿಯವರು ಕೆಳ ಮತ್ತು ಬಡವರ್ಗದವರಿಗೆ ಉನ್ನತ ಮಟ್ಟದ ಚಿಕಿತ್ಸೆಗಾಗಿ ಉಚಿತ ಇನ್ಸೂರೆನ್ಸ್ ಒದಗಿಸಿಕೊಟ್ಟಿದೆ.
ಆಯುಷ್ಮಾನ್ ಭಾರತ್ ಒಂದು ದೇಶದ ದೊಡ್ಡ ರಕ್ಷಾ ಕವಚವಾಗಿದೆ ಹಾಗೂ ಜಗತ್ತಿನ ಅತಿ ದೊಡ್ಡ ಆರೋಗ್ಯ ಯೋಜನೆ ಎಂಬ ಖ್ಯಾತಿಗೆ ಕೂಡ ಒಳಗಾಗಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರವು ಪ್ರತಿ ವರ್ಷ 12,000 ಕೋಟಿ ಗಳನ್ನು ಖರ್ಚು ಮಾಡುತ್ತಿದೆ ಇದರ ಉದ್ದೇಶ ದುಡ್ಡು ಇಲ್ಲದವರೆಗೂ ಉಚಿತವಾಗಿ ಉನ್ನತ ಮಟ್ಟದ ಚಿಕಿತ್ಸೆಯನ್ನು ಒದಗಿಸುವುದು ಆಗಿದೆ.
ಆಯುಷ್ಮಾನ್ ಭಾರತ್ ಯೋಜನೆ ಎಂಬುದು ಸರ್ಕಾರವು ಒದಗಿಸುವ ಒಂದು ಉಚಿತ ಇನ್ಸೂರೆನ್ಸ್ ಆಗಿದೆ ಈ ಇನ್ಸೂರೆನ್ಸ್ ಮೂಲಕ ಯಾವುದೇ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿ 5 ಲಕ್ಷದವರವರೆಗೂ ಉಚಿತವಾಗಿ ಚಿಕಿತ್ಸೆಯನ್ನು ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಪಡೆದುಕೊಳ್ಳಬಹುದು. ಈಗಾಗಲೇ ದೇಶದ ಲಕ್ಷಾಂತರ ಜನರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಹಾಗೂ ಕೋಟ್ಯಾಂತರ ಜನರು ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹುದು.
ಆಯುಷ್ಮಾನ್ ಭಾರತ್ ಯೋಜನೆ ಪಡೆದುಕೊಳ್ಳಲು ಇರಬೇಕಾದಂತಹ ಅರ್ಹತೆಗಳು
1. ಬಿಪಿಎಲ್ ಕಾರ್ಡ್ ಇರಬೇಕು. ನೀವು ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅದರರ್ಥ ಬಡತನ ರೇಖೆಗಿಂತ ಕೆಳಗಿರುವವರು ಆದಕಾರಣ ಆಯುಷ್ಮಾನ್ ಭಾರತ್ ಯೋಜನೆಗೆ ನೀವು ಅರ್ಹರಾಗುತ್ತೀರಿ.
2. ಮಹಿಳೆ ಮಾತ್ರ ಇದ್ದರೆ ಗಂಡಸರು ಇಲ್ಲ ಅಂದ್ರೆ
3. ಮಕ್ಕಳಿಗೆ ಹಾಗೂ ವಯಸ್ಸಾದವರಿಗೆ
3. ಎಸ್ಸಿ ಎಸ್ಟಿ ವರ್ಗದವರಿಗೆ
4. ಅಂಗವಿಕಲರಿಗೆ
5. ಭಿಕ್ಷಾಟನೆ ಮಾಡುವವರಿಗೆ
6. ಜಮೀನು ಇಲ್ಲದವರಿಗೆ ಹಾಗೂ ಕೂಲಿ ಮಾಡುವವರಿಗೆ
ಆಯುಷ್ಮಾನ್ ಭಾರತ್ ಯೋಜನೆಯ ಉಪಯೋಗಗಳು
ಭಾರತದಲ್ಲಿ ಸರ್ಕಾರಿ ಆಸ್ಪತ್ರೆಗಳು ಹಲವಾರು ಗಳಿವೆ ಆದರೆ ಅಲ್ಲಿ ಸಿಗುವ ಚಿಕಿತ್ಸೆ ನಿಮಗೆ ಗೊತ್ತೇ ಇರುತ್ತದೆ ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ 5 ಲಕ್ಷದವರವರೆಗೂ ಚಿಕಿತ್ಸೆಯನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳಬಹುದು.
ಈ ಯೋಜನೆಯ ಮೂಲಕ ಒಂದು ಕುಟುಂಬ ಪ್ರತಿ ವರ್ಷ 5 ಲಕ್ಷದವರೆಗೂ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು.
ಸರ್ಕಾರವು ಕೆಲವೊಂದು ಖಾಸಗಿ ಆಸ್ಪತ್ರೆಗಳ ಜೊತೆಗೆ ಒಡಂಬಡಿಕೆಯನ್ನು ಮಾಡಿಕೊಂಡಿರುತ್ತದೆ ಅಂತಹ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ಇರುವವರಿಗೆ ಚಿಕಿತ್ಸೆ ಸೌಲಭ್ಯವಿದೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನೀವು ತೆರಳುವ ಖಾಸಗಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಕಾರ್ಡ್ ಚಲಾಯಿತಿ ಇದ್ದರೆ ಉಚಿತವಾಗಿ 5 ಲಕ್ಷದವರೆಗೂ ಚಿಕಿತ್ಸೆ ಪಡೆದುಕೊಳ್ಳಬಹುದು ಈ ವೆಚ್ಚವನ್ನು ಸರ್ಕಾರವು ಇನ್ಸೂರೆನ್ಸ್ ಮೂಲಕ ಬರಿಸುತ್ತದೆ.
ಒಂದು ಕುಟುಂಬಕ್ಕೆ 5 ಲಕ್ಷ ಹೆಲ್ತ್ ಇನ್ಸೂರೆನ್ಸ್…!!
ಇದರರ್ಥ ಅಂದು ಕುಟುಂಬದಲ್ಲಿ ಐದು ಜನ ಸದಸ್ಯರಿದ್ದಾರೆ ಎಂದು ಅಂದುಕೊಳ್ಳಿ ಈ ಕುಟುಂಬದಲ್ಲಿ ಒಬ್ಬ ಸದಸ್ಯ ಈ 5 ಲಕ್ಷ ರೂಪಾಯಿಗಳನ್ನು ಸಂಪೂರ್ಣವಾಗಿ ಚಿಕಿತ್ಸೆಗೆ ಪಡೆದುಕೊಳ್ಳಬಹುದು ಅಥವಾ ಒಬ್ಬೊಬ್ಬರು ತಲಾ ಒಂದೊಂದು ಲಕ್ಷ ಚಿಕಿತ್ಸೆಗೆ ಉಪಯೋಗಿಸಿಕೊಳ್ಳಬಹುದು. ಒಂದು ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ಮಾತ್ರ ಸರ್ಕಾರವು ಬರಿಸುತ್ತದೆ ಇದರ ಮೇಲಿನ ಖರ್ಚನ್ನು ನೀವೇ ಬರಿಸಬೇಕಾಗುತ್ತದೆ ಆದರೂ ಬಡ ಕುಟುಂಬಗಳಿಗೆ 5 ಲಕ್ಷ ಕಡಿಮೆ ಹಣವೇನು ಅಲ್ಲ.
ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?
ಈಗಾಗಲೇ RSBY ಯೋಜನೆಯ ಭಾಗವಾಗಿರುವ ಎಲ್ಲಾ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಯೋಜನೆ ಅನ್ವಯಿಸುತ್ತದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಪೋರ್ಟಲ್ ಮೂಲಕ ಯೋಜನೆಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ಮತ್ತು ಅದಕ್ಕಾಗಿ ಅರ್ಜಿ ಸಲ್ಲಿಸಬಹುದು:
ಮೊದಲು ಈ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ:
Mera.pmjay.gov.in
ಈಗ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪೇಜ್ ಮೇಲೆ ನೀಡಲಾದ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಅನ್ನು ನಮೂದಿಸಿ, ಅದು ನಿಮ್ಮನ್ನು PMJAY(ಪ್ರಧಾನ ಮಂತ್ರಿ ಜಾನ್ ಅರೋಗ್ಯ ಯೋಜನ) ಲಾಗಿನ್ ಪೇಜ್ ಗೆ ಕರೆದೊಯ್ಯುತ್ತದೆ
ಈಗ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸುತ್ತಿರುವ ರಾಜ್ಯವನ್ನು ಆಯ್ಕೆ ಮಾಡಿ
ನಿಮ್ಮ ಅರ್ಹತಾ ಮಾನದಂಡಗಳಿಗಾಗಿ ನೀವು ಹೇಗೆ ಪರಿಶೀಲಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ: ಮೊಬೈಲ್ ಸಂಖ್ಯೆ, ಹೆಸರು, ರೇಷನ್ ಕಾರ್ಡ್ ಸಂಖ್ಯೆ, ಅಥವಾ RSBY URN ಸಂಖ್ಯೆ
ನಿಮ್ಮ ಹೆಸರು ಪುಟದ ಬಲಭಾಗದಲ್ಲಿ ಕಾಣಿಸುತ್ತದೆ ಒಂದು ವೇಳೆ ನೀವು ಅರ್ಹರಾಗಿದ್ದರೆ.
‘ಕುಟುಂಬ ಸದಸ್ಯರು’ ಟ್ಯಾಬ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಫಲಾನುಭವಿಯ ವಿವರಗಳನ್ನು ಸಹ ಪರಿಶೀಲಿಸಬಹುದು
ಇದರ ಜೊತೆಗೆ, ನೀವು ಯಾವುದೇ ಎಂಪನೆಲ್ಡ್ ಹೆಲ್ತ್ ಕೇರ್ ಪ್ರೊವೈಡರ್ (EHCP) ಅನ್ನು ಸಂಪರ್ಕಿಸುವ ಮೂಲಕ PMJAY ಗೆ ಅರ್ಹರಾಗಿದ್ದೀರಾ ಎಂದು ನೀವು ಪರಿಶೀಲಿಸಬಹುದು ಅಥವಾ ಆಯುಷ್ಮಾನ್ ಭಾರತ್ ಯೋಜನೆ ಕಾಲ್ ಸೆಂಟರ್ ಸಂಖ್ಯೆ: 1800-111-565 ಅಥವಾ 14555 ಅನ್ನು ಡಯಲ್ ಮಾಡಬಹುದು ಯೋಜನೆಯ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಒಂದು ವೇಳೆ ನಿಮಗೆ ಮೊಬೈಲ್ ಮೂಲಕ ಅರ್ಜಿಯನ್ನು ಹಾಕಲು ತೊಂದರೆ ಆದರೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿ ಆರೋಗ್ಯ ಮಿತ್ರ ಎಂಬಲ್ಲಿ ಅರ್ಜಿ ಸಲ್ಲಿಸಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೂಡ 30 ರೂಪಾಯಿಗಳನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು
ಹೆಚ್ಚಿನ ಮಾಹಿತಿಗಾಗಿ
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ತಮ್ಮ ಹೆಸರನ್ನು ಸೇರಿಸುವುದು ಹೇಗೆ?
ಫಲಾನುಭವಿಯು ಕುಟುಂಬ ಸದಸ್ಯರನ್ನು ಸೇರಿಸಲು ಬಯಸಿದರೆ ‘ಕುಟುಂಬ ವಿವರಗಳನ್ನು ಸೇರಿಸಿ’ ಕ್ಲಿಕ್ ಮಾಡಿ
ಪಡಿತರ ಚೀಟಿ ಸಂಖ್ಯೆ ನಮೂದಿಸಿ. ತದನಂತರ ‘ಡಾಕ್ಯುಮೆಂಟ್ ವಿವರಗಳನ್ನು ಪರಿಶೀಲಿಸಿ’ ಮೇಲೆ ಕ್ಲಿಕ್ ಮಾಡಿ.
ಪಡಿತರ ಚೀಟಿಯನ್ನು ಈಗಾಗಲೇ ಕುಟುಂಬಕ್ಕೆ ಲಗತ್ತಿಸಿದ್ದರೆ, ಈ ಕೆಳಗಿನ ಸಂದೇಶವು ಕಾಣಿಸಿಕೊಳ್ಳುತ್ತದೆ
PMJAY ಅಡಿಯಲ್ಲಿ ಅರ್ಹತೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಆಯುಷ್ಮಾನ್ ಭಾರತ್ ಯೋಜನೆಯು ಅರ್ಹತೆ ಆಧಾರಿತ ಯೋಜನೆಯಾಗಿದ್ದು ಅದು SECC ಡೇಟಾಬೇಸ್ ಪ್ರಕಾರ ಅಭಾವದ ಮಾನದಂಡಗಳನ್ನು ಆಧರಿಸಿ ನಿರ್ಧರಿಸುತ್ತದೆ.
ಗ್ರಾಮೀಣ ಪ್ರದೇಶಗಳಿಗೆ, ಎಸ್ಇಸಿಸಿ ಡೇಟಾಬೇಸ್ ಪ್ರಕಾರ ಫಲಾನುಭವಿಗಳನ್ನು ಡಿ1, ಡಿ2, ಡಿ3, ಡಿ4, ಡಿ5 ಮತ್ತು ಡಿ7 ಎಂದು ಅಭಾವದ ಆಧಾರದ ಮೇಲೆ ವರ್ಗೀಕರಿಸಲಾಗಿದೆ.
ಮತ್ತು ನಗರ ಅರ್ಜಿದಾರರಿಗೆ, 11 ಔದ್ಯೋಗಿಕ ಮಾನದಂಡಗಳ ಆಧಾರದ ಮೇಲೆ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ
ಇದಲ್ಲದೆ, ರಾಜ್ಯಗಳಲ್ಲಿ, ಇದು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ (RSBY) ಫಲಾನುಭವಿಗಳನ್ನು ಸಹ ಒಳಗೊಂಡಿದೆ.
ಈ ಲೇಖನದೊಂದಿಗೆ ನೀವು PMJAY ಅಡಿಯಲ್ಲಿ ನಿಮ್ಮ ಅರ್ಹತೆಯನ್ನು ಪರಿಶೀಲಿಸಬಹುದು ಮತ್ತು ಜಗಳ-ಮುಕ್ತ ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಭಾವಿಸುತ್ತೇವೆ.
AB-PMJAY ಅಡಿಯಲ್ಲಿನ ಆರೋಗ್ಯ ವಿಮೆಯು ಫಲಾನುಭವಿಗಳ ಆಸ್ಪತ್ರೆಯ ವೆಚ್ಚವನ್ನು ಒಳಗೊಂಡಿರುತ್ತದೆ ಮತ್ತು ಕೆಳಗಿನ ಅಂಶಗಳನ್ನು ಒಳಗೊಂಡಿದೆ:
ವೈದ್ಯಕೀಯ ಪರೀಕ್ಷೆ, ಸಮಾಲೋಚನೆ ಮತ್ತು ಚಿಕಿತ್ಸೆ.
ಪೂರ್ವ ಆಸ್ಪತ್ರೆಗೆ.
ತೀವ್ರವಲ್ಲದ ಮತ್ತು ತೀವ್ರ ನಿಗಾ ಸೇವೆಗಳು.
ಔಷಧ ಮತ್ತು ವೈದ್ಯಕೀಯ ಉಪಭೋಗ್ಯ.
ರೋಗನಿರ್ಣಯ ಮತ್ತು ಪ್ರಯೋಗಾಲಯ ಸೇವೆಗಳು.
ವಸತಿ.
ವೈದ್ಯಕೀಯ ಇಂಪ್ಲಾಂಟ್ ಸೇವೆಗಳು, ಸಾಧ್ಯವಿರುವಲ್ಲೆಲ್ಲಾ.
ಆಹಾರ ಸೇವೆಗಳು.
ಚಿಕಿತ್ಸೆಯ ಸಮಯದಲ್ಲಿ ಉಂಟಾಗುವ ತೊಡಕುಗಳು.
15 ದಿನಗಳವರೆಗೆ ಆಸ್ಪತ್ರೆಯ ನಂತರದ ವೆಚ್ಚಗಳು.
COVID-19 (ಕೊರೊನಾವೈರಸ್) ಚಿಕಿತ್ಸೆ.
ಆಯುಷ್ಮಾನ್ ಭಾರತ್ ಯೋಜನಾ ಯೋಜನೆಯಡಿ ಯಾವುದನ್ನು ಒಳಗೊಂಡಿಲ್ಲ?
ಇತರ ರೀತಿಯ ಆರೋಗ್ಯ ವಿಮಾ ಪಾಲಿಸಿಗಳಂತೆಯೇ, ಆಯುಷ್ಮಾನ್ ಭಾರತ್ ಯೋಜನೆಯು ಕೆಲವು ವಿನಾಯಿತಿಗಳನ್ನು ಹೊಂದಿದೆ. ಕೆಳಗಿನ ಘಟಕಗಳನ್ನು ಯೋಜನೆಯ ಅಡಿಯಲ್ಲಿ ಒಳಗೊಂಡಿರುವುದಿಲ್ಲ:
ಹೊರರೋಗಿ ವಿಭಾಗ (OPD) ವೆಚ್ಚಗಳು.
ಡ್ರಗ್ ಪುನರ್ವಸತಿ.
ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳು.
ಫಲವತ್ತತೆ ಚಿಕಿತ್ಸೆಗಳು.
ವೈಯಕ್ತಿಕ ರೋಗನಿರ್ಣಯ.
ಅಂಗಾಂಗ ಕಸಿ.
ಆಯುಷ್ಮಾನ್ ಭಾರತ್ ಯೋಜನೆಯ ವೈಶಿಷ್ಟ್ಯಗಳು:
PMJAY ಯೋಜನೆಯ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಕೆಳಗೆ ನೀಡಲಾಗಿದೆ:
ಇದು ಭಾರತ ಸರ್ಕಾರದಿಂದ ಹಣಕಾಸು ಒದಗಿಸಿದ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಗಳಲ್ಲಿ ಒಂದಾಗಿದೆ.
ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಾದ್ಯಂತ ದ್ವಿತೀಯ ಮತ್ತು ತೃತೀಯ ಆರೈಕೆಗಾಗಿ ಪ್ರತಿ ಕುಟುಂಬಕ್ಕೆ ವಾರ್ಷಿಕ ರೂ.5 ಲಕ್ಷದ ವ್ಯಾಪ್ತಿ.
ಸರಿಸುಮಾರು 50 ಕೋಟಿ ಫಲಾನುಭವಿಗಳು (10 ಕೋಟಿಗೂ ಹೆಚ್ಚು ಬಡ ಮತ್ತು ದುರ್ಬಲ ಅರ್ಹ ಕುಟುಂಬಗಳು) ಯೋಜನೆಗೆ ಅರ್ಹರಾಗಿದ್ದಾರೆ.
ನಗದುರಹಿತ ಆಸ್ಪತ್ರೆಗೆ.
ಔಷಧಿಗಳು ಮತ್ತು ರೋಗನಿರ್ಣಯದಂತಹ 3 ದಿನಗಳ ಪೂರ್ವ-ಆಸ್ಪತ್ರೆ ವೆಚ್ಚಗಳನ್ನು ಒಳಗೊಂಡಿದೆ.
ಔಷಧಿಗಳು ಮತ್ತು ರೋಗನಿರ್ಣಯವನ್ನು ಒಳಗೊಂಡಿರುವ ಆಸ್ಪತ್ರೆಯ ನಂತರದ ವೆಚ್ಚಗಳ 15 ದಿನಗಳವರೆಗೆ ಆವರಿಸುತ್ತದೆ.
ಕುಟುಂಬದ ಗಾತ್ರ, ಲಿಂಗ ಅಥವಾ ವಯಸ್ಸಿನ ಮೇಲೆ ಯಾವುದೇ ನಿರ್ಬಂಧವಿಲ್ಲ.
ಯಾವುದೇ ಎಂಪನೆಲ್ ಮಾಡಲಾದ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದೇಶದಾದ್ಯಂತ ಸೇವೆಗಳನ್ನು ಪಡೆಯಬಹುದು.
ಮೊದಲ ದಿನದಿಂದ ಅಸ್ತಿತ್ವದಲ್ಲಿರುವ ಎಲ್ಲಾ ಪರಿಸ್ಥಿತಿಗಳನ್ನು ಒಳಗೊಂಡಿದೆ.
ಯೋಜನೆಯು 1,393 ವೈದ್ಯಕೀಯ ಕಾರ್ಯವಿಧಾನಗಳನ್ನು ಒಳಗೊಂಡಿದೆ.
ರೋಗನಿರ್ಣಯದ ಸೇವೆಗಳು, ಔಷಧಗಳು, ಕೊಠಡಿ ಶುಲ್ಕಗಳು, ವೈದ್ಯರ ಶುಲ್ಕಗಳು, ಶಸ್ತ್ರಚಿಕಿತ್ಸಕರ ಶುಲ್ಕಗಳು, ಸರಬರಾಜುಗಳು, ICU ಮತ್ತು OT ಶುಲ್ಕಗಳು ವೆಚ್ಚಗಳನ್ನು ಒಳಗೊಂಡಿದೆ.
ಖಾಸಗಿ ಆಸ್ಪತ್ರೆಗಳಿಗೆ ಸಮಾನವಾಗಿ ಸಾರ್ವಜನಿಕ ಆಸ್ಪತ್ರೆಗಳಿಗೆ ಮರುಪಾವತಿ ಮಾಡಲಾಗುತ್ತದೆ.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿ ಒಂದು ಕೋಟಿ ಚಿಕಿತ್ಸೆ
ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಖಾತ್ರಿ ಯೋಜನೆ – ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ(ಎಬಿ-ಪಿಎಂಜೆಎವೈ)ಅಡಿ ಇಂದು ಒಂದು ಕೋಟಿ ಚಿಕಿತ್ಸೆಗಳನ್ನು ಪೂರೈಸಿದೆ.
ಆಯುಷ್ಮಾನ್ ಭಾರತ್ ಪಿಎಂಜೆಎವೈ ಯೋಜನೆ ಆರಂಭವಾಗಿ ಎರಡು ವರ್ಷದೊಳಗೆ ದೇಶದ ಬಡಕುಟುಂಬಗಳ ರೋಗಿಗಳಿಗೆ ಒಂದು ಕೋಟಿ ಚಿಕಿತ್ಸೆಗಳನ್ನು ನೀಡುವ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಈ ಚಿಕಿತ್ಸೆಗಳ ಮೌಲ್ಯ 13,412 ಕೋಟಿ ರೂ.ಗಳು ಈ ಮೊತ್ತವನ್ನು 21,565 ನೋಂದಾಯಿತ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳ ಸಂಪರ್ಕ ಜಾಲಕ್ಕೆ ನೀಡಲಾಗಿದೆ”
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಖಾತ್ರಿ ಯೋಜನೆಯಾಗಿದೆ. ಇದನ್ನು 2018ರಲ್ಲಿ ಆರಂಭಿಸಲಾಯಿತು. ಇದರಲ್ಲಿ ಸಮಾಜದ ಬಡ ಹಾಗೂ ದುರ್ಬಲ ವರ್ಗದ ಭಾರತೀಯರಿಗೆ ತೃತೀಯ ಹಂತದ ಆರೋಗ್ಯ ರಕ್ಷಣಾ ಸೇವೆಗಳನ್ನು ಒದಗಿಸಲಾಗುವುದು. ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ಗಳವರೆಗೆ ಆರೋಗ್ಯ ವ್ಯಾಪ್ತಿ ಹೊಂದಿರುತ್ತದೆ. ಇದರ ಉದ್ದೇಶ ದೇಶದ ಬಡ ಹಾಗೂ ದುರ್ಬಲ ವರ್ಗದ 10.74 ಕೋಟಿಗೂ ಅಧಿಕ ಕುಟುಂಬಗಳಿಗೆ ಆರ್ಥಿಕ ಅಪಾಯದ ರಕ್ಷಣೆಯನ್ನು ಖಾತ್ರಿಪಡಿಸುವುದಾಗಿದೆ ಮತ್ತು ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ
ಭಾರತ ಸರ್ಕಾರ ಎಲ್ಲ 53 ಕೋಟಿ ಆಯುಷ್ಮಾನ್ ಭಾರತ್ ಎಬಿ-ಪಿಎಂಜೆಎವೈ ಫಲಾನುಭವಿಗಳಿಗೆ ಉಚಿತವಾಗಿ ಕೋವಿಡ್-19 ಚಿಕಿತ್ಸೆ ಮತ್ತು ಪರೀಕ್ಷೆ ಸೇವೆಯನ್ನು ವಿಸ್ತರಿಸಲು ನಿರಂತರ ಪ್ರಯತ್ನಗಳನ್ನು ನಡೆಸಿದೆ ಮತ್ತು ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಗೆ ಒಳಪಡಿಸಲು ಭಾರತ ಸರ್ಕಾರ ತನ್ನೆಲ್ಲಾ ಸಂಕಲ್ಪ ಮತ್ತು ಸಾಮರ್ಥ್ಯವನ್ನು ಬಲವರ್ಧನೆ ಮಾಡುತ್ತಿದೆ. ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತರು ಮತ್ತು ಎಲ್ಲ ನೋಂದಾಯಿತ ಆಸ್ಪತ್ರೆಗಳ ಅವಿರತ ಪ್ರಯತ್ನಗಳಿಂದಾಗಿ ಒಂದು ಕೋಟಿ ಚಿಕಿತ್ಸೆಗಳನ್ನು ನೀಡುವ ಸಾಧನೆ ಮಾಡಲು ಸಹಾಯಕವಾಗಿದೆ.
ಆಯುಷ್ಮಾನ್ ಭಾರತ್ ಕಾರ್ಡ್ ಕೇಂದ್ರ ಸರ್ಕಾರ ಶ್ರೀನರೇಂದ್ರ ಮೋದಿಯವರು ಬಡವರಿಗೆ ಸಹಾಯವಾಗಲೆಂದು ಆಯುಷ್ಮಾನ್ ಭಾರತ್ ಕಾರ್ಯ ಯೋಜನೆ ಜಾರಿಗೆ ತಂದಿದೆ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದ್ದರೆ ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಗೆ ಅರ್ಹರಾಗುತ್ತಾರೆ ಈ ಯೋಜನೆಯಿಂದ ಬಡವರು ಮೇಲ್ವರ್ಗದವರಂತೆ ಖಾಸಗಿ ಆಸ್ಪತ್ರೆಯಲ್ಲಿ ಐದು ಲಕ್ಷದವರೆಗೂ ಉತ್ತಮವಾದ ಚಿಕಿತ್ಸೆಯನ್ನು ಪಡೆಯಬಹುದು.
ನನ್ನ ಅನಿಸಿಕೆ
ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ ಕಾಡ್ ಯೋಜನೆಯನ್ನು ಜಾರಿಗೆ ತಂದಿದೆ ಸರಿ ಇದರಿಂದ ಬಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ ಆದರೆ ಅದು 5 ಲಕ್ಷಕ್ಕೆ ಸೀಮಿತವಾಗಿದೆ. ಈಗಿನ ಖಾಸಗಿ ಆಸ್ಪತ್ರೆಗಳು ಬಹು ವೆಚ್ಚವಾಗಿದೆ ಆಸ್ಪತ್ ಖಾಸಗಿ ಆಸ್ಪತ್ರೆಗಳಲ್ಲಿ ಹಣಕ್ಕೆ ಬೆಲೆ ಇಲ್ಲದಾಗಿದೆ ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಹಣವನ್ನು ಹೀರುತ್ತವೆ ಆದಕಾರಣ ಆಯುಷ್ಮಾನ್ ಭಾರತ್ ಕಾರ್ಡ್ 50000 ವರೆಗೆ ಸೀಮಿತವಾಗಿದ್ದು ಅಷ್ಟು ಉಪಯೋಗಕಾರಿ ಇಲ್ಲವಾಗಿದೆ ಆದಕಾರಣ ಸರ್ಕಾರವು ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಬೇಕು ಇದರಿಂದಾಗಿ ಎಲ್ಲ ಬಡವರಿಗೂ ಉತ್ತಮವಾದ ಚಿಕಿತ್ಸೆ ಸಿಗುತ್ತದೆ.
ಬಡವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಕೊಡುವುದಿಲ್ಲ ಏಕೆಂದರೆ ಅವರಿಗೆ ಜೀವನ ನಡೆಸುವುದು ಕಷ್ಟವಾಗಿರುತ್ತದೆ ಮತ್ತು ಹೊಟ್ಟೆ ತುಂಬಿಸಿಕೊಳ್ಳುವುದೇ ಅವರ ಮೊದಲ ಕೆಲಸವಾಗಿರುತ್ತದೆ ಹಾಗಾಗಿ ಸರ್ಕಾರವು ಬಡವರಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಬೇಕು ಹಾಗೂ ಅಕ್ರಮವಾಗಿ ರೇಷನ್ ಕಾರ್ಡನ್ನು ಪಡೆದವರ ಬಗ್ಗೆ ಗಮನ ಕೊಟ್ಟು ಕಠಿಣ ಕ್ರಮ ಕೈಗೊಳ್ಳಬೇಕು ಬಡವರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಬೇಕು ಸರ್ಕಾರಿ ಆಸ್ಪತ್ರೆಗಳನ್ನು ಮೌಲ್ಯವರ್ಧಿಸಬೇಕು ಅಂದರೆ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳಂತೆ ಅತ್ಯಧಿಕ ಸಾಧನೆಗಳನ್ನು ಬಳಸಬೇಕು ಹಾಗೂ ನುರಿತ ಡಾಕ್ಟರ್ ಗಳನ್ನು ಆಸ್ಪತ್ರೆಗಳಲ್ಲಿ ಕರೆಸಿಕೊಳ್ಳಬೇಕು.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಲಿಟ್. ’ಪ್ರಧಾನಿ ಜನರ ಆರೋಗ್ಯ ಯೋಜನೆ’ ಅಥವಾ PM-JAY; ಇದನ್ನು ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ ಅಥವಾ NHPS ಎಂದೂ ಕರೆಯಲಾಗುತ್ತದೆ) ಇದು ಭಾರತ ಸರ್ಕಾರದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ವಿಮಾ ನಿಧಿಯಾಗಿದೆ. ದೇಶದಲ್ಲಿ ಕಡಿಮೆ ಆದಾಯ ಗಳಿಸುವವರಿಗೆ ಆರೋಗ್ಯ ವಿಮಾ ರಕ್ಷಣೆಗೆ ಉಚಿತ ಪ್ರವೇಶವನ್ನು ಒದಗಿಸಿ. ಸರಿಸುಮಾರು, ದೇಶದ ಕೆಳಭಾಗದ 50% ಜನರು ಈ ಯೋಜನೆಗೆ ಅರ್ಹರಾಗಿದ್ದಾರೆ. [2] ಪ್ರೋಗ್ರಾಂ ಅನ್ನು ಬಳಸುವ ಜನರು ಕುಟುಂಬ ವೈದ್ಯರಿಂದ ತಮ್ಮದೇ ಆದ ಪ್ರಾಥಮಿಕ ಆರೈಕೆ ಸೇವೆಗಳನ್ನು ಪ್ರವೇಶಿಸುತ್ತಾರೆ. ಯಾರಿಗಾದರೂ ಹೆಚ್ಚುವರಿ ಆರೈಕೆಯ ಅಗತ್ಯವಿದ್ದಾಗ, ನಂತರ PM-JAY ತಜ್ಞ ಚಿಕಿತ್ಸೆ ಮತ್ತು ಆಸ್ಪತ್ರೆಗೆ ಅಗತ್ಯವಿರುವವರಿಗೆ ತೃತೀಯ ಆರೋಗ್ಯ ರಕ್ಷಣೆ ಅಗತ್ಯವಿರುವವರಿಗೆ ಉಚಿತ ದ್ವಿತೀಯ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ.