ವೀಳ್ಯದೆಲೆ ಬೆಳೆದರೆ ಬಾಳೇ ಬಂಗಾರ

ವೀಳ್ಯದೆಲೆ ಬೆಳೆದರೆ ಬಾಳೆ ಬಂಗಾರ..!!

WhatsApp Group Join Now
Telegram Group Join Now

ಉತ್ತರ ಕರ್ನಾಟಕದಲ್ಲಿ ನಾವು ವೀಳ್ಯದೆಲೆಯನ್ನು ತಿನ್ನು ಎಲೆ ಎಂದು ಕರೆಯುತ್ತೇವೆ.
ವೀಳ್ಯದೆಲೆಯನ್ನು ಹಸಿರು ಬಂಗಾರ ಎಂದು ಕರೆಯುತ್ತಾರೆ. ಕಾರಣ ವೀಳ್ಯದೆಲೆಯ ಬೆಲೆ ಬಹು ಜಾಸ್ತಿ.
ಒಂದು ಎಕರೆಗೆ ಕಡಿಮೆ ಅಂದರೂ ಸಹ 5 ಲಕ್ಷದಿಂದ 10 ಲಕ್ಷದವರೆಗೆ ಲಾಭವನ್ನು ನಾವು ತೆಗೆಯಬಹುದು.

ಉತ್ತರ ಕರ್ನಾಟಕದಲ್ಲಿ ಜಾಸ್ತಿ ನೀರಾವರಿ ಇರುವ ಭಾಗದಲ್ಲಿ ರೈತರು ಕೇವಲ ಕಬ್ಬನ್ನು ಮಾತ್ರ ಬೆಳೆಯುತ್ತಾರೆ.

ಆದರೆ ಈ ವೀಳ್ಯದೆಲೆ ಬಗ್ಗೆ ಅವರಿಗೆ ತಿಳಿದಿಲ್ಲ.
ಒಂದು ಎಕರೆಗೆ ಕಬ್ಬು ಬೆಳೆದರೆ ಒಂದು ಲಕ್ಷದಿಂದ ಎರಡು ಲಕ್ಷದವರೆಗೆ ಮಾತ್ರ ಲಾಭ ಬರುತ್ತದೆ.

ಆದರೆ ಈ ವೀಳ್ಯದೆಲೆಯನ್ನು ನಾವು ಒಂದು ಎಕರೆಯಲ್ಲಿ ಬೆಳೆದರೆ ಕಡಿಮೆ ಅಂದರೂ ಸಹ 5 ಲಕ್ಷದಿಂದ 10 ಲಕ್ಷದ ರುಪಾಯಿವರೆಗೂ ಲಾಭವನ್ನು ತೆಗೆಯಬಹುದು..!!
ಇದನ್ನು ಕೇಳಿ ನಿಮಗೆ ಅಚ್ಚರಿ ಅನಿಸಬಹುದು ಆದರೆ ಇದು ನಿಜ ಸಂಗತಿ.

ಈ ವೀಳ್ಯದೆಲೆಯನ್ನು ಹಲವಾರು ಕಡೆ ಬಳಸಲಾಗುತ್ತದೆ
1) ದೇವರ ಪೂಜೆಯಲ್ಲಿ
2) ತಿನ್ನಲು
3) ಹೂವಿನ ಅಲಂಕಾರದಲ್ಲಿ
4) ಔಷಧೀಯ ತಯಾರಿಕೆಯಲ್ಲಿ
5) ಹಲವಾರು ಕಾರ್ಯಕ್ರಮಗಳಲ್ಲಿ

ಹೌದು ನಾವು ದೈನಂದಿನ ಬದುಕಿನಲ್ಲಿ ವೀಳ್ಯದೆಲೆಯನ್ನು ಅತಿ ಹೆಚ್ಚು ಬಳಸುತ್ತೇವೆ.

ನಾವು ತಿನ್ನಲು ದೇವರ ಪೂಜೆಯಲ್ಲಿ ಹೂವಿನ ಅಲಂಕಾರಗಳಲ್ಲಿ ಮತ್ತು ಔಷಧಿಯ ತಯಾರಿಕೆಯಲ್ಲಿ ಮತ್ತು ಹಲವಾರು ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಬಳಸುತ್ತೇವೆ.
ಉತ್ತರ ಕರ್ನಾಟಕದಲ್ಲಿ ರೈತರು ಕೇವಲ ಕಬ್ಬನ್ನು ಮಾತ್ರ ಬೆಳೆಯುತ್ತಾರೆ.
4 ಎಕರೆ ಕಬ್ಬನ್ನು ಬೆಳೆಯುವ ಬದಲು ಒಂದು ಎಕರೆ ಈ ವೀಳ್ಯದೆಲೆಯನ್ನು ನಾವು ಬೆಳೆದರೆ ಅತಿ ಹೆಚ್ಚು ಲಾಭವನ್ನು ತೆಗೆಯುತ್ತೇವೆ.

ಈ ವೀಳ್ಯದೆಲೆಯನ್ನು ಬೆಳೆಯಲು ಕೇವಲ ನಾವು ಅತಿ ಹೆಚ್ಚು ತಿಪ್ಪೆ ಗೊಬ್ಬರವನ್ನು ಮಾತ್ರ ಬಳಸುತ್ತೇವೆ ಮತ್ತು ಯಾವುದೇ ಔಷದಿಯ ಅಗತ್ಯವಿರುವುದಿಲ್ಲ.

ಮತ್ತು ಇದರ ಜೊತೆಗೆ ಹೊಲದಲ್ಲಿ ನಾವು ನುಗ್ಗೆ ಗಿಡ ಮತ್ತು ಹಲವಾರು ಗಿಡಗಳನ್ನು ಬೆಳೆಸುವುದರಿಂದಲೂ ಸಹ ಅದರಿಂದಲೂ ನಮಗೆ ಲಾಭ ದೊರೆಯುತ್ತದೆ.

ಭಾರತೀಯ ಪರಂಪರೆಯಲ್ಲಿ ವೀಳ್ಯದೆಲೆಗೆ ಅದರ ಪ್ರಾಮುಖ್ಯತೆ ಇದೆ.
ಹಲವಾರು ತಲೆಮಾರುಗಳಿಂದ ವೀಳ್ಯದೆಲೆಯನ್ನು ನಮ್ಮ ಹಿರಿಯರು ಊಟ ಆದ ನಂತರ ಸೇವಿಸುತ್ತಲೇ ಬಂದಿದ್ದಾರೆ.
ಕಾರಣ ವೀಳ್ಯದೆಲೆಗೆ ಅತಿ ಹೆಚ್ಚು ಔಷಧಿಯ ಮೌಲ್ಯವಿದೆ.
ವಿಳೆದೆಲೆ ಬೆಳೆಯುವ ವಿಧಾನ!

ವೀಳ್ಯದೆಲೆಗೆ ನೆರಳು ಅತಿ ಅವಶ್ಯಕ.
ವೀಳ್ಯದೆಲೆ ಅಗಿಯನ್ನು ಮೊದಲು ನಾವು ತಲಿಸಿಕೊಳ್ಳಬೇಕು.

ನೆಲವನ್ನು ಹದ ಮಾಡಿಕೊಂಡು ಮತ್ತು ಆ ನೆಲಕ್ಕೆ ಅತಿ ಹೆಚ್ಚು ನೀರನ್ನು ಬಿಟ್ಟು ಹಸಿ ಜಾಗದಲ್ಲಿ ನಾವು ವೀಳ್ಯದೆಲೆಯನ್ನು ಹಚ್ಚಬೇಕು.

ಒಂದು ಸಾಲಿನಿಂದ ಇನ್ನೊಂದು ಸಾಲಿಕೆ ಕಡಿಮೆ ಅಂದರೂ ಸಹ 3 ಫೀಟ್ ಅಂತರವಿರಬೇಕು.
ಮತ್ತು ಒಂದು ಅಗಿಂದ ಇನ್ನೊಂದು ಅಗಿಗೆ ಕಡಿಮೆ ಎಂದರೆ ಸಹ 1 ಫೀಟ್ ಅಂತರವಿರಬೇಕು.

ಒಂದು ಎಚ್ಚರಿಕೆ ಏನೆಂದರೆ ವಿಳೆದೆಲೆಗೆ ತಗಲುವ ರೋಗಗಳ ಬಗ್ಗೆ ನಮಗೆ ಅರಿವಿರಬೇಕು.
ವಿಳ್ಳೇದೆಲೆ ಅಗಿ ನೆಡುವುದಕ್ಕಿಂತ ಮೊದಲು ನಾವು ಅದಕ್ಕೆ ಸಪೋರ್ಟ್ ಎಂದು ಒಂದು ಎತ್ತರವಾದ ಗಿಡವನ್ನು ಬೆಳೆಸಬೇಕು ಅಂದರೆ ಉದಾಹರಣೆಗೆ ನುಗ್ಗೆ ಗಿಡವನ್ನು ಬೆಳೆಸಿ ಅದರ ಜೊತೆಗೆ ವೀಳ್ಯದೆಲೆಯನ್ನು ಎತ್ತರಕ್ಕೆ ಬೆಳೆಯಲು ಸಹಕರಿಸಬೇಕು.

ಅತಿ ಹೆಚ್ಚು ತಿಪ್ಪೆ ಗೊಬ್ಬರವನ್ನು ಮಾತ್ರ ನಾವು ಇದಕ್ಕೆ ಬಳಸಬೇಕು.

ನುಗ್ಗೆ ಗಿಡ ಬೆಳೆಯುವುದರಿಂದಲೂ ಸಹ ನಮಗೆ ಅತಿ ಹೆಚ್ಚು ಲಾಭವು ದೊರಕುತ್ತದೆ.

ವೀಳ್ಯದೆಲೆ ಬೆಳೆಯಲು ವಹಿಸಬೇಕಾದ ಜಾಗರೂಕತೆಗಳು..!!

1) ರೋಗಲಕ್ಷಣಗಳ ಬಗ್ಗೆ ಅರಿವು
2) ಯಾವುದೇ ಜಾನುವಾರುಗಳು ತಿನ್ನದಂತೆ ಎಚ್ಚರವಹಿಸುವುದು
3) ಅತಿ ಹೆಚ್ಚು ತಿಪ್ಪೆಯ ಗೊಬ್ಬರವನ್ನು ಬಳಸುವುದು
4) ಕಳೆ ತೆಗೆಯುವುದು
5)ಎಲೆಯ ಬಣ್ಣ ಹಳದಿಯಾಗದಂತೆ ತಡೆಯುವುದು

ಈ ಮೇಲ್ಕಂಡ ಜಾಗರೂಕತೆಗಳನ್ನು ನಾವು ವಹಿಸಿದೆ ಇದ್ದಲ್ಲಿ ನಮಗೆ ನಷ್ಟ ಉಂಟಾಗುತ್ತದೆ.

ಯಾವುದೇ ಬೆಳೆಯನ್ನು ಬೆಳೆಯುವ ಮೊದಲು ನಮಗೆ ಅದರ ಬಗ್ಗೆ ಸ್ವಲ್ಪ ಜ್ಞಾನ ಮತ್ತು ಅರಿವು ಇರಬೇಕು.

ಏನಾದರೂ ತಿಳಿಯದಿದ್ದರೆ ಸಂಪರ್ಕಿಸಿ.

ವೀಳ್ಯದೆಲೆಯ ಮಹತ್ವ..!!

ವಿಳ್ಳೆದೆಲೆಯಲ್ಲಿ ಅತಿ ಹೆಚ್ಚು ಔಷಧೀಯ ಗುಣಗಳಿವೆ.
ಅದಕ್ಕಾಗಿ ನಮ್ಮ ಹಿರಿಯರು ಊಟದ ನಂತರ ಈ ವಿಳೇದೆಲೆಯನ್ನು ತಿನ್ನುತ್ತಿದ್ದರು.

ಈಗಲೂ ಸಹ ವೀಳ್ಯದೆಲೆಯನ್ನು ಅತಿ ಹೆಚ್ಚು ಜನರು ತಿನ್ನುತ್ತಾರೆ.
ವೀಳ್ಯದೆಲೆ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಕಂಟ್ರೋಲ್ ಮಾಡುತ್ತದೆ.
ವಿಳೆದೆಲೆ ತಿನ್ನುವುದರಿಂದ ನಮ್ಮ ದೇಹದಲ್ಲಿ ಇರುವ ಹಲವಾರು ರೋಗಕ್ಕೆ ಉಂಟಾಗುವ ಬ್ಯಾಕ್ಟೀರಿಯಾ ಗಳನ್ನು ಸಹ ಇದು ಕೊಲ್ಲುತ್ತದೆ.

ಮತ್ತೂ ರಕ್ತದಲ್ಲಿರುವ “ಹಿಮೋಗ್ಲೋಬಿನ್” ಅನ್ನು ಸಹ ಹೆಚ್ಚಿಸುತ್ತದೆ.
ಇನ್ನು ಹಲವಾರು ಉಪಯೋಗಗಳು ಇರುವುದರಿಂದ ಈ ಒಳ್ಳೆಯದನ್ನು ನಾವು ಸೇವಿಸಬೇಕು.

ಇನ್ನು ದೇವರ ಪೂಜೆಯಲ್ಲಿ ಸಹ ಅತಿ ಹೆಚ್ಚು ವಿಳ್ಳೆದೆಲೆಯನ್ನು ಬಳಸುತ್ತಾರೆ.

ಅಲಂಕಾರದಲ್ಲಿಯೂ ಸಹ ಅತಿ ಹೆಚ್ಚಾಗಿ ಈ ವೀಳ್ಯದೆಲೆಯನ್ನು ಬಳಸಲಾಗುತ್ತದೆ.

ವೀಳ್ಯದೆಲೆ ಲಾಭದ ಮಹತ್ವ.!!

ಪ್ರೀತಿಯ ರೈತ ಬಾಂಧವರೇ ಈ ವಿಡಿಯೋದಲ್ಲಿ ಏನು ಹಲವಾರು ಕಡೆ ಅತಿ ಹೆಚ್ಚಾಗಿ ಬಳಸುವುದರಿಂದ ಇದರ ಬೆಲೆ ಅತಿ ಹೆಚ್ಚು.
ಅದಕ್ಕಾಗಿ ನಾವು ನಮ್ಮ ಹೊಲದಲ್ಲಿ ಕಡಿಮೆಯಾದರೂ ಸಹ ಒಂದು ಎಕರೆ ಜಾಗದಲ್ಲಿ ಈ ವೀಳ್ಯದೆಲೆಯನ್ನು ಬೆಳೆಯುವುದು ಸೂಕ್ತ.

ಒಂದು ಎಕರೆಗೆ ನಾವು ಒಳ್ಳೆಯದಲ್ಲೇನು ಬೆಳೆದರೆ ಕೇವಲ ಒಂದು ಲಕ್ಷ ರೂಪಾಯಿ ದವರೆಗೆ ಮಾತ್ರ ಖರ್ಚ ಉಂಟಾಗುತ್ತದೆ.

ಒಂದು ಎಕರೆಗೆ 5 ರಿಂದ 10 ಲಕ್ಷ ರೂಪಾಯಿವರೆಗೆ ಲಾಭ ದೊರಕುತ್ತದೆ.

ಅದಕ್ಕಾಗಿ ಕಬ್ಬಿನ ಬದಲು ಒಂದು ಎಕರೆಯಾದರೂ ಸಹ ಈ ವೀಳ್ಯದೆಲೆಯನ್ನು ಬೆಳೆಯುವುದು ಸೂಕ್ತ.

ಸೂಚನೆ:

1)ರೋಗಗಳ ಬಗ್ಗೆ ಸ್ವಲ್ಪ ಅರಿವನ್ನು ನಾವು ಇಟ್ಟುಕೊಳ್ಳಬೇಕಾಗುತ್ತದೆ.
2)ಮತ್ತು ಎಲೆಯನ್ನು ಹಳದಿ ಯಾಗದಂತೆ ತಡೆಯಬೇಕು
3) ಅತಿ ಹೆಚ್ಚು ತಿಪ್ಪೆ ಗೊಬ್ಬರವನ್ನು ಬಳಸಬೇಕು
4) ವೀಳ್ಯದೆಲೆಗೆ ನೆರಳಿನ ಅವಶ್ಯಕತೆ ಇದೆ
5) ಈ ಬೆಳೆ ಮಳೆ ಆಶ್ರಿತವಲ್ಲ ಅತಿ ಹೆಚ್ಚು ನೀರು ಬೇಕು

ಇಷ್ಟು ಜ್ಞಾನ ಹೊಂದಿದ್ದಲ್ಲಿ ನಾವು ವೀಳ್ಯದೆಲೆಯನ್ನು ಬೆಳೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಒಂದು ಉದಾಹರಣೆ

ನಮ್ಮ ನೆರೆಯ ಹೊಲದ ರೈತರು ಒಬ್ಬರು ಈ ವೀಳ್ಯದೆಲೆಯನ್ನು ಬೆಳೆಯುತ್ತಿದ್ದಾರೆ.
ಅವರು 17 ವರ್ಷದಿಂದ ಈ ವೀಳ್ಯದೆಲೆಯನ್ನು ಬೆಳೆಯುತ್ತಿದ್ದು ಅತಿ ಹೆಚ್ಚು ಪ್ರಮಾಣದ ಲಾಭವನ್ನು ಕಂಡುಕೊಂಡಿದ್ದಾರೆ.
ಅವರ ಸಹಾಯದಿಂದ ನಾನು ಈಗ ಈ ವೇಳೆಯಲ್ಲಿ ಬೆಳೆಯಲು ಶುರು ಮಾಡಿದ್ದೇನೆ.

ಅದಕ್ಕಾಗಿ ಈ ಲಾಭದ ಮಹತ್ವವನ್ನು ತಿಳಿದುಕೊಂಡು ನಾನು ಬೆಳೆಯಲು ಶುರು ಮಾಡಿದ್ದೇನೆ.
ನಿಮಗೆ ತಿಳಿಯದಿದ್ದರೆ ನಾನು ಕಳಿಸಿರುವ ಚಿತ್ರಗಳನ್ನು ನೋಡಿಕೊಂಡು ಅರ್ಥಮಾಡಿಕೊಳ್ಳಬಹುದು.

ಜ್ಞಾನವನ್ನು ಹೊಂದಿಕೊಂಡು ಈ ವೀಳ್ಯದೆಲೆಯನ್ನು ಬೆಳೆಯಲು ಶುರು ಮಾಡಿ.
ವೀಳ್ಯದೆಲೆ ಬೆಳೆಯಿರಿ ಅತಿ ಹೆಚ್ಚು ಲಾಭವನ್ನು ಪಡೆಯಿರಿ.!!

ಹೆಚ್ಚಿನ ಮಾಹಿತಿಗಾಗಿ ತಿಳಿದುಕೊಂಡು ಬೆಳೆಯುವುದು ಸೂಕ್ತ.
ವೀಳ್ಯದೆಲೆಯನ್ನು ಬೆಳೆಯಿರಿ ಬಾಳನ್ನು ಬಂಗಾರ ಮಾಡಿಕೊಳ್ಳಿ.

ಈ ವೀಳ್ಯದೆಲೆ ಲಾಭ ಅತಿ ಹೆಚ್ಚಾಗಿರುವುದರಿಂದ ಇದನ್ನು ಹಸಿರು ಬಂಗಾರ ಎನ್ನುತ್ತಾರೆ.
ಧನ್ಯವಾದಗಳು.

ಎಲೆ ಕಾಂಡ ಮತ್ತು ಕಾಲು ಕೊಳೆತ
ರೋಗದ ಲಕ್ಷಣಗಳು:

ಅತ್ಯಂತ ವಿನಾಶಕಾರಿ ಶಿಲೀಂಧ್ರ ರೋಗವು ಎಲೆಗಳ ಮೇಲೆ ಒದ್ದೆಯಾದ ಕೊಳೆತ ರೋಗಲಕ್ಷಣವನ್ನು ಉಂಟುಮಾಡುತ್ತದೆ ಮತ್ತು ಕಾಲು ಕೊಳೆತದಿಂದಾಗಿ ಒಣಗುತ್ತದೆ.
ಮೊದಲ ವೃತ್ತಾಕಾರದಲ್ಲಿ, ಗಾಢ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ, ಇದು ನಿರಂತರವಾದ ಹೆಚ್ಚಿನ ಆರ್ದ್ರ ಪರಿಸ್ಥಿತಿಗಳಲ್ಲಿ ತೇವ ಮತ್ತು ಕೊಳೆಯುತ್ತದೆ
ಇಲ್ಲದಿದ್ದರೆ, ಕಡು ಕಂದು ನೆಕ್ರೋಟಿಕ್ ಕಲೆಗಳು ಪರ್ಯಾಯ ತಿಳಿ ಕಂದು ವಲಯಗಳೊಂದಿಗೆ ಕಾಣಿಸಿಕೊಳ್ಳುತ್ತವೆ.
ಕಾಲು ಕೊಳೆತ ಸ್ಥಿತಿಯಲ್ಲಿ ಎಲೆಗಳ ಹೊಳಪು ಕಳೆದುಕೊಳ್ಳುವುದು ಮತ್ತು ಬಳ್ಳಿಗಳು ಸಂಪೂರ್ಣ ಒಣಗುವುದು ಮತ್ತು ಒಣಗುವುದು ತ್ವರಿತ ಅನುಕ್ರಮದಲ್ಲಿ ಸಂಭವಿಸುತ್ತದೆ.
ಪೀಡಿತ ಸಸ್ಯದ ಮೂಲ ವ್ಯವಸ್ಥೆಯು ಹಾನಿಗೊಳಗಾಗುತ್ತದೆ. ಪಾರ್ಶ್ವದ ಬೇರುಗಳು ಸಂಪೂರ್ಣವಾಗಿ ನಾಶವಾಗುತ್ತವೆ. ರೋಗವು ಹೆಚ್ಚಾಗಿ ತೇಪೆಗಳಲ್ಲಿ ಕಂಡುಬರುತ್ತದೆ ಮತ್ತು ಬಳ್ಳಿಗಳು ಒಣಗಿ ಸಾಯುತ್ತವೆ. ಒಂದು ವಾರದಲ್ಲಿ ಶೇ.80ರಿಂದ 90ರಷ್ಟು ಬಳ್ಳಿಗಳು ಒಣಗಿ ಸಾಯುತ್ತವೆ
ಬದುಕುಳಿಯುವಿಕೆ ಮತ್ತು ಹರಡುವಿಕೆ:

ಶಿಲೀಂಧ್ರವು ರೋಗದ ಸಸ್ಯದ ಅವಶೇಷಗಳು ಮತ್ತು ಮಣ್ಣಿನಲ್ಲಿ ಉಳಿದುಕೊಂಡಿರುತ್ತದೆ. ಈ ಬಳ್ಳಿಗಳು ಮಳೆಯ ನಂತರ ಚೇತರಿಸಿಕೊಳ್ಳಬಹುದು ಮತ್ತು ಬೇರಿನ ಸೋಂಕು ಕೊರಳಾಗುವವರೆಗೆ ಮತ್ತು ಬಳ್ಳಿ ಸಾಯುವವರೆಗೆ ಎರಡು ಋತುಗಳಿಗಿಂತ ಹೆಚ್ಚು ಕಾಲ ಬದುಕಬಹುದು.
ಅನುಕೂಲಕರ ಪರಿಸ್ಥಿತಿಗಳು:

ಜುಲೈನಲ್ಲಿ ಮಳೆಯು ರೋಗದ ಬೆಳವಣಿಗೆಗೆ ಅನುಕೂಲಕರವಾಗಿದೆ.

ಲೀಫ್ ಸ್ಪಾಟ್ ಅಥವಾ ಆಂಥ್ರಾಕ್ನೋಸ್

ರೋಗದ ಲಕ್ಷಣಗಳು:

ಎಲೆಯ ಚುಕ್ಕೆಗಳು ಆಕಾರ ಮತ್ತು ಗಾತ್ರದಲ್ಲಿ ಅನಿಯಮಿತವಾಗಿರುತ್ತವೆ, ತಿಳಿ ಕಂದು ಬಣ್ಣದಿಂದ ಸುತ್ತುವರಿದ ಕ್ಲೋರೋಟಿಕ್ ಹಳದಿ ಪ್ರಭಾವಲಯದಿಂದ ಸುತ್ತುವರಿದಿದೆ.
ಎಲೆಯ ಅಂಚಿನ ಅಂಗಾಂಶವು ಕಪ್ಪಾಗುತ್ತದೆ, ನೆಕ್ರೋಟಿಕ್ ಆಗುತ್ತದೆ ಮತ್ತು ಕ್ರಮೇಣ ಎಲೆಯ ಮಧ್ಯಭಾಗಕ್ಕೆ ಹರಡುತ್ತದೆ.
ಸಾಂದರ್ಭಿಕವಾಗಿ ಹರಡಿರುವ ಹಳದಿ ಪ್ರಭಾವಲಯ ಕೂಡ ಬೆಳೆಯುತ್ತದೆ.
ಆಂಥ್ರಾಕ್ನೋಸ್ ಹಂತದ ವೃತ್ತಾಕಾರದಲ್ಲಿ, ವೇಗವಾಗಿ ಸಂಭವಿಸುವ ಕಪ್ಪು ಗಾಯಗಳು ಗಾತ್ರದಲ್ಲಿ ಹೆಚ್ಚಾಗುತ್ತವೆ ಮತ್ತು ಕಾಂಡವನ್ನು ಸುತ್ತಿಕೊಳ್ಳುತ್ತವೆ, ಇದು ಬಳ್ಳಿಯ ಮರಣದಲ್ಲಿ ಕೊನೆಗೊಳ್ಳುತ್ತದೆ.
ಬದುಕುಳಿಯುವಿಕೆ ಮತ್ತು ಹರಡುವಿಕೆ:

ಸೋಂಕಿತ ಬೀಜಗಳನ್ನು ಬಿತ್ತುವುದರಿಂದ ಪ್ರಾಥಮಿಕ ಸೋಂಕು ಮತ್ತು ಗಾಳಿಯಿಂದ ದ್ವಿತೀಯ.
ಅನುಕೂಲಕರ ಪರಿಸ್ಥಿತಿಗಳು:

ಮಳೆ ಮತ್ತು ಹೆಚ್ಚಿನ ಆರ್ದ್ರತೆಯು ರೋಗದ ಬೆಳವಣಿಗೆಗೆ ಕಾರಣವಾಗಿದೆ.
ಫ್ಯುಸಾರಿಯಮ್ ವಿಲ್ಟ್
ರೋಗದ ಲಕ್ಷಣಗಳು:

ಸಸ್ಯಗಳು ಎಲೆಗಳ ಹಳದಿ ಬಣ್ಣವನ್ನು ತೋರಿಸುತ್ತವೆ ಮತ್ತು ಕ್ರಮೇಣ ಒಣಗುತ್ತವೆ. ಆಗಾಗ್ಗೆ ಹಠಾತ್ ಒಣಗುವುದು ಮತ್ತು ಇಡೀ ಸಸ್ಯವನ್ನು ಒಣಗಿಸುವುದು ಸಂಭವಿಸುತ್ತದೆ. ಸಸ್ಯದ ನಾಳೀಯ ಬಣ್ಣ.
ಬದುಕುಳಿಯುವಿಕೆ ಮತ್ತು ಹರಡುವಿಕೆ:

ಕ್ಲಮೈಡೋಸ್ಪೋರ್ಗಳು ಮಣ್ಣಿನಲ್ಲಿ ಬದುಕುಳಿಯುತ್ತವೆ, ಕೋನಿಡಿಯಾ ನೀರಾವರಿ ನೀರಿನ ಮೂಲಕ ಹರಡುತ್ತದೆ.
ಮಳೆ ಅಥವಾ ಗಾಳಿಯ ಮೂಲಕ ಕೋನಿಡಿಯಾದಿಂದ ದ್ವಿತೀಯಕ ಸೋಂಕು
ಅನುಕೂಲಕರ ಪರಿಸ್ಥಿತಿಗಳು:

ಹೆಚ್ಚಿನ ತಾಪಮಾನ ಮತ್ತು ಹೆಚ್ಚಿನ ಸಾಪೇಕ್ಷ ಆರ್ದ್ರತೆಯು ರೋಗದ ಬೆಳವಣಿಗೆಗೆ ಅನುಕೂಲಕರವಾಗಿದೆ.
ಸೂಕ್ಷ್ಮ ಶಿಲೀಂಧ್ರ ಅಥವಾ ತಳದ ಕೊಳೆತ:
ರೋಗಲಕ್ಷಣಗಳು:
ಎಲೆಗಳ ಕೆಳಗಿನ ಮೇಲ್ಮೈಯಲ್ಲಿ ಬಿಳಿಯಿಂದ ತಿಳಿ ಕಂದು ಬಣ್ಣದ ಪುಡಿ ತೇಪೆಗಳು ಕಾಣಿಸಿಕೊಳ್ಳುತ್ತವೆ, ನಂತರ ಇವು ಗಾತ್ರದಲ್ಲಿ ಹೆಚ್ಚಾಗುತ್ತವೆ.
ಆರಂಭಿಕ ಎಲೆಯ ಸೋಂಕು ತಿಳಿ ಬೂದು ಬಣ್ಣದ ಚುಕ್ಕೆಗಳಂತೆ ಕಾಣಿಸಿಕೊಳ್ಳುತ್ತದೆ, ಅದು ಕ್ರಮೇಣ ಹಿಗ್ಗುತ್ತದೆ ಮತ್ತು ಶಿಲೀಂಧ್ರಗಳ ಬೆಳವಣಿಗೆಯ ಪುಡಿ ದ್ರವ್ಯರಾಶಿಯು ಎಲೆಯ ಕೆಳಗಿನ ಮೇಲ್ಮೈಯನ್ನು ಆವರಿಸುತ್ತದೆ.
ಆದರ್ಶ ಪರಿಸ್ಥಿತಿಗಳಲ್ಲಿ ಎಲೆಯ ಮೇಲ್ಮೈ ಎರಡೂ ಶಿಲೀಂಧ್ರಗಳ ಬೆಳವಣಿಗೆಯ ಬಿಳಿ ಹಿಟ್ಟಿನ ದ್ರವ್ಯರಾಶಿಯಿಂದ ಮುಚ್ಚಲ್ಪಡುತ್ತದೆ, ಇದರ ಪರಿಣಾಮವಾಗಿ ಆರಂಭಿಕ ಎಲೆ ಬೀಳುತ್ತದೆ.
ಬದುಕುಳಿಯುವಿಕೆ ಮತ್ತು ಹರಡುವಿಕೆ:

ಶಿಲೀಂಧ್ರವು ಬೆಳೆ ಅವಶೇಷಗಳಲ್ಲಿ ವಿಶ್ರಾಂತಿ ಕವಕಜಾಲ ಅಥವಾ ಸುತ್ತುವರಿದ ಹಾಸ್ಟೋರಿಯಾ ರೂಪದಲ್ಲಿ ಉಳಿದುಕೊಂಡಿರುತ್ತದೆ.
ಗಾಳಿಯಿಂದ ಹರಡುವ ಕೋನಿಡಿಯಾ ಮೂಲಕ ದ್ವಿತೀಯಕ ಹರಡುವಿಕೆ ಸಂಭವಿಸುತ್ತದೆ
ಅನುಕೂಲಕರ ಪರಿಸ್ಥಿತಿಗಳು:

ತಂಪಾದ ಹವಾಮಾನ ಮತ್ತು ಸೌಮ್ಯವಾದ ತಾಪಮಾನವು ರೋಗದ ಬೆಳವಣಿಗೆಗೆ ಅನುಕೂಲಕರವಾಗಿದೆ.

ಉದಾಹರಣೆ-

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಥವಾ ಯೂಟ್ಯೂಬ್ ನಲ್ಲಿ ಇರುವ ವಿಡಿಯೋಗಳನ್ನು ನೋಡಿ.
ಹಸಿರು ಬಂಗಾರ ಬೆಳೆದರೆ ಬಾಳೇ ಬಂಗಾರ.

ಹೆಚ್ಚಿನ ಮಾಹಿತಿಗಾಗಿ ನಮ್ಮ ರೈತರನ್ನು ಸಂಪರ್ಕಿಸಿ.


ಈ ಮೇಲ್ಕಂಡ ಫೋಟೋಗಳು ನಮ್ಮ ಹೊಲದಲ್ಲಿ ಬೆಳೆದ ವೀಳ್ಯದೆಲೆ.
ಇದು ಬಹು ವಾರ್ಷಿಕ ಬೆಳೆ ಆಗಿದ್ದರಿಂದ ಅತಿ ಹೆಚ್ಚು ಲಾಭವನ್ನು ಪಡೆಯಬಹುದು.
ವೀಳ್ಯದೆಲೆ ಬೆಳೆಯಿರಿ ಅತಿ ಹೆಚ್ಚು ಲಾಭವನ್ನು ಪಡೆಯಿರಿ.
ಯಾವುದೇ ಒಂದು ಬೆಳೆಯನ್ನು ಬೆಳೆಯಬೇಕಾದರೆ ಮೊದಲು ಅದರ ಬಗ್ಗೆ ನಮಗೆ ಜ್ಞಾನವಿರಬೇಕು ಹಾಗಾಗಿ ಮೊದಲು ತಿಳಿದುಕೊಳ್ಳಿ ಆಮೇಲೆ ಬೆಳೆಯಿರಿ ನಂತರ ಲಾಭವನ್ನು ಪಡೆಯಿರಿ.

ಧನ್ಯವಾದಗಳು.

ಪ್ರೀತಿಯ ರೈತ ಬಾಂಧವರೇ ಈ ವಿಡಿಯೋದಲ್ಲಿ ಏನು ಹಲವಾರು ಕಡೆ ಅತಿ ಹೆಚ್ಚಾಗಿ ಬಳಸುವುದರಿಂದ ಇದರ ಬೆಲೆ ಅತಿ ಹೆಚ್ಚು.ಅದಕ್ಕಾಗಿ ನಾವು ನಮ್ಮ ಹೊಲದಲ್ಲಿ ಕಡಿಮೆಯಾದರೂ ಸಹ ಒಂದು ಎಕರೆ ಜಾಗದಲ್ಲಿ ಈ ವೀಳ್ಯದೆಲೆಯನ್ನು ಬೆಳೆಯುವುದು ಸೂಕ್ತ.

ಹೆಚ್ಚಿನ ಮಾಹಿತಿಗಾಗಿ
ಹೌದು ಸ್ನೇಹಿತರೆ, ದಿನೇ ದಿನೇ ವೀಳ್ಯದೆಲೆ ಬೆಲೆಯು ಹಚ್ಚುತ್ತಿರುವುದರಿಂದ ಒಳ್ಳೆಯದಲೇ ಬೆಳೆಯುವುದು ಸೂಕ್ತವಾಗಿದೆ ಹಾಗೂ ಅತಿ ಹೆಚ್ಚು ಲಾಭ ಕೊಡುವ ಒಂದು ಬೆಳೆಯು ಸಹ ಆಗಿದೆ ಅದಕ್ಕಾಗಿ ನೀವು ವೀಳ್ಯದೆಲೆಯನ್ನು ಬೆಳೆಯಬಹುದು ಹಾಗೂ ಇದರ ಸಂಪೂರ್ಣ ಮಾಹಿತಿಯನ್ನು ನೀವು ಯೂಟ್ಯೂಬ್ ನಲ್ಲಿ ನೋಡಿ ತಿಳಿದುಕೊಂಡು ಬೆಳೆಯಲು ಸಹಕಾರವಾಗುತ್ತದೆ.
ಅತಿ ಹೆಚ್ಚು ನೀರು ಬೆಳೆದೆಲೆಗೆ ಬೇಕಾಗಿರುವುದರಿಂದ ನೀರಿನ ಅನುಕೂಲವನ್ನು ನೋಡಿ ನೀವು ಎಷ್ಟು ಎಕರೆ ಬೆಳೆಯಬೇಕೆಂದು ನಿರ್ಧರಿಸಬೇಕಾಗುತ್ತದೆ ಅದಕ್ಕಾಗಿ ಮೊದಲು ನಿರ್ಧರಿಸಿ ಹಾಗೆ ನಿಮ್ಮ ಹೊಲದಲ್ಲಿರುವ ಖನಿಜಗಳ ಪ್ರಮಾಣವನ್ನು ಚೆಕ್ ಮಾಡಿಸಿ ಯಾವ ವೀಳ್ಯದಲ್ಲಿ ಬೆಳೆದರೆ ಸೂಕ್ತವೆಂದು ತಿಳಿದುಕೊಂಡು ಬೆಳೆಯುವುದು ಸೂಕ್ತಕರವಾಗಿದೆ. ಅದಕ್ಕಾಗಿ ನಮ್ಮ ಸಲಹೆ ಮೇರೆಗೆ ನೀವು ಇದನ್ನು ತಿಳಿದುಕೊಂಡು ಬೆಳೆಯಬೇಕು ಅಥವಾ ಇನ್ನಿತರೆ ಹಲವಾರು ಇದರಲ್ಲಿ ನೈಪುಣ್ಯತೆಯನ್ನು ಹೊಂದಿರುವ ರೈತರ ಸಲಹೆಯನ್ನು ಸಹ ತೆಗೆದುಕೊಂಡರೆ ಉತ್ತಮವಾದ ಕೆಲಸವಾಗುತ್ತದೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಹ ರೈತರಿಗೆ ಸಹಾಯವಾಗಲಿ ಎಂದು ಹಲವಾರು ತರಹದ ನಾನಾ ತರಹದ ಸೌಲಭ್ಯಗಳನ್ನು ನೀಡುತ್ತಿದ್ದು ಆ ಸೌಲಭ್ಯಗಳನ್ನು ರೈತರು ಬಳಸಿಕೊಂಡು ಅತ್ಯುನ್ನತವಾದ ಮಟ್ಟಕ್ಕೆ ಇರಬೇಕೆಂಬುದು ಆಶಯವಾಗಿದೆ.
ಯಾವುದೇ ತರಹದ ಸಹಾಯ ಬೇಕೆಂಬಲ್ಲಿ ನೀವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸೌಲಭ್ಯಗಳನ್ನು ಪಡೆದುಕೊಂಡು ಮುಂದುವರೆಯಬೇಕೆಂಬುದು ಸರ್ಕಾರಗಳ ಆಶಯವಾಗಿದೆ.
ಅದಕ್ಕಾಗಿ ಪ್ರೀತಿಯ ರೈತ ಬಾಂಧವರು ಎಲ್ಲ ತರಹದ ಸೌಕರ್ಯಗಳನ್ನು ಪಡೆದುಕೊಂಡು ಬೆಳೆಗಳನ್ನು ಬೆಳೆದು ಅತಿ ಹೆಚ್ಚು ಲಾಭವನ್ನು ಪಡೆದುಕೊಳ್ಳಬೇಕೆಂಬುದೇ ನಮ್ಮ ಆಶಯ ಆಗಿದೆ.

ರೈತರಿಗೆ ಸಹಾಯವಾಗಲೆಂದು youtube ನಲ್ಲಿ ಜನರು ವಿಡಿಯೋಗಳನ್ನು ಶೇರ್ ಮಾಡುತ್ತಿದ್ದು ಅವುಗಳನ್ನು ಸಹ ನೋಡಿ ನೀವು ಎಲ್ಲ ತರಹದ ಜ್ಞಾನವನ್ನು ಪಡೆದುಕೊಳ್ಳಬೇಕೆಂಬುದು ಅವರ ಆಶಯವಾಗಿದೆ.
ಇದು ಅಷ್ಟೇ ಅಲ್ಲದೆ ನಿಮಗೆ ಬೇಕಾದಂತಹ ಎಲ್ಲ ತರಹದ ಸಾಲಗಳನ್ನು ನೀಡಲೆಂದು ಬ್ಯಾಂಕುಗಳು ಅತಿ ಹೆಚ್ಚು ಸಾಲವನ್ನು ನೀಡುತ್ತಿದ್ದು ಮತ್ತು ಬಡ್ಡಿ ದರವನ್ನು ಕಡಿಮೆ ಪ್ರಮಾಣದಲ್ಲಿ ನೀಡುತ್ತಿವೆ.
ಕಡಿಮೆ ಬಡ್ಡಿ ಪ್ರಮಾಣದಲ್ಲಿ ಹೆಚ್ಚು ಲಾಭವನ್ನು ನೀಡುತ್ತಿವೆ ಅದಕ್ಕಾಗಿ ಪ್ರೀತಿಯ ರೈತ ಬಾಂಧವರು ಬ್ಯಾಂಕಿನ ಸಹಾಯವನ್ನು ತೆಗೆದುಕೊಂಡು ಮುಂದುವರೆಯಬೇಕೆಂಬುದೇ ನಮ್ಮ ಆಶಯ ಹಾಗೂ ಬ್ಯಾಂಕಿನ ಆಶಯವಾಗಿದೆ.
ಒಂದು ಬಾರಿ ಯಾವ ಬ್ಯಾಂಕಿನ ಬಡ್ಡಿಯನ್ನು ನಾವು ತೆಗೆದುಕೊಂಡರೆ ಸೂಕ್ತವೆಂದು ನೀವು ತಿಳಿದುಕೊಳ್ಳಬೇಕು ಅಂದರೆ ಬಡ್ಡಿದರ ಕಡಿಮೆ ಇರುವ ಬ್ಯಾಂಕಿನೊಂದಿಗೆ ನೀವು ಸಮಾಲೋಚಿಸಿ ಬಡ್ಡಿಯ ಹಾಗೆ ಹಣವನ್ನು ಪಡೆದುಕೊಳ್ಳಬೇಕು.

Leave a Reply

Your email address will not be published. Required fields are marked *